ಬೆಂಗಳೂರು: ಶೋ ಬಿಗ್ಬಾಸ್ ಸೀಸನ್– 11 ಆರಂಭವಾಗಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ.
ಈ ನಡುವೆ ಬಿಗ್ ಬಾಸ್ಗೆ ನೇರ ಸವಾಲು ಹಾಕುವ ಮೂಲಕ ಜಗದೀಶ್ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಕ್ವಿಟ್ ಮಾಡುತ್ತೇನೆ. ನಾನು ಈ ಕ್ಷಣ ಮನಸ್ಸು ಮಾಡಿದರು ಇಲ್ಲಿಗೆ ಹೆಲಿಕಾಪ್ಟರ್ಅನ್ನು ತರಿಸುತ್ತೇನೆ ನನಗೆ ಆ ಕೆಪಾಸಿಟಿ ಇದೆ. ನಾನೇನಾದ್ರು ಆಚೆ ಹೋದ್ರೆ ಎಲ್ಲಾ ಎಕ್ಸ್ ಪೋಸ್ ಆಗುತ್ತೆ. ಈ ಪ್ರೋಗ್ರಾಮ್ ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರಿ ಕೇಳಿ. ಬಿಗ್ಬಾಸ್ ನಾನು ನಿಮ್ಮನ್ನು ಎಕ್ಸ್ಪೋಸ್ ಮಾಡುತ್ತೇನೆ. ಕರ್ನಾಟಕದಲ್ಲಿ ನನ್ನನ್ನು ಎದುರುಹಾಕಿಕೊಂಡು ಶೋ ನಡೆಸೋಕೆ ಆಗುತ್ತದೆ ಎಂದುಕೊಂಡಿದ್ದೀರಾ ಎಂದು ಚಾಲೆಂಜ್ ಮಾಡಿದ್ದಾರೆ.
ಕಲರ್ಸ್ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಈ ಪ್ರೋಮೋಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ನೆಟ್ಟಿಗರು ಜಗದೀಶ್ ಅವರನ್ನು ಟೀಕಿಸಿ ಕಮೆಂಟ್ ಹಾಕಿದ್ದಾರೆ. ಇಂದಿನ ಸಂಚಿಕೆಯಲ್ಲಿ ಈ ವಿಡಿಯೋ ಪ್ರಸಾರವಾಗಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296