ಬೆಂಗಳೂರು: ಮುಡಾ ಪ್ರಕರಣದ ಮೊದಲ ಆರೋಪಿ ಸಿಎಂ ಸಿದ್ದರಾಮಯ್ಯ ಮೈಸೂರು ದಸರಾ ಉದ್ಘಾಟಿಸಿದ್ದು, ನಾಡಿಗೆ ಕಪ್ಪುಚುಕ್ಕೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್, ಕಳಂಕಿತ ಮುಖ್ಯಮಂತ್ರಿ ಹಣೆಪಟ್ಟಿ ಹೊತ್ತಿರುವ ನೀವು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿದರೆ ನಾಡಿಗೆ ಅಪಕೀರ್ತಿ ಎಂದು ಹೇಳಿದೆ.
ಹಲವು ಹಗರಣಗಳಲ್ಲಿ ಮುಳುಗಿ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಸಿದ್ದರಾಮಯ್ಯನವರು ಕರುನಾಡ ಜನರ ಆತ್ಮಸಾಕ್ಷಿಗೆ ದ್ರೋಹ ಬಗೆಯಬಾರದು. ಅಶುದ್ಧ ಕೈಗಳಿಂದ ನಾಡಹಬ್ಬ ದಸರಾ ಉದ್ಘಾಟನೆ ಮಾಡಿದ್ದು ಸರಿಯೇ ಎಂದು ಜೆಡಿಎಸ್ ಪ್ರಶ್ನಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296