Author: admin

ಕುಣಿಗಲ್‌: ದಲಿತರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಲು ಮುಂದಾದಾಗ ಇದು ಖಾಸಗಿ ದೇವಾಲಯ ಎಂದು ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸಿದ್ದಲ್ಲದೆ ಪೂಜೆಗೂ ನಿರಾಕರಿಸಿರುವ ಘಟನೆ ಕಿಚ್ಚಾವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ. ತಾಲೂಕಿನ ಹುಲಿಯೂರುದುರ್ಗ ಹೋಬಳಿ ಕಿಚ್ಚವಾಡಿ ಗ್ರಾಮದಲ್ಲಿ ಒಕ್ಕಲಿಗರು, ಆಚಾರ್‌, ಮಡಿವಾಳರು, ಲಿಂಗಾಯಿತರು, ವೈಷ್ಣವರು ಮತ್ತು ಪರಿಶಿಷ್ಟ ಜಾತಿ ಜನಾಂಗದವರು ವಾಸವಾಗಿದ್ದಾರೆ. ಗ್ರಾಮದಲ್ಲಿ ಚನ್ನಕೇಶವ, ಬಸವೇಶ್ವರ, ಲಕ್ಷ್ಮಿದೇವಿ, ಹುಚ್ಚಮ್ಮ ದೇವಿ, ಮಹಾದೇವಿ, ಮಾಸ್ತಮ್ಮ ದೇವಿ, ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನಗಳಿವೆ. ಅದರಲ್ಲಿ ಕೋಣೆ ಚಿಕ್ಕಮ್ಮ ದೇವಿ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಗೋಪಿ ಜಯಪ್ರಕಾಶ್ ಎಂಬುವರು ಜುಲೈ 29ರಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆಯಲ್ಲಿ ದೇವಾಲಯ ಪ್ರವೇಶ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಸೋಮವಾರ ಡಿವೈಎಸ್‌ ಪಿ ಓಂ ಪ್ರಕಾಶ್, ತಹಶೀಲ್ದಾರ್ ರಶ್ಮಿ, ಪಿಎಸ್‌ ಐ ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ಗ್ರಾಮದ ಮುಖಂಡರೊಂದಿಗೆ…

Read More

ಪಾವಗಡ: ತಾಲ್ಲೂಕಿನಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣೆ ಮತ್ತು ಗಾಂಧಿ ಸ್ಮೃತಿ ಹಾಗೂ ಮದ್ಯಪಾನ ಮುಕ್ತರಿಗೆ ಅಭಿನಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ರೈತ ಸಂಘದ ಅಧ್ಯಕ್ಷರಾದ ನರಸಿಂಹ ರೆಡ್ಡಿ ಉದ್ಘಾಟನೆ ಮಾಡಿದರು. ಬಳಿಕ ಯೋಜನೆ ಕಾರ್ಯಕ್ರಮಗಳು ಕುರಿತು ಉಪಯುಕ್ತ ಮಾಹಿತಿ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಯೋಜನಾಧಿಕಾರಿಗಳಾದ ಮಹೇಶ್ ಹೆಚ್.  ತಾಲೂಕಿನ ವ್ಯಾಪ್ತಿಯಲ್ಲಿ ನಮ್ಮೂರು ನಮ್ಮ ಕೆರೆ,  ಜ್ಞಾನ ದೀಪ ಶಿಕ್ಷಕರ ನೀಡುವುದು, ಜ್ಞಾನ ವಿಕಾಸ ಕಾರ್ಯಕ್ರಮಗಳು, ನಗದರಲ್ಲಿ  ಶುದ್ಧಗಂಗಾ ಘಟಕ  ಸ್ಥಾಪನೆ, ಸದಸ್ಯರಿಗೆ ಆರೋಗ್ಯ ರಕ್ಷಾ ವಿಮಾ ಸೌಲಭ್ಯ ಹಾಗೂ ಶಾಲೆಗಳಿಗೆ ಡೆಸ್ಕ್ ಬೆಂಚ್  ವಾಟರ್ ಫಿಲ್ಟರ್ ವಿತರಣೆ  ಹಾಲು ಉತ್ಪಾದಕ ಕಟ್ಟಡಗಳಿಗೆ ಮತ್ತು ದೇವಸ್ಥಾನ ಕಟ್ಟಡಗಳಿಗೆ ಅನುದಾನ ವಿತರಣೆ ಇನ್ನು ಹಲವಾರು ಕಾರ್ಯಕ್ರಮ ಕುರಿತು  ಪ್ರಾಸ್ತಾವಿಕವಾಗಿ  ಮಾತನಾಡಿದರು. ಕಾರ್ಯಕ್ರಮದಲ್ಲಿ ಒಟ್ಟು 395 ಜನ ವಿದ್ಯಾರ್ಥಿಗಳಿಗೆ 2,40,000 ರೂ ಪ್ರತೀ ತಿಂಗಳು ಸುಜ್ಞಾನ…

Read More

ಸರಗೂರು:  ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಅರಣ್ಯ ವಲಯ ವ್ಯಾಪ್ತಿಯ ಜಯಲಕ್ಷೀಪುರ ಗ್ರಾಮದ ಕೃಷ್ಣಬೋವಿ ರವರ ಜಮೀನಲ್ಲಿ ಸೋಮವಾರ ಹುಲಿ ದಾಳಿಗೆ ಮೇಕೆ ಬಲಿಯಾಗಿದೆ. ಜಯಲಕ್ಷೀಪುರ ಗ್ರಾಮದಲ್ಲಿ ಕೃಷ್ಣಬೋವಿ ಎಂಬುವರಿಗೆ ಸೇರಿದ ಮೇಕೆಗ ಬಲಿಯಾಗಿವೆ. ಮೇಕೆಗಳನ್ನು ಮೇಯಿಸಲು ಹೋದಾಗ ಜಮೀನಲ್ಲಿ ಅವಿತು ಕುಳಿತಿದ್ದ ಹುಲಿ ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿದೆ. ಒಟ್ಟು ಮೂರು ಮೇಕೆಗಳನ್ನು ಕೊಂದು ಅದರಲ್ಲಿ ಒಂದು ಮೇಕೆಯನ್ನು ಹುಲಿ ಹೊತ್ತೊಯ್ದಿದೆ. ಮೇಕೆ ಸಾಕಾಣಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಕೃಷ್ಣಬೋವಿ ಅವರಿಗೆ ಆರ್ಥಿಕ ನಷ್ಟ ಆಗಿದೆ. ಘಟನೆ ಸಂಬಂಧ ಮಾತನಾಡಿದ ಗ್ರಾಮದ ಮುಖಂಡ ವೆಂಕಟರಾಮು, ಘಟನೆ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ಪಂದಿಸುತ್ತಿಲ್ಲ ಎಂದು ದೂರಿದ್ದು, ಘಟನೆ ನಡೆದು ಸುಮಾರು ಹೊತ್ತಾದರೂ ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದಾರೆ ಎಂದರು. ಕಳೆದ ತಿಂಗಳು ಜಾನುವಾರುಗಳು ಹಾಗೂ ಜನರ ಮೇಲೆ ಹುಲಿ ದಾಳಿ ಮಾಡಿದೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ಇದ್ದಾರೆ. ಇದರ…

Read More

ಮಧುಗಿರಿ: ಪಟ್ಟಣದ ಹೃದಯ ಭಾಗದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು ಮೂಲಸೌಕರ್ಯ ಕೊರತೆ ಮತ್ತು ನಿರ್ವಹಣೆ ಕೊರತೆಯನ್ನು ಎದುರಿಸುತ್ತಿದ್ದು,  ವಿದ್ಯಾರ್ಥಿಗಳು ಸೋರುತ್ತಿರುವ ಕೊಠಡಿಯಲ್ಲಿ ಪಾಠ ಕೇಳುವ ದುಸ್ಥಿತಿ ಎದುರಾಗಿದೆ. ತಾಲ್ಲೂಕಿನ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ನೀಡಲೆಂಬ ಉದ್ದೇಶದಿಂದ 1997ರಲ್ಲಿ ಈ ಕಾಲೇಜಿನ ನೂತನ ಕಟ್ಟಡ ನಿರ್ಮಾಣವಾಗಿತ್ತು. ಆದರೆ, ಕಾಲಾಂತರದಲ್ಲಿ ಕಟ್ಟಡದ ಮೇಲ್ಬಾವಣಿ ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ಗೋಡೆಗಳಿಂದ ನೀರು ಜಿನುಗುತ್ತದೆ ಮತ್ತು ಬೇಸಿಗೆಯಲ್ಲಿ ಮಣ್ಣು ಉದುರುತ್ತದೆ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಕೊಠಡಿಯಲ್ಲಿ ಕುಳಿತು ಪಾಠ ಕೇಳಲು ತೊಂದರೆಯಾಗುತ್ತಿದೆಯೆಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಕಾಲೇಜಿನ ಕಟ್ಟಡಕ್ಕೆ ಸುಣ್ಣ ಮತ್ತು ಬಣ್ಣ ಬಳಿದು ಎಷ್ಟೋ ವರ್ಷಗಳಾಗಿವೆ. ಕಿಟಕಿಗಳ ಗಾಜುಗಳು ಹಾಳಾಗಿ, ಮಳೆ ನೀರು ಒಳ ಹೋಗುತ್ತಿದೆ.  ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು 22 ಕೊಠಡಿಗಳಿವೆ. ಅವುಗಳಲ್ಲಿ 9 ಕೊಠಡಿಗಳು ಬಳಕೆಗೆ ಅನುಪಯುಕ್ತವಾಗಿವೆ. ಕಾಲೇಜಿನಲ್ಲಿ ಮೂರು ಶೌಚಾಲಯಗಳಿವೆ. ಒಂದನ್ನು ಉಪನ್ಯಾಸಕರು ಮತ್ತು ಸಿಬ್ಬಂದಿ ಬಳಸುತ್ತಿದ್ದಾರೆ. ವಿದ್ಯಾರ್ಥಿ–ವಿದ್ಯಾರ್ಥಿನಿಯರ ಶೌಚಾಲಯಗಳು ಸಂಪೂರ್ಣವಾಗಿ ಹಾಳಾಗಿ, ನಿರ್ವಹಣೆಯಿಲ್ಲದೆ  ಬಳಕೆ ಮಾಡಲು ಸಾಧ್ಯವಾಗದೇ ಪರದಾಡುವಂತಾಗಿದೆ.…

Read More

ಸರಗೂರು‌: ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಈ ದಿನ ಜನಿಸಿದರು ಎಂಬುದಕ್ಕಾಗಿ ಈ ದಿನಕ್ಕೆ ವಾಲ್ಮೀಕಿ ಜಯಂತಿ ಎನ್ನುವ ಹೆಸರು ಬಂದಿದೆ ಎಂದು ಪಪಂ ಸದಸ್ಯ ಶ್ರೀನಿವಾಸ ತಿಳಿಸಿದರು. ಪಟ್ಟಣದ 9 ನೇ ವಾರ್ಡಿನ ಚಿಕ್ಕ ದೇವಮ್ಮ ಸರ್ಕಲ್ ಬಳಿ ನಾಯಕ ಸಮಾಜದ ಹಾಗೂ ಯುವಕರು ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ವಾಲ್ಮೀಕಿ ಫೋಟೋಗೆ ಪುಷ್ಪಾರ್ಚನೆ ಸಲ್ಲಿಸಿ ನಂತರ ಮಾತನಾಡಿದರು. ಮಹರ್ಷಿ ವಾಲ್ಮೀಕಿಯವರ ಜನ್ಮದಿನವನ್ನು ಶರದ್ ಪೂರ್ಣಿಮೆಯ ದಿನದಂದು ಆಚರಿಸಲಾಗುತ್ತದೆ. ಆದಾಗ್ಯೂ, ಶರದ್ ಪೂರ್ಣಿಮೆಯ ದಿನದಂದು ಲಕ್ಷ್ಮಿ ಮತ್ತು ಚಂದ್ರನನ್ನು ಪೂಜಿಸಲಾಗುತ್ತದೆ. ವಾಲ್ಮೀಕಿ ಜಯಂತಿ ಪ್ರಖ್ಯಾತ ಋಷಿ ಮತ್ತು ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ ಅವರ ಜನ್ಮದಿನಕ್ಕೆ ಮೀಸಲಾದ ದಿನವಾಗಿದೆ. ಅವರು ಭಗವಾನ್ ಶ್ರೀರಾಮನ ಪರಮ ಭಕ್ತರಾಗಿದ್ದರು ಎನ್ನುವ ನಂಬಿಕೆಯಿದೆ ಎಂದರು. ಈ ದಿನದ ಮೂಲಕ, ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅವರು ನೀಡಿದ ಜ್ಞಾನ ಮತ್ತು ಶಿಕ್ಷಣಕ್ಕಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ರಾಮಾಯಣದ ಮೂಲಕ ಮರ್ಯಾದಾ ಪುರುಷೋತ್ತಮ ಶ್ರೀರಾಮನ…

Read More

ಗುಬ್ಬಿ: ತಾಲ್ಲೂಕಿನ ಸಿ.ಎಸ್‌.ಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಮಾರು 36 ಆರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳ ಕಾಲೇಜು ಶುಲ್ಕವನ್ನು ಗ್ರಾಮಸ್ಥರು ಪಾವತಿಸಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳು ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದೆ ಕಾಲೇಜು ಬಿಡುವ ಹಂತದಲ್ಲಿ ಇದ್ದರು. ಇದನ್ನು ಅರಿತ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಮಾನ ಮನಸ್ಕರು ಸೇರಿಕೊಂಡು ಸುಮಾರು 1.20 ಲಕ್ಷ ಶುಲ್ಕವನ್ನು ಕಾಲೇಜಿಗೆ ಪಾವತಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅರ್ಥಿಕ ಸಂಕಷ್ಟದಲ್ಲಿದ್ದ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾಲೇಜು ಶುಲ್ಕವನ್ನು ಪಾವತಿಸಿದ್ದೇವೆ. ವಿದ್ಯಾರ್ಥಿಗಳು ಪೋಷಕರ ಸ್ಥಿತಿಯನ್ನು ಅರಿತು ಓದಿನತ್ತ ಗಮನಹರಿಸಬೇಕು. ವಿದ್ಯಾರ್ಥಿಗಳು ಕಾಲಹರಣ ಮಾಡದೆ ಪ್ರಾಧ್ಯಾಪಕರ ಸಲಹೆ ಸೂಚನೆಗಳನ್ನು ಪಾಲಿಸುತ್ತಾ ಓದಿನತ್ತ ಗಮನಹರಿಸಬೇಕು. ಇಂದಿನ ಶ್ರಮವು ಭವಿಷ್ಯದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವುದು ಎನ್ನುವುದನ್ನು ವಿದ್ಯಾರ್ಥಿಗಳು ಅರಿತು ನಡೆಯಬೇಕಿದೆ ಎಂದು ಗ್ರಾಮಸ್ಥರು ತಿಳಿಸಿದರು. ಗ್ರಾಮಸ್ಥರು ಶುಲ್ಕ ಪಾವತಿಸುವ ಮೂಲಕ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿರುವುದು ಉತ್ತಮ ಬೆಳವಣಿಗೆ, ಸ್ಥಳೀಯರು ಸಹಕಾರ…

Read More

ಬೀದರ್: ನವದೆಹಲಿಯ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ವಕೀಲರೊಬ್ಬರು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ಘಟನೆಯನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ ಕಿಸಾನ್ ವಿಭಾಗದ ಜಂಟಿ ಸಂಯೋಜಕ ಜಾನ್ಸನ್ ಘೋಡೆ ತೀವ್ರವಾಗಿ ಖಂಡಿಸಿದ್ದಾರೆ. ವಕೀಲ ಕಿಶೋರ್ ಶೂ ಎಸೆದು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಹಾಗೂ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಅವಮಾನಿಸಿದ್ದಾರೆ. ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನದಲ್ಲಿ ಪರಿಶಿಷ್ಟರ ಬಗ್ಗೆ ಅಸಹನೆ ಇರುವುದಕ್ಕೆ ಈ ಘಟನೆಯೇ ನಿದರ್ಶನವಾಗಿದೆ ಎಂದು ಹೇಳಿದ್ದಾರೆ. ಗವಾಯಿ ಅವರು ತಮ್ಮ ಅರ್ಹತೆ ಹಾಗೂ ಸಾಧನೆ ಮೂಲಕ ದೇಶದ ನ್ಯಾಯಾಂಗ ವ್ಯವಸ್ಥೆಯ ಅತ್ಯುನ್ನತ ಹುದ್ದೆಗೆ ಏರಿದ್ದಾರೆ. ಅವರನ್ನು ಅವಮಾನಿಸಿರುವ ವಕೀಲರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ. ವರದಿ: ಅರವಿಂದ ಮಲ್ಲಿಗೆ, ಬೀದರ್ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ…

Read More

ತುಮಕೂರು(ನಮ್ಮ ತುಮಕೂರು):  ರಾಜ್ಯ ಸರ್ಕಾರ ಬಡ ಜನರ ವಿರೋಧಿ ನೀತಿ ಕೈಬಿಡಿ ಎಂದು ಒತ್ತಾಯಿಸಿ, ಅವೈಜ್ಞಾನಿಕ ಬಿಪಿಎಲ್ ಪಡಿತರ ಕಾರ್ಡ್ ರದ್ಧತಿಯನ್ನು ಖಂಡಿಸಿ ಸ್ಲಂ ಜನಾಂದೋಲನ ಕರ್ನಾಟಕ, ತುಮಕೂರು ಜಿಲ್ಲಾ ಹೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಪ್ರತಿಭಟನೆ ನಡೆಸಿತು. ಸರ್ಕಾರ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ವೈಜ್ಞಾನಿಕವಾಗಿ ರದ್ದುಗೊಳಿಸಿರುವುದು ಸಂಪೂರ್ಣ ಜನವಿರೋಧಿ ಕ್ರಮವಾಗಿದ್ದು, ಕೂಲಿಕಾರ್ಮಿಕರು ಹಾಗೂ ಬಡ ಕುಟುಂಬಗಳು ಇದರ ಬಲಿಯಾಗಿದ್ದಾರೆ ಎಂದು ಸಮಿತಿಯ ಮುಖಂಡರು ಆರೋಪಿಸಿದರು. ಇದೇ ವೇಳೆ ಜಿಲ್ಲಾಧಿಕಾರಿಗಳ ಪರವಾಗಿ ಆಹಾರ ಇಲಾಖೆಯ ಅಧಿಕಾರಿ ನಾಗರಾಜ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಜ್ಯೋತಿ, ಶಕ್ತಿ, ಯೂನಿಟ್ ಹಾಗೂ ಅನ್ನಭಾಗ್ಯ ಯೋಜನೆಗಳು ರಾಜ್ಯಾದ್ಯಂತ ಜಾರಿಗೆ ಬಂದಿದ್ದು, ಬಡವರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕ್ರಮಗಳು ಮುಂದುವರಿದಿವೆ ಎಂದು ಹೇಳಿದರು. ಆದರೆ ಇದನ್ನು ಒಪ್ಪದ ಪ್ರತಿಭಟನಾಕಾರರು ಸರ್ಕಾರ ನುಡಿದಂತೆ ಕಾರ್ಯಗತಗೊಳಿಸಿಲ್ಲ, ಅನೇಕ ಬಡ ಕುಟುಂಬಗಳಿಗೆ ಎಪಿಎಲ್ ಕಾರ್ಡ್ ನೀಡಿರುವುದರಿಂದ ನಿಜವಾದ…

Read More

ತುಮಕೂರು: ತಾಲ್ಲೂಕಿನ ನೆಲಹಾಳ್ ಕೆರೆಯಲ್ಲಿ ನೂರಾರು ಮೀನುಗಳು ಸಾವನ್ನಪ್ಪಿವೆ. ಕೆರೆಗೆ ರಾಸಾಯನಿಕ ತ್ಯಾಜ್ಯ ಸುರಿದ ಆರೋಪದ ಮೇರೆಗೆ ಕೋರ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಹ್ಮದ್‌ ಇಬ್ರಾಹಿಂ, ಅಲ್ತಾಫ್, ಮಹ್ಮದ್ ಫರ್ವೀಜ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಮೂವರು ಶನಿವಾರ ಮಧ್ಯರಾತ್ರಿ ತಾಲ್ಲೂಕಿನ ಗಿರಿಯನಹಳ್ಳಿ ಸಮೀಪ ಟ್ಯಾಂಕರ್‌ ನಿಂದ ತ್ಯಾಜ್ಯ ಸುರಿಯುತ್ತಿದ್ದರು. ನೆಲಹಾಳ್‌ ನ ಎನ್‌.ನಟರಾಜ್, ರಮೇಶ್ ಇದನ್ನು ಗಮನಿಸಿ, ಟ್ಯಾಂಕರ್ ಚಾಲಕ ಮತ್ತು ಕ್ಲೀನರ್‌ ನ ವಿಚಾರಿಸಿದಾಗ ವಸಂತನರಸಾಪುರ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರ ತ್ಯಾಜ್ಯ ಎಂಬುವುದು ಗೊತ್ತಾಗಿದೆ. ಟ್ಯಾಂಕರ್‌ ಜತೆಗೆ ಮೂವರನ್ನು ಕೋರ ಠಾಣೆಗೆ ಒಪ್ಪಿಸಿದ್ದಾರೆ. ‘ಶುಕ್ರವಾರ ರಾತ್ರಿ ಟ್ಯಾಂಕರ್‌ ವಾಹನದಲ್ಲಿ ರಾಸಾಯನಿಕ ತ್ಯಾಜ್ಯ ತಂದು ನೆಲಹಾಳ್ ಕೆರೆಗೆ ಸುರಿದಿದ್ದಾರೆ. ಇದರಿಂದ ಮೀನುಗಳು ಸತ್ತಿವೆ. ಇದರಂತೆ ಅನೇಕ ಕೆರೆಗಳಿಗೆ ಇವರು ತ್ಯಾಜ್ಯ ಸುರಿದ ಸಾಧ್ಯತೆ ಇದೆ’ ಎಂದು ನಟರಾಜ್ ನೀಡಿದ ದೂರಿನ ಮೇರೆಗೆ ಕೋರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆರೆಗೆ ತ್ಯಾಜ್ಯ ಸುರಿಯುವುದರಿಂದ ಪ್ರಾಣಿ, ಪಕ್ಷಿಗಳ ಜೀವಕ್ಕೆ ಹಾನಿಯಾಗಲಿದೆ. ವಾತಾವರಣ ಮಲಿನವಾಗುತ್ತದೆ.…

Read More

ತುಮಕೂರು: ಮನೆಯಲ್ಲಿ ಇದ್ದುಕೊಂಡೇ ಪ್ಲಿಪ್‌ ಕಾರ್ಟ್‌ನ ಉತ್ಪನ್ನಗಳಿಗೆ ರಿವ್ಯೂ ನೀಡುತ್ತಾ, ಹೆಚ್ಚಿನ ಕಮಿಷನ್ ಪಡೆಯಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರ ಹೊರವಲಯ ಯಲ್ಲಾಪುರದ ಎನ್.ಕುಮಾರಸ್ವಾಮಿ 6 ಲಕ್ಷ ಕಳೆದುಕೊಂಡಿದ್ದಾರೆ. ವಾಟ್ಸ್ ಆ್ಯಪ್‌ ನಲ್ಲಿ ಮೆಸೇಜ್ ಮಾಡಿದ ವಂಚಕರು ಹಣ ಗಳಿಕೆ ಬಗ್ಗೆ ತಿಳಿಸಿದ್ದಾರೆ. ಕುಮಾರಸ್ವಾಮಿ ಮೊದಲಿಗೆ 1 ಸಾವಿರ ಹೂಡಿಕೆ ಮಾಡಿದ್ದು, ಅದನ್ನು ಮತ್ತೆ ಅವರ ಖಾತೆಗೆ ವರ್ಗಾಯಿಸಿದ್ದಾರೆ. ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದ್ದಲ್ಲಿ ಉತ್ತಮ ಲಾಭ ಗಳಿಸಬಹುದು ಎಂದು ಹೇಳಿದ್ದಾರೆ. ಇದನ್ನು ನಂಬಿ ಒಟ್ಟು 6,04,800 ವರ್ಗಾಯಿಸಿದ್ದು, ಇದರಲ್ಲಿ 1,600 ಮಾತ್ರ ವಾಪಸ್ ಬಂದಿದೆ. ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

Read More