Subscribe to Updates
Get the latest creative news from FooBar about art, design and business.
- ಮಕ್ಕಳು ದುಶ್ಚಟಗಳಿಂದ ದೂರವಿರಿ: ಅಬಕಾರಿ ಉಪ ಅಧೀಕ್ಷಕ ದೀಪಕ್ ಎಸ್. ಕರೆ
- ಸರಗೂರು: ಸಾಗರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅರ್ಥಪೂರ್ಣ ವಿಶ್ವ ಜನಸಂಖ್ಯಾ ದಿನಾಚರಣೆ
- ಸರಗೂರು: ದಲಿತ ಸಂಘರ್ಷ ಸಮಿತಿ ನೂತನ ಪದಾಧಿಕಾರಿಗಳ ಆಯ್ಕೆ; ಸಂಘಟನೆ ಬಲವರ್ಧನೆಗೆ ಕರೆ
- ಹಾದನೂರು ಸರ್ಕಾರಿ ಶಾಲೆಗೆ ‘ಗಿಫ್ಟ್ ಎ ಡ್ರೀಮ್ಸ್ ಫೌಂಡೇಷನ್’ ಆಸರೆ: ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ, ಸಮವಸ್ತ್ರ ವಿತರಣೆ
- ಶಾಸಕ ಪ್ರಭು ಚೌವ್ಹಾಣ್ ಅವರಿಗೆ ಪತ್ರಿಕಾ ದಿನಾಚರಣೆಗೆ ಅಧಿಕೃತ ಆಹ್ವಾನ
- ಸರಗೂರು: ರಸ್ತೆ ಅಭಿವೃದ್ಧಿಯಿಂದ ಗ್ರಾಮೀಣ ಭಾಗಕ್ಕೆ ಹೊಸ ಚೈತನ್ಯ — ಶಾಸಕರ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ
- ಬೀದರ್: ಮಳೆ ಅಭಾವ; ವಲಸೆ ತಡೆಗೆ ‘ವಿಬಿ-ಜಿ ರಾಮ್ ಜಿ’ ಅಡಿ ಕೆಲಸ ನೀಡಲು ಸಚಿವ ಈಶ್ವರ ಖಂಡ್ರೆ ಸೂಚನೆ
- ಸರಗೂರು: ಧಾರ್ಮಿಕ ಕ್ಷೇತ್ರದ ಸಮೀಪ ಬಾರ್ ತೆರವಿಗೆ ಆಗ್ರಹಿಸಿ ತಾಲೂಕು ಆಡಳಿತದ ವಿರುದ್ಧ ಬೃಹತ್ ಪ್ರತಿಭಟನೆ
Author: admin
ತುಮಕೂರು: ಚಿತ್ರದುರ್ಗದಲ್ಲಿ ಮೇ 9 ರಂದು ಹಮ್ಮಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಸಮಾರಂಭದಲ್ಲಿ ತುಮಕೂರು ಜಿಲ್ಲೆಯಿಂದ 50 ಸಾವಿರ ಜನ ಭಾಗವಹಿಸಲು ಈಗಾಗಲೇ ಸಿದ್ಧತೆ ನಡೆಸಿರುವುದಾಗಿ ಜಿಲ್ಲಾ ಬಿಜೆಪಿ ಮುಖಂಡರು ತಿಳಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು, ಮೇ 9 ರಂದು ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಮಧ್ಯಾಹ್ನ 1.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. 3 ಗಂಟೆಯ ವೇಳೆಗೆ ಅಮಿತ್ ಶಾ ಅವರು ಆಗಮಿಸಲಿದ್ದಾರೆ. ತುಮಕೂರಿನಿಂದ ಬೆಳ್ಳಗ್ಗೆಯೇ ಹೊರಟು ಮಧ್ಯಾಹ್ನದ ವೇಳೆಗೆ ಸಮಾರಂಭದ ಬಳಿ ಸೇರುತ್ತೇವೆ. 7 ತಾಲ್ಲೂಕುಗಳ 50 ಸಾವಿರ ಜನರಿಗಾಗಿ ಒಂದು ಸಾವಿರ ಬಸ್‌ಗಳನ್ನು ನಿಯೋಜಿಸಲಾಗಿದೆ. ಈಗಾಗಲೇ ನಿಗದಿಪಡಿಸಲಾಗಿರುವ ಬಸ್‌ಗಳಲ್ಲಿ ಜನ ಚಿತ್ರದುರ್ಗಕ್ಕೆ ತೆರಳಲಿದ್ದಾರೆ ಎಂದು ವಿವರಿಸಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿ ಶಂಕರ್ ಮಾತನಾಡಿ, ನಮ್ಮೆಲ್ಲರ ಹಿರಿಯರು, ಪಕ್ಷಕ್ಕಾಗಿ ದುಡಿದ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮ ಯಶಸ್ವಿಗೆ ನಾವೆಲ್ಲಾ ಒಟ್ಟಾಗಿ ಶ್ರಮಿಸುತ್ತಿದ್ದು, ಒಂದು ಸಾವಿರ ಬಸ್ ಗಳಲ್ಲದೆ,…
ತಿಪಟೂರು: ಕನ್ನಡ ಸಾಹಿತ್ಯ ಕ್ಷೇತ್ರ ಎಲ್ಲಾ ಕನ್ನಡಿಗರ ಜನಜೀವನದ ಗತಿಬಿಂಬ ಎಂಬ ಹೇಳಿಕೆಯೊಂದಿದೆ, ಅದರಂತೆ ಅದು ಸಾಗಬೇಕಿದೆ. ಆದರೆ ಇತ್ತೀಚೆಗೆ ದುರಾದೃಷ್ಟವಶಾತ್ ನಮ್ಮ ಸಾಹಿತ್ಯ ಜನಜೀವನದ ಗತಿಯನ್ನು ಪ್ರತಿಬಿಂಬಿಸದೆ ಜನಪ್ರಿಯ ಮತ್ತು ದ್ವೇಷ ಸಾಹಿತ್ಯದ ಹಿಂದೆ ಚಲಿಸುತ್ತಿರುವುದು, ವಿಷಾದನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಅಭಿಪ್ರಾಯಪಟ್ಟರು. ಅವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ತಿಪಟೂರಿನ ಕೆ.ಎಲ್.ಎ. ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ಆಚರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ನಾಡಿನ ಜನರ ಮನೆ ಮಾತಾಗಬೇಕಿದೆ. ಸಾಹಿತ್ಯ ಸಂಸ್ಕೃತಿ ಕಾರ್ಯಕ್ರಮಗಳನ್ನು ಸರ್ಕಾರಗಳು ಹೆಚ್ಚು ಆಯೋಜನೆ ಮಾಡಬೇಕಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಲ್.ಎ. ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಪ್ರಸನ್ನರವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ನಾಲ್ಕು ವರ್ಷಗಳಿಂದ ಜನ ಮಾನಸಕ್ಕೆ ಹತ್ತಿರವಾಗುವಂತಹ ನೂರಾರು ಕಾರ್ಯಕ್ರಮಗಳನ್ನು…
ತುರುವೇಕೆರೆ: ಕೋಡಿ ನಾಗಸಂದ್ರ ಟಿಬಿ ಕ್ರಾಸ್‌ನಲ್ಲಿ ಶ್ರೀ ವಿನಾಯಕ ಮಾರುತಿ ಸಂಘದಿಂದ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮಾರುತಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮವು ಮೇ 7ರಿಂದ 8ರವರೆಗೆ ನಡೆಯಲಿದೆ. 31 ಅಡಿ ಎತ್ತರದ ಆಂಜನೇಯ ವಿಗ್ರಹ ಅನಾವರಣ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ಅವರು ಪ್ರವಾಸಿ ಮಂದಿರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಾಳೆ (ಮೇ 8) ಮಧ್ಯಾಹ್ನ 12:30 ಗಂಟೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ ವಹಿಸುವರು. ಈ ಸಂದರ್ಭ ಅವರುಗಳು ಕಳಸ ಸ್ಥಾಪನೆ ಮಾಡಿ, ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ನೆರವೇರಿಸುವರು. ಮೈಸೂರು ಲೋಕಸಭಾ ಕ್ಷೇತ್ರದ ಸದಸ್ಯ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ, ಯುವ ಜೆಡಿಎಸ್ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯಸಭಾ…
ತುಮಕೂರು: ಕ್ಯಾತ್ಸಂದ್ರ ನಿಲ್ದಾಣದಲ್ಲಿ ರೈಲಿಗೆ ಸಿಲುಕಿ ಸುಮಾರು 45 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುತ್ತಾರೆ. ಕೋಲುಮುಖ, ಗಿಡ್ಡಮೂಗು, ಕುರುಚಲು ಗಡ್ಡ ಮೀಸೆ ಬಿಟ್ಟಿದ್ದು, ಹುಬ್ಬು ಹಲ್ಲಿನಂತೆ ಕಂಡುಬರುತ್ತಾರೆ. ಈತನ ಮೈಮೇಲೆ ಕಪ್ಪು ಬಿಳಿ ಬಣ್ಣದ ಉದ್ದನೆಯ ಗೆರೆಗಳುಳ್ಳ ತುಂಬು ತೋಳಿನ ಶರ್ಟ್, ಬಿಳಿ ಬೂದು ಬಣ್ಣದ ಪ್ಯಾಂಟ್, ಪಾಚಿ ಬಣ್ಣದ ಟವಲ್ ಧರಿಸಿದ್ದಾರೆ. ಅದೇ ರೀತಿ ಹಿರೇಹಳ್ಳಿ ದಾಬಸ್‌ಪೇಟೆ ರೈಲ್ವೆ ನಿಲ್ದಾಣಗಳ ಮಧ್ಯೆ ಚಲಿಸುವ ರೈಲಿಗೆ ಸಿಲುಕಿ ಸುಮಾರು 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುತ್ತಾರೆ. ಕೋಲು ಮುಖ, ಬಿಡ್ಡೆಯ ಮೂಗು, ಗಡ್ಡ ಮೀಸೆ ಬಿಟ್ಟಿರುತ್ತಾರೆ. ಎಡಗಾಲು ಪಾದದ ಮೇಲೆ ಹಳೆಯ ಗಾಯದ ಗುರುತುಗಳಿವೆ. ಇವರ ಮೈಮೇಲೆ ಸಿಮೆಂಟ್ ಕಲರ್ ನ ರೆಡಿಮೇಡ್ ಫುಲ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ನೀಲಿ ಬಣ್ಣದ ಅಂಡರ್ ವೇರ್ ಧರಿಸಿದ್ದಾನೆ. ಈ ಇಬ್ಬರು ಅಪರಿಚಿತ ವ್ಯಕ್ತಿಗಳ ವಾರಸುದಾರರು ಯಾರಾದರೂ ಇದ್ದಲ್ಲಿ ಸಹಾಯಕ ಆರಕ್ಷಕ ಉಪನಿರೀಕ್ಷಕರು, ತುಮಕೂರು ರೈಲ್ವೆ ಪೊಲೀಸ್ ಹೊರ ಉಪಠಾಣೆ, ತುಮಕೂರು. ಹೆಚ್ಚಿನ ಮಾಹಿತಿಗಾಗಿ 9480802142…
ಮಧುಗಿರಿ: ಪಟ್ಟಣದಲ್ಲಿ ಕೈಗೊಳ್ಳಲಾಗುತ್ತಿರುವ ರಸ್ತೆಗಳನ್ನು ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕು ಎಂದು ಶಾಸಕ ಕೆ.ಎನ್. ರಾಜಣ್ಣ ತಿಳಿಸಿದರು. ಅವರು ನಿನ್ನೆ ಲೋಕೋಪಯೋಗಿ ಇಲಾಖೆ ಹಾಗೂ ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ತಹಶೀಲ್ದಾರ್ ಶ್ರೀನಿವಾಸ್, ಎ.ಡಿ.ಒ. ಧನಂಜಯ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಲೋಕೋಪಯೋಗಿ ಇಲಾಖೆಯ ಹನುಮಂತ ರಾವ್, ಸಂಪತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆದಿನಾರಾಯಣರೆಡ್ಡಿ, ಪುರಸಭಾ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರುಗಳು, ಸಾರ್ವಜನಿಕರು ಇದ್ದರು. ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಕೆ.ಎನ್.ರಾಜಣ್ಣನವರು, ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು, ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು ಎಂದು ತಿಳಿಸಿದರು. ಇದೇ ವೇಳೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕೆಲವು ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿಕೊಟ್ಟರು. ಪಟ್ಟಣಕ್ಕೆ ಹೊಂದಿಕೊಂಡಿರುವ ಲಾಲಾಪೇಟೆ ಸಮೀಪದಲ್ಲಿ ವಿವಿಧ ಸಮುದಾಯಗಳ ವಿದ್ಯಾರ್ಥಿ ನಿಲಯ, ಸಮುದಾಯ ಭವನ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಅವರು ಸ್ಥಳ ಪರಿಶೀಲನೆ…
ತುಮಕೂರು: ಜಿಲ್ಲೆಯಲ್ಲಿ ಹಕ್ಕಿಜ್ವರ (H5N1)ನಿಂದ ರಾಷ್ಟ್ರಪಕ್ಷಿ ನವಿಲುಗಳ ಸರಣಿ ಸಾವು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ. ಕೋಳಿಹಳ್ಳಿ ಬಳಿಕ ಈಗ ದೇವರಾಯನದುರ್ಗದ ತಪ್ಪಲು, ಕುಣಿಗಲ್ ಹಾಗೂ ಹಿರೇಹಳ್ಳಿ ಸೇರಿದಂತೆ ವಿವಿಧೆಡೆ ನವಿಲುಗಳು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಈವರೆಗೆ ಬಲಿಯಾದ ನವಿಲುಗಳ ಸಂಖ್ಯೆ 54ಕ್ಕೆ ಏರಿಕೆಯಾಗಿದೆ. ಏಪ್ರಿಲ್ 16ರಂದು ಕೋಳಿಹಳ್ಳಿಯಲ್ಲಿ ಮೃತಪಟ್ಟ ನವಿಲುಗಳ ಅಂಗಾಂಶ ಮಾದರಿಯನ್ನು ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಏಪ್ರಿಲ್ 30ರಂದು ಬಂದ ವರದಿಯಲ್ಲಿ ನವಿಲುಗಳ ಸಾವಿಗೆ ‘ಹಕ್ಕಿಜ್ವರ’ ಕಾರಣ ಎಂಬುದು ದೃಢಪಟ್ಟಿದೆ. ಮೇ 5ರಂದು ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿಂಭಾಗ 6, ದೇವರಾಯನದುರ್ಗದ ದುರ್ಗದಹಳ್ಳಿ ಅರಣ್ಯದಲ್ಲಿ 2, ಕೆಸರಮಡು ಬಳಿ 1 ಹಾಗೂ ಕುಣಿಗಲ್ ಸ್ಟಡ್ ಫಾರಂ ಸಮೀಪ 1 ನವಿಲು ಮೃತಪಟ್ಟಿರುವುದು ವರದಿಯಾಗಿದೆ. ಸೋಂಕು ಕಾಣಿಸಿಕೊಂಡ ಕೋಳಿಹಳ್ಳಿ ಸುತ್ತಮುತ್ತಲಿನ 10 ಕಿ.ಮೀ ಪ್ರದೇಶವನ್ನು ಜಿಲ್ಲಾಡಳಿತವು ‘ತೀವ್ರ ನಿಗಾ ಪ್ರದೇಶ’ ಎಂದು ಘೋಷಿಸಿದೆ. ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ. ಶಿವಕುಮಾರ್ ಮಾತನಾಡಿ, “ಜಿಲ್ಲಾಧಿಕಾರಿಗಳು ರಚಿಸಿರುವ ತುರ್ತು ಸ್ಪಂದನಾ ತಂಡವು ಮೃತ…
ಹುಳಿಯಾರು: ತುಮಕೂರು ಜಿಲ್ಲೆಯ ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಮಳೆಯಿಲ್ಲದೆ ತೀವ್ರ ಜಲಕ್ಷಾಮ ಎದುರಾಗಿದ್ದು, ರೈತರು ಹಾಗೂ ಸಾರ್ವಜನಿಕರು ನೀರಿನ ಹನಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯ ಮುನ್ಸೂಚನೆ ಕಾಣದಿರುವುದು ರೈತರ ಆತಂಕವನ್ನು ಇಮ್ಮಡಿಗೊಳಿಸಿದೆ. ಕಳೆದ ವರ್ಷ ಮಳೆ ಕೈಕೊಟ್ಟಿದ್ದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆಬಾವಿಗಳು ಬತ್ತಿ ಹೋಗಿವೆ. ಹೀಗಾಗಿ ರೈತರು ತಮ್ಮ ಅಡಿಕೆ ಮತ್ತು ತೆಂಗಿನ ತೋಟಗಳನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ. ಆರಂಭದಲ್ಲಿ 700 ರಿಂದ 900 ರೂಪಾಯಿಗಳಿದ್ದ ಒಂದು ಟ್ಯಾಂಕರ್ ನೀರಿನ ಬೆಲೆ ಈಗ 1,000 ರೂಪಾಯಿಗಳ ಗಡಿ ದಾಟಿದೆ. ಕೆರೆಗಳಲ್ಲಿ ನೀರು ಖಾಲಿಯಾಗಿರುವುದರಿಂದ ಟ್ಯಾಂಕರ್ ಮಾಲೀಕರು ನೀರಿಗಾಗಿ ಬೋರನಕಣಿವೆ ಜಲಾಶಯವನ್ನು ಅವಲಂಬಿಸಿದ್ದಾರೆ. ದೂರದ ಪ್ರಯಾಣ ಮತ್ತು ನೀರಿನ ಅಲಭ್ಯತೆಯಿಂದಾಗಿ ದರ ಏರಿಕೆ ಮಾಡಲಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ. ಕೇವಲ ಕೃಷಿಯಷ್ಟೇ ಅಲ್ಲದೆ, ಹೋಬಳಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತೀವ್ರ ಅಭಾವ ಸೃಷ್ಟಿಯಾಗಿದೆ. ಜನರು ಕುಡಿಯುವ ನೀರಿಗಾಗಿ ತೋಟದ ಕೊಳವೆಬಾವಿಗಳು ಅಥವಾ ಟ್ಯಾಂಕರ್ ನೀರನ್ನೇ…
ಈಶ್ವರನು ಒಮ್ಮೆ ಭೂಲೋಕದಲ್ಲಿ ಕಷ್ಟದಲ್ಲಿರುವ ತನ್ನ ಭಕ್ತರಿಗೆ ಒಳ್ಳೆಯದು ಮಾಡಲೆಂದು ನಿರ್ಧರಿಸಿ ಒಂದು ನಾಯಿಯ ವೇಷ ಹಾಕಿಕೊಂಡು ಮೊದಲು ಒಂದು ಗುರುಕುಲಕ್ಕೆ ಹೋದನು. ಅಲ್ಲಿ ಗುರುಗಳು ಒಬ್ಬ ಶಿಷ್ಯನನ್ನು ನಿಲ್ಲಿಸಿ ನಿನಗೆ ಈ ಜನ್ಮದಲ್ಲಿ ವಿದ್ಯೆ ತಲೆಗೆ ಹತ್ತುವುದಿಲ್ಲ, ಬರೀ ಈಶ್ವರ ಭಜನೆ ಮಾಡುವುದರಲ್ಲೇ ಕಾಲ ಕಳೆಯುತ್ತಿರುವೆ ಏನು, ನಿನಗೆ ಈಶ್ವರ ಬಂದು ವಿದ್ಯ ಕಲಿಸುವನೇ ಎನ್ನುತ್ತಿದ್ದಂತೆ ಅಲ್ಲಿಗೆ ಬಂದಿದ್ದ ನಾಯಿ ವೇಷದ ಶಿವನು ಓಡಿಬಂದು ಆ ಶಿಷ್ಯನಿಗೆ ಬಂದು ಕಚ್ಚಿತು ಮತ್ತು ಅಲ್ಲಿಂದ ಯಾರ ಕೈಗೂ ಸಿಕ್ಕದೆ ಓಡಿ ಹೋಯಿತು. ಎಲ್ಲರೂ ಗಾಬರಿಯಾಗುತ್ತಿದ್ದರೆ ಇತ್ತ ಶಿಷ್ಯನು ಇದ್ದಕ್ಕಿದ್ದಂತೆ ವೇದ ಉಪನಿಷತ್ತುಗಳನ್ನು ತಪ್ಪಿಲ್ಲದೆ ಜೋರಾಗಿ ಪಠಣ ಮಾಡಲು ಪ್ರಾರಂಭಿಸಿದನು. ಅವನಲ್ಲಿ ಆದ ಬದಲಾವಣೆಗೆ ಆ ನಾಯಿಯೇ ಕಾರಣವಿರಬಹುದು ಎಲ್ಲರೂ ಶಂಕಿಸಿದರು. ನಂತರ ನಾಯಿಯು ಒಬ್ಬ ಭಕ್ತ ಬಡವನ ಮನೆಗೆ ಹೋಯಿತು, ಅಲ್ಲಿ ಬಡವನು ಭಿಕ್ಷೆಯಲ್ಲಿ ಬಂದಿದ್ದ ಊಟವನ್ನು ಮನೆ ಮಂದಿ ಎಲ್ಲಾ ಹಂಚಿಕೊಂಡು ಇನ್ನೇನು ತಿನ್ನಬೇಕು ಅಷ್ಟರಲ್ಲಿ ಬಂದ ನಾಯಿಯನ್ನು ನೋಡಿ…
ಬೆಂಗಳೂರು: 2026ರ ಐಪಿಎಲ್ ಫೈನಲ್ ಪಂದ್ಯವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಅಹಮದಾಬಾದ್‌ಗೆ ಸ್ಥಳಾಂತರಿಸಿರುವ ಬಿಸಿಸಿಐ (BCCI) ನಿರ್ಧಾರದ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಸ್ಥಳಾಂತರಕ್ಕೆ ಕಾರಣ: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಗುಜರಾತ್‌ನ ಅಹಮದಾಬಾದ್‌ಗೆ ಶಿಫ್ಟ್ ಮಾಡಲಾಗಿದೆ. ಅಹಮದಾಬಾದ್‌ನಲ್ಲಿ ದೊಡ್ಡ ಕ್ರೀಡಾಂಗಣವಿರುವುದು ಮತ್ತು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗೆ ಅವಕಾಶವಿರುವುದು ಈ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಡಿಕೆಶಿ ಅಭಿಪ್ರಾಯಪಟ್ಟಿದ್ದಾರೆ. ಶಾಸಕರ ಐಪಿಎಲ್ ಟಿಕೆಟ್ ಬೇಡಿಕೆಯಿಂದಾಗಿ ಪಂದ್ಯ ಸ್ಥಳಾಂತರಗೊಂಡಿದೆ ಎಂಬ ವರದಿಗಳನ್ನು ಡಿ.ಕೆ. ಶಿವಕುಮಾರ್ ತಳ್ಳಿಹಾಕಿದ್ದಾರೆ. “ಶಾಸಕರಿಗೆ ಟಿಕೆಟ್ ವಿತರಿಸುವುದಕ್ಕೂ ಮತ್ತು ಫೈನಲ್ ಪಂದ್ಯದ ಸ್ಥಳಾಂತರಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಅವರು ಸ್ಪಷ್ಟಪಡಿಸಿದರು. ಇದೇ ವೇಳೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ದೆಹಲಿ ಭೇಟಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ಹೈಕಮಾಂಡ್ ಕರೆ ನೀಡಿದಾಗ ನಾವು ದೆಹಲಿಗೆ ಹೋಗುತ್ತೇವೆ. ಕರೆಯದಿದ್ದಾಗ ಹೋಗುವುದು ಸರಿಯಲ್ಲ” ಎಂದು ಹೇಳಿದರು. ಐಪಿಎಲ್ ಟಿಕೆಟ್‌ಗಳಿಗಾಗಿ ಶಾಸಕರು ಮತ್ತು ಅವರ ಆಪ್ತ ಸಹಾಯಕರು ಸಾಲುಗಟ್ಟಿ ನಿಂತಿರುವ…
ಬೆಂಗಳೂರು: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ಭರ್ಜರಿ ಗೆಲುವಿನ ಬಗ್ಗೆ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದ್ದಾರೆ. ವಿಜಯ್ ಅವರ ಈ ಗೆಲುವು ದಶಕಗಳ ಕಾಲ ಆಡಳಿತ ನಡೆಸಿದ ಪಕ್ಷಗಳ ವಿರುದ್ಧ ಜನರಲ್ಲಿ ಮೂಡಿದ್ದ ಅಸಮಾಧಾನ ಅಥವಾ ಆಡಳಿತ ವಿರೋಧಿ ಅಲೆಯ ಫಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿಜಯ್ ಅವರಿಗೆ ಇದ್ದ ಅಪಾರ ಜನಪ್ರಿಯತೆ ಈ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಗೊಂಡಿದ್ದು, ಅವರ ದೊಡ್ಡ ಗೆಲುವಿಗೆ ಪ್ರಮುಖ ಕಾರಣವಾಗಿದೆ ಎಂದು ಸುಮಲತಾ ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನು ಗೌರವಿಸಬೇಕು. ಆದರೆ, ತಮಿಳುನಾಡಿನಲ್ಲಿ ಸೃಷ್ಟಿಯಾಗಿರುವ ಅತಂತ್ರ ವಿಧಾನಸಭೆಯ ಸ್ಥಿತಿಯು ಸರ್ಕಾರದ ಸ್ಥಿರತೆಯ ಬಗ್ಗೆ ಕಳವಳ ಮೂಡಿಸುತ್ತದೆ ಎಂದು ಅವರು ಹೇಳಿದ್ದಾರೆ. ವಿಜಯ್ ಅವರು ನೀಡಿರುವ ಕೆಲವು ಚುನಾವಣಾ ಭರವಸೆಗಳನ್ನು ಸುಮಲತಾ ಟೀಕಿಸಿದ್ದಾರೆ. “ಅನಗತ್ಯ ಹಾಗೂ ಅನುಷ್ಠಾನಕ್ಕೆ ಕಷ್ಟವಾದ ಭರವಸೆಗಳು ಅವರ ಪಟ್ಟಿಯಲ್ಲಿವೆ. ಈಗಾಗಲೇ ಸಾಲದ ಸುಳಿಯಲ್ಲಿರುವ ತಮಿಳುನಾಡಿನಲ್ಲಿ ಇಂತಹ ಭರವಸೆಗಳನ್ನು ಈಡೇರಿಸುವುದು ದೊಡ್ಡ ಸವಾಲಾಗಬಹುದು” ಎಂದು ಅವರು ಎಚ್ಚರಿಸಿದ್ದಾರೆ.…