Subscribe to Updates
Get the latest creative news from FooBar about art, design and business.
- ‘ಗರ್ಭಿಣಿನೂ ಇಲ್ಲ, ಮಹಿಳೆಯೂ ಇಲ್ಲ… ಕಾರಿನಲ್ಲಿ ಒಬ್ಬರೇ ಇದ್ದಿದ್ದು!’: ಝೀರೋ ಟ್ರಾಫಿಕ್ ಪ್ರತಿಭಟನೆಯ ಅಸಲೀಯತ್ತು ಬಿಚ್ಚಿಟ್ಟ ಬೆಂಗಳೂರು ಪೊಲೀಸರು
- ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ಜೂನ್ 3 ರಂದು ವಿಧಾನಸೌಧ ಸುತ್ತಮುತ್ತಲಿನ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಣೆ
- ಈಶ್ವರ ಖಂಡ್ರೆ ಅವರಿಗೆ ಉಪಮುಖ್ಯಮಂತ್ರಿ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯುವ ಕಾಂಗ್ರೆಸ್ ಮುಖಂಡ ಒತ್ತಾಯ
- ಮಿಡಿಗೇಶಿ: ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು; ಯುವಕ ಪ್ರಾಣಾಪಾಯದಿಂದ ಪಾರು!
- ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳ ಮಾಹಿತಿಗೆ ಸೂಚನೆ
- ಸಾರಿಗೆ ಬಲಪಡಿಸಲು ಪುರುಷರು ಕಡ್ಡಾಯವಾಗಿ ಟಿಕೆಟ್ ಪಡೆದು ಪ್ರಯಾಣಿಸಿ: ಕೆ.ಎನ್.ರಾಜಣ್ಣ ಕರೆ
- ತಿಪಟೂರು ರೋಟರಿ ಕ್ಲಬ್ ನ ಪಬ್ಲಿಕ್ ಇಮೇಜ್ ಗೆ ರಾಜ್ಯಮಟ್ಟದ ಅತ್ಯುತ್ತಮ ಸೇವಾ ಪ್ರಶಸ್ತಿ
- ಬೆಂಗಳೂರು: ವಿಐಪಿ ಸಂಚಾರಕ್ಕೆ ಗರ್ಭಿಣಿ ಇದ್ದ ಕಾರು ತಡೆದಿದ್ದಕ್ಕೆ ರಸ್ತೆಯಲ್ಲೇ ಪತಿ ಪ್ರತಿಭಟನೆ; ತನಿಖೆಗೆ ಆದೇಶ!
Author: admin
ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ರಾಷ್ಟ್ರೀಯ ಹೆದ್ದಾರಿ 275ರ ಏಳನೇ ಹೊಸಕೋಟೆ- ಆನೆಕಾಡು ಭಾಗದಲ್ಲಿ ರಸ್ತೆಯ ಮಧ್ಯದಲ್ಲಿಯೇ ದನಗಳು ಮಲಗುತ್ತಿವೆ. ಇದರಿಂದಾಗಿ ವಾಹನ ಸವಾರರಿಗೆ ದಿಢೀರನೇ ಜಾನುವಾರುಗಳು ಎದುರಾಗುತ್ತಿದ್ದು, ಪರಿಣಾಮವಾಗಿ ಅಪಘಾತಗಳು ಸಂಭವಿಸುತ್ತಿವೆ. ಹಲವರು ಹೀಗೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಜಾನುವಾರುಗಳು ಕೂಡ ಅಪಘಾತದಲ್ಲಿ ಮೃತಪಟ್ಟಿವೆ. ರಾಷ್ಟ್ರೀಯ ಹೆದ್ದಾರಿ ಬಳಿಯ ಹೊಸಕೋಟೆ, ತೊಂಡೂರು, ಹೇರೂರು, ಮೆಟ್ನಳ್ಳ, ಉಪ್ಪುತೋಡು, ಬಸವನಹಳ್ಳಿ ಭಾಗದ ಜಾನುವಾರು ಮಾಲೀಕರು ತಮ್ಮ ಜಾನುವಾರುಗಳನ್ನು ಮೇಯಲು ರಸ್ತೆಗೆ ಬಿಡುತ್ತಿದ್ದಾರೆ. ಈ ನಡುವೆ ನಾಕೂರು ಶಿರಂಗಾಲ, ಹೇರೂರು ಭಾಗದಿಂದಲೂ ಜಾನುವಾರುಗಳು ಕಾಡಿನೊಳಗೆ ಮೇಯುತ್ತಾ ರಸ್ತೆಗೆ ಬರುತ್ತಿವೆ. ಮಳೆ ಮತ್ತು ಚಳಿ ಹೆಚ್ಚು ಇರುವ ಸಂದರ್ಭದಲ್ಲಿ ರಸ್ತೆಯಲ್ಲಿ ಬೆಚ್ಚನೆಯ ವಾತಾವರಣ ಇರುವ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ದನಕರುಗಳು ಕಾಣಿಸಿಕೊಳ್ಳುತ್ತಿವೆ. ಬೆಳಗಿನ ಜಾವ ಮಂಜು ಕವಿದ ವಾತಾವರಣ ಮತ್ತು ಮಳೆಯ ಹನಿಯ ನಡುವೆ ಚಾಲಕರಿಗೆ ರಸ್ತೆ ಅಸ್ಪಷ್ಟವಾಗಿ ಕಾಣುವುದರಿಂದ ಅಪಘಾತಗಳು ಹೆಚ್ಚಾಗಿ…
ಹಾಸನ: ದರ್ಶನ್ ಬಿಟ್ಟರೆ ಬೇರೆ ಯಾವುದೇ ಸುದ್ದಿಗಳೇ ಇಲ್ವಾ ಎಂದು ಮಾಧ್ಯಮಗಳ ವಿರುದ್ಧ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಹಾಸನದಲ್ಲಿ ದರ್ಶನ್ ವಿಚಾರವಾಗಿ ಸುದ್ದಿಗಾರರು ಪ್ರಶ್ನಿಸಲು ಮುಂದಾದ ವೇಳೆ ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಬರಿ ದರ್ಶನ್ ಬಗ್ಗೆ ತೋರಿಸುತ್ತೀರಿ. ಅವನನ್ನು ಬಿಟ್ಟು ಬೇರೆ ಯಾವ ವಿಚಾರ ಇಲ್ಲವೇ? ಒಳ್ಳೆಯ ವಿಚಾರಗಳನ್ನು ತೋರಿಸಿ ಎಂದು ಅವರು ಗರಂ ಆಗಿದ್ದಾರೆ. ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಆತನನ್ನೇ ತೋರಿಸುತ್ತೀರಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಅಂತ ಅವರು ಪ್ರಶ್ನಿಸಿದರಲ್ಲದೇ, ಒಳ್ಳೆಯ ಕಲಾವಿದ ಎಂಬುದನ್ನು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಎಂದ ಮಾತ್ರಕ್ಕೆ ಮಾಡಬಾರದ್ದು ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೆ. ಮೂರು ಹೊತ್ತು ಆತನ ಬಗ್ಗೆಯೇ ತೋರಿಸಿದರೆ ಹೇಗೆ? ಟಿವಿಯವರಿಗೆ ಬೇರೆ ಕೆಲಸವಿಲ್ವಾ? ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೆಂಗಳೂರು: ಆಗಸ್ಟ್ 30 ಮತ್ತು 31 ರಂದು ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಹೋಟೆಲ್, ರೆಸ್ಟೋರೆಂಟ್ ಗಳಲ್ಲಿರುವ ಆಹಾರ ಸುರಕ್ಷತೆ ಬಗ್ಗೆ ವಿಶೇಷ ತಪಾಸಣೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಈ ಬಬಗ್ಗೆ ಮಾಹಿತಿ ನೀಡಿದ ಅವರು, ಮಾಂಸ, ಮೀನು, ಮೊಟ್ಟೆಗಳ ಆಹಾರ ಮಾದರಿಗಳನ್ನು ಸಂಗ್ರಹಿಸಿ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರಲ್ಲದೇ, ಅಸುರಕ್ಷಿತ ಆಹಾರ ತಯಾರಿಸುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು. ಸಾರ್ವಜನಿಕರು ತಾವು ಸೇವಿಸುವ ಆಹಾರದ ಗುಣಮಟ್ಟವನ್ನು ತಾವೇ ಪರೀಕ್ಷಿಸಿಕೊಳ್ಳಲು ಅನುಕೂಲವಾಗುವಂತೆ ಹೋಟೆಲ್, ರೆಸ್ಟೋರೆಂಟ್, ಫುಡ್ ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 3,400 ಟೆಸ್ಟಿಂಗ್ ಕಿಟ್ ಅಳವಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ವಡೋದರ: ನಿರಂತರ ಮಳೆಯಿಂದಾಗಿ ಗುಜರಾತ್ ನಲ್ಲಿ ಅವಾಂತರ ಸೃಷ್ಟಿಯಾಗಿದೆ. ರಾಜ್ಯದಾದ್ಯಂತ ಸುಮಾರು 137 ಜಲಾಶಯಗಳು, 24 ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಇದೇ ವೇಳೆ ನೀರಿನಿಂದ ಆವೃತ್ತವಾದ ಮನೆಯೊಂದರ ಮೇಲ್ಛಾವಣಿಯಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿರುವ ಘಟನೆ ವಡೋದರದ ಅಕೋಟ ಕ್ರೀಡಾಂಗಣ ಪ್ರದೇಶದಲ್ಲಿ ನಡೆದಿದೆ. ಸದ್ಯ ಮನೆಯ ಮೇಲೆ ಮೊಸಳೆ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗುಜರಾತ್ ನಲ್ಲಿ ಕಳೆದ ಮೂರು ದಿನಗಳಿಂದ ಮಳೆ ಸಂಬಂಧಿತ ಅವಘಡಗಳಿಂದಾಗಿ ಮೃತಪಟ್ಟವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ ಸುಮಾರು 17,800 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸೌರಾಷ್ಟ್ರ ಭಾಗದ ದೇವ್‌ಭೂಮಿ ದ್ವಾರಕಾ, ಜಾಮ್‌ನಗರ, ರಾಜ್‌ಕೋಟ್ ಮತ್ತು ಪೋರಬಂದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಭಾರಿ ಮಳೆಯಾಗಿದ್ದು, ಆತಂಕ ಸೃಷ್ಟಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ನವದೆಹಲಿ: ನಮ್ಮ ಸರ್ಕಾರವು ಕ್ರೀಡೆಗೆ ಮತ್ತಷ್ಟು ಬೆಂಬಲ ನೀಡಲು ಬದ್ಧವಾಗಿದೆ. ಮತ್ತಷ್ಟು ಯುವ ಪ್ರತಿಭೆಗಳು ಕ್ರೀಡೆಯಲ್ಲಿ ತೊಡಗಿಸಿಕೊಂಡು ಪ್ರಜ್ವಲಿಸುವುದನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ನಮನ ಸಲ್ಲಿಸಿದ ಬಳಿಕ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ರಾಷ್ಟ್ರೀಯ ಕ್ರೀಡಾ ದಿನದ ಶುಭಾಶಯಗಳು. ಇಂದು ನಾವು ಮೇಜರ್ ಧ್ಯಾನ್ ಚಂದ್ ಜಿ ಅವರಿಗೆ ಗೌರವ ಸಲ್ಲಿಸುತ್ತೇವೆ. ಕ್ರೀಡೆಯ ಬಗ್ಗೆ ಆಸಕ್ತಿ ಹೊಂದಿರುವ ಮತ್ತು ಭಾರತಕ್ಕಾಗಿ ಆಡಿದ ಎಲ್ಲರನ್ನು ಅಭಿನಂದಿಸಲು ಇದು ಒಂದು ಸುಸಂದರ್ಭವಾಗಿದೆ ಎಂದು ಪ್ರಧಾನಿ ಹೇಳಿದರು. ನಮ್ಮ ಸರ್ಕಾರವು ಕ್ರೀಡೆಯನ್ನು ಬೆಂಬಲಿಸಲು ಬದ್ಧವಾಗಿದೆ ಮತ್ತು ಹೆಚ್ಚಿನ ಸಂಖ್ಯೆಯ ಯುವಕರು ಯುವಕರು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಸಮರ್ಥರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಅವರು ತಿಳಿಸಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…
ಥಾಣೆ: ಬಾಲಕಿಯರಿಗೆ ಅಶ್ಲೀಲ ವಿಡಿಯೋಗಳನ್ನು ತೋರಿಸಿದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಮಹಾನಗರ ಪಾಲಿಕೆಯ ಶಾಲೆಯೊಂದರಲ್ಲಿ ನಡೆದಿದೆ. ಮುಝಮ್ಮಿಲ್ ಬಂಧಿತ ಆರೋಪಿಯಾಗಿದ್ದಾನೆ. ಈತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ ಅಂತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿಕ್ಷಕ ತನ್ನ ಮೊಬೈಲ್ ಫೋನ್‌ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸಿದ್ದು, ಈ ವಿಚಾರವನ್ನು ಬಾಲಕಿಯೊಬ್ಬಳು ತನ್ನ ಪೋಷಕರಿಗೆ ತಿಳಿಸಿದ್ದಳು. ಹೀಗಾಗಿ ಘಟನೆ ಬೆಳಕಿಗೆ ಬಂದಿತ್ತು. 7ನೇ ತರಗತಿಯ ಬಾಲಕಿಗೆ ಶಿಕ್ಷಕ ಅಶ್ಲೀಲ ಚಿತ್ರ ತೋರಿಸಿ ಕಿರುಕುಳ ನೀಡಿದ್ದಾನೆ. ಬಾಲಕಿ ಪ್ರತಿನಿತ್ಯವೂ ಶಾಲೆಗೆ ತಡವಾಗಿ ಬರುತ್ತಿದ್ದಳು. ಹೀಗಾಗಿ ಮುಖ್ಯಶಿಕ್ಷಕರು ಬಾಲಕಿಯ ಪೋಷಕರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಈ ಬಗ್ಗೆ ಬಾಲಕಿಯ ಬಳಿ ಪೋಷಕರು ವಿಚಾರಿಸಿದಾಗ. ಶಿಕ್ಷಕ ತನಗೆ ಅಶ್ಲೀಲ ಚಿತ್ರ ತೋರಿಸಿ, ಅನುಚಿತವಾಗಿ ವರ್ತಿಸುತ್ತಿದ್ದಾರೆ. ಇದರಿಂದಾಗಿ ಶಾಲೆಗೆ ಹೋಗಲು ಮನಸ್ಸಿಲ್ಲ ಎಂದು ಹೇಳಿಕೊಂಡಿದ್ದಾಳೆ. ತಕ್ಷಣವೇ ಎಚ್ಚೆತ್ತ ಬಾಲಕಿಯ ಪೋಷಕರು ಶಿಕ್ಷಕನ ವಿರುದ್ಧ ದೂರು ದಾಖಲಿಸಿದ್ದಾರೆ. ಸದ್ಯ ಬಾಲಕಿಯ ದೂರಿನಾಧಾರದ ಮೇಲೆ ಆರೋಪಿಯ ಮೇಲೆ…
ಅಹಮದಾಬಾದ್: ಗುಜರಾತ್ ನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಮಳೆ ಅವಾಂತರದ ಪರಿಣಾಮವಾಗಿ 28 ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಕಳೆದ ಮೂರು ದಿನಗಳಿಂದ ಗುಜರಾತ್ ನಲ್ಲಿ ಭಾರೀ ಮಳೆಯಾಗುತ್ತಿದೆ. 18 ಸಾವಿರಕ್ಕೂ ಅಧಿಕ ಮಂದಿಯನ್ನು ಪ್ರವಾಹ ಪೀಡಿತ ಸ್ಥಳದಿಂದ ಸುರಕ್ಷಿತ ತಾಣಕ್ಕೆ ರವಾನಿಸಲಾಗಿದ್ದು, ಸುಮಾರು 11 ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಮೋರ್ಬಿ, ವಡೋದರಾ, ಭರೂಚ್, ಜಾಮ್ ನಗರ, ಅರಾವಳಿ, ಪಂಚಮಹಲ್, ದ್ವಾರಕಾ ಮತ್ತು ದಂಗ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಆನಂದ್ ಜಿಲ್ಲೆಯಲ್ಲಿ ಆರು, ಅಹಮದಾಬಾದ್‌ನಲ್ಲಿ ನಾಲ್ಕು, ಗಾಂಧಿನಗರ, ಖೇಡಾ, ಮಹಿಸಾಗರ್, ದಾಹೋದ್ ಮತ್ತು ಸುರೇಂದ್ರನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ ಎಂದು ಗುಜರಾತ್ ಸರ್ಕಾರ ಮಾಹಿತಿ ನೀಡಿದೆ. ಮೃತರ ಪೈಕಿ ಏಳು ಜನರು ಮೋರ್ಬಿ ಜಿಲ್ಲೆಯ ಧವಾನಾ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ಕ್ರಾಸ್‌ವೇ ದಾಟುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ…
ಬಳ್ಳಾರಿ: ನಟ ದರ್ಶನ್ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿಯ ಕೇಂದ್ರೀಯ ಕಾರಾಗೃಹಕ್ಕೆ ಇಂದು ಶಿಫ್ಟ್ ಮಾಡಲಾಗಿದೆ. ಈ ನಡುವೆ ನಟ ದರ್ಶನ್ ಅವರಿಗೆ ಜೈಲು ಅಧಿಕಾರಿಗಳು ಕೈದಿ ನಂಬರ್ ನೀಡಿದ್ದಾರೆ. ಬಳ್ಳಾರಿ ಜೈಲಿಗೆ ಪ್ರವೇಶಿಸುತ್ತಿದ್ದಂತೆಯೇ ಪೊಲೀಸರು ನಿಯಮ ಪ್ರಕಾರ ದರ್ಶನ್ ಅವರ ಹೆಸರು, ತಂದೆಯ ಹೆಸರು ಹಾಗೂ ವಿಳಾಸವನ್ನು ಜೈಲಿನ ಡೈರಿಯೊಳಗೆ ಬರೆದುಕೊಂಡಿದ್ದಾರೆ. ಅವರು ಧರಿಸಿದ್ದ ಸರ ಹಾಗೂ ಕೈಯಲ್ಲಿದ್ದ ಬೆಳ್ಳಿ ಕಡಗವನ್ನು ತೆಗೆಸಿದ್ದಾರೆ. ನಟ ದರ್ಶನ್ ಅವರಿಗೆ ವಿಚಾರಣಾಧೀನ ಕೈದಿ ಸಂಖ್ಯೆ 511 ನೀಡಲಾಗಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬುವರ ಹತ್ಯೆ ಕೇಸ್ ನಲ್ಲಿ ಜೂನ್ ತಿಂಗಳಲ್ಲಿ ಬಂಧನಕ್ಕೊಳಗಾಗಿದ್ದರು. ಅವರ ಜೊತೆಗೆ ಕೊಲೆಗೆ ಸಹಕರಿಸಿದ ಆರೋಪದಡಿ ದರ್ಶನ್ ಸೇರಿ ಒಟ್ಟು 17 ಆರೋಪಿಗಳ ಬಂಧನವಾಗಿದೆ. ಸದ್ಯ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬಳ್ಳಾರಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಇಂದು ಶಿಫ್ಟ್ ಮಾಡಲಾಗಿದೆ. ನಟ ದರ್ಶನ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಶೇಷ ಆತಿಥ್ಯ ನೀಡಿರುವ ಫೋಟೋಗಳು ವೈರಲ್ ಆದ ಬೆನ್ನಲ್ಲೇ ಕೋರ್ಟ್ ಆದೇಶದಂತೆ ಅವರನ್ನು ಬಳ್ಳಾರಿ ಜೈಲ್ ಗೆ ಶಿಫ್ಟ್ ಮಾಡಲಾಗಿದೆ. ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ನಟ ದರ್ಶನ್ ಜೈಲು ತಲುಪಿದ್ದು, ಸಾಮಾನ್ಯ ಕೈದಿಯಂತೆ ಜೈಲು ಪ್ರವೇಶಿಸಿದ್ದಾರೆ. ಕಪ್ಪು ಟೀ ಶರ್ಟ್ ತೊಟ್ಟು, ಎಡಗೈಗೆ ಕ್ರೇಪ್ ಬ್ಯಾಂಡ್ ಧರಿಸಿ ಬೆಡ್ ಶೀಟ್ , ಬಲಗೈಯಲ್ಲಿ ನೀರಿನ ಬಾಟಲ್ ಹಿಡಿದುಕೊಂಡು ದರ್ಶನ್ ಜೈಲಿನೊಳಗೆ ಪ್ರವೇಶಿಸಿದ್ದಾರೆ. ಬಳ್ಳಾರಿ ಕಾರಾಗೃಹದ ಸೆಲ್ ನಂಬರ್ 15ರಲ್ಲಿ ಅವರನ್ನು ಇಡಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಜಮ್ಮು–ಕಾಶ್ಮೀರ: ಭಾರತೀಯ ಸೇನಾಪಡೆ ಎನ್ಕೌಂಟರ್ ನಲ್ಲಿ ಮೂವರು ಉಗ್ರರನ್ನು ಸದೆಬಡಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗುರುವಾರ ನಡೆದಿದೆ. ಕುಪ್ವಾರ ಜಿಲ್ಲೆ ತಂಗ್ಧಾರ್ ನಲ್ಲಿ ಕೆಲ ಉಗ್ರರು ಗಡಿ ನುಸುಳಲು ಯತ್ನ ನಡೆಸುತ್ತಿದ್ದಾರೆಂಬ ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನಾಪಡೆ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ಮೂವರು ಉಗ್ರರನ್ನು ಹತ್ಯೆ ಮಾಡಿದೆ. ಈ ನಡುವೆ ರಜೌರಿಯಲ್ಲಿಯೂ ಉಗ್ರರು ಹಾಗೂ ಸೇನಾಪಡೆ ನಡುವೆ ಗುಂಡಿನ ಕಾಳಗ ಮುಂದುವರೆದಿದ್ದು, ಸೇನಾಪಡೆ ಎನ್ಕೌಂಟರ್ ಆರಂಭಿಸಿದೆ. ಖೇರಿ ಮೊಹ್ರಾ ಲಾಠಿ ಮತ್ತು ದಂತಲ್ ಪ್ರದೇಶದಲ್ಲಿ ನಿನ್ನೆ ರಾತ್ರಿ 9:30ರ ಸುಮಾರಿಗೆ ಅನುಮಾನಾಸ್ಪದ ಓಡಾಟಗಳು ಕಂಡು ಬಂದ ಹಿನ್ನೆಲೆಯಲ್ಲಿ ಸೇನಾಪಡೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಶೋಧನಾ ಕಾರ್ಯಾಚರಣೆ ವೇಳೆ ರಾತ್ರಿ 11:45 ರ ಸುಮಾರಿಗೆ ಉಗ್ರರು ಸೇನಾಪಡೆ ಮೇಲೆ ಗುಂಡಿನ ದಾಳಿ ನಡೆಸಲು ಆರಂಭಿಸಿದರು. ಈ ವೇಳೆ ಸೇನಾಪಡೆ ಕೂಡ ದಿಟ್ಟ ಉತ್ತರ ನೀಡಿದ್ದು, ಸ್ಥಳದಲ್ಲಿ ಗುಂಡಿನ…