ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿದ ವಯ್ಯಾಲಿಕಾವಲ್ ನ ಮಹಾಲಕ್ಷ್ಮಿ ಮರ್ಡರ್ ಕೇಸ್ ನಲ್ಲಿ ತನಿಖಾಧಿಕಾರಿಗಳಿಗೆ ಮೃತಳ ಮನೆಯಲ್ಲಿ ಮಹತ್ವದ ಸಾಕ್ಷಿಯೊಂದು ಲಭ್ಯವಾಗಿದೆಯಂತೆ!
ವಯ್ಯಾಲಿಕಾವಲ್ ನ ಬಾಡಿಗೆ ಮನೆಯಲ್ಲಿ ವಾಸಿದ್ದ ಮಹಾಲಕ್ಷ್ಮೀ ಅದೇ ಮನೆಯ ಫ್ರಿಡ್ಜ್ ನಲ್ಲಿ ಪೀಸ್ ಪೀಸ್ ಆಗಿ ಪತ್ತೆಯಾಗಿದ್ದಳು. ಆದ್ರೆ, ಈ ಹತ್ಯೆಯಲ್ಲಿ 1ಕ್ಕಿಂತ ಹೆಚ್ಚು ಆರೋಪಿಗಳು ಇರುವ ಶಂಕೆ ವ್ಯಕ್ತವಾಗಿತ್ತು, ಇದಕ್ಕೆ ಪೂರಕವಾದ ದಾಖಲೆ ಇದೀಗ ಪೊಲೀಸರಿಗೆ ಲಭ್ಯವಾಗಿದೆಯಂತೆ.
ಮೃತಳ ಮನೆಯ ಫ್ರಿಡ್ಜ್ ನಲ್ಲಿ ನಾಲ್ಕೈದು ಫಿಂಗರ್ ಪ್ರಿಂಟ್ ಪತ್ತೆಯಾಗಿದೆ. ಹೀಗಾಗಿ ಕೊಲೆಯಲ್ಲಿ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿವಾಹೇತರ ಸಂಬಂಧದಲ್ಲಿ ಅಸಮಾಧಾನವಾಗಿದ್ದೇ ಕೊಲೆಗೆ ಕಾರಣವಿರಬಹುದೇ ಎನ್ನುವ ಶಂಕೆ ಮಹಾಲಕ್ಷ್ಮೀ ಹತ್ಯೆ ಪ್ರಕರಣದಲ್ಲಿ ಮೂಡಿದೆ. ಸದ್ಯ ಆರೋಪಿಗಳು ಉತ್ತರ ಪ್ರದೇಶಕ್ಕೆ ತೆರಳಿ ಸ್ಥಳ ಮರೆಸಿಕೊಂಡಿದ್ದು, ಪದೇ ಪದೇ ಸ್ಥಳ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q