Subscribe to Updates
Get the latest creative news from FooBar about art, design and business.
- ಕೃಷಿ ಲೋಕ /ಕಾಡು ಹಣ್ಣು.. | ಕೋಳಿ ಜುಟ್ಟು ಹಣ್ಣು
- ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ತನ್ಯಪಾನ ಅತ್ಯಗತ್ಯ: ಸಿ. ದೀಪಾ ಕರೆ
- ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ
- ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ
- ಲಿಂಕ್ ಕೆನಾಲ್, ಭೂಸ್ವಾಧೀನ ವಿರೋಧಿಸಿ ಆ. 6ರಿಂದ ಮೂರು ದಿನಗಳ ಸತ್ಯಾಗ್ರಹ: ಎಐ ಡೇಟಾ ಕೇಂದ್ರಗಳಿಂದ ಪರಿಸರ, ಉದ್ಯೋಗಕ್ಕೆ ಆತಂಕ ಆರೋಪ
- ಸಂತಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ. ಮಹಾಂತ ಶಿವಯೋಗಿ ಜಯಂತಿ ಹಾಗೂ ವ್ಯಸನ ಮುಕ್ತ ದಿನಾಚರಣೆ
- ತುಮಕೂರು: ದೇವರಾಯಪಟ್ಟಣದಲ್ಲಿ ಚಿರತೆ ಹಾವಳಿ, ಇಸ್ರೋ ಆವರಣದಲ್ಲಿ ಕುರಿ ಬಲಿ – ಬೋನು ಅಳವಡಿಕೆ
- ಗೃಹಲಕ್ಷ್ಮಿ, ಯುವನಿಧಿ: 323 ಕೋಟಿ ರೂ. ಬಿಡುಗಡೆ
Author: admin
ಬೀದರ್: ಜಿಲ್ಲೆಯ ಔರಾದ್ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕಾಲೇಜು ಕಟ್ಟಡ ನಿರ್ಮಾಣ ಜಾಗದಲ್ಲಿ ತೆಗೆದಿರುವ ಗುಂಡಿಗೆ ಬಿದ್ದ ಬಾಲಕನ್ನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಶನಿವಾರ ನಡೆದಿದೆ. ಔರಾದ್ ನಿವಾಸಿ ಜಿಶಾನ್ ಇಸ್ಮಾಯಿಲ್ (11) ಮೃತಪಟ್ಟ ಬಾಲಕ. ಬಾಲಕ 5ನೇ ತರಗತಿಯಲ್ಲಿ ಓದುತ್ತಿದ್ದ, ಶನಿವಾರ ಶಾಲೆಗೆ ರಜೆ ಹಿನ್ನೆಲೆ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಆಟವಾಡಲು ಹೋದ ವೇಳೆ ಆಕಸ್ಮಿಕವಾಗಿ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಔರಾದ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಬಾಲಕನ ಶವ ತಾಲೂಕು ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಪೋಷಕರಿಗೆ ಒಪ್ಪಿಸಿದ್ದಾರೆ. ಈ ದುರ್ಘಟನೆಗೆ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ನೂತನ ಕಾಲೇಜು ಕೊಠಡಿ ನಿರ್ಮಾಣ ಮಾಡುತ್ತಿರುವ ಸಂಬಂಧಿಸಿದ ಗುತ್ತಿಗೆದಾರ ಹಾಗೂ ಇಂಜಿನಿಯರ್ ನಿರ್ಲಕ್ಷ್ಯವೇ ಕಾರಣ ಎಂದು ವಿದ್ಯಾರ್ಥಿ ಮಾನವ ಬಂಧುತ್ವ ವೇದಿಕೆಯ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು. ವೇದಿಕೆಯ ರತ್ನದೀಪ…
ತುಮಕೂರು: ಜಿಲ್ಲಾಡಳಿತದಿಂದ ನಗರದಲ್ಲಿ ಅಕ್ಟೋಬರ್ 11 ಮತ್ತು 12 ರಿಂದ ಎರಡು ದಿನಗಳ ಕಾಲ ನಡೆಯುವ ತುಮಕೂರು ‘ದಸರಾ 2024’ರ ಆನೆಯೊಂದಿಗೆ ಜಂಬೂಸವಾರಿ ಮಾರ್ಗವನ್ನು ಜಿಲ್ಲಾಧಿಕಾರಿಯ ಶುಭ ಕಲ್ಯಾಣ ಪರಿಶೀಲನೆ ನಡೆಸಿದರು. ತುಮಕೂರು ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಅರಣ್ಯ ಉಪ ಸಂರಕ್ಷಣಾಧಿಕಾರಿ ಅನುಪಮಾ ಮುಜರಾಯಿ ತಹಶೀಲ್ದಾರ್ ಸವಿತಾ ಅವರೊಂದಿಗೆ ಎಂಜಿ ರಸ್ತೆ ಸೇರಿದಂತೆ ಜಬ್ಬುಸವಾರಿ ಸಾಗುವ ಮಾರ್ಗದಲ್ಲಿ ಕಾಲ್ನಡಿಗೆ ಮೂಲಕ ಸಾಗಿದರು. ಈ ಬಾರಿ ಜಿಲ್ಲಾಡಳಿತದ ವತಿಯಿಂದಲೇ ಅದ್ದೂರಿ ದ ಸರ ಕಾರ್ಯಕ್ರಮವನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂಬ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುಂಜಾಗ್ರತ ಕ್ರಮವನ್ನು ಕೈಗೊಂಡಿದೆ. ಪ್ರತಿ ವರ್ಷವೂ ದಸರಾ ಸಮಿತಿ ನೇತೃತ್ವದಲ್ಲಿ ದಸರಾ ಮಹೋತ್ಸವವನ್ನು ಆ ಯೋಜನೆ ಮಾಡಲಾಗುತ್ತಿತ್ತು ಆದರೆ ಈ ಬಾರಿ ಸಂಪೂರ್ಣವಾಗಿ ಜಿಲ್ಲಾಡಳಿತ ಈ ಮಹೋತ್ಸವವನ್ನು ಆ ಯೋಜನೆ ಮಾಡಲು ಕೈಗೆತ್ತಿಕೊಂಡಿದೆ. ಇತ್ತೀಚೆಗಷ್ಟೇ ಜಿಲ್ಲಾ ಉಸ್ತುವಾರಿ ಸಚಿವ…
ಕೊರಟಗೆರೆ: ನಾಡಿನಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ, ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಯ್ತು. ನಾಡಿನ ಪ್ರತಿ ಗ್ರಾಮದಲ್ಲೂ ಗಣೇಶ ಮೂರ್ತಿಯನ್ನು ಕೂರಿಸಿ ಅದ್ದೂರಿಯಾಗಿ ನಿಂತಿರುವ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಕೊರಟಗೆರೆ ಪಟ್ಟಣದ ಸತ್ಯ ಗಣಪತಿ ಹಾಗೂ ಕಟ್ಟೆ ಗಣಪತಿ ಅದ್ದೂರಿಯಾಗಿ ಪ್ರತಿಷ್ಠಾಪನೆಗೊಂಡಿತು. ಕಟ್ಟೆ ಗಣಪತಿಯ ಸನ್ನಿಧಾನದಲ್ಲಿ 16ನೇ ವರ್ಷದ ವಿಶೇಷವಾಗಿ ಅಮರನಾಥೇಶ್ವರನ ರೂಪದಲ್ಲಿ ಗಣಪತಿಯ ಪ್ರತಿಷ್ಠಾಪನೆ ನಡೆಯಿತು. ಪಟ್ಟಣದ ಸತ್ಯ ಗಣಪತಿ ಸಮಿತಿ ವತಿಯಿಂದ 65ನೇ ವರ್ಷದ ವೈಭವದ ಗಣಪತಿಯ ಪ್ರತಿಷ್ಠಾಪನೆ ಮಾಡಲಾಯಿತು. ಕೊರಟಗೆರೆ ಪಟ್ಟಣದಲ್ಲಿ ಈ ಬಾರಿ ದಸರಾ ಉತ್ಸವದ ಹಾಗೆ ಗಣಪತಿಗಳ ವಿಸರ್ಜನಾ ಕಾರ್ಯಕ್ರಮ ನಡೆಯುತ್ತದೆ. 250 ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ನಿಯೋಜನೆಯಲ್ಲಿ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಗಣಪತಿ ಹಬ್ಬದಿಂದ 12 ದಿನಗಳ ಕಾಲ ವಿಶೇಷ ಪೂಜೆಗಳನ್ನು ನೆರವೇರಿಸಲಾಗುವುದು. ಪಟ್ಟಣದಲ್ಲಿ ಸ್ಥಾಪಿಸಿರುವ ಎಲ್ಲಾ ಗಣಪತಿ ಮೂರ್ತಿಗಳ ವಿಶೇಷ ಮೆರವಣಿಗೆಯೊಂದಿಗೆ ಪಟ್ಟಣದ ಪೊಲೀಸ್ ಅಧಿಕಾರಿಗಳು, ಗಣ್ಯಾದಿ ಗಣ್ಯರ, ಸಾವಿರಾರು ಭಕ್ತಾದಿಗಳ ಜೊತೆಗೂಡಿ ಅದ್ದೂರಿ ವಿಸರ್ಜನೆ ಮಾಡಲು ಪಟ್ಟಣದ ಜನತೆ ತೀರ್ಮಾನಿಸಿದ್ದಾರೆ.…
ಪಾವಗಡ : ಕರ್ಪೂರಿ ಠಾಕೂರ್ ಹಿಂದುಳಿದ ವರ್ಗಗಳ ಸಂಘಟನೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಾಗರಾಜು ಎಸ್ ಮಂಗಳವಾಡ ಇವರನ್ನು ಆಯ್ಕೆ ಮಾಡಲಾಗಿದೆ. ಸವಿತಾ ಸಮಾಜದ ಸಂಘಟನೆಗೆ ನಿಸ್ವಾರ್ಥವಾಗಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ, ರಾಷ್ಟ್ರೀಯ ಕರ್ಪೂರಿ ಠಾಕೂರ್ ಒಬಿಸಿ ಸಂಘಟನೆ ಅಧ್ಯಕ್ಷರು ರಘುವೀರ್ ಸಿಂಗ್, ಉಪಾಧ್ಯಕ್ಷ ಆನಂದ ವಾರಿಕ ಕಲ್ಬುರ್ಗಿ ಅಭಿನಂದಿಸಿದ್ದಾರೆ. ಜಿಲ್ಲಾ ಸವಿತಾ ಸಮಾಜ ಮಂಜೇಶ್ ಗಾಂಧಿ, ಕ.ರಾ.ಸ.ಕ್ಷೌ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೃಷ್ಣಮೂರ್ತಿ, ಮತ್ತು ಕೆ.ಬಾಲಕೃಷ್ಣ, ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಅಧ್ಯಕ್ಷೆ ಡಾ.ಲಕ್ಷ್ಮಿ ಮತ್ತು ಕೋಮಲ, ಸಂಘಟನೆ ಮಂಡ್ಯ ಅಧ್ಯಕ್ಷ ಲೋಕೇಶ್ ಸೇರಿದಂತೆ ಪಾವಗಡ ತಾಲ್ಲೂಕಿನ ಸವಿತಾ ಸಮಾಜದ ಬಂಧುಗಳು, ಗಣ್ಯರು ಶುಭಾ ಹಾರೈಸಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಪಾವಗಡ: ಕೊಟ್ಟಿಗೆಯಲ್ಲಿ ಕೂಡಿ ಹಾಕಿದ್ದ 20 ಕುರಿ ಮರಿಗಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪರಿಣಾಮ 15 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಚಿಕ್ಕಜಾಲೊಡು ಗ್ರಾಮದಲ್ಲಿ ಶನಿವಾರ ಸಂಜೆ ಸುಮಾರು 5 ಗಂಟೆಯ ಸಂದರ್ಭದಲ್ಲಿ ಜರುಗಿದೆ ಗ್ರಾಮದ ಸಿದ್ದಲಿಂಗಪ್ಪ ಎನ್ನುವವರಿಗೆ ಸೇರಿದಂತಹ ಕುರಿಮರಿಗಳು ಇವಾಗಿದ್ದು ಕುರಿಗಳನ್ನು ಮೇಯಿಸಲು ಹೊಲಗಳಿಗೆ ಕರೆದುಕೊಂಡಾಗ ಅವುಗಳ ಮರಿಗಳನ್ನು ಕೊಟ್ಟಿಗೆ ಬಳಿಯೇ ಕುಡಿ ಹಾಕಲಾಗಿತ್ತು. ಕೊಟ್ಟಿಗೆಗೆ ಏಕಾಏಕಿ ನಾಯಿಗಳು ದಾಳಿ ನಡೆಸಿದ ಹಿನ್ನೆಲೆ 15 ಕುರಿ ಮರಿಗಳು ಸಾವನಪ್ಪಿದ್ದು ಐದು ಮರಿಗಳು ನಾಯಿಗಳಿಂದ ತಪ್ಪಿಸಿಕೊಂಡಿದೆ. ಇದರಿಂದಾಗಿ ರೈತ ಸಿದ್ದಲಿಂಗಪ್ಪ 50,000 ನಷ್ಟಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಘಟನೆಯು ವೈ ಎನ್, ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q
ಬೀದರ್: ಜಿಲ್ಲೆಯ ಔರಾದ ತಾಲೂಕಿನ ಬೆಳಕುಣಿ ಚೌಧರಿ ಗ್ರಾಮದ ಸರಕಾರಿ ಪ್ರೌಢ ಶಾಲೆ ಯಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ವಿದ್ಯಾರ್ಥಿಗಳು ಶಿಕ್ಷಕರಿಗೆ ಹೂಗುಚ್ಚ ಶಾಲು ಹಾಕಿ ಸನ್ಮಾನ ಮಾಡಿದರು. ಶಾಲೆಯ ಮಕ್ಕಳೆಲ್ಲಾ ಕೂಡಿ ಕೇಕ್ ಕತ್ತರಿಸುವ ಮೂಲಕ ಶಿಕ್ಷಕರ ದಿನಾಚರಣೆ ಆಚರಿಸಿದರು. ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಮ್.ಡಿ.ನಯೂಮ್ ಮಾತನಾಡಿ, ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಹಾಗೂ ಸುಂದರ ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಒಬ್ಬ ಶಿಲ್ಪಿ ಒಂದು ಕಲ್ಲು ಕೆತ್ತಿ ಮೂರ್ತಿ ಮಾಡಿದ ಹಾಗೆ. ಅಜ್ಞಾನ ಮಗುವಿಗೆ ತಿದ್ದಿ ತೀಡಿ ಸಮಾಜದಲ್ಲಿ ದೊಡ್ಡ ವ್ಯಕ್ತಿಯಾಗಿ ಬದಲಾಯಿಸುವುದು ಅದು ಶಿಕ್ಷಕರು ಮಾತ್ರ ಎಂದು ತಿಳಿಸಿದರು. ಶಿಕ್ಷಕರ ದಿನಾಚರಣೆ ನಿಮಿತ್ಯ ಶಾಲೆಯ ಮುಖ್ಯ ಗುರುಗಳಿಗೂ ಶಿಕ್ಷಕರಿಗೆ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಎಮ್.ಡಿ.ನಯೂಮ್ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ…
ಮುಂಬೈ: ಈ ಬಾರಿ ಮುಂಬೈನ ಲಾಲ್ಬಾಗ್ಚಾ ದಲ್ಲಿರುವ ಗಣೇಶನ ಮೂರ್ತಿ ಭಕ್ತರ ಕಣ್ಮನ ಸೆಳೆಯುತ್ತಿದೆ. ಇದಕ್ಕೆ ಕಾರಣ ಏನಂದ್ರೆ, ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಮುಂಬೈನಲ್ಲಿರುವ ಪ್ರಸಿದ್ಧ ಲಾಲ್ಬಾಗ್ಚಾ ರಾಜ ವಿನಾಯಕನಿಗೆ 15 ಕೋಟಿ ಮೌಲ್ಯದ 20 ಕೆಜಿ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ. ಮುಂಬೈನ ದೊಡ್ಡ ದೊಡ್ಡ ಉದ್ಯಮಿಗಳು, ಚಲನ ಚಿತ್ರ ನಟ, ನಟಿಯರು, ರಾಜಕಾರಣಿಗಳು ಇಲ್ಲಿಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆಯುತ್ತಾರೆ. ಒಟ್ಟು 10 ದಿನಗಳ ಕಾಲ ಅದ್ದೂರಿಯಾಗಿ ಗಣೇಶನ ಹಬ್ಬ ಆಚರಣೆ ನಡೆಯುತ್ತದೆ. ಮದುವೆಯಾದ ಬಳಿಕ ಅನಂತ್ ಅಂಬಾನಿ ದಂಪತಿಯ ಮೊದಲ ಚೌತಿ ಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಗಣೇಶನಿಗೆ 20 ಕೆಜಿ ಚಿನ್ನದ ಕಿರೀಟವನ್ನು ದಂಪತಿಗಳು ಕಾಣಿಕೆಯಾಗಿ ನೀಡಿ ದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ನವದೆಹಲಿ: ಟೀಮ್ ಇಂಡಿಯಾದ ಅದ್ಭುತ ಆಟಗಾರ ಮೊಹಮ್ಮದ್ ಶಮಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಇಬ್ಬರು ಬೌಲರ್ ಗಳು ನನ್ನ ಅಚ್ಚುಮೆಚ್ಚಿನ ಬೌಲರ್ ಗಳು ಎಂದು ತಿಳಿಸಿದ್ದಾರೆ. ಭಾರತೀಯ ತಂಡದಲ್ಲಿ ಜಹೀರ್ ಖಾನ್, ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಮತ್ತು ಆಫ್-ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲಾದ ಘಟನಾನುಘಟಿ ಬೌಲರ್ ಗಳಿದ್ದಾರೆ. ಆದ್ರೆ ಶಮಿ ಹೆಸರಿಸಿದ್ದು ಇವರ ಹೆಸರುಗಳನ್ನಲ್ಲ. ಮೊಹಮ್ಮದ್ ಶಮಿಗೆ ಈ ಇಬ್ಬರು ವೇಗಿಗಳೆಂದರೆ ಅಚ್ಚುಮೆಚ್ಚಂತೆ. ನನ್ನ ಲಿಸ್ಟ್ನಲ್ಲಿ ಬಹಳಷ್ಟು ಮಂದಿ ಅಚ್ಚುಮೆಚ್ಚಿನ ಬೌಲರ್ಗಳಿದ್ದಾರೆ. ಅದರಲ್ಲಿ ಪ್ರಮುಖವಾಗಿ ವಕಾರ್ ಯೂನಿಸ್ ಹಾಗೂ ಡೇಲ್ ಸ್ಟೇನ್ ನನ್ನ ಆಲ್ ಟೈಮ್ ಫೇವರಿಟ್ ಅಂತ ಅವರು ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ನವದೆಹಲಿ: ದೊಡ್ಡ ದೊಡ್ಡ ಟೀ ಬ್ರ್ಯಾಂಡ್ ಗಳು ಚಹಾ ಬೆಲೆಯನ್ನು ಹೆಚ್ಚಳ ಮಾಡಿದ್ದು, ಚಹಾ ಪ್ರಿಯರಿಗೆ ಬೆಲೆ ಏರಿಕೆ ಕೈಸುಡಲಿದೆ. ದೇಶದ ಎರಡು ಪ್ರಮುಖ ಪ್ಯಾಕೇಜ್ಡ್ ಟೀ ಮಾರಾಟ ಕಂಪನಿಗಳಾದ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ಮತ್ತು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (TCPL) ಶೀಘ್ರದಲ್ಲೇ ಚಹಾದ ಬೆಲೆಗಳನ್ನು ಹೆಚ್ಚಿಸಲಿವೆ. ಚಹಾದ ಸ್ಟಾಕ್ ಕಡಿಮೆಯಾಗುವುದು ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳು ಬೆಲೆ ಏರಿಕೆಗೆ ಕಾರಣವಂತೆ. ಹೀಗಾಗಿ ಗ್ರಾಹಕರಿಗೆ ಚಹಾವು ದುಬಾರಿಯಾಗಿರುತ್ತದೆ. ದೇಶದ ಅತಿ ದೊಡ್ಡ ಚಹಾ ಉತ್ಪಾದಿಸುವ ರಾಜ್ಯಗಳಾದ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಉತ್ಪಾದನೆಯಲ್ಲಿ ಕುಸಿತ ಕಂಡುಬಂದಿದೆ. ಜನವರಿಯಿಂದ ಜುಲೈವರೆಗೆ ಚಹಾ ಉತ್ಪಾದನೆ ಶೇ.13ರಷ್ಟು ಕುಸಿದಿದೆ. ಇದರಿಂದ ಚಹಾ ಬೆಲೆ ಏರಿಕೆಯಾಗುತ್ತಿದೆ ಎಂದು ಹೇಳಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಚೆನ್ನೈ: ಬಸ್ ಗೆ ಕಾಯುತ್ತಿದ್ದ ಮಹಿಳೆಗೆ ಲಿಫ್ಟ್ ಕೊಟ್ಟ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರ ನಡೆಸಿದ ಘಟನೆ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ನಡೆದಿದೆ. ಸೆ.3ರಂದು ಕೆಲಸಕ್ಕೆ ತೆರಳಿದ್ದ 47 ವರ್ಷ ವಯಸ್ಸಿನ ಅವಿವಾಹಿತ ಮಹಿಳೆಯೊಬ್ಬರು ರಾತ್ರಿ ಮನೆಗೆ ತೆರಳಲು ಪುತ್ತಲೂರಿನಲ್ಲಿ ಬಸ್ ಗಾಗಿ ಕಾಯುತ್ತಿದ್ದರು. ಈ ವೇಳೆ ದ್ವಿಚಕ್ರವಾಹನದಲ್ಲಿ ಬಂದಿದ್ದ ರಾಯಂದೂರಿನ ಪ್ರವೀಣ್ (32) ಹಾಗೂ ರಾಜಕಪ್ಪೂರ್ (26) ಲಿಫ್ಟ್ ಕೊಡುವುದಾಗಿ ಹೇಳಿದ್ದಾರೆ. ಪ್ರವೀಣ್ ನ ಬೈಕ್ ನಲ್ಲಿ ಮಹಿಳೆ ತೆರಳಿದ್ದಾರೆ. ಇನ್ನೊಂದು ಬೈಕ್ ನಲ್ಲಿ ರಾಜಕಪ್ಪೂರ್ ಹಿಂಬಾಲಿಸಿದ್ದಾನೆ. ಪುತ್ತಲೂರು ದಾಟಿದ ನಂತರ ನಿರ್ಜನ ಪ್ರದೇಶದಲ್ಲಿ ಬೈಕ್ ನಿಲ್ಲಿಸಿದ ಕಾಮುಕರು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾರೆ. ಸದ್ಯ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296