nammatumakuru

    Subscribe to Updates

    Get the latest creative news from FooBar about art, design and business.

    What's Hot

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026
    Facebook Twitter Instagram
    ಟ್ರೆಂಡಿಂಗ್
    • ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು
    • ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!
    • ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ
    • ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
    • ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ
    • ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ
    • ಬಳ್ಳಾರಿ: ಗ್ರಾಮ ಒನ್ ಫ್ರಾಂಚೈಸಿ ನೇಮಕಾತಿಗೆ ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಲಿಂಕ್ ಕೆನಾಲ್, ಭೂಸ್ವಾಧೀನ ವಿರೋಧಿಸಿ ಆ. 6ರಿಂದ ಮೂರು ದಿನಗಳ ಸತ್ಯಾಗ್ರಹ: ಎಐ ಡೇಟಾ ಕೇಂದ್ರಗಳಿಂದ ಪರಿಸರ, ಉದ್ಯೋಗಕ್ಕೆ ಆತಂಕ ಆರೋಪ
    ತುಮಕೂರು August 2, 2026

    ಲಿಂಕ್ ಕೆನಾಲ್, ಭೂಸ್ವಾಧೀನ ವಿರೋಧಿಸಿ ಆ. 6ರಿಂದ ಮೂರು ದಿನಗಳ ಸತ್ಯಾಗ್ರಹ: ಎಐ ಡೇಟಾ ಕೇಂದ್ರಗಳಿಂದ ಪರಿಸರ, ಉದ್ಯೋಗಕ್ಕೆ ಆತಂಕ ಆರೋಪ

    By Ganesh TumkuruAugust 2, 2026No Comments2 Mins Read
    tumakuru.jpg (1)

    ತುಮಕೂರು : ಡೇಟಾ ಸೆಂಟರ್, ಎಐ ತಂತ್ರಜ್ಞಾನ ಬಳಕೆಯಿಂದ ಪರಿಸರ, ಸಮಾಜ ಹಾಗೂ ಗ್ರಾಮೀಣ ಜೀವನೋಪಾಯದ ಮೇಲೆ ಉಂಟು ಮಾಡುವ ಪರಿಣಾಮಗಳ ಬಗ್ಗೆ ಮತ್ತು ಲಿಂಕ್ ಕೆನಾಲ್ ಹಾಗೂ ಕೃಷಿ ಭೂಮಿ ಸ್ವಾಧೀನ ವಿರೋಧಿಸಿ ಆ. 6, 7 ಮತ್ತು 8ರಂದು ಗೊಲ್ಲೂರು ಹೋಬಳಿಯ ದೊಡ್ಡ ಹೊಸೂರು ಗ್ರಾಮದ ಗಾಂಧೀಜಿ ಸಹಜ ಬೇಸಾಯ ಆಶ್ರಮದಲ್ಲಿ ಚಳುವಳಿ ರೂಪದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಎ. ಗೋವಿಂದರಾಜು ತಿಳಿಸಿದರು.

    ನಗರದ ವಿಜ್ಞಾನ ಕೇಂದ್ರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡದಿ ಟೌನ್ ಶಿಪ್ ಹೆಸರಿನಲ್ಲಿ ಸರ್ಕಾರ ಸುಮಾರು 9,460 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸುತ್ತಿದೆ. ಗುಬ್ಬಿ ಲಿಂಕ್ ಕೆನಾಲ್ನ ನೀರನ್ನು ಎಲ್ಲಿಗೆ ಕೊಂಡೊಯ್ಯಲಾಗುತ್ತದೆ ಎಂಬುದರ ಕುರಿತು ಸ್ಪಷ್ಟನೆ ನೀಡಬೇಕು. ಕೃಷಿ ಭೂಮಿ ಸ್ವಾಧೀನವನ್ನು ವಿರೋಧಿಸುವುದು ಹಾಗೂ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಐ ಆಧಾರಿತ ಡೇಟಾ ಸೆಂಟರ್ಗಳ ವಿಸ್ತರಣೆಯಿಂದ ನೀರಿನ ಬಳಕೆ ಹೆಚ್ಚಾಗಿ ಕೃಷಿ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
    ಈ ಕುರಿತು ಅಮೆರಿಕ ಸೇರಿದಂತೆ ವಿವಿಧ ದೇಶಗಳಲ್ಲಿ ನಡೆದಿರುವ ಅಧ್ಯಯನಗಳ ಮಾಹಿತಿಯನ್ನು ತಜ್ಞರು ಆ. 6ರಂದು ಸಮಾಲೋಚನೆಯಲ್ಲಿ ಮಂಡಿಸಲಿದ್ದಾರೆ ಎಂದು ಹೇಳಿದರು.

    ಆ. 7ರಂದು ಗಾಂಧಿ ಸಹಜ ಬೇಸಾಯ ಆಶ್ರಮದಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿವರೆಗೆ ಶಾಂತಿಯುತ ಪಾದಯಾತ್ರೆ ನಡೆಸಿ, ಸತ್ಯಾಗ್ರಹದಲ್ಲಿ ಅಂಗೀಕರಿಸುವ ನಿರ್ಣಯಗಳೊಂದಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಆ. 8ರಂದು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಭೂಮಿ ಮತ್ತು ನೀರಿನ ಬಳಕೆ ನೀತಿ, ನೈಸರ್ಗಿಕ ಸಂಪನ್ಮೂಲಗಳ ಖಾಸಗೀಕರಣ ಹಾಗೂ ಸತ್ಯಾಗ್ರಹದ ಮುಂದಿನ ರೂಪುರೇಷೆಗಳ ಕುರಿತು ಸಮಾಲೋಚನೆ ನಡೆಯಲಿದೆ. ಆ. 10ರಂದು ಎಸ್ಕೆಎಂ ಹಾಗೂ ಜೆಟಿಸಿಯು ಸಂಘಟನೆಗಳ ನೇತೃತ್ವದಲ್ಲಿ ಬಹುರಾಷ್ಟ್ರೀಯ ಕಂಪನಿಗಳ ರೈತ-ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು ಎಂದು ಆಗ್ರಹಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೋವಿಂದರಾಜು ಹೇಳಿದರು.

    ಈ ವೇಳೆ ಗಾಂಧೀಜಿ ಸಹಜ ಬೇಸಾಯ ಆಶ್ರಮ ಮುಖ್ಯಸ್ಥ ಡಾ. ಮಂಜುನಾಥ್ ಮಾತನಾಡಿ, ಎಐ ಆಧಾರಿತ ಡೇಟಾ ಕೇಂದ್ರಗಳ ಸ್ಥಾಪನೆ ಉಂಟುಮಾಡುವ ಪರಿಣಾಮಗಳ ಬಗ್ಗೆ ಮತ್ತು ಭಾರತದ ಆಹಾರ ಭದ್ರತೆಯನ್ನು ಖಾತರಿಪಡಿಸುವ ರೈತರು, ಕೃಷಿ ಕಾರ್ಮಿಕರು ಮತ್ತು ಗ್ರಾಮೀಣ ಸಮುದಾಯಗಳ ಹಿತಾಸಕ್ತಿಯನ್ನು ಕಾಪಾಡಲು ಫಲವತ್ತಾದ ಕೃಷಿ ಭೂಮಿಯನ್ನು ಸಂರಕ್ಷಿಸಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದರ ಜೊತೆಗೆ ಈಗಿನ ಹಾಗೂ ಮುಂದಿನ ಪೀಳಿಗೆಗಳ ಹಕ್ಕುಗಳನ್ನು ಉಳಿಸಿಕೊಳ್ಳಲು ಸರ್ಕಾರಗಳು ಭೂ ಬಳಕೆ ಕಾಯ್ದೆ ಜಾರಿಗೆ ತರಬೇಕೆಂದು ಒತ್ತಾಯಿಸಿದರು.

    ಮೂರು ದಿನಗಳ ಸತ್ಯಾಗ್ರಹದಲ್ಲಿ ರಾಜ್ಯದ ರೈತ ಸಂಘಟನೆಗಳು, ಭೂಮಿ ಮತ್ತು ನೀರಿನ ಹಕ್ಕುಗಳ ಹೋರಾಟಗಾರರು, ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಒಟ್ಟು 2 ಸಾವಿರಕ್ಕೂ ಹೆಚ್ಚು ಸಾರ್ವಜನಿಕ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

    ಈ ವೇಳೆ ಮುಖಂಡರಾದ ಯತ್ತಿರಾಜ್, ನಾಗರತ್ನ ಬಿ.ಕೆ. ಲಕ್ಷ್ಮಣ, ಮೋಹನ್, ರಂಗಯ್ಯ, ವೆಂಕಟೇಗೌಡರು, ಚಿಕ್ಕಬೋರೇಗೌಡ, ನಾಗರಾಜು, ರವೀಶ್, ಲೋಕೇಶ್, ಲಿಂಗರಾಜು, ತಿಮ್ಮೇಗೌಡರು ಸೇರಿದಂತೆ ಅನೇಕರು ಇದ್ದರು.

    “ಎಐ, ಸ್ವಯಂಚಾಲಿತ ವ್ಯವಸ್ಥೆಗಳು ಹಾಗೂ ಮಾನವಸಮಾನ ತಂತ್ರಜ್ಞಾನಗಳ ವೇಗದ ಬೆಳವಣಿಗೆಯಿಂದ ಮುಂದಿನ ದಶಕಗಳಲ್ಲಿ ದೇಶದ ಯುವಜನರು ಮತ್ತು ಕಾರ್ಮಿಕರಿಗೆ ನಿರುದ್ಯೋಗದ ಸವಾಲು ಎದುರಾಗುವ ಸಾಧ್ಯತೆ ಇದೆ. ಈ ವಿಷಯ ರಾಷ್ಟ್ರಮಟ್ಟದಲ್ಲಿ ಗಂಭೀರ ಚರ್ಚೆಗೆ ಬರಬೇಕಾಗಿದೆ.”

    ಡಾ. ಮಂಜುನಾಥ್, ಮುಖ್ಯಸ್ಥ, ಗಾಂಧೀಜಿ ಸಹಜ ಬೇಸಾಯ ಆಶ್ರಮ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    Ganesh Tumkuru
    • Website

    Related Posts

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 4, 2026

    ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ

    September 4, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ: ಆರೋಪಿಯ ಬಂಧನ, ಸಾರ್ವಜನಿಕರಿಂದ ಧರ್ಮದೇಟು

    September 5, 2026

    ತುಮಕೂರು: ತಾಲೂಕಿನ ಗ್ರಾಮವೊಂದರಲ್ಲಿ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆಯಿಂದ ಆಕ್ರೋಶಗೊಂಡ…

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

    September 5, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.