Author: admin

ತುಮಕೂರು: ಮಹಾ ನಗರಪಾಲಿಕೆ ವ್ಯಾಪ್ತಿಯಲ್ಲಿ ಪಿ.ಓ.ಪಿ ನಿರ್ಮಿತ ಹಾಗೂ ರಾಸಾಯನಿಕ ಗುಣಗಳುಳ್ಳ ವಸ್ತುಗಳನ್ನು ಬಳಸಿ ತಯಾರಿಸಲಾದ ಗೌರಿ/ಗಣೇಶ ವಿಗ್ರಹ ಮತ್ತು ಬಣ್ಣಲೇಪಿತ ವಿಗ್ರಹಗಳ ಮಾರಾಟ ಮತ್ತು ವಿಸರ್ಜನೆ ಮಾಡುವುದನ್ನು ನಿಷೇಧಿಸಿದೆ ಎಂದು ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ ತಿಳಿಸಿದ್ದಾರೆ. ಬರುವ ಸೆಪ್ಟೆಂಬರ್ 6ರ ಸ್ವರ್ಣಗೌರಿ ವ್ರತ ಮತ್ತು ಸೆಪ್ಟೆಂಬರ್ 7ರಂದು ಆಚರಿಸುವ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಗೌರಿ/ಗಣೇಶ ವಿಗ್ರಹಗಳನ್ನು ತಯಾರಿಸುವ ಮಾಲೀಕರು ಮತ್ತು ಮಾರಾಟಗಾರರು ಸಂಪೂರ್ಣವಾಗಿ ಮಣ್ಣಿನಿಂದ ತಯಾರಿಸಿರುವ ವಿಗ್ರಹಗಳನ್ನು ಮಾತ್ರ ಮಾರಾಟ ಮಾಡಬೇಕು. ತಪ್ಪಿದಲ್ಲಿ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಬೆಂಗಳೂರು ನಗರ:  ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಕಾರ್ಯಕ್ರಮ ಹಾಗೂ ಪ್ರೋತ್ಸಾಹಧನ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತೆ ಹಾಗೂ ಯಾವುದೇ ಅರ್ಹ ವಿದ್ಯಾರ್ಥಿಗೆ ವಿದ್ಯಾರ್ಥಿವೇತನದಿಂದ ವಂಚಿತರಾಗದಂತೆ ಮಾಡಲು ಸೆಪ್ಟೆಂಬರ್ 1 ರಿಂದ ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಹಾಗೂ ಪ್ರೋತ್ಸಾಹ ಧನಕ್ಕಾಗಿ ವೆಬ್ ಸೈಟ್: www.sw.kar.nic.in ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ನಗರ ಜಿಲ್ಲೆ, ನಂ.20/1, 1ನೇ ಮಹಡಿ, ಜೆಲ್ಲೇಟಾ ಟವರ್, ಮಿಷನ್ ರಸ್ತೆ, ಸಂಪಂಗಿರಾಮನಗರ, ಬೆಂಗಳೂರು. ದೂರವಾಣಿ ಸಂಖ್ಯೆ: 080-22240449, 9480843019. ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಉತ್ತರ ತಾಲ್ಲೂಕು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪಕ್ಕ, ಯಲಹಂಕ, ಬೆಂಗಳೂರು, ದೂರವಾಣಿ ಸಂಖ್ಯೆ: 080-28461351, 9480843051. ಸಹಾಯಕ ನಿರ್ದೇಶಕರು (ಗ್ರೇಡ್-1),…

Read More

ತುಮಕೂರು: ಮಧುಗಿರಿಯ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ದೊಡ್ಡೇರಿ ಹೋಬಳಿ ಬುಳಸಂದ್ರ ಗ್ರಾಮದಲ್ಲಿ ಜಾತ್ರೆ ಹಿನ್ನೆಲೆ ಶನಿವಾರ ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸಿ ವಾಂತಿ, ಭೇದಿ ಸಮಸ್ಯೆಯಿಂದ ಅಸ್ವಸ್ಥಗೊಂಡು ತಾಲ್ಲೂಕು ಆಸ್ಪತ್ರೆ ಹಾಗೂ ತುಮಕೂರು ನಗರದ ಶ್ರೀದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಸಚಿವ ಕೆ.ಎನ್.ರಾಜಣ್ಣ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಬುಳಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಶಾಲೆಯಲ್ಲಿ ಏರ್ಪಡಿಸಿರುವ ಶಿಬಿರಕ್ಕೆ ಆಗಮಿಸಿ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಗ್ರಾಮಸ್ಥರಿಂದ ಅವರು ಮಾಹಿತಿ ಪಡೆದರು. ಈ ಘಟನೆ ಹಿನ್ನೆಲೆ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಅವರು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾದದೆ ಧೈರ್ಯದಿಂದ ಇರಲು ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯಾದ ಶುಭ ಕಲ್ಯಾಣ್ ರವರು, ಸಿ.ಇ.ಓ ಪ್ರಭು, ಡಿ.ಎಚ್.ಓ. ಮಂಜುನಾಥ್, ಉಪವಿಭಾಗ ಅಧಿಕಾರಿಗಳಾದ ಗೊಟೂರು ಶಿವಪ್ಪ, ಇ.ಓ ಲಕ್ಷಣ್, ಟಿ.ಎಚ್.ಓ. ಶ್ರೀನಿವಾಸ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ…

Read More

ತುಮಕೂರು: ಜಿಲ್ಲೆಯ ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಬುಳಸಂದ್ರ ಗ್ರಾಮದಲ್ಲಿ ವರದಿಯಾದ ವಾಂತಿ, ಭೇದಿ ಪ್ರಕರಣಗಳಿಗೆ ಕಲುಷಿತ ನೀರು ಕಾರಣವಲ್ಲವೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸ್ಪಷ್ಟನೆ ನೀಡಿದರು. ಅವರು ಬುಳಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಘಟನೆಯ ಬಗ್ಗೆ ಅಧಿಕಾರಿಗಳು ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ನೀರನ್ನು ಕಾಯಿಸಿ–ಆರಿಸಿ ಕುಡಿಯಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಶೌಚಕ್ಕಾಗಿ ಶೌಚಾಲಯವನ್ನೇ ಬಳಸಬೇಕು. ಶೌಚದ ನಂತರ ಕೈಗಳನ್ನು ಸಾಬೂನಿನಿಂದ ಶುಚಿಗೊಳಿಸಬೇಕು ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಮುನ್ನೆಚ್ಚರಿಕಾ ಕ್ರಮವಾಗಿ ಆಶಾ ಕಾರ್ಯಕರ್ತೆಯರು ಗ್ರಾಮದ ಮನೆ–ಮನೆ ಭೇಟಿ ನೀಡಿ ಮನೆಯ ಸದಸ್ಯರ ಆರೋಗ್ಯದ ಬಗ್ಗೆ ಸಮೀಕ್ಷೆ ಮಾಡಬೇಕು ಎಂದರಲ್ಲದೆ ಬರುವ ಆಗಸ್ಟ್ 31ರಂದು ಶ್ರಾವಣ ಮಾಸದ ಕಡೆಯ ಶನಿವಾರ ಇರುವುದರಿಂದ ಗ್ರಾಮಗಳ ದೇವಾಲಯಗಳಲ್ಲಿ ವಿಶೇಷ ಪೂಜೆ/ಜಾತ್ರೆಗಳು ನಡೆಯುವುದರಿಂದ ಅಧಿಕಾರಿಗಳು ಸ್ವಚ್ಛತೆ, ಕುಡಿಯುವ ನೀರಿನ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ವಾಂತಿ–ಭೇದಿ ಪ್ರಕರಣಗಳು ಮರುಕಳಿಸದಂತೆ ಹೆಚ್ಚಿನ ಜಾಗ್ರತೆ ವಹಿಸಬೇಕೆಂದು ಸೂಚನೆ ನೀಡಿದರು. ಜನರ ಆರೋಗ್ಯದ ಹಿತದೃಷ್ಟಿಯಿಂದ…

Read More

ಧಾರವಾಡ: ಕರ್ನಾಟಕ ಲೋಕಸೇವಾ ಆಯೋಗ ಇಂದು ನಡೆಸಿದ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯು ಧಾರವಾಡದಲ್ಲಿ ಸೂಸುತ್ರವಾಗಿ ಮತ್ತು ಶಾಂತಿಯುತವಾಗಿ ಜರುಗಿತು. ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ನಗರದ ವಿವಿಧ ಕಾಲೇಜುಗಳಲ್ಲಿ ಸ್ಥಾಪಿಸಿದ್ದ ಕೆ.ಎ.ಎಸ್. ಪ್ರೀಲಿಮ್ಸ್ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ಸಿ.ಸಿ.ಟಿ.ವಿ, ಪೇಸ್ ರೀಡಿಂಗ್ ಇತ್ಯಾದಿಗಳ ಪಾಲನೆ ಕುರಿತು ನೋಡಲ್ ಅಧಿಕಾರಿ ಮತ್ತು ಪ್ರಾಚಾರ್ಯರಿಂದ ಮಾಹಿತಿ ಪಡೆದರು. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ರಾಜೀವ ಗಾಂಧಿ ಪ್ರೌಢಶಾಲೆ, ಬಾಷಲ್ ಮಿಷನ್ ಗರ್ಲ್ಸ್ ಹೈಸ್ಕೂಲ್, ಕಿಟಲ್ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯ ಸೇರಿದಂತೆ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು. ಧಾರವಾಡ ನಗರದ ವಿವಿಧ ಕಾಲೇಜುಗಳಲ್ಲಿ ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆಗಾಗಿ 33 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಕೆ.ಎ.ಎಸ್ ಪೂರ್ವಭಾವಿ ಪರೀಕ್ಷೆ ಬರೆಯಲು 10,818 ಜನ ಅಭ್ಯರ್ಥಿಗಳು ಧಾರವಾಡ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಇಂದು ಬೆಳಿಗ್ಗೆ 10 ರಿಂದ 12 ಗಂಟೆವರೆಗೆ ಜರುಗಿದ ಮೊದಲ ಪೇಪರ್ ಪರೀಕ್ಷೆಗೆ 6,879 ಅಭ್ಯರ್ಥಿಗಳು ಹಾಜರಾಗಿದ್ದರು…

Read More

✨✨ ಉಪವಾಸ ಮಾಡುವುದು ಎಂದರೆ ವಾರದಲ್ಲಿ ಒಮ್ಮೆಯಾದರೂ ಮಾಡಬೇಕು ಆ ವಾರ ಯಾವುದು ಎಂದು ತಿಳಿಯೋಣ ಬನ್ನಿ ಉಪವಾಸ ಮಾಡುವುದರಿಂದ ಆಗುವ ಪ್ರಯೋಜನವೇನು ತಿಳಿದು ಕೊಳ್ಳೋಣ✨ ✨ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490 Provided by ಉಪವಾಸ ಮಾಡುವುದರಿಂದ ಹಣದ ಸಮಸ್ಯೆ ನಿವಾರಣೆ ಆಗುತ್ತದೆ.  ನಾವು ಹೇಳುವ ವಾರದ ದಿನದಂದು  ಪ್ರತಿ ಶನಿವಾರ ನೀವು ಉಪವಾಸ…

Read More

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರತಿ ತಿಂಗಳು ಬ್ಯಾಂಕುಗಳ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಗ್ರಾಹಕರು ಈ ರಜಾದಿನಗಳನ್ನು ಗಮನಿಸುವುದು ಮತ್ತು ತಮ್ಮದೇ ಆದ ಬ್ಯಾಂಕ್ ಕೆಲಸವನ್ನು ಮಾಡಲು ಯೋಜಿಸುವುದು ಸೂಕ್ತ. ಸೆಪ್ಟೆಂಬರ್ನಲ್ಲಿ ಒಟ್ಟು 14 ರಜಾದಿನಗಳಿವೆ. ಇದರಲ್ಲಿ ಶನಿವಾರ ಮತ್ತು ಭಾನುವಾರದ ರಜಾದಿನಗಳು ಸೇರಿವೆ. ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಸಹ ರಜಾದಿನಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಈದ್ ಮಿಲಾದ್ ಹೊರತುಪಡಿಸಿ, ಶನಿವಾರ ಮತ್ತು ಭಾನುವಾರ ಮಾತ್ರ ರಜಾದಿನಗಳಾಗಿವೆ. ಕರ್ನಾಟಕದಲ್ಲಿ ಒಟ್ಟು ಎಂಟು ರಜಾದಿನಗಳಿವೆ. ಸೆಪ್ಟೆಂಬರ್ 2024 ರಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ ಸೆಪ್ಟೆಂಬರ್ 7, ಶನಿವಾರ: ವಿನಾಯಕ ಚತುರ್ಥಿ ಸೋಮವಾರ, ಸೆಪ್ಟೆಂಬರ್ 16: ಈದ್ ಮಿಲಾದ್ ಸೆಪ್ಟೆಂಬರ್ 28: ನಾಲ್ಕನೇ ಶನಿವಾರ ಪ್ರತಿ ಭಾನುವಾರ ರಜೆ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಡಬ್ಲ್ಯೂಡಬ್ಲ್ಯೂಇ ಮತ್ತು ಡಬ್ಲ್ಯೂಸಿಡಬ್ಲ್ಯೂ ಚಾಂಪಿಯನ್ ಸಿಡ್ ವಿಸಿಯಸ್, ನಿಜವಾದ ಹೆಸರು ಸಿಡ್ನಿ ರೇಮಂಡ್ ಯುಡಿ ಕ್ಯಾನ್ಸರ್ ನೊಂದಿಗೆ ದೀರ್ಘಕಾಲದ ಹೋರಾಟದ ನಂತರ ತಮ್ಮ 63 ನೇ ವಯಸ್ಸಿನಲ್ಲಿ ನಿಧನರಾದರು. ಈ ಸುದ್ದಿಯನ್ನು ಅವರ ಮಗ ಗುನ್ನಾರ್ ಯುಡಿ ಫೇಸ್ಬುಕ್ನಲ್ಲಿ ಭಾವನಾತ್ಮಕ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.ಗುನ್ನಾರ್ ಅವರ ಹೃತ್ಪೂರ್ವಕ ಸಂದೇಶ ಹೀಗಿತ್ತು, “ನನ್ನ ತಂದೆ, ಸಿಡ್ ಯುಡಿ ಅವರ ನೆನಪಿನಲ್ಲಿ. ಆತ್ಮೀಯ ಸ್ನೇಹಿತರು ಮತ್ತು ಕುಟುಂಬ, ನನ್ನ ತಂದೆ ಸಿಡ್ ಯುಡಿ ಹಲವಾರು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡಿದ ನಂತರ ನಿಧನರಾದರು ಎಂದು ಹಂಚಿಕೊಳ್ಳಲು ನನಗೆ ತುಂಬಾ ದುಃಖವಾಗಿದೆ. ಅವರು ಶಕ್ತಿ, ದಯೆ ಮತ್ತು ಪ್ರೀತಿಯ ವ್ಯಕ್ತಿಯಾಗಿದ್ದರು, ಮತ್ತು ಅವರ ಉಪಸ್ಥಿತಿಯನ್ನು ಬಹಳವಾಗಿ ಕಳೆದುಕೊಳ್ಳಲಾಗುತ್ತದೆ. ಈ ನಷ್ಟಕ್ಕೆ ನಾವು ದುಃಖಿಸುತ್ತಿರುವಾಗ ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳನ್ನು ನಾವು ಪ್ರಶಂಸಿಸುತ್ತೇವೆ. ಸ್ಮಾರಕ ಸೇವೆಯ ವಿವರಗಳನ್ನು ಶೀಘ್ರದಲ್ಲೇ ಹಂಚಿಕೊಳ್ಳಲಾಗುವುದು. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು”. ಸಿಡ್ ವಿಸಿಯಸ್ ವೃತ್ತಿಪರ ಕುಸ್ತಿಯಲ್ಲಿ ಅತ್ಯಂತ ಪ್ರಭಾವಶಾಲಿ ಮತ್ತು ವರ್ಚಸ್ವಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು,…

Read More

ಬ್ಯಾಡ್ಮಿಂಟನ್ ಆಟದ ಬಗ್ಗೆ ಎಲ್ಲರಿಗೂ ಗೊತ್ತಿದೆ. ಅನೇಕ ಮಕ್ಕಳು ಮತ್ತು ವಯಸ್ಕರು ಬ್ಯಾಡ್ಮಿಂಟನ್ ಆಡುತ್ತಾರೆ. ಈ ಆಟದಲ್ಲಿ ಬಳಸುವ ಶಟಲ್ ಕಾಕ್ ಅನ್ನು ಅತ್ಯಂತ ಕೌಶಲ್ಯದಿಂದ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಬ್ಯಾಡ್ಮಿಂಟನ್ ಆಟವನ್ನು 1873 ರಲ್ಲಿ ಪರಿಚಯಿಸಲಾಯಿತು.1873 ರಲ್ಲಿ, ಪೂನಾದಲ್ಲಿ ನಡೆದ ಸಮಾರಂಭದಲ್ಲಿ ಇಂಗ್ಲಿಷ್ ಸೈನ್ಯದ ಅಧಿಕಾರಿಗಳು ಈ ಆಟವನ್ನು ಆಡಿದರು. ಪ್ರಸ್ತುತ, ಬ್ಯಾಡ್ಮಿಂಟನ್ 100 ಕ್ಕೂ ಹೆಚ್ಚು ದೇಶಗಳಲ್ಲಿ ಜನಪ್ರಿಯವಾಗಿದೆ. ಪಿವಿ ಸಿಂಧು ಮತ್ತು ಸೈನಾ ನೆಹ್ವಾಲ್ ಅವರ ಅದ್ಭುತ ಪ್ರದರ್ಶನದಿಂದ ಬ್ಯಾಡ್ಮಿಂಟನ್ ಆಟವು ಅನೇಕ ಜನರಿಗೆ ಪರಿಚಿತವಾಗಿದೆ. ಕಡಿಮೆ ತೂಕದ ಶಟಲ್ ಕಾಕ್ ಬುಲೆಟ್ ವೇಗದಲ್ಲಿ ಹಾರುತ್ತದೆ. ಶಟಲ್ ಕಾಕ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತಿಳಿಯೋಣ. ಶಟಲ್ ಕಾಕ್ ಅನ್ನು ತಯಾರಿಸಲು ಸಾಮಾನ್ಯವಾಗಿ ಈ ಹುಂಜದ ಗರಿಗಳನ್ನು ಬಳಸಲಾಗುತ್ತದೆ ಭಾವಿಸಲಾಗಿದೆ. ಆದರೆ ವಾಸ್ತವವಾಗಿ ಬಾತುಕೋಳಿ ಗರಿಗಳನ್ನು ಇವುಗಳನ್ನು ತಯಾರಿಸಲು ಬಳಸಲಾಗುತ್ತದೆ. ಚೀನಾದಲ್ಲಿ ಗೂಸ್ ಗರಿಗಳನ್ನು ಬಳಸಿದರೆ, ಭಾರತದಲ್ಲಿ ಬಾತುಕೋಳಿ ಗರಿಗಳನ್ನು ಬಳಸಲಾಗುತ್ತದೆ. ಬಾತುಕೋಳಿ ಗರಿಗಳನ್ನು ಸಂಗ್ರಹಿಸಲಾಗುತ್ತದೆ.…

Read More

ಬಾಹ್ಯಾಕಾಶ ಯಾನಿಗಳು ಅಥವಾ ಗಗನಯಾತ್ರಿಗಳು ಎಷ್ಟು ವೇತನ ಪಡೆಯಬಹುದು? ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುವ ವೇಳೆ ಮತ್ತು ಅಲ್ಲಿಂದ ಭೂಮಿಗೆ ಮರಳುವ ವೇಳೆ ಸದಾ ಜೀವ ಭಯದಲ್ಲೇ ಇರುವ ವಿಜ್ಞಾನಿಗಳಿಗೆ ಸಂಬಳ ಎಷ್ಟು ಗೊತ್ತೆ ? ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಅಲ್ಲಿಯೇ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮತ್ತಿತರರಿಗೆ ಕಳೆದ ವರ್ಷದ ವೇತನ ಶ್ರೇಣಿಯ ಅನ್ವಯ ವಾರ್ಷಿಕ 70 ಲಕ್ಷ ರು.ನಿಂದ 1.27 ಕೋಟಿ ರು.ವರೆಗೂ ವೇತನ ನಿಗದಿಪಡಿಸಲಾಗಿದೆ. ಆದರೆ ಈ ವೇತನ ಸೇನೆಯಿಂದ ಆಯ್ಕೆಯಾದ ಗಗನಯಾತ್ರಿಗಳಿಗೆ ಸ್ವಲ್ಪ ಕಡಿಮೆ ಇರುತ್ತದೆ. ಕಾರಣ, ಯಾತ್ರೆ ಬಳಿಕ ಅವರು ಸೇನೆಯ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಉದಾಹರಣೆಗೆ ಭಾರತೀಯ ಮೂಲದ ರಾಜಾ ಚಾರಿ ಅವರ ಮಾಸಿಕ ವೇತನ 8.92 ಲಕ್ಷ ರು.ನಷ್ಟಿದೆ. ಇನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಗಗನಯಾತ್ರಿಗಳಲ್ಲಿ, ಆರಂಭಿಕ ಹಂತದಲ್ಲಿ ಮಾಸಿಕ 5.50 ಲಕ್ಷ ರು., ಬ್ರಿಟನ್‌ನಲ್ಲಿ 5.86 ಲಕ್ಷ ರು., ಫ್ರಾನ್ಸ್‌ನಲ್ಲಿ 7.23- 8.43 ಲಕ್ಷ ರು., ರಷ್ಯಾದಲ್ಲಿ 4.58…

Read More