Subscribe to Updates
Get the latest creative news from FooBar about art, design and business.
- ಸರಗೂರು: ‘ರಾಷ್ಟ್ರೀಯ ಭೀಮಾ ಮಾರ್ಗ ಸಂಘಟನೆ’ಯ ನೂತನ ತಾಲ್ಲೂಕು ಅಧ್ಯಕ್ಷರಾಗಿ ಹಳಿಯೂರು ಮೂರ್ತಿ ಆಯ್ಕೆ
- ಪಾವಗಡ ತಾಲೂಕಿನ ವಸತಿ ಶಾಲೆಗಳಲ್ಲಿ 7, 8, 9ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
- ಅಪ್ಪಾಜಿಹಳ್ಳಿಯಲ್ಲಿ ಮಳೆ ಅವಾಂತರ: ಸೇತುವೆ ಇಲ್ಲದೆ ಜೀವದ ಹಂಗು ತೊರೆದು ಜನರ ಸಂಚಾರ!
- ಮಾವಿನಹಣ್ಣು ಇಷ್ಟ ಪಟ್ಟು ತಿಂತೀರಾ? ಈ ರಹಸ್ಯ ಆರೋಗ್ಯ ಪ್ರಯೋಜನಗಳು ನಿಮಗ ಗೊತ್ತಿರಲೇಬೇಕು!
- ಸಚಿವರ ಆಯ್ಕೆಯಲ್ಲಿ ಎಚ್ಚರಿಕೆ ಅಗತ್ಯ: ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ ಸಲಹೆ
- ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಸುಳ್ಳು ಪೋಸ್ಟ್: ಇಬ್ಬರು ಫೇಸ್ ಬುಕ್ ಅಡ್ಮಿನ್ ಗಳ ವಿರುದ್ಧ ಎಫ್ ಐಆರ್ ದಾಖಲು
- ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!
- ದಾಸರಹಳ್ಳಿ ಚೇತನ್ ಬಿಜೆಪಿ ಮಂಡಲ ಯುವಾಧ್ಯಕ್ಷ
Author: admin
ವಿಜಯಪುರ: ಮಂಗಳಮುಖಿಯೊಬ್ಬರನ್ನು ಇತರ ಆರೇಳು ಮಂಗಳಮುಖಿಯರು ಬೆತ್ತಲೆಗೊಳಿಸಿ ಅಮಾನವೀಯವಾಗಿ ಥಳಿಸಿರುವ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದ ಎದುರು ನಡೆದಿದೆ. ಮಂಗಳಮುಖಿಯನ್ನು ಸುತ್ತುವರಿದ ಇತರ ಮಂಗಳಮುಖಿಯರು ನೆಲಕ್ಕೆ ಕೆಡವಿ ಹಲ್ಲೆ ನಡೆಸಿ, ಬಟ್ಟೆಯನ್ನು ಹರಿದು, ಮರ್ಮಾಂಗಕ್ಕೆ ಖಾರದ ಪುಡಿ ಎರಚಿ, ಸೀರೆ ಎತ್ತಿ ಪ್ರದರ್ಶಿಸಿ, ಚಪ್ಪಾಳೆ ತಟ್ಟುತ್ತಾ ಅಸಭ್ಯ ಪದಗಳಿಂದ ನಿಂದಿಸುತ್ತಿರುವ ದೃಶ್ಯ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಹಲ್ಲೆಗೊಳಗಾದ ಮಂಗಳಮುಖಿ ಪರಿಪರಿಯಾಗಿ ಬೇಡಿಕೊಂಡರೂ ಬಿಡದ ತಂಡ ಹಲ್ಲೆ ನಡೆಸುತ್ತಾಲೇ ಇತ್ತು. ರಸ್ತೆಯಲ್ಲಿದ್ದ ಜನರು ಈ ದೃಶ್ಯವನ್ನು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು. ಯಾವ ಕಾರಣಕ್ಕಾಗಿ ಹಲ್ಲೆ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ, ಈವರೆಗೆ ಈ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬಾಗಲಕೋಟೆ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರೋದ್ರಿಂದ ಉದ್ಯಮಗಳು ಹೊರ ಹೋಗುತ್ತಿದೆ ಎಂಬ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು ಸತ್ಯಕ್ಕೆ ದೂರವಾಗಿದೆ. ಉದ್ಯಮಿಗಳು ಹೊರಹೋಗುವುದಾಗಿ ಹೇಳಿಲ್ಲ. ಇಲ್ಲಿ ಹೂಡಿಕೆ ಮಾಡಲು ಯಾರೂ ಹಿಂಜರಿದಿಲ್ಲ. ಅಲ್ಲಲ್ಲಿ ಕೊಲೆ, ಕಳವು ಪ್ರಕರಣಗಳು ನಡೆದಿವೆ. ಹಿಂದಿನ ಬಿಜೆಪಿ ಸರ್ಕಾರದಲ್ಲೂ ನಡೆದಿದ್ದವು. ಆಗ ಹೋಲಿಸಿದರೆ ಈಗ ಕಡಿಮೆ ಆಗಿವೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ—ಜೆಡಿಎಸ್ ಪಾದಯಾತ್ರೆಯಲ್ಲಿ ಒಡಕು ವಿಚಾರಕ್ಕೆ ಸಂಬಂಧಿಸಿದಂತೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಜೊತೆಗಿದ್ದ ಜೆಡಿಎಸ್ ನಮ್ಮೊಂದಿಗೆ ಬಂದು, ಪುನಃ ಬಿಜೆಪಿ ಕಡೆ ಹೋಗಿದೆ. ಎರಡೂ ಪಕ್ಷಗಳ ಹೊಂದಾಣಿಕೆ ಎಷ್ಟು ದಿನ ಇರಲಿದೆ ಎಂಬುದನ್ನು ಕಾದು ನೋಡಬೇಕು ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಬೆಂಗಳೂರು: ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ರಾಜಸ್ಥಾನದಿಂದ ತರಿಸಲಾಗಿದ್ದ ಮಾಂಸ ಕುರಿಯದ್ದೋ, ನಾಯಿಯದ್ದೋ ಎನ್ನುವ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲ್ಯಾಬ್ ರಿಪೋರ್ಟ್ ಆಹಾರ ಇಲಾಖೆಯ ಕೈಸೇರಿದ್ದು, ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ಅಂತಿಮವಾಗಿ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ. ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವುದು ಕುರಿ ಮಾಂಸ. ಲ್ಯಾಬ್ ರಿಪೋರ್ಟ್‌ನಲ್ಲಿ ಇದು ಕುರಿ ಮಾಂಸ ಎಂದು ಸಾಬೀತಾಗಿದೆ ಎಂದು ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ. ಕುರಿ ಮಾಂಸವನ್ನು ಪುನೀತ್ ಕೆರೆಹಳ್ಳಿ ಮತ್ತು ತಂಡ ನಾಯಿ ಮಾಂಸ ಅಂತ ವಿವಾದ ಎಬ್ಬಿಸಿತ್ತು. ಇದರಿಂದಾಗಿ ಸಾರ್ವಜನಿಕರು ತೀವ್ರ ಆತಂಕಕ್ಕೊಳಗಾಗಿದ್ದರು. ಅಲ್ಲದೇ ಮಟನ್ ಅಂಗಡಿಗಳು ಹಾಗೂ ಹೊಟೇಲ್ ಗಳಿಗೆ ಹೋಗಲು ಜನರು ಹಿಂದೇಟು ಹಾಕಿದ್ದರು. ಇದೀಗ ಇದು ಕುರಿ ಮಾಂಸ ಅಂತ ಬಹಿರಂಗಗೊಂಡಿದೆ. ಈ ಮೂಲಕ ಪುನೀತ್ ಕೆರೆಹಳ್ಳಿ ಹಾಗೂ ತಂಡದ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಹೊಸದಾಗಿ ಮದುವೆಯಾಗುವವರಿಗೆ ಕೇಂದ್ರ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ನೂತನ ದಂಪತಿಗೆ 2.50 ಲಕ್ಷ ರೂ. ವಿವಾಹ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಈ ಯೋಜನೆ ಯಾವುದು? ಈ ಯೋಜನೆಯ ಲಾಭ ಪಡೆಯಲು ಯಾವ ಅರ್ಹತೆ ಇರಬೇಕು ಮುಂತಾದ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ದಲಿತರನ್ನು ಒಳಗೊಂಡ ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರವು ʼಡಾ.ಅಂಬೇಡ್ಕರ್ ಫೌಂಡೇಶನ್ ವಿವಾಹ ಯೋಜನೆ 2024ʼ ಅನ್ನು ಪರಿಚಯಿಸಿದೆ. ಈ ಯೋಜನೆಯಡಿ ನೂತನವಾಗಿ ಅಂತರ್ಜಾತೀಯ ವಿವಾಹವಾಗುವ ಜೋಡಿಗೆ 2.50 ಲಕ್ಷ ರೂ. ಪ್ರೋತ್ಸಾಹ ಧನ ನೀಡಲಾಗುತ್ತದೆ. ಅಂದರೆ ಮದುವೆಯಾಗುವ ಜೋಡಿಯ ಪೈಕಿ ಗಂಡ ಅಥವಾ ಹೆಂಡತಿ ಇಬ್ಬರಲ್ಲಿ ಒಬ್ಬರು ದಲಿತರಾಗಿರಬೇಕು. ಅಂದರೆ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಇದಲ್ಲದೆ ದಂಪತಿಗಳ ವಾರ್ಷಿಕ ಆದಾಯ 5 ಲಕ್ಷ ರೂ.ಕ್ಕಿಂತಲೂ ಕಡಿಮೆ ಇರಬೇಕು. ಇದರಲ್ಲಿ ಅರ್ಹ ದಂಪತಿಗಳು ತಮ್ಮ ಇಬ್ಬರ ಹೆಸರಿಗೂ ಮೊದಲು ಟಿಟಿಯಾಗಿ 1.25 ಲಕ್ಷ ರೂ. ಪಡೆಯುತ್ತಾರೆ. ಉಳಿದ ಮೊತ್ತ 1.25 ಲಕ್ಷ ರೂ.ವನ್ನು 5…
ಆಗಸ್ಟ್ ತಿಂಗಳು ಪ್ರಾರಂಭವಾಗುತ್ತದೆ. ದೇಶದಲ್ಲಿ ಪ್ರತಿ ತಿಂಗಳ ಮೊದಲ ದಿನಾಂಕದಂದು ಹಲವು ರೀತಿಯ ನಿಯಮಗಳು ಮತ್ತು ಬದಲಾವಣೆಗಳು ಕಂಡುಬರುತ್ತವೆ. ಅಂತೆಯೇ, ಆಗಸ್ಟ್ 1 ರಂದು, ಅಂತಹ ಅನೇಕ ಬದಲಾವಣೆಗಳು ಸಂಭವಿಸಲಿವೆ ಈ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ.. ಗೂಗಲ್ ಮ್ಯಾಪ್ಸ್ ಭಾರತದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತಿದೆ. ಆಗಸ್ಟ್ 1 ರಿಂದ, ಕಂಪನಿಯು ತನ್ನ ಸೇವಾ ಶುಲ್ಕವನ್ನು 70% ರಷ್ಟು ಕಡಿಮೆ ಮಾಡುತ್ತಿದೆ ಇದರಿಂದ ಹೆಚ್ಚು ಹೆಚ್ಚು ಪಾಲುದಾರರು ಸೇರಬಹುದು. ಇದರೊಂದಿಗೆ ಬಿಲ್ಲಿಂಗ್ ಡಾಲರ್ ನಿಂದ ರೂಪಾಯಿಗೆ ಬದಲಾಗಲಿದೆ. ಸಾಮಾನ್ಯ ಬಳಕೆದಾರರು ಯಾವುದೇ ಹೊಸ ಶುಲ್ಕವನ್ನು ಪಾವತಿಸಬೇಕಾಗಿಲ್ಲ, ಅಂದರೆ, Google ನಕ್ಷೆಗಳ ದೈನಂದಿನ ಬಳಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ವರದಿಗಳ ಪ್ರಕಾರ ಭಾರತದಲ್ಲಿ ಆಗಸ್ಟ್ 2024ರಿಂದ ಗೂಗಲ್ ಮ್ಯಾಪ್ಸ್ ಸರ್ವಿಸ್ ಚಾರ್ಜ್ ಕಡಿಮೆಯಾಗಲಿದೆ. ಆಗಸ್ಟ್ 1ರಿಂದ ಇದರ ಹೊಸ ನಿಯಮಗಳು ಅನ್ವಯವಾಗಲಿದ್ದು, ಇದರ ನೇರ ಲಾಭ ಗ್ರಾಹಕರಿಗೆ ಸಿಗಲಿದೆ. ಹೊಸ ನಿಯಮಗಳಿಂದ ಶೇ.70ರಷ್ಟು ಕಡಿಮೆ ಖರ್ಚು ಆಗಲಿದ್ದು, ಗೂಗಲ್ ಮ್ಯಾಪ್…
ವಿಷ್ಣುವರ್ಧನ್ ಎಂದಾಕ್ಷಣ ಅವರ ಇತ್ತೀಚಿನ ವೇಷಭೂಷಣಗಳೇ ಸಾಮಾನ್ಯವಾಗಿ ನೆನಪಿಗೆ ಬರುತ್ತದೆ. ತಲೆಗೆ ಬಟ್ಟೆ ಕಟ್ಟಿಕೊಳ್ಳುತ್ತಿದ್ದ ರೀತಿ, ಕೊರಳಿನಲ್ಲಿ ಸರಗಳು… ಇಂಥ ನೋಟದಿಂದಲೇ ಅವರು ಎಲ್ಲರ ಹೃದಯವನ್ನು ಆಳಿದವರು. ಇವರ ಜೊತೆ ಕೆಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡಿರುವ ನಟಿ ಅನು ಪ್ರಭಾಕರ್ ವಿಷ್ಣು ಸರ್ ಜತೆಗಿನ ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ವಿಷ್ಣುವರ್ಧನ್ ಜೊತೆಗಿನ ತಮ್ಮ ಮತ್ತು ಅಮ್ಮ ಗಾಯತ್ರಿ ಪ್ರಭಾಕರ್ ಅವರ ಜೊತೆಗಿನ ಒಡನಾಟದ ಕುರಿತು ಮಾತನಾಡಿದ್ದಾರೆ. ವಿಷ್ಣು ಸರ್ ವಿಷಯವನ್ನು ಹೇಳುವುದಾದರೆ ಒಂದು ದಿನ ಸಾಕಾಗಲ್ಲ ಎನ್ನುತ್ತಲೇ ಅವರ ಗುಣಗಾನ ಮಾಡಿದ್ದಾರೆ ಅನು ಪ್ರಭಾಕರ್. ಬಾಬಾ ರೀತಿ ಬಟ್ಟೆ ಕಟ್ಟಿಕೊಳ್ಳುತ್ತಿರುವ ಕುರಿತು ರಶ್ಮಿ ಅವರು ಕೇಳಿದ ಪ್ರಶ್ನೆಗೆ ಅನು ಪ್ರಭಾಕರ್ ಅವರು, ವಿಷ್ಣು ಸರ್ ತುಂಬಾ ಧಾರ್ಮಿಕ ಪ್ರವೃತ್ತಿಯವರು. ಸದಾ ಫಿಲಾಸಾಫಿ, ಸ್ಪಿರಿಚ್ಯುವಲ್ ಎಂದು ಮಾತನಾಡುತ್ತಿದ್ದರು. ನನ್ನ ಅಮ್ಮ ಮತ್ತು ಅವರು ಯಾವಾಗಲೂ ಅದರ ಬಗ್ಗೆ ಡಿಸ್ಕಸ್ ಮಾಡುತ್ತಿದ್ದರು. ನಾನು ಅವರ ಮಾತುಗಳಿಗೆ ಸಾಕ್ಷಿಯಾಗುತ್ತಿದ್ದೆ. ಜೀವನ ಹೇಗೆ ಎದುರಿಸಬೇಕು. ಸಿನಿಮಾ,…
ಕೊರಟಗೆರೆ: ತಾಲೂಕಿನ ತುಂಬಾಡಿ ಮತ್ತು ಸಿದ್ದರಬೆಟ್ಟ ಸಂಪರ್ಕದ ರಸ್ತೆಯಲ್ಲಿ ಪ್ರಕಾಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕೇವಲ 24 ಗಂಟೆಗಳಲ್ಲಿ ಕೊರಟಗೆರೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಚೇತನ್ ಕುಮಾರ್ ಹಾಗೂ ತಂಡ ಕಟ್ಟಿದೆ. ಆರೋಪಿಗಳ ಬಂಧನದ ಜೊತೆಗೆ ಈ ಹತ್ಯೆ ಹಿಂದಿನ ಹಲವು ರಹಸ್ಯಗಳು ಬಯಲಾಗಿದೆ. ಬಾಗೂರು ಗ್ರಾಮದ ರಂಗಸ್ವಾಮಿ ಅಲಿಯಾಸ್ ರಂಗ, ಬೆಂಗಳೂರು ಮೂಲದ ಗೋವಿಂದರಾಜು ಅಲಿಯಾಸ್ ಗುಂಡ, ದರ್ಶನ್ ಕಂಬದಹಳ್ಳಿ ಅಲಿಯಾಸ್ ದಚ್ಚಿ, ಮಲ್ಲೇಕಾವು ಗ್ರಾಮದ ಮಹೇಶ್ ಅಲಿಯಾಸ್ ಮಚ್ಚಿ, ಹರ್ಷಿತಾ ಅಲಿಯಾಸ್ ಇನ್ ಸ್ಟಾಗ್ರಾಂ ಡವ್ ರಾಣಿ ಬಂಧಿತ ಆರೋಪಿಗಳಾಗಿದ್ದಾರೆ. ಗಂಡನನ್ನು ಬಿಟ್ಟು ಗುಂಡ ಹಿಂದೆ: ಮಲ್ಲೇಕಾವು ಗ್ರಾಮದ ಚೆಂದುಳ್ಳಿ ಚೆಲುವೆ ಹರ್ಷತಾಳ ಕಾಮದ ಆಟಕ್ಕೆ ಆಕೆಯ ಅಮಾಯಕ ಗಂಡ ಮಹೇಶ್ ಉಸಿರು ಚೆಲ್ಲಿದ್ದಾನೆ. ಮಾಜಿ ಲವರ್ ಜೊತೆ ಸೇರಿ ಗಂಡನನ್ನೇ ಕೊಲ್ಲಲು ಸುಪಾರಿ ಕೊಟ್ಟಿರುವ ಆರೋಪ ಕೇಳಿ ಬಂದಿದೆ. ಅತ್ತ ಗಂಡನ ಕೊಲೆಯಾದರೂ ಇತ್ತ ತನಗೆ ಇದರ ಬಗ್ಗೆ ಏನೂ…
ಬೀದರ್: ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳನ್ನು ನಡೆಯದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಮತ್ತು ಬಾಲ್ಯ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹೇಳಿದರು. ಮಂಗಳವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಜಿಲ್ಲಾ ಮಕ್ಕಳ ಕಲ್ಯಾಣ ಮತ್ತು ರಕ್ಷಣಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ʼಬಾಲ್ಯ ವಿವಾಹ ಮಾಡುವ ಪಾಲಕರ ವಿರುದ್ಧ ಪೋಕ್ಷೊ ಪ್ರಕರಣ ದಾಖಲಿಸಬೇಕೆಂಬ ನಿಯಮವಿದ್ದು, ಅದನ್ನು ಮಾಡಿದಾಗ ಬಾಲ್ಯ ವಿವಾಹ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತವೆʼ ಎಂದರು. ʼಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದುವೆ ನಡೆಯುವ ಕಲ್ಯಾಣ ಮಂಟಪ ಹಾಗೂ ಸಾಮೂಹಿಕ ವಿವಾಹ ನಡೆಯುವ ಸ್ಥಳಗಳ ಮೇಲೆ ಅಧಿಕಾರಿಗಳು ಗಮನಹರಿಸಬೇಕು. ಅಧಿಕಾರಿಗಳು ಕಾಟಾಚಾರಕ್ಕೆ ಕೆಲಸ ಮಾಡದೇ ಜವಾಬ್ದಾರಿಯಿಂದ ಮಾಡಿದರೆ ಮಾತ್ರ ಬಾಲ್ಯ ವಿವಾಹ ಸೇರಿದಂತೆ ಇತರೆ ಹಲವಾರು ಸಾಮಾಜಿಕ ಪಿಡುಗುಗಳನ್ನು ನಿರ್ಮೂಲನೆ ಮಾಡಬಹುದುʼ ಎಂದು ಹೇಳಿದರು. ʼಮಕ್ಕಳ ಪಾಲನಾ ಸಂಸ್ಥೆಗಳು ಕಡ್ಡಾಯವಾಗಿ ಸರಕಾರದಿಂದ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ತಾಲೂಕು ಮಟ್ಟದಲ್ಲಿ ತಹಶೀಲ್ದಾರರು ಮಕ್ಕಳ ರಕ್ಷಣಾ ಸಮಿತಿಗಳನ್ನು ರಚಿಸಿ, ಆಗಾಗ…
ತಿಪಟೂರು: ನಾಡಿನ ಸಮಸ್ತ ಜನರ ಅಭ್ಯುದಯಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ ಅದರಲ್ಲಿ ಗಂಗಾ ಕಲ್ಯಾಣ ಯೋಜನೆಯೂ ಒಂದು ಇಂತಹ ಯೋಜನೆಗಳನ್ನು ಪಡೆದು ನೀವು ಅಭಿವೃದ್ಧಿಹೊಂದಿ ನಾಲ್ಕಾರು ಜನರಿಗೆ ಮಾದರಿಯಾಗಿ ಎಂದು ಶಾಸಕ ಕೆ.ಷಡಕ್ಷರಿ ಫಲಾನುಭವಿಗಳಿಗೆ ಕರೆನೀಡಿದರು. ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಡಾ. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ೨೦೧೯–೨೦, ೨೦೨೦–೨೧ನೇ ಸಾಲಿನ ಗಂಗಾಕಲ್ಯಾಣ ಯೋಜನೆಯ ಪಂಪ್ ಸೆಟ್ ಹಾಗೂ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು, ತಿಪಟೂರು ಸರ್ಕಾರಿ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಅಭಿವೃದ್ಧಿ ಹೊಂದಿ ಎಂದು ಕರೆ ನೀಡಿದರಲ್ಲದೇ, ನಾಡಿನ ಸಮಸ್ತ ಜನರ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ನೀಡಿದೆ ಎಂದರು. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಡಾ.ಸಂಪತ್ ರಾಜ್ ವಿಡಿಯೋ ಕರೆಯ ಮೂಲಕ ಫಲಾನುಭವಿಗಳೊಂದಿಗೆ ಮಾತನಾಡಿ, ನಿಮ್ಮ ಅಭಿವೃದ್ಧಿಗಾಗಿ ಯೋಜನೆಗಳನ್ನು ಪಡೆದಿದ್ದೀರಾ, ಆದರೆ ಇವುಗಳನ್ನು ಸದ್ಭಳಕೆ ಮಾಡಿದಾಗ ಮಾತ್ರ ಸರ್ಕಾರದ ಯೋಜನೆಗೆ ಒಂದು ಬೆಲೆ. ಆದ್ದರಿಂದ ಯಂತ್ರೋಪಕರಣಗಳನ್ನು ಬಳಸಿಕೊಂಡು ಅಭಿವೃದ್ಧಿಹೊಂದಿ ದೇಶಕ್ಕೆ ಮಾದರಿಯಾಗುವ ಹಾಗೆ ಕಾರ್ಯನಿರ್ವಹಿಸಿ ಎಂದು…
ಪಾವಗಡ: ತಾಲ್ಲೂಕಿನ ಪ್ರತಿಷ್ಠಿತ ಶಾಲೆಯಾದ ಜ್ಞಾನಬೋಧಿನಿ ಶಾಲೆಯಲ್ಲಿ ಜುಲೈ 29ರಿಂದ ಆಗಸ್ಟ್ 2ವರೆಗೆ ನೂತನ ಪದವೀಧರ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸುಮಾರು ಐದು ದಿನಗಳ ಕಾಲ ಮಕ್ಕಳ ಕಲಿಕಾ ಬಲಸಂವರ್ಧನೆ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಜ್ಞಾನಬೋಧಿನಿ ಶಾಲೆಯ ಅಧ್ಯಕ್ಷರಾದ ಜಿ.ಅನಿಲ್ ಕುಮಾರ್ ಹಾಗೂ ಕಾರ್ಯದರ್ಶಿಗಳಾದ ಡಾ.ಕೆ.ಎಸ್.ಅನಿಲ್ ಕುಮಾರ್ ಪಾಲ್ಗೊಂಡಿದ್ದು, ಈ ಸಸಂದರ್ಭದಲ್ಲಿ ಕೆ.ಎಸ್.ಅನಿಲ್ ಕುಮಾರ್ ಅವರು, ನೂತನ ಪದವೀಧರ ಶಿಕ್ಷಕರನ್ನು ಕುರಿತು ಮಾರ್ಗದರ್ಶನವನ್ನು ನೀಡಿದರು. ಕಾರ್ಯಕ್ರಮದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಾದ ಗಂಗಾಧರ್ ಎಚ್.ಆರ್., ವಿಷಯ ಪರಿವೀಕ್ಷಕರಾದ ಚಿತ್ತಯ್ಯ ಮತ್ತು ಡಯಟ್ ನ ಉಪನ್ಯಾಸಕರಾದ ನವೀನ್ ಕುಮಾರ್, ಹಾಗೆಯೇ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ದೇವರಾಜು ಮತ್ತು ಸಾಧಿಕ್ ಉಲ್ಲಾ ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಪದವೀಧರ ಶಿಕ್ಷಕರಿಗೆ ತರಬೇತಿಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ವರದಿ: ನಂದೀಶ್ ನಾಯ್ಕ, ಪಾವಗಡ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್…