Subscribe to Updates
Get the latest creative news from FooBar about art, design and business.
- ಮಾವಿನಹಣ್ಣು ಇಷ್ಟ ಪಟ್ಟು ತಿಂತೀರಾ? ಈ ರಹಸ್ಯ ಆರೋಗ್ಯ ಪ್ರಯೋಜನಗಳು ನಿಮಗ ಗೊತ್ತಿರಲೇಬೇಕು!
- ಸಚಿವರ ಆಯ್ಕೆಯಲ್ಲಿ ಎಚ್ಚರಿಕೆ ಅಗತ್ಯ: ಡಿಕೆಶಿಗೆ ಮಲ್ಲಿಕಾರ್ಜುನ ಖರ್ಗೆ ಸಲಹೆ
- ಸಚಿವ ಸತೀಶ್ ಜಾರಕಿಹೊಳಿ ವಿರುದ್ಧ ಸುಳ್ಳು ಪೋಸ್ಟ್: ಇಬ್ಬರು ಫೇಸ್ ಬುಕ್ ಅಡ್ಮಿನ್ ಗಳ ವಿರುದ್ಧ ಎಫ್ ಐಆರ್ ದಾಖಲು
- ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!
- ದಾಸರಹಳ್ಳಿ ಚೇತನ್ ಬಿಜೆಪಿ ಮಂಡಲ ಯುವಾಧ್ಯಕ್ಷ
- ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಅಂದುಕೊಂಡಿರಲಿಲ್ಲ: ವೆಂಕಟರಮಣಪ್ಪ ನಿಧನಕ್ಕೆ ಸಿದ್ದರಾಮಯ್ಯ ಕಂಬನಿ
- ಪಾವಗಡ ತಾಲೂಕಿನ ವಸತಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರ ನೇಮಕಾತಿ: ಜೂನ್ 4 ರೊಳಗೆ ಅರ್ಜಿ ಸಲ್ಲಿಸಲು ಅವಕಾಶ
- ಕಬಡ್ಡಿ ಆಟಗಾರ್ತಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿಗೆ ಮರಣದಂಡನೆಗೆ ಆಗ್ರಹಿಸಿ ಸರಗೂರು ಪಟ್ಟಣದಲ್ಲಿ ದಸಂಸ ಪ್ರತಿಭಟನೆ
Author: admin
ಬೆಂಗಳೂರು ನಗರದಲ್ಲಿ ನಾಯಿ ಮಾಂಸ ಮಾರಾಟದ ವದಂತಿ ಹಿನ್ನೆಲೆ ಹೊರಗಿನ ಮಾಂಸ ಎಂದರೆ ಜನ ತಿನ್ನಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಆ ರೀತಿ ಯೋಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಈ ಸುದ್ದಿಗಳ ಬೆನ್ನಲ್ಲೇ ಆಹಾರ ಸುರಕ್ಷತಾ ಇಲಾಖೆ ಅಗತ್ಯ ಕ್ರಮಕ್ಕೆ ಮುಂದಾಗಿದ್ದು, ಬೆಂಗಳೂರಿನ ಮಟನ್ ಶಾಪ್ ಗಳಲ್ಲಿ ಪರಿಶೀಲನೆ ನಡೆಸಲು ತೀರ್ಮಾನಿಸಿದೆ. ಬೆಂಗಳೂರಿನ ಮಟನ್ ಅಂಗಡಿಗಳ ಸ್ವಚ್ಚತೆ, ಅಂಗಡಿಗಳಲ್ಲಿ ಸ್ಟಾಕ್ ಇರುವ ಕೋಲ್ಡ್ ಸ್ಟೋರೇಜ್‌ನಲ್ಲಿರೋ ಮಾಂಸ ಹೇಗಿದೆ, ಅಲ್ಲಿ ಕಲಬೆರಕೆ ನಡೆದಿದೆಯೇ, ಅಲ್ಲಿನ ಆಹಾರ ಎಷ್ಟು ಸೇಫ್ ಎಂಬುದರ ಬಗ್ಗೆ ಪರಿಶೀಲನೆಗೆ ಇಲಾಖೆ ಸಿದ್ಧತೆ ನಡೆಸಿದೆ. ಅದಕ್ಕಾಗಿ ಈಗಾಗಲೇ ಬೆಂಗಳೂರಿನ ಕೆಲವೆಡೆ ಸ್ಯಾಂಪಲ್‌ಗಳನ್ನು ಸಹ ಸಂಗ್ರಹಿಸಲಾಗಿದೆ. ನಾಯಿಮಾಂಸ ಸುದ್ದಿ ಬೆನ್ನಲ್ಲೇ ಹೋಟೆಲ್ ಮಾಲೀಕರು ಕಳವಳ ವ್ಯಕ್ತಪಡಿಸಿದ್ದು, ತಾವೇ ಖುದ್ದಾಗಿ ಮಾಂಸ ಖರೀದಿಗೆ ಮುಂದಾಗಿದ್ದಾರೆ. ನಮ್ಮ ರಾಜಧಾನಿ ಬೆಂಗಳೂರಿಗೆ ರಾಜಸ್ಥಾನದ ಜೈಪುರದಿಂದ ಸರಬರಾಜಾಗಿದ್ದ ಮಾಂಸ ನಾಯಿಯದ್ದು ಎಂಬ ಆರೋಪವನ್ನು ಹಿಂದೂ ಹೋರಾಟಗಾರ ಪುನೀತ್ ಕೆರೆಹಳ್ಳಿ ಮಾಡಿದ್ದರು. ಇದೇ ವಿಚಾರವಾಗಿ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ…
ಸೆರೆಮನೆ ವಾಸ ಅನುಭವಿಸುತ್ತಿದ್ದ ಕುಖ್ಯಾತ ರೌಡಿಯೊಬ್ಬ ಬಿಡುಗಡೆಯಾದ ಖುಷಿಗೆ ಬೃಹತ್ ಮೆರವಣಿಗೆ ಆಯೋಜಿಸಿ ಸಾರ್ವಜನಿಕವಾಗಿ ತನ್ನ ಪೌರುಷ ತೋರಿ ಬಳಿಕ ಇದೀಗ ಮತ್ತೇ ಜೈಲು ಸೇರಿದ ಘಟನೆ ಮಹಾರಾಷ್ಟ್ರದ ಸರ್ಕಾರ್ವಾಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂಪಿಡಿಎ ಕಾಯ್ದೆಯಡಿ ಬಂಧಿಸಲ್ಪಟ್ಟಿದ್ದ ನಾಸಿಕ್‌ನ ಕುಖ್ಯಾತ ರೌಡಿ ಹರ್ಷದ್ ಪಟಾಂಕರ್ ಜುಲೈ 23ರಂದು ಜೈಲಿನಿಂದ ಬಿಡುಗಡೆಯಾಗಿದ್ದ. ಹಾಗಾಗಿ ಆ ದಿನ ಮಧ್ಯಾಹ್ನ 3.30ಕ್ಕೆ ಸುಮಾರು 15 ದ್ವಿಚಕ್ರ ವಾಹನಗಳೊಂದಿಗೆ ಬೃಹತ್ ಮೆರವಣಿಗೆ ನಡೆಸಿದ್ದಾನೆ. ಈ ಮೆರವಣಿಗೆ ಬೆತೆಲ್ ನಗರದಿಂದ ಪ್ರಾರಂಭವಾಗಿ ಅಂಬೇಡ್ಕರ್ ಚೌಕ್, ಸಾಧು ವಾಸ್ವಾನಿ ರಸ್ತೆ ಮತ್ತು ಶರಣಪುರ ರಸ್ತೆ ಮೂಲಕ ಸಾಗಿದೆ. ಕಾರಿನ ಸನ್ ರೂಫ್‌ನಿಂದ ಕೈ ಬೀಸುತ್ತಿದ್ದ ಪಟಾಂಕರ್ ಅವರೊಂದಿಗೆ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಘೋಷಣೆಗಳನ್ನು ಕೂಗುತ್ತಿದ್ದರು. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಇದೀಗ ಮತ್ತೆ ಜೈಲು ಸೇರಿದ್ದಾನೆ. ಘಟನೆ ಬಗ್ಗೆ ಪಟಾಂಕರ್ ಮಾತ್ರವಲ್ಲದೆ ಅವರ ಏಳು ಸಹಚರರ ವಿರುದ್ಧವೂ ಸರ್ಕಾರ್ವಾಡಾ…
ಬೆಂಗಳೂರಿನ ಕೋರಮಂಗಲ ಪಿಜಿಯೊಂದರಲ್ಲಿ ನಡೆದ ಕೃತಿ ಕುಮಾರಿ ಎಂಬ ಯುವತಿಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರಲ್ಲಿ ಯಶಸ್ವಿಯಾಗಿದ್ದಾರೆ. ಕೃತ್ಯವೆಸಗಿದ ಆರೋಪಿ ಅಭಿಷೇಕ್ ನನ್ನು ಮಧ್ಯಪ್ರದೇಶದಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ಮಧ್ಯಪ್ರದೇಶಕ್ಕೆ ತೆರಳಿದ್ದ ಬೆಂಗಳೂರು ಪೊಲೀಸರು, ಅಲ್ಲಿನ ಭೋಪಾಲ್ ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ಸ್ಥಳೀಯ ಕೋರ್ಟ್‌ಗೆ ಹಾಜರುಪಡಿಸಿ, ಟ್ರಾನ್ಸಿಟ್ ವಾರೆಂಟ್ ಮೇಲೆ ಬೆಂಗಳೂರಿಗೆ ಕರೆ ತಂದಿದ್ದಾರೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ರಾಜಧಾನಿಯ ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಎಂಬಾಕೆಯನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯ ತನಿಖೆ ನಡೆಸುವ ಅಧಿಕಾರಿಗಳಿಗೆ ಬೆಚ್ಚಿ ಬೀಳಿಸುವ ಇನ್ನಷ್ಟು ವಿವರಗಳು ಹೊರಬಿದ್ದಿವೆ. ಕೊಲೆಯಾಗಿ ಹೋದವಳು ಈತನ ಪ್ರೇಯಸಿಯ ಗೆಳತಿಯಾಗಿದ್ದು, ಈ ದುಷ್ಟನ ಕೈಯಿಂದ ಗೆಳತಿಯನ್ನು ಬಿಡಿಸುವ ಯತ್ನದಲ್ಲಿ ತಾನೇ ಕೊಲೆಗಿದ್ದಾಳೆ ಎಂದು ತಿಳಿದುಬಂದಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ:…
ತುಮಕೂರು: ಮೂಡಾಗೆ ಸಂಬಂದಿಸಿದಂತೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಿಲ್ಲ ಎಂದು ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸದನದ ಒಳಗೂ ಹಾಗೂ ಹೊರಗೂ ಈ ಬಗ್ಗೆ ಮುಖ್ಯಮಂತ್ರಿಗಳು ಈಗಾಗಲೇ ಹೇಳಿಕೆ ನೀಡಿದ್ದಾರೆ ಎಂದು ತಿಳಿಸಿದರು. ಅಂತಹ ನಿವೇಶನಗಳನ್ನು ಖರೀದಿ ಮಾಡಿಲ್ಲ ಕಾನೂನು ವ್ಯಾಪ್ತಿಯಲ್ಲಿಯೇ ನಿವೇಶಗಳನ್ನು ಖರೀದಿ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA
ದರ್ಶನ್ ಬಂಧನವಾದ ಆರಂಭದ ದಿನಗಳಲ್ಲಿ ಅಂತರ ಕಾಯ್ದುಕೊಂಡಿದ್ದ ಕನ್ನಡ ಚಿತ್ರರಂಗದವರು ಬಳಿಕ ಈ ಬಗ್ಗೆ ಮಾತನಾಡಲು ಆರಂಭಿಸಿದರು. ಒಬ್ಬೊಬ್ಬರಾಗಿ ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್‌ರನ್ನು ಭೇಟಿ ಮಾಡಿ ಬರುತ್ತಿದ್ದಾರೆ. ಇನ್ನೂ ಕೆಲವರು ದರ್ಶನ್ ಪ್ರಕರಣದಿಂದ ಸಂಪೂರ್ಣವಾಗಿ ಅಂತರ ಕಾಯ್ದುಕೊಂಡಿದ್ದು, ಕಾನೂನು ಪ್ರಕಾರ ತೀರ್ಮಾನವಾಗಲಿ ಎಂದು ಹೇಳಿದ್ದಾರೆ. ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಕೂಡ ದರ್ಶನ್ ಬಂಧನ ಪ್ರಕರಣದ ಬಗ್ಗೆ ಈ ಮೊದಲು ಮಾತನಾಡಿದ್ದರು. ದರ್ಶನ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ, ಅದನ್ನು ಎಲ್ಲರಿಗೂ ಸಂಪಾದಿಸಲು ಆಗದು, ದೇವರು ಕೊಟ್ಟ ವರ ಎಂದು ಹೇಳಿದ್ದರು. ದರ್ಶನ್ ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಅವರು ಜೈಲಿನಿಂದ ಹೊರಬರುವಾಗ ಬದಲಾಗಿ ಬರಲಿ ಎಂದು ಹಾರೈಸಿದ್ದರು. ಮಾಧ್ಯಮವೊಂದರಲ್ಲಿ ಮಾತನಾಡುವಾಗ ವರದಿಗಾರ ದರ್ಶನ್‌ರನ್ನು ಭೇಟಿ ಮಾಡಲು ಜೈಲಿಗೆ ಹೋಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟ ರಾಜ್ ಬಿ ಶೆಟ್ಟಿ, ದರ್ಶನ್ ಅವರ ಜೊತೆ ನನಗೆ ಹೆಚ್ಚು ಪರಿಚಯವಿಲ್ಲ. ಅವರನ್ನು ಒಂದು ಬಾರಿ ಮಾತ್ರ ಭೇಟಿಯಾಗಿದ್ದೇನೆ. ನಾನು ಜೈಲಿಗೆ…
ಒಲಿಂಪಿಕ್ಸ್ ನಲ್ಲಿ ಪೋಡಿಯಂನಲ್ಲಿ ಅಗ್ರಸ್ಥಾನದಲ್ಲಿ ನಿಂತು ಚಿನ್ನದ ಪದಕ ಗೆಲ್ಲಲು ಸಾಕಷ್ಟು ಸಮಯ ಬೇಕಾಗುತ್ತದೆ. ವಿಶ್ವದಾದ್ಯಂತದ ಅತ್ಯುತ್ತಮ ಕ್ರೀಡಾಪಟುಗಳು ತಮ್ಮ ರಾಷ್ಟ್ರಕ್ಕೆ ಕೀರ್ತಿ ತರುವ ಏಕೈಕ ಉದ್ದೇಶದಿಂದ ಕ್ರೀಡಾ ವೈಭವದಲ್ಲಿ ಸ್ಪರ್ಧಿಸುತ್ತಾರೆ. ಹಾಗಾದ್ರೆ ಒಲಿಂಪಿಕ್ ಚಿನ್ನದ ಪದಕವನ್ನು ತಯಾರಿಸಲು ಎಷ್ಟು ಚಿನ್ನವನ್ನು ಬಳಸುತ್ತಾರೆ? ಅದರ ಮೌಲ್ಯವೇನು ಅನ್ನುವ ಬಗ್ಗೆ ಮುಂದೆ ಓದಿ ಒಲಿಂಪಿಕ್ ಚಿನ್ನದ ಪದಕವನ್ನು ಸಂಪೂರ್ಣವಾಗಿ ಚಿನ್ನದಿಂದ ಮಾಡಲಾಗಿಲ್ಲ. ಅಂತರರಾಷ್ಟ್ರೀಯ ಒಲಿಂಪಿಕ್ ಕೌನ್ಸಿಲ್ ಪ್ರಕಾರ, ಒಲಿಂಪಿಕ್ ಚಿನ್ನದ ಪದಕವನ್ನು ಕನಿಷ್ಠ 92.5% ಬೆಳ್ಳಿಯಿಂದ ತಯಾರಿಸಲಾಗುತ್ತದೆ ಮತ್ತು ಸುಮಾರು 6 ಗ್ರಾಂ ಶುದ್ಧ ಚಿನ್ನದಿಂದ ಲೇಪಿಸಲಾಗುತ್ತದೆ. ಚಿನ್ನದ ಪದಕವು ಸರಿಸುಮಾರು 529 ಗ್ರಾಂ ತೂಕವಿದೆ ಮತ್ತು ಬೆಳ್ಳಿ ಮತ್ತು ಚಿನ್ನವಲ್ಲದೆ ಸುಮಾರು 18 ಗ್ರಾಂ ಕಬ್ಬಿಣವನ್ನು ಒಳಗೊಂಡಿದೆ. ಫೋರ್ಬ್ಸ್ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ವಿತರಿಸಲು ಸಜ್ಜಾಗಿರುವ ಚಿನ್ನದ ಪದಕಗಳ ಬೆಲೆ ಚಿನ್ನ, ಬೆಳ್ಳಿ ಮತ್ತು ಕಬ್ಬಿಣದ ಮಾರುಕಟ್ಟೆ ಬೆಲೆಗಳ ಆಧಾರದ ಮೇಲೆ ಸುಮಾರು 950 ಡಾಲರ್…
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವನ್ನು ಅದ್ಧೂರಿಯಾಗಿ ನಡೆಸಿ ವಿಶ್ವದ ಗಮನ ಸೆಳೆಯುವಂತೆ ಮಾಡಿದ್ದ ರಿಲಯನ್ಸ್ ಉದ್ಯಮಿ ಮುಕೇಶ್ ಅಂಬಾನಿ 2024ರ ಕೇಂದ್ರ ಬಜೆಟ್ ಮಂಡನೆಯಾದ ದಿನ ಷೇರು ಮಾರುಕಟ್ಟೆಯಲ್ಲಿ ಆದ ಏರುಪೇರಿನಿಂದಾಗಿ ಬರೋಬ್ಬರಿ 9,200 ಕೋಟಿ ರೂ. ಕಳೆದುಕೊಂಡಿದ್ದಾರೆ. ಕೇಂದ್ರ ಬಜೆಟ್ ದಿನ ಷೇರು ಮಾರುಕಟ್ಟೆಯು ಸಣ್ಣ ಕುಸಿತದೊಂದಿಗೆ ಕ್ಲೋಸ್ ಆಗಿತ್ತು. ಆದರೆ ಇದು ವಹಿವಾಟಿನ ವೇಳೆ ಬಹುದೊಡ್ಡ ಪರಿಣಾಮವನ್ನು ಬೀರಿತ್ತು. ಈ ಸಂದರ್ಭದಲ್ಲಿ ವಹಿವಾಟಿನಲ್ಲಿ ಗಮನಾರ್ಹವಾದ ಏರಿಳಿತಗಳು ಕಂಡುಬಂದವು. ಕೆಲವು ಷೇರುಗಳು ತೀವ್ರವಾಗಿ ಕುಸಿದರೆ ಇನ್ನು ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡವು. ಇದು ದೇಶದ ದೊಡ್ಡ ಬಿಲಿಯನೇರ್ ಗಳ ಸಂಪತ್ತಿನ ಮೇಲೆ ಭಾರೀ ಪರಿಣಾಮವನ್ನು ಬೀರಿತು. ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವ್ವಳ ಮೌಲ್ಯದಲ್ಲಿ ಈ ದಿನ ಗಣನೀಯ ಇಳಿಕೆಯಾಗಿದೆ. ಬಜೆಟ್ ದಿನದಂದು, ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಏರುವ ನಿರೀಕ್ಷೆ ಇತ್ತು. ಇದರಿಂದ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯವನ್ನು ಹೆಚ್ಚಾಗುತ್ತದೆ ಎಂದೇ…
ಅಂತರಾಷ್ಟ್ರೀಯ ವೆಬ್ ಸ್ಟೋರಿ ‘ದಿ ವೈಟ್ ಲೋಟಸ್’ ಮೂರನೇ ಸೀಸನ್ ಆಫರ್ ದೀಪಿಕಾಗೆ ಬಂದಿತ್ತು. ಆದರೆ, ಪ್ರೆಗ್ನೆಂಟ್ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಮಗುವನ್ನು ನೋಡಿಕೊಳ್ಳಲು ನಟಿ ಸರಣಿಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಸದ್ಯ ನಟಿ ದೀಪಿಕಾ ಪಡುಕೋಣೆ ಸುದ್ದಿಯಲ್ಲಿದ್ದಾರೆ. ಪ್ರಗ್ನೆಂಟ್ ಆಗಿರೋ ಅವರು ಸೆಪ್ಟೆಂಬರ್‌ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ. ಹೀಗಾಗಿ ಈ ನಟಿ ಯಾವುದೇ ಸಿನಿಮಾದಲ್ಲಿ ನಟಿಸದಿರಲು ನಿರ್ಧರಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಪ್ರೆಗ್ನೆನ್ಸಿ ಆಗಿ ಸುದ್ದಿಯಾಗಿದ್ದ ನಟಿ ದೀಪಿಕಾ, ಮಗುವಿಗಾಗಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ತಾಯಿಯಾದ ನಂತರ ಕೆಲವು ವರ್ಷ ದೀಪಿಕಾ ಬಾಲಿವುಡ್ ನತ್ತ ಮುಖ ಮಾಡದಿರಲು ನಿರ್ಧರಿಸಿದ್ದಾರೆ ಎಂಬ ವರದಿಗಳಿವೆ. ನಟಿ ತನ್ನ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ ಎಂದು ಕೂಡ ಹೇಳಲಾಗಿದೆ. ಅಂತರಾಷ್ಟ್ರೀಯ ವೆಬ್ ಸ್ಟೋರಿ ‘ದಿ ವೈಟ್ ಲೋಟಸ್’ ಮೂರನೇ ಸೀಸನ್ ಆಫರ್ ದೀಪಿಕಾಗೆ ಬಂದಿತ್ತು. ಆದರೆ, ಪ್ರೆಗ್ನೆಂಟ್ ಕಾರಣಕ್ಕೆ ಅವರು ಅದನ್ನು ನಿರಾಕರಿಸಿದ್ದಾರೆ ಎಂದು ವರದಿಗಳು ಹೇಳಿವೆ. ಮಗುವನ್ನು…
ಹಲವು ಸರ್ಕಾರಿ ರಜೆಗಳು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್‌ಗಳಿಗೆ ಅನ್ವಯವಾಗುತ್ತವೆ. ಮುಂದಿನ ತಿಂಗಳು ಆಗಸ್ಟ್‌ನಲ್ಲಿ ಬ್ಯಾಂಕ್‌ಗಳು ಬರೋಬ್ಬರಿಗೆ 14 ದಿನ ಬಾಗಿಲು ಮುಚ್ಚಿವೆ.ಆಗಸ್ಟ್ ತಿಂಗಳಲ್ಲಿ ಮೂರು ಪ್ರಮುಖ ಹಬ್ಬಗಳು ಬರುತ್ತವೆ. ರಕ್ಷಾ ಬಂಧನ, ಜನ್ಮಾಷ್ಠಮಿ ಮತ್ತು ಸ್ವತಂತ್ರ ದಿನಾಚರಣೆಗಳಿಗೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ಮೂರು ಹಬ್ಬಗಳ ಜೊತೆ ನಾಲ್ಕು ಭಾನುವಾರ ಮತ್ತು ಎರಡು ಶನಿವಾರ ಸೇರಿಸಿದ್ರೆ 10 ರಜೆ ಆಗುತ್ತದೆ. ಇನ್ನುಳಿದ ನಾಲ್ಕು ರಜೆ ಯಾವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಆಗಸ್ಟ್ 2024- ಬ್ಯಾಂಕ್ ರಜಾದಿನಗಳ ಪಟ್ಟಿ: ಆಗಸ್ಟ್ 3: ಅಗರ್ತಲಾದಲ್ಲಿ ಕೇರ ಪೂಜೆ ಹಿನ್ನೆಲೆ ಈ ಭಾಗದಲ್ಲಿಯ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಆಗಸ್ಟ್ 4: ಭಾನುವಾರ ಆಗಸ್ಟ್ 7: ಹರಿಯಾಲಿ ತೀಜ್ ಹಬ್ಬದ ಹಿನ್ನೆಲೆ ಹರಿಯಾಣದ ಬ್ಯಾಂಕ್‌ಗಳಿಗೆ ರಜೆ ಆಗಸ್ಟ್ 8: ಈ ದಿನದಂದು ಸಿಕ್ಕಿಂನಲ್ಲಿ ತೇದೋಂಗ್ ಲೋರಂ ಫೈಟ್ ಆಚರಿಸಲಾಗುತ್ತದೆ. ಈ ಹಿನ್ನೆಲೆ ಸಿಕ್ಕಿಂನಲ್ಲಿ ಸರ್ಕಾರಿ ರಜೆ ಘೋಷಣೆ ಮಾಡಲಾಗುತ್ತದೆ. ಆಗಸ್ಟ್ 10: ತಿಂಗಳ…
ತುಮಕೂರು: ನಗರವು ಇಂದು ಇನ್ನೊಂದು ಮಹತ್ವದ ಬೆಳವಣಿಗೆಯನ್ನು ಕಂಡುಬಂದಿದೆ. ನೂತನವಾಗಿ ನಿರ್ಮಾಣಗೊಂಡ “ಶ್ರೀ ದೇವರಾಜ ಅರಸು ಬಸ್ ನಿಲ್ದಾಣ”ವನ್ನು ಇಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಹಾಗೂ KSRTC ಅಧ್ಯಕ್ಷರಾದ ಗುಬ್ಬಿ ಶ್ರೀನಿವಾಸ್ ಅವರು ಉದ್ಘಾಟಿಸಿದರು. ಈ ಹೊಸ ಬಸ್ ನಿಲ್ದಾಣವು ಸ್ಮಾಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಾಣಗೊಂಡಿದ್ದು, ತುಮಕೂರು ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಲು ಶಕ್ತಿಮಾನ್ ಆಗಿದೆ. ಈ ಹೊಸ ನಿಲ್ದಾಣವು ತುಮಕೂರು ಜಿಲ್ಲೆಯ ಜನತೆಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ, ಅವರ ಪ್ರಯಾಣದ ಅನುಭವವನ್ನು ಸುಗಮಗೊಳಿಸುತ್ತದೆ. ಆಧುನಿಕ ಸೌಲಭ್ಯಗಳು, ಹೊಸತಾದ ಪರಿಕರಗಳು, ಹಾಗೂ ಸುಸಜ್ಜಿತ ವ್ಯವಸ್ಥೆಗಳು ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡಲು ಸಿದ್ಧವಾಗಿವೆ. ನಗರದ ಅಭಿವೃದ್ಧಿಯ ದೃಷ್ಟಿಯಲ್ಲಿ ಈ ಬಸ್ ನಿಲ್ದಾಣವು ಪ್ರಮುಖ ಹೆಜ್ಜೆಯಾಗಿದೆ. ನಗರಾಭಿವೃದ್ಧಿಯ ಜೊತೆಗೆ, ಸಾರ್ವಜನಿಕರಿಗೆ ಅನುಕೂಲಕರವಾದ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಗುರಿಯನ್ನು ಈ ಬಸ್ ನಿಲ್ದಾಣ ಸಾಧಿಸುತ್ತದೆ. ಇದು ನಗರದ ಜನತೆಗೆ ಹೆಚ್ಚಿನ ಅನುಕೂಲತೆಗಳನ್ನು ಒದಗಿಸುವ ಜೊತೆಗೆ, ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಈ ಸಂದರ್ಭದಲ್ಲಿ…