Author: admin

ತುಮಕೂರು: ಮ್ಯೆಸೂರು ದಸರಾ ಉತ್ಸವದ ಮಾದರಿಯಲ್ಲಿ ಈ ಬಾರಿ ಸಾಂಪ್ರದಾಯಿಕವಾಗಿ ಹಾಗೂ ಅದ್ದೂರಿಯಾಗಿ ತುಮಕೂರು ದಸರಾ ಉತ್ಸವವನ್ನು ಆಚರಿಸಲು ಉದ್ದೇಶಿಸಲಾಗಿದ್ದು,  ದಸರಾ ಉತ್ಸವದ ಯಶಸ್ವಿಗೆ ಅಗತ್ಯ ಸಿದ್ಧತೆಗಳನ್ನು ಈಗಿನಿಂದಲೇ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ  ಗುರುವಾರ ಜರುಗಿದ ತುಮಕೂರು ದಸರಾ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಜಿಲ್ಲಾಡಳಿತದ ವತಿಯಿಂದ ಮೊದಲ ಬಾರಿಗೆ ತುಮಕೂರು ದಸರಾ ಕಾರ್ಯಕ್ರಮವನ್ನು  ಅಕ್ಟೋಬರ್ 10 ರಿಂದ 12ರವರೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಬಾರಿ ನವೀನ ರೀತಿಯ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಸರಾಗೆ ಮೆರುಗು ತರಬೇಕು. ಶಿಷ್ಟಾಚಾರದಲ್ಲಿ ಯಾವುದೇ ರೀತಿಯ ಉಲ್ಲಂಘನೆಯಾಗದಂAತೆ ಎಚ್ಚರಿಕೆ ವಹಿಸಬೇಕು. ದಸರಾ ಆಚರಣೆಗೆ ಹೆಚ್ಚಿನ ಪ್ರಾಯೋಜಕತ್ವ ಪಡೆಯಲು ಅಧಿಕಾರಿಗಳು ಮುಂದಾಗಿ ದಸರಾ ಮಹೋತ್ಸವವನ್ನು ಆಚರಿಸಲು  ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ವಿಜಯ ದಶಮಿ ದಿನದಂದು ನಗರದ ಟೌನ್ ಹಾಲ್ ವೃತ್ತದಿಂದ ಜೂನಿಯರ್ ಕಾಲೇಜು ಮೈದಾನದವರೆಗೂ ದಸರಾ ಮೆರವಣಿಗೆ ಆಯೋಜಿಸಬೇಕು.…

Read More

ಭಾರತಕ್ಕೆ ಸ್ವಾತಂತ್ರ್ಯ ಬಂದು 77 ವರ್ಷಗಳು ಕಳೆದರೂ, ಒಂದು ರೈಲು ಮಾರ್ಗ ಇನ್ನೂ ಬ್ರಿಟಿಷ್ ಕಂಪನಿಯ ನಿಯಂತ್ರಣದಲ್ಲಿದೆ. ಈ ಮಾರ್ಗವನ್ನು ಖರೀದಿಸಲು ಭಾರತೀಯ ರೈಲ್ವೆ ಹಲವು ಪ್ರಯತ್ನಗಳನ್ನು ಮಾಡಿದರೂ ಯಶಸ್ವಿಯಾಗಿಲ್ಲ. ಮಹಾರಾಷ್ಟ್ರದಲ್ಲಿರುವ ಒಂದು ರೈಲು ಮಾರ್ಗವನ್ನು ಇನ್ನೂ ಬ್ರಿಟಿಷ್ ಕಂಪನಿ ನಿರ್ವಹಿಸುತ್ತಿದೆ. ಈ ರೈಲು ಮಾರ್ಗವನ್ನು ಖರೀದಿಸಲು ಭಾರತೀಯ ರೈಲ್ವೆ ಹಲವು ಪ್ರಯತ್ನಗಳನ್ನು ಮಾಡಿದರೂ ಅದು ಫಲ ನೀಡಿಲ್ಲ. ಸೆಂಟ್ರಲ್ ಪ್ರಾವಿನ್ಸ್ ರೈಲ್ವೆಯ ಬ್ರಿಟಿಷ್ ಕಂಪನಿಯಾದ ‘ಕಿಲ್ಲಿಕ್ ನಿಕ್ಸನ್ & ಕೋ’ ಕಂಪನಿಯೇ ಇನ್ನೂ ನಿರ್ವಹಿಸುತ್ತಿದೆ. ಈ ಕಂಪನಿ ಮಹಾರಾಷ್ಟ್ರದಲ್ಲಿರುವ ಅಮರಾವತಿಯಿಂದ ಮುರ್ತಾಜಾಪುರದವರೆಗಿನ 190 ಕಿಲೋಮೀಟರ್‌ಗಳ ರೈಲು ಮಾರ್ಗದಲ್ಲಿ ಶಕುಂತಲಾ ಎಕ್ಸ್‌ಪ್ರೆಸ್‌ ಅನ್ನು ನಿರ್ವಹಣೆ ಮಾಡುತ್ತಿತ್ತು. ಸ್ವಾತಂತ್ರ್ಯ ಬಂದ ನಂತರ ಬ್ರಿಟಿಷರು ಭಾರತದಿಂದ ಹೊರಟು ಹೋದರು. ಆದರೂ, ಈ ಮಾರ್ಗದ ಮೇಲೆ ಬ್ರಿಟಿಷ್ ಖಾಸಗಿ ಕಂಪನಿಯ ಅಧಿಕಾರ ಮುಂದುವರೆದಿದೆ. ಆ ಕಂಪನಿಗೆ ಭಾರತೀಯ ರೈಲ್ವೆ 1.20 ಕೋಟಿ ರೂಪಾಯಿ ರಾಯಲ್ಟಿಯನ್ನು ನೀಡುತ್ತಿದೆ. ಅಮರಾವತಿಯಿಂದ ಮುರ್ತಾಜಾಪುರದವರೆಗಿನ 190 ಕಿಲೋಮೀಟರ್‌ಗಳಷ್ಟಿರುವ ಈ ರೈಲು ಮಾರ್ಗವನ್ನು…

Read More

ಪಾವಗಡ: ಮಕ್ಕಳ ಶೈಕ್ಷಣಿಕ ಪ್ರಗತಿಗೆ ಜಾನಪದೀಯ ಕಲೆ ಸಹಕಾರಿಯಾಗಲಿದೆ ಎಂದು  ಮಧುಗಿರಿ ಶೈ.ವಿಷಯ ಪರಿವೀಕ್ಷಕ ಚಿತ್ತಪ್ಪ ಅವರು ಅಭಿಪ್ರಾಯಪಟ್ಟರು. ಗುರುವಾರ ತಾಲ್ಲೂಕಿನ ಮರಿದಾಸನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ, ಉಪನಿರ್ದೇಶಕರ ಶಾಲಾ ಶಿಕ್ಷಣ ಇಲಾಖೆ ಮಧುಗಿರಿ,ಪಾವಗಡ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ,ಕ್ಷೇತ್ರ ಸಂಪನ್ಮೂಲಾಧಿಕಾರಿ ಕಾರ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ತಾಲ್ಲೂಕು ಕನ್ನಡ ಭೋದಕರ ವೇದಿಕೆಯ 2 ನೇ ಪುನಃಶ್ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು  ಶೈಕ್ಷಣಿಕವಾಗಿ  ಮುಂದುವರೆಯಲು ಶಿಕ್ಷಕರ ಸೃಜನಾತ್ಮಕ ಚಟುವಟಿಕೆಗಳು ಅತ್ಯಗತ್ಯ ಮತ್ತು ಜಾನಪದದ ವಿಷಯಗಳ ಸೈದ್ಧಾಂತಿಕ ಪಠ್ಯ ಅಧ್ಯಯನಕ್ಕೆ  ಜಾನಪದೀಯ ಕಲಾ ಪ್ರಕಾರಗಳಾದ ಹಾಡು, ನೃತ್ಯ, ವಿವಿಧ ಜಾನಪದ ಕಲೆಗಳ ಕೌಶಲ್ಯದಿಂದಲೇ ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಭವಿಷ್ಯ ಕಟ್ಟಲು ಸಹಕಾರಿಯಾಗಲಿದೆ ಎಂದರು. ಜೊತೆಗೆ ನೆನಪಿನ ಶಕ್ತಿ ವೃದ್ಧಿಸಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆಯಲು ಮಕ್ಕಳಿಗೆ ಪೂರಕವಾಗುತ್ತದೆ ಎಂದರು. ಕ್ರಮಬದ್ಧತೆಯ ಅಧ್ಯಯನದ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಮಕ್ಕಳಲ್ಲಿ ಇನ್ನಷ್ಟು ಕಲಿಕಾಸಕ್ತಿ ಹೆಚ್ಚಿಸುವ ಶ್ರಮವನ್ನು ಕನ್ನಡ ಭಾಷಾ ಶಿಕ್ಷಕರು ಪಾರದರ್ಶಕವಾಗಿ…

Read More

ಪಾವಗಡ : ವಿದ್ಯಾರ್ಥಿಗಳಲ್ಲಿ ಕ್ರೀಡಾ ಶಿಸ್ತಿನ ಕೊರತೆ ಇದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ತಿಳಿಸಿದರು. ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿ ಪ್ರೌಢಶಾಲಾ ಹಂತದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಶಿಸ್ತಿನ ಕೊರತೆ ಕಾಡುತ್ತಿದೆ. ಕೇವಲ ಪಠ್ಯ ವಿಷಯವಷ್ಟೆ ಸಾಲದು. ಮಗುವಿನ ದೈಹಿಕ ಬೆಳವಣಿಗೆಯೂ ಮುಖ್ಯವಾಗಿದೆ. ಕ್ರೀಡಾಕೂಟ ಆರಂಭವಾದ ಗಳಿಗೆಯಿಂದಲೂ ನೋಡುತ್ತಿದ್ದೇನೆ. ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಕಾಣುತ್ತಿಲ್ಲ. ಪ್ರತಿಶಾಲೆಯಲ್ಲಿ ಪ್ರತಿಭೆಗಳಿವೆ. ಅವುಗಳಿಗಳಿಗೆ ಅವಕಾಶ ಒದಗಿಸಲೆಂದೇ ಹೋಬಳಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟಗಳ ಆಯೋಜನೆಯಾಗುತ್ತಿದೆ. ಅವುಗಳನ್ನು ಬಳಸಿಕೊಂಡು ಮಕ್ಕಳು ಆಟೋಟಗಳ ಜೊತೆಗೆ ಆಂತರಿಕ ಶಿಸ್ತು ಬೆಳೆಸಿಕೊಳ್ಳಬೇಕು. ಅದಕ್ಕೆ ದೈಹಿಕ ಶಿಕ್ಷಕರು ಪೂರಕವಾಗಿ ನಿಲ್ಲಬೇಕು. ಅದಾಗದಿದ್ದಲ್ಲಿ ಕಾಟಾಚಾರದ ಕ್ರೀಡಾಕೂಟಗಳಾಗಿ ಎಲ್ಲವೂ ವ್ಯರ್ಥವಾಗುತ್ತವೆ ಎಂದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಜೊತೆ ಸಂವಾದ ನಡೆಸಿದ ದೈಹಿಕ ಶಿಕ್ಷಕರು, ಆಟೋಟ ತರಗತಿಗಳನ್ನು ಸಹಾ ಓದಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ನಮಗೆ ತರಬೇತಿ ನೀಡಲು ಮತ್ತು ಮಕ್ಕಳು ದೈಹಿಕವಾಗಿ ಬೆಳೆಯಲು ಅವಕಾಶ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.…

Read More

ತುಮಕೂರು: ಪರಮೇಶ್ವರ್ ಗೃಹ ಸಚಿವ ಸ್ಥಾನದಲ್ಲಿ ಕೆಳಗೆ ಇಳಿಯಲಿ, ಅವರು ಆ ಸ್ಥಾನದಲ್ಲಿ ಇರಲು ನಾಲಾಯಕ್, ರಾಜ್ಯ ಪಾಲರಿಗೆ ಬೆದರಿಕೆ ಇರೋ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಗೆ ಗೊತ್ತಿಲ್ಲ ಅಂತಾರೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಂದರೆ ಅವರು ಆ ಸ್ಥಾನದಿಂದ ಕೆಳಗೆ ಇಳಿಯಲಿ. ಅವರ ಸರ್ಕಾರ ಬೀಳಲಿ. ಆಗ ನಾವು ಹೇಳ್ತೇವೆ ಎಂದರು. ರಾಜ್ಯದ ಪರಿಸ್ಥಿತಿ ನೋಡಿದ್ರೆ. ಗೃಹ ಸಚಿವರು ಒಂದೇ ಕಾರ್ಯಾಚರಣೆ ಮಾಡಬೇಕು. ಇಲ್ಲಾ ಅಂದರೆ ಅವರು ಆ ಸ್ಥಾನದಲ್ಲಿ ಇರಲು ನಾಲಾಯಕ್ ಎಂದರು. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ನಮಗೆ ರಾಜ್ಯದಲ್ಲಿ ಭಯ ಶುರುವಾಗಿದೆ ಎಂದರು. ರಾಜ ಭವನಕ್ಕೆ ನುಗ್ಗುತ್ತೀವಿ, ಬಾಂಗ್ಲಾದೇಶದ ಹಾಗೆ ಮಾಡ್ತಿವಿ ಎಂದು ಕಾಂಗ್ರೆಸ್ ನವರು ಹೇಳುತ್ತಿರೋದ್ರಿಂದ. ಇದರಿಂದ ನಮಗೆ ಭಯ ಆಗುತ್ತಿದೆ. ಸಿದ್ದರಾಮಯ್ಯ ನೈತಿಕವಾಗಿ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದರು. ಯಡಿಯೂರಪ್ಪರ ಮೇಲೆ ಆರೋಪ ಬಂದಾಗ ಸಿದ್ದರಾಮಯ್ಯರು…

Read More

ವಾಷಿಂಗ್ಟನ್: ಮಹಿಳೆಯರು ಮತ್ತು ಮಕ್ಕಳ ನಗ್ನ ವಿಡಿಯೋಗಳನ್ನು ರಹಸ್ಯವಾಗಿ ಮಾಡಿಟ್ಟುಕೊಂಡಿದ್ದ ಆರೋಪದ ಮೇಲೆ ಭಾರತ ಮೂಲದ ವೈದ್ಯನನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ. ಒಮೈರ್ ಐಜಾಜ್ ಬಂಧಿತ ವೈದ್ಯನಾಗಿದ್ದು, ಆಗಸ್ಟ್ 8ರಂದು ಈತನನ್ನು ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಬಂಧಿಸಿದ್ದು, ಈತನ ಬಳಿಯಲ್ಲಿ 13,000ಕ್ಕೂ ಹೆಚ್ಚು ಮಹಿಳೆಯರು, ಮಕ್ಕಳ ವಿಡಿಯೋಗಳು ಪತ್ತೆಯಾಗಿವೆ. ಆಸ್ಪತ್ರೆಯ ವಿವಿಧ ಭಾಗಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಇಟ್ಟು ಈತ ವಿಡಿಯೋ ಮಾಡಿಕೊಳ್ಳುತ್ತಿದ್ದ. ಶೌಚಾಲಯ, ಆಸ್ಪತ್ರೆ ಕೊಠಡಿ, ಬಟ್ಟೆ ಬದಲಿಸುವ ಸ್ಥಳಗಳಲ್ಲಿ ಈತ ರಹಸ್ಯ ಕ್ಯಾಮರಾ ಇಟ್ಟು ವಿಡಿಯೋ ಮಾಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಇಷ್ಟೇ ಅಲ್ಲದೇ ತನ್ನ ಸ್ವಂತ ಮನೆಯಲ್ಲೇ ಕ್ಯಾಮರಾ ಇಟ್ಟು ತನ್ನ 2 ವರ್ಷದ ಹೆಣ್ಣು ಮಗುವಿನ ಬೆತ್ತಲೆ ವಿಡಿಯೋವನ್ನು ಈತ ಇಟ್ಟುಕೊಂಡಿದ್ದು, ಈತನ ಕೃತ್ಯ ಗೊತ್ತಾದ ಬಳಿಕ ಸ್ವತಃ ಈತನ ಪತ್ನಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಎಲ್ಲ ಸಾಕ್ಷ್ಯಗಳನ್ನು ಪೊಲೀಸರಿಗೆ ತಲುಪಿಸಿದ್ದಾಳೆ. ಈತನ ಕಂಪ್ಯೂಟರ್, ಫೋನ್ ಸೇರಿದಂತೆ ಸುಮಾರು 15 ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಂದು ಹಾರ್ಡ್ ಡ್ರೈವ್‌ನಲ್ಲಿಯೇ 13,000…

Read More

ಬಿಹಾರ: ಒಂದು ವರ್ಷದ ಮಗುವೊಂದು ಹಾವನ್ನು ಕಚ್ಚಿ ಕೊಂದು ಹಾಕಿದ ಅಚ್ಚರಿಯ ಘಟನೆ ಬಿಹಾರದ ಗಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ. ಮನೆಯ ಟೆರೆಸ್ ನಲ್ಲಿ ಮಗು ಆಟವಾಡುತ್ತಿದ್ದ ವೇಳೆ ಹಾವೊಂದು ಕಾಣಿಸಿಕೊಂಡಿತ್ತು. ಇದು ಆಟದ ವಸ್ತು ಎಂದು ಭಾವಿಸಿ ಮಗು ಹಾವಿಗೆ ಕಚ್ಚಿದೆ. ಮಗು ಹಾವನ್ನು ಕಚ್ಚುತ್ತಿರುವುದನ್ನು ಕಂಡು ಹೆದರಿದ ಮಗುವಿನ ತಾಯಿ ಓಡಿ ಬಂದು ಬಾಯಲ್ಲಿದ್ದ ಹಾವನ್ನು ಕಿತ್ತು ಎಸೆದಿದ್ದಾರೆ. ಬಳಿಕ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಿದ್ದಾರೆ. ಈ ವೇಳೆ ಮಗುವಿಗೆ ಯಾವುದೇ ಅಪಾಯವಿಲ್ಲ ಎನ್ನುವುದು ತಿಳಿದು ಬಂದಿದೆ. ಮಗು ಕಚ್ಚಿದ ಹಾವು ವಿಷಕಾರಿಯಾಗಿರಲಿಲ್ಲ, ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಹಾವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಬೀದರ: ಅಮೇಜಾನ್‌ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳ ತಂಡ ಅಮಾಯಕ ಡೆಲಿವರಿ ಬಾಯ್ ಮೇಲೆ‌ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಗರದ ಗೌಳಿ ಗಲ್ಲಿಯ ವಿಜಯಕುಮಾರ ಬಿಡಕರ್‌ ಹಲ್ಲೆಗೊಳಗಾದ ಡೆಲವರಿ ಬಾಯ್ ಎಂದು ಗುರುತಿಸಲಾಗಿದೆ.  ಹಿರಿಯ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡುತ್ತಿದ್ದಾಗ, ಬುದ್ದಿ ಹೇಳಿ‌ ಬಿಡಿಸಿದ ಕಾರಣಕ್ಕೆ ಇಲ್ಲಿನ‌ ಬದ್ರೋದ್ದೀನ್ ಕಾಲೋನಿಯ ಮಹಮ್ಮದ್ ಅದ್ನಾನ್‌ ಮತ್ತು ಆತನ 10ಕ್ಕೂ ಹೆಚ್ಚು ಸಹಚರರು ಈ ದುಷ್ಕೃತ್ಯ ಎಸಗಿದ್ದಾರೆ. ಮಂಗಳವಾರ ಪಾರ್ಸಲ್ ಗಳನ್ನು ಡೆಲವರಿ ಮಾಡಿ‌ ಕಚೇರಿಗೆ ‌ವಾಪಸ್ ತೆರಳುವಾಗ ಅದ್ನಾನ್‌ ಮತ್ತು ಇನ್ನಿಬ್ಬರು ವ್ಯಕ್ತಿಯೊಬ್ಬರ ಜತೆ ಜಗಳ ಆಡುತ್ತಿದ್ದರು.‌ ಇದನ್ನು ಗಮನಿಸಿ ತಡೆಯಲು ಮುಂದಾದ ವಿಜಯಕುಮಾರ‌ಗೆ ನಿಂದಿಸಿದಲ್ಲದೇ, ಹಲ್ಲೆ ಮಾಡಿದ್ದಾರೆ. ಈ ವೇಳೆ ವಿಜಯಕುಮಾರ‌ನ ಪರಿಚಿತರೊಬ್ಬರು ತಡೆದಿದ್ದಾರೆ. ಅಲ್ಲಿಂದ‌ ಕಾಲ್ಕಿತ್ತ ಅದ್ನಾನ್, ನಂತರ 10 ಕ್ಕೂ ಹೆಚ್ಚು ಯುವಕರ…

Read More

ಬೆಂಗಳೂರು: ಬೆಂಗಳೂರಿನಾದ್ಯಂತ ಶೀಘ್ರದಲ್ಲೇ ನೀರಿನ ದರ ಹೆಚ್ಚಳ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇಂದು ವಿಧಾನಸೌಧದ ಬಳಿ ನಡೆದ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸುವ ಅಭಿಯಾನಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಈ ಬಗ್ಗೆ ಅವರು ಮಾತನಾಡಿದ್ದಾರೆ. ಸಾರ್ವಜನಿಕರು ಹಾಗೂ ಮಾಧ್ಯಮದವರೂ ಎಷ್ಟೇ ಬೈದರೂ ನಾವು ನೀರಿನ ದರ ಏರಿಕೆ ಮಾಡೇ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ನೇರವಾಗಿ ಹೇಳಿದ್ದಾರೆ. ಹಲವು ವರ್ಷಗಳಿಂದ ನೀರಿನ ದರವನ್ನು ನಾವು ಹೆಚ್ಚಳ ಮಾಡಿಲ್ಲ. ನೀರಿನ ದರ ಏರಿಸುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. ನೀರಿಗೆ ಎಷ್ಟು ಖರ್ಚಾಗುತ್ತಿದೆ? ಹಾಗೂ ಎಷ್ಟು ಜನ ನೀರಿನ ಬಿಲ್ ಕಟ್ಟಿಲ್ಲ? ಎಷ್ಟು ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ ಎನ್ನುವ ಸಂಪೂರ್ಣ ಮಾಹಿತಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

Read More

ಚಾಮರಾಜನಗರ: ಸರಳ ವಿವಾಹಗಳಿಗೆ ಒತ್ತು ನೀಡುವ ಮೂಲಕ ದುಂದು ವೆಚ್ಚದ ಮದುವೆಗೆ ಕಡಿವಾಣ ಹಾಕಬೇಕಿದೆ ಎಂದು ಮುಜರಾಯಿ, ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಸಲಹೆ ಮಾಡಿದರು. ಮಹದೇಶ್ವರಬೆಟ್ಟದ ಶ್ರೀ ಮಲೈ ಮಹದೇಶ್ವರಸ್ವಾಮಿ ದೇವಸ್ಥಾನದ ರಂಗಮಂದಿರ ಆವರಣದಲ್ಲಿಂದು ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧುವರರಿಗೆ ಮಾಂಗಲ್ಯ, ವಸ್ತ್ರ ವಿತರಣೆ ಮಾಡಿ ಬಳಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಳ ವಿವಾಹಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಮೂಲಕ ಆಡಂಬರ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬಹುದು. ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಪ್ರಾಧಿಕಾರ ರಚನೆಯಾದ ಬಳಿಕ ಬೆಟ್ಟದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳಾಗಿವೆ. ಇನ್ನೂ ಸಾಕಷ್ಟು ಅಭಿವೃದ್ದಿಯಾಗಬೇಕಿರುವ ಕಾರ್ಯಗಳಿಗೆ ಹೆಚ್ಚಿನ ಗಮನ ನೀಡಿ ಅಗತ್ಯ ನೆರವು ಸಹಕಾರ ನೀಡಲಾಗುವುದು ಎಂದರು. ರಾಜ್ಯದ ಕೆಲವು ದೇವಾಲಯಗಳಿಗೆ 50 ಲಕ್ಷದಿಂದ 1 ಕೋಟಿವರೆಗೆ ಭಕ್ತರು ಭೇಟಿ ನೀಡುತ್ತಾರೆ. ಇಂತಹ ದೇವಸ್ಥಾನಗಳಲ್ಲಿ…

Read More