ತುಮಕೂರು: ಪರಮೇಶ್ವರ್ ಗೃಹ ಸಚಿವ ಸ್ಥಾನದಲ್ಲಿ ಕೆಳಗೆ ಇಳಿಯಲಿ, ಅವರು ಆ ಸ್ಥಾನದಲ್ಲಿ ಇರಲು ನಾಲಾಯಕ್, ರಾಜ್ಯ ಪಾಲರಿಗೆ ಬೆದರಿಕೆ ಇರೋ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ್ ಗೆ ಗೊತ್ತಿಲ್ಲ ಅಂತಾರೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಅಂದರೆ ಅವರು ಆ ಸ್ಥಾನದಿಂದ ಕೆಳಗೆ ಇಳಿಯಲಿ. ಅವರ ಸರ್ಕಾರ ಬೀಳಲಿ. ಆಗ ನಾವು ಹೇಳ್ತೇವೆ ಎಂದರು.
ರಾಜ್ಯದ ಪರಿಸ್ಥಿತಿ ನೋಡಿದ್ರೆ. ಗೃಹ ಸಚಿವರು ಒಂದೇ ಕಾರ್ಯಾಚರಣೆ ಮಾಡಬೇಕು. ಇಲ್ಲಾ ಅಂದರೆ ಅವರು ಆ ಸ್ಥಾನದಲ್ಲಿ ಇರಲು ನಾಲಾಯಕ್ ಎಂದರು.
ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ನಮಗೆ ರಾಜ್ಯದಲ್ಲಿ ಭಯ ಶುರುವಾಗಿದೆ ಎಂದರು.
ರಾಜ ಭವನಕ್ಕೆ ನುಗ್ಗುತ್ತೀವಿ, ಬಾಂಗ್ಲಾದೇಶದ ಹಾಗೆ ಮಾಡ್ತಿವಿ ಎಂದು ಕಾಂಗ್ರೆಸ್ ನವರು ಹೇಳುತ್ತಿರೋದ್ರಿಂದ. ಇದರಿಂದ ನಮಗೆ ಭಯ ಆಗುತ್ತಿದೆ. ಸಿದ್ದರಾಮಯ್ಯ ನೈತಿಕವಾಗಿ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದರು.
ಯಡಿಯೂರಪ್ಪರ ಮೇಲೆ ಆರೋಪ ಬಂದಾಗ ಸಿದ್ದರಾಮಯ್ಯರು ಕೊಟ್ಟ ಹೇಳಿಕೆ ನೀವೇ ನೋಡಿ. ಯಡಿಯೂರಪ್ಪನವರೇ ಸಿಎಂ ಸ್ಥಾನದಿಂದ ತೊಲಗಿ ಎಂದು ಹೇಳಿದ್ದ ಸಿದ್ದರಾಮಯ್ಯನವರೇ. ಈಗ ಯಾಕೆ ರಾಜೀನಾಮೆ ಕೊಡುತ್ತಿಲ್ಲ, ಸಿದ್ದರಾಮಯ್ಯನವರದ್ದು ನಾಲಗೆನಾ. ಅಥವಾ ಬೇರೆ ಏನೋ… ರಾಜ್ಯದ ಲ್ಲಿ ರಾಷ್ಟ್ರಪತಿ ಆಳ್ವಿಕೆ ಬಗ್ಗೆ ಚಿಂತನೆ ಇಲ್ಲ ಎಂದರು.
ನಮ್ಮ ಗಂಭೀರ ಚಿಂತನೆ ಏನಂದರೆ, ಇಡಿ, ಸಿಬಿಐ ಎಲ್ಲವೂ ಸ್ವತಂತ್ರ ಸಂಸ್ಥೆಗಳು. ಆದರೂ ಕಾಂಗ್ರೆಸ್ ನವರು ಈ ಸಂಸ್ಥೆಗಳು ಬಿಜೆಪಿ ಕೈ ಗೊಂಬೆ ಅಂತಾರಲ್ಲ. ಇದನ್ನು ನಾವು ಯೋಚನೆ ಮಾಡಬೇಕಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q