nammatumakuru

    Subscribe to Updates

    Get the latest creative news from FooBar about art, design and business.

    What's Hot

    ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌

    July 26, 2026

    ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ

    July 26, 2026

    ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್

    July 26, 2026
    Facebook Twitter Instagram
    ಟ್ರೆಂಡಿಂಗ್
    • ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌
    • ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ
    • ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್
    • ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ
    • ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳ ಆಯ್ಕೆ: ಪಾರದರ್ಶಕ ಆಯ್ಕೆ ಪ್ರಕ್ರಿಯೆ
    • ಜುಲೈ 28ರಂದು ಭಾರತ–ಜಪಾನ್ ಸಾಂಸ್ಕೃತಿಕ ವಿನಿಮಯ ಕಾರ್ಯಾಗಾರ
    • ತಿಮ್ಮಮ್ಮನಹಳ್ಳಿ ಗುಂಪು ಘರ್ಷಣೆ: 7 ಮಂದಿ ಬಂಧನ
    • ಕಾಡಂಚಿನ ಗ್ರಾಮದ ಸಾಧಕ ಜಾಕಿ ಪ್ರತಾಪ್‌ ಗೆ ‘ಅಮ್ಮ ವಸುಂಧರೆ’ ಪ್ರಶಸ್ತಿ ಗೌರವ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಆರ್ಥಿಕ ಶಿಸ್ತು ಇದ್ದರೆ ಸಹಕಾರಿ ಕ್ಷೇತ್ರ ಅಭಿವೃದ್ದಿ ಸಾಧ್ಯ: ಕೆ.ಎನ್.ರಾಜಣ್ಣ
    ಮಧುಗಿರಿ April 23, 2026

    ಆರ್ಥಿಕ ಶಿಸ್ತು ಇದ್ದರೆ ಸಹಕಾರಿ ಕ್ಷೇತ್ರ ಅಭಿವೃದ್ದಿ ಸಾಧ್ಯ: ಕೆ.ಎನ್.ರಾಜಣ್ಣ

    By adminApril 23, 2026No Comments2 Mins Read

    ಮಧುಗಿರಿ : ಯಾವುದೇ ಸಹಕಾರಿ ಬ್ಯಾಂಕುಗಳಾಗಲಿ ಆರ್ಥಿಕ ಶಿಸ್ತು, ಸಾಲ ವಸೂಲಾತಿ, ಬಡವರ ಹಾಗೂ ರೈತರ ಬಗ್ಗೆ ಅಂತಃಕರಣ ಹೊಂದಿರುವ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯೇ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಮಾಜಿ ಸಹಕಾರ ಸಚಿವರು, ಶಾಸಕರೂ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.

    ಪಟ್ಟಣದ ಕನಕ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ನಿಮ್ಮ ಈ ಕನಕಪತ್ತಿನ ಸಹಕಾರ ಸಂಘವು ಶೇ. 96 ರಷ್ಟು ಮರುಪಾವತಿಯ ದಾಖಲೆ ತೋರಿಸಿದ್ದು ಉತ್ತಮವಾಗಿದೆ. ಹಾಗೂ ಆರ್ಥಿಕ ಶಿಸ್ತನ್ನು ಇದೇ ರೀತಿ ಮುಂದುವರೆಸಿ.  ನನ್ನ ಎಲ್ಲ ರೀತಿಯ ಸಹಕಾರ ಸದಾ ಇರಲಿದೆ. ಸಾಲ ಪಡೆಯುವುದು ಸದಸ್ಯರ ಹಕ್ಕು. ಹಾಗೆಯೇ ಸಾಲ ತೀರಿಸುವುದು ಅವರ ಜವಾಬ್ದಾರಿ ಆಗಬೇಕು. ಸಹಕಾರಿ ಸಂಘದಲ್ಲಿ ಠೇವಣಿ ಜೊತೆಗೆ ಆಸ್ತಿಯನ್ನು ಮಾಡಲು ಮುಂದಾಗಬೇಕು. ಅದು ಕಷ್ಟದ ಸಮಯದಲ್ಲಿ ಸಹಾಯಕ್ಕೆ ಬರಲಿದೆ. 1 ಸಾವಿರದಿಂದ 13696 ಸದಸ್ಯರು ಷೇರು ಹಾಕಿರುವ ಸಂಘವಾಗಿದ್ದು ಶುಭವಾಗಲಿ ಎಂದರು.

    ರಾಜಕೀಯದಲ್ಲಿ ಜನಬೆಂಬಲ ಸಿಗಲು ಜಾತಿ ಹಾಗೂ ಹಣ ಮುಖ್ಯವಾಗಿರುತ್ತದೆ. ಆದರೆ ಜಿಲ್ಲೆಯಲ್ಲಿ ನಾನು ಕೇವಲ ಸಹಕಾರಿಯಾಗಿ ಈ ಮಟ್ಟಕ್ಕೆ ಬೆಳೆಯಲು ಜಿಲ್ಲೆಯ ಸಹಕಾರಿ ಕ್ಷೇತ್ರ ಕಾರಣ. ನನ್ನಲ್ಲಿ ಹಣ ಹಾಗೂ ಜಾತಿ ಎರಡೂ ಇಲ್ಲ. ಸಹಕಾರಿಯಾಗಿ ಪಡೆದ ಅಧಿಕಾರವನ್ನು ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಬಡವರ ಅಭಿವೃದ್ದಿಗೆ ಮೀಸಲಿಟ್ಟರೆ ಮಾತ್ರ ಅವನು ನಿಜವಾದ ಸಹಕಾರಿ ಆಗಬಲ್ಲ. 2004 ರಲ್ಲೇ ಬಡವರಿಗೆ,  ಅಹಿಂದ ವರ್ಗದವರಿಗೆ ಬ್ಯಾಂಕಲ್ಲಿ ಸಾಲ ಸಿಗುತ್ತಿರಲಿಲ್ಲ. ಅಂತಹ ಸಮಯದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಹಾಗೂ ಕುರಿಗಾಹಿಗಳಿಗೆ ಕಡಿಮೆ ಹಾಗೂ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ ನೀಡಿದ್ದು ನನಗೆ ಬಹಳ ತೃಪ್ತಿ ತಂದಿತ್ತು. ಆಶ್ಚರ್ಯವೆಂದರೆ ಈ ಸಾಲವು ಶೇ.100 ರಷ್ಟು ವಸೂಲಾತಿ ಆಗಿದ್ದು ಬಡವರು ಎಂದಿಗೂ ಮೋಸ ಮಾಡಲ್ಲ ಎಂಬುದು ಅರಿವಾಯಿತು ಎಂದರು.

    ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿ :

    ನನ್ನ ಜೀವನದಲ್ಲಿ ಸಹಕಾರಿ ಎಂದು ಕರೆಸಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಈ ಕ್ಷೇತ್ರದಿಂದಲೇ ನನಗೆ ಎಲ್ಲವೂ ಸಿಕ್ಕಿದ್ದು ಈ ಕ್ಷೇತ್ರದಲ್ಲಿ ಮೀಸಲಾತಿ ತರುವ ಉದ್ದೇಶದಿಂದಲೇ ಸಚಿವನಾದೆ.  ಅದರಂತೆ ಮೀಸಲಾತಿ ಕೂಡ ಜಾರಿಗೊಳಿಸಲು ಸಿದ್ಧವಾಗಿದ್ದು ಸಿಎಂ ಸಿದ್ದರಾಮಯ್ಯನವರೇ ಆ ಕೆಲಸ ಮಾಡಲಿದ್ದಾರೆ. ಅಗ ನನಗೂ ತೃಪ್ತಿ ಸಿಗಲಿದೆ ಎಂದರು.

    ಅಧ್ಯಕ್ಷತೆವಹಿಸಿದ್ದ ಸಂಘದ ಅಧ್ಯಕ್ಷ ಬಿ.ಕೆ.ಮಂಜಣ್ಣ ಮಾತನಾಡಿ, ಉತ್ತಮ ಸಹಕಾರಿಯಾಗಲು ಪಕ್ಷಭೇದ ಹಾಗೂ ಜಾತಿಭೇದ ಮಾಡಬಾರದು. ಅದರಂತೆ ಸಹಕಾರಿ ಕ್ಷೇತ್ರದಲ್ಲಿ ಕೆ.ಎನ್.ರಾಜಣ್ಣ ಕೆಲಸ ಮಾಡಿದ್ದಾರೆ. ಹಿಂದೆ ಅಹಿಂದ ವರ್ಗಕ್ಕೆ ಸಾಲ ಸಿಗದ ಕಾಲವಿತ್ತು. ಈಗ ಸಹಕಾರಿ ಕ್ಷೇತ್ರದಲ್ಲಿ ಮೀಸಲಾತಿಯನ್ನೇ ರಾಜಣ್ಣ ತಂದಿದ್ದು ಅವರಿಗೆ ಸಹಕಾರಿಗಳು ಸದಾ ಋಣಿಯಾಗಿರಬೇಕು. ಕನಕ ಪತ್ತಿನ ಸಂಘ ಹಾಲುಮತಸ್ಥರಾದ ಮಾಜಿ ಶಾಸಕ ದಾಸಪ್ಪನವರಿಂದ ಆರಂಭವಾಗಿದ್ದು ನಂಬಿಕೆಗೆ ನಾವು ಅರ್ಹರು. ಹಾಗೆಯೇ ನಾವು ಕೂಡ ರಾಜಣ್ಣನವರಂತೆ ಸಹಕಾರಿ ಮನೋಭಾವ ಬೆಳೆಸಿಕೊಂಡು ನೊಂದವರ ಬದುಕಲ್ಲಿ ದೀಪ ಹಚ್ಚುವ ಕೆಲಸ ಮಾಡೋಣ ಎಂದರು.

    ಪರಿಷತ್‌ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕ‌ರ್ ಮಾತನಾಡಿ ಕನಕ ಪತ್ತಿನ ಸಹಕಾರ ಸಂಘವು 25ನೇ ವಸಂತಕ್ಕೆ ಕಾಲಿಟ್ಟಿದ್ದು 8 ಶಾಖೆಗಳನ್ನು ಹೊಂದಿದೆ. ಇದಕ್ಕೆ ಜನರ ನಂಬಿಕೆ ಕಾರಣವಾಗಿದ್ದು ಮಧುಗಿರಿಯಲ್ಲೂ ಯಶಸ್ವಿಯಾಗಲಿ ಎಂದರು.

    1904 ರಲ್ಲೇ ಗಡುಗಿನಾಳದಲ್ಲಿ ಸಿದ್ದರಾಮನಗೌಡ, ಎಸ್.ಎಸ್.ಪಾಟೀಲ್, ಸಣ್ಣರಾಮನಗೌಡ ಸಹೋದರರು ಮೊದಲು ಇಂತಹ ಪತ್ತಿನ ಸಹಕಾರ ಸಂಘದ ಜನಕರಾಗಿದ್ದು 2 ರೂ. ಗಳಿಂದ ಸಾಲ ಸೌಲಭ್ಯ ಕೊಡಲು ಮುಂದಾಗಿ ಇಂದು ಇಡೀ ದೇಶದಲ್ಲಿ ಪ್ರಾಥಮಿಕ ಸಹಕಾರ ಸಂಘವು ನಡೆಯುತ್ತಿದೆ.

     — ಕೆ.ಎನ್.ರಾಜಣ್ಣ, ಶಾಸಕರು.

    ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕಡೇ ಮನೆ ರವಿಕುಮಾರ್, ಸಿಇಓ ಲಕ್ಷ್ಮಣ್, ನಿರ್ದೇಶಕರು ಹಾಗೂ ಮುಖಂಡರಾದ ಲಕ್ಷ್ಮೀಪತಿ, ಎಸ್.ನಾಗಣ್ಣ, ಡಾ.ಎಂ.ಜಿ. ಶ್ರೀನಿವಾಸಮೂರ್ತಿ, ಮರಿಯಣ್ಣ, ಗೇಟ್ ಶಿವಣ್ಣ, ಕಮ್ಮನಕೋಟೆ ಶಿವಣ್ಣ, ಮಹಾಲಿಂಗೇಶ್, ಲಕ್ಷ್ಮೀ. ನರಸಿಂಹಯ್ಯ, ಮಂಜುನಾಥ್ ಹಾಗೂ ಇತರರಿದ್ದರು.

    ವರದಿ: ಮಂಜುಸ್ವಾಮಿ ಎಂ.ಎನ್.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಬದುಕು ಉಜ್ವಲವಾಗಲು ಶಿಕ್ಷಣವೇ ಮುಖ್ಯ ಅಸ್ತ್ರ: ಶಾಸಕ ಕೆ.ಎನ್‌. ರಾಜಣ್ಣ ಕರೆ

    July 19, 2026

    ಒಕ್ಕಲೆಬ್ಬಿಸಿದರೆ ಸಾಕೇ? ರೈತರಿಗೆ ಪರ್ಯಾಯ ಭೂಮಿ ನೀಡಿ: ಸರ್ಕಾರಕ್ಕೆ ರೈತ ಸಂಘ ಒತ್ತಾಯ

    July 14, 2026

    ಮಧುಗಿರಿ: ಬೀದಿ ನಾಯಿಗಳ ದಾಳಿಗೆ 24 ಕುರಿ ಸಾವು

    July 10, 2026

    Leave A Reply Cancel Reply

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್‌

    July 26, 2026

    ತುಮಕೂರು: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಜವಾಬ್ದಾರಿ ಹೊತ್ತು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದು ಸ್ವಾಗತಾರ್ಹ. ರಾಷ್ಟ್ರೀಯ…

    ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ

    July 26, 2026

    ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್

    July 26, 2026

    ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳ ಆಯ್ಕೆ

    July 26, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.