Subscribe to Updates
Get the latest creative news from FooBar about art, design and business.
- KPSCಯಲ್ಲಿ 400 ಹುದ್ದೆಗಳಿಗೆ 800 ಕೋಟಿ ರೂ. ಡೀಲ್: ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ
- ಲೈಂಗಿಕ ಬೇಡಿಕೆ ಈಡೇರಿಸದಿದ್ದರೆ ಮಹಿಳೆಯ ವಿಡಿಯೋ ವೈರಲ್ ಬೆದರಿಕೆ: ವ್ಯಕ್ತಿಯ ಬಂಧನ, ಆತನ ಪತ್ನಿಯ ವಿರುದ್ಧವೂ ಪ್ರಕರಣ ದಾಖಲು
- ಸಿದ್ದರಾಮಯ್ಯ ಚುನಾವಣಾ ರಾಜಕೀಯದಲ್ಲೇ ಉಳಿಯಲು ಮನವೊಲಿಸುತ್ತೇವೆ: ಶಾಸಕ ಕೆ.ಎಂ. ಶಿವಲಿಂಗೇಗೌಡ
- ಕರ್ನಾಟಕ ರಾಜ್ಯ ನಾಯಕ ಹಿತರಕ್ಷಣಾ ವೇದಿಕೆ: ರಾಜ್ಯ ಉಪಾಧ್ಯಕ್ಷರಾಗಿ ಎಂ. ದಾಸಪ್ಪ ಆಗತ್ತೂರು ನೇಮಕ
- ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ದ್ರೋಹ ಬಗೆದ ಸರ್ಕಾರ!
- ಅಕ್ರಮ ಸಾರಾಯಿ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಿ: ಗೌತಮ್ ಪಿ. ಮೇತ್ರೆ ಆಗ್ರಹ
- ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್
- ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ
Author: admin
ಮಣಿಪುರ ಮುಖ್ಯಮಂತ್ರಿ ಬಂಗಲೆಯ ಸಮೀಪ ಅಗ್ನಿ ಅವಘಡ ಸಂಭವಿಸಿರುವ ಬಗ್ಗೆ ಶನಿವಾರ ವರದಿಯಾಗಿದೆ. ಮಣಿಪುರ ರಾಜಧಾನಿ ಇಂಫಾಲದಲ್ಲಿರುವ ವಿಧಾನಸಭಾ ಕಟ್ಟಡದ ಪಕ್ಕದಲ್ಲೇ ಇರುವ ಕಟ್ಟಡವೊಂದರಲ್ಲಿ ಶನಿವಾರ ಭಾರೀ ಬೆಂಕಿ ಕಾಣಿಸಿದೆ. ಮುಖ್ಯಮಂತ್ರಿ ಮನೆಯ ಸಮೀಪದಲ್ಲೇ ಈ ಅವಘಡ ಸಂಭವಿಸಿದೆ. ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರ ಅಧಿಕೃತ ನಿವಾಸದ ಬಳಿಯಿರುವ ಮಣಿಪುರ ಸಚಿವಾಲಯದ ಸಂಕೀರ್ಣದಲ್ಲಿರುವ ಕಟ್ಟಡದಲ್ಲಿ ಶನಿವಾರ ಸಂಜೆ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿಯನ್ನು ನಂದಿಸಲು ಕನಿಷ್ಠ ಮೂರು ಅಗ್ನಿಶಾಮಕಗಳನ್ನು ಬಳಸಲಾಯಿತು. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಉಗ್ರರ ಕೈವಾಡವನ್ನು ಶಂಕಿಸಲಾಗಿದೆ. STORY | Major fire breaks out near Manipur CM’s bungalow READ: https://t.co/YYzrooXlSV VIDEO: (Full video available on PTI Videos – https://t.co/n147TvqRQz) pic.twitter.com/BOapiMRse3 — Press Trust of India (@PTI_News) June 15, 2024 ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ದರ್ಶನ್ ಆಂಡ್ ಗ್ಯಾಂಗ್ ಕ್ರೂರವಾಗಿ ಕೊಲೆ ಮಾಡಿರುವ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಪರ ವಾದ ಮಾಡಲು ವಿಶೇಷ ಅಭಿಯೋಜಕರನ್ನಾಗಿ (SPP) ದಕ್ಷ ಹಿರಿಯ ವಕೀಲರೊಬ್ಬರನ್ನು ರಾಜ್ಯ ಸರ್ಕಾರವೇ ನೇಮಕ ಮಾಡಿದೆ. ಭೀಕರವಾಗಿ ದರ್ಶನ್ ಆಂಡ್ ಗ್ಯಾಂಗ್ ನಿಂದ ಕೊಲೆಯಾಗಿದ ರೇಣುಕಾಸ್ವಾಮಿಗೆ ನ್ಯಾಯ ಒದಗಿಸಲು ವಿಶೇಷ ಅಭಿಯೋಜಕರನ್ನಾಗಿ ಪಿ.ಪ್ರಸನ್ನ ಕುಮಾರ್ ಅವರನ್ನು ನಿಯೋಜನೆ ಮಾಡಲಾಗಿದೆ. ಹತ್ಯೆಗೀಡಾದ ರೇಣುಕಾಸ್ವಾಮಿ ಪರ ನೇಮಕವಾದ ಈ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಸನ್ನ ಕುಮಾರ್ ಸಾಮಾನ್ಯ ವಕೀಲರೇನೂ ಅಲ್ಲ. ಪ್ರಸ್ತುತವಾಗಿ ಕೇಂದ್ರೀಯ ತನಿಖಾ ದಳ (CBI), ಜಾರಿ ನಿರ್ದೇಶನಾಲಯ (ED) ಹಾಗೂ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ವಹಿಸಿಕೊಂಡಿದ್ದ ಕೆಲವು ಘಟನೆಗಳಲ್ಲಿ ವಿಶೇಷ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ರೇಣುಕಾಸ್ವಾಮಿ ಕೊಲೆ ಕೇಸಿಗೆ SPP ಆಗಿ ಸರ್ಕಾರ ನೇಮಕವಾಗಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್…
ಅಶ್ವಿನ್ ವೈಷ್ಣವ್ ಅವರು ರೈಲ್ವೇ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ರೈಲ್ವೇ ಇಲಾಖೆ ಅಧಿಕಾರಿಗಳ ಜೊತೆ ಉನ್ನತ ಸಭೆ ನಡೆಸಿದ್ದು, ಮಹತ್ವದ ಹೇಳಿಕೆ ನೀಡಿದ್ದಾರೆ. ಇನ್ನು ಭಾರತೀಯ ರೈಲ್ವೇಯಲ್ಲಿ ಮಹತ್ತರ ಬದಲಾವಣೆ ತರಲಾಗುತ್ತಿದೆ. ಪ್ರಮುಖವಾಗಿ 2032ರ ವೇಳೆಗೆ ಭಾರತೀಯ ರೈಲ್ವೇ ಸಂಪೂರ್ಣ ಬದಲಾಗಲಿದೆ. ಟಿಕೆಟ್ ಬುಕಿಂಗ್, ಟಿಕೆಟ್ ಕನ್ ಫರ್ಮ್ ಸುಲಭ. ರೈಲು ಪ್ರಯಾಣ ಆರಾಮದಾಯಕವಾಗಲಿದೆ. ಕಿಕ್ಕಿರಿದು ತುಂಬಿದ ರೈಲುಗಳು ಇರುವುದಿಲ್ಲ. ಕಾರಣ ರೈಲು ಸಂಖ್ಯೆ, ಸೇವೆ ಹೆಚ್ಚಿಸಲಾಗುತ್ತಿದೆ. ರೈಲು ಪ್ರಯಾಣಿಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 40 ಮಿಲಿಯನ್ ಪ್ರಯಾಣಿಕರು ಕೇವಲ ಬೇಸಿಗೆಯಲ್ಲಿ ಪ್ರಯಾಣಿಸಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ. ಪ್ರಯಾಣಿಕರು ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಲಾಗುತ್ತಿದೆ. ಭಾರತದ ಮೂಲೆ ಮೂಲೆಗೆ ರೈಲು ಸೇವೆಗಳನ್ನು ನೀಡಲಾಗುತ್ತದೆ. ಯಾವುದೇ ವೈಟಿಂಗ್ ಲಿಸ್ಟ್ ಗೆ ಕಾಯದೇ ಸೀಟುಗಳನ್ನು ರಿಸರ್ವ್ ಮಾಡಲು ಸಾಧ್ಯವಿದೆ. 2032ರ ವೇಳೆಗೆ ಭಾರತೀಯ ರೈಲ್ವೇ ಸಂಪೂರ್ಣ ಬದಲಾಗಲಿದೆ. ಆಧುನಿಕತೆ ಪಡೆದುಕೊಳ್ಳಲಿದೆ ಎಂದಿದ್ದಾರೆ. ನಮ್ಮತುಮಕೂರಿನ…
ಅನೇಕ ಜನರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಅವುಗಳಿಗೆ ಸಂಬಂಧಿಸಿದ ವಿವಿಧ ಆಹಾರಗಳೂ ಇವೆ. ಅವರು ತಮ್ಮ ರುಚಿಗೆ ಅನುಗುಣವಾಗಿ ತಿನ್ನುತ್ತಾರೆ. ಭಾರತದಲ್ಲಿ ಅನೇಕ ರೀತಿಯ ಆಹಾರ ಪಾಕಪದ್ಧತಿಗಳಿವೆ. ಕೆಲ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ವಿವಿಧ ಸಮಸ್ಯೆಗಳು ಉಂಟಾಗುತ್ತಿರುವುದನ್ನು ಗಮನಿಸಿದ ಎಫ್ ಎಸ್ ಎಸ್ ಎಐ ಈ ಆಹಾರಗಳನ್ನು ನಿಷೇಧಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಸಂಘ (ಎಫ್ ಎಸ್ ಎಸ್ ಎಐ) ಭಾರತದಲ್ಲಿ ಕೆಲವು ರೀತಿಯ ಆಹಾರಗಳನ್ನು ನಿಷೇಧಿಸಿದೆ. ಎಫ್ ಎಸ್ ಎಸ್ ಎಐ ಭಾರತದಲ್ಲಿ ಆನುವಂಶಿಕವಾಗಿ ಮಾರ್ಪಡಿಸಿದ ಆಹಾರಗಳನ್ನು ನಿಷೇಧಿಸಿದೆ. ಪೊಟ್ಯಾಸಿಯಮ್ ಬ್ರೋಮೇಟ್ ಹೊಂದಿರುವ ಆಹಾರಗಳನ್ನು ಎಫ್ ಎಸ್ ಎಸ್ ಎಐ 2016 ರಲ್ಲಿ ನಿಷೇಧಿಸಿತು. ಮಿಶ್ರ ಆಹಾರವನ್ನು ಸೇವಿಸುವುದು ಇದಕ್ಕೆ ಕಾರಣ. ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಪೊಟ್ಯಾಸಿಯಮ್ ಬ್ರೋಮೇಟ್ ಬೆರೆಸಿದ ಬ್ರೆಡ್ ತಿನ್ನುವುದು. ಥೈರಾಯ್ಡ್ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ ಹೀಗಾಗಿ ಇವುಗಳನ್ನು ನಿಷೇಧಿಸಲಾಗಿದೆ ಚೈನೀಸ್ ಹಾಲು: ಚೀನಾದ ಹಾಲಿನ ಉತ್ಪನ್ನಗಳಲ್ಲಿ ಪ್ರೋಟೀನ್…
ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಲ್ಲೇ ಜನರು ಕಲುಷಿತ ನೀರು ಕುಡಿದು ಮೃತಪಟ್ಟಿದ್ದಾರೆ. ಟ್ಯಾಂಕರ್ ಗಳನ್ನು ಸ್ವಚ್ಛಗೊಳಿಸಲು ಸರಕಾರದ ಬಳಿ ಹಣವಿಲ್ಲ. ಜನರಿಗೆ ಶುದ್ಧ ಕುಡಿಯುವ ನೀರು ನೀಡುವ ಯೋಗ್ಯತೆ ಕೂಡ ಈ ಸರಕಾರಕ್ಕಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನಡಿ ಅವರ ಕ್ಷೇತ್ರ ವರುಣದಲ್ಲಿ ಕಲುಷಿತ ನೀರನ್ನು ಜನರು ಸೇವಿಸಿ ಸಾವಿಗೀಡಾಗಿದ್ದಾರೆ. ಅಂದರೆ ಮುಖ್ಯಮಂತ್ರಿಗಳಿಗೆ ಕುಡಿಯುವ ನೀರು ನೀಡುವ ಯೋಗ್ಯತೆ ಇಲ್ಲ ಎಂದು ಟೀಕಿಸಿದರು. ಈಗ ತುಮಕೂರಿನಲ್ಲೂ ಕಲುಷಿತ ನೀರು ಸೇವಿಸಿ ಆರು ಜನರ ಸಾವಾಗಿದೆ. ಇದಕ್ಕೆ ಜಿಲ್ಲಾಧಿಕಾರಿಯನ್ನು ಕೇಳಿದರೆ ಮೂತ್ರಪಿಂಡ ಸಮಸ್ಯೆ ಎನ್ನುತ್ತಾರೆ. ಆರೋಗ್ಯ ಸಮಸ್ಯೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಅದನ್ನೆ ಸಬೂಬು ಮಾಡಬಾರದು. ಈ ಕುರಿತು ವರದಿ ಕೇಳಿದ್ದೇನೆ. ಕೊಪ್ಪಳದಲ್ಲಿಯೂ ಜನರು ಕಲುಷಿತ ನೀರು ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಶಾಸಕರು ಅನುದಾನ ಕೇಳಿದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಾಯಿ ಮುಚ್ಚಿಕೊಂಡು ಸುಮ್ಮನಿರಿ ಎಂದಿದ್ದಾರೆ.…
ರಾಜ್ಯದಲ್ಲಿ ಗ್ಯಾರೆಂಟಿ, ಗ್ಯಾರೆಂಟಿ ಎಂದು ಬಾಯಿ ಬಡಿದುಕೊಳ್ಳೋ ಕಾಂಗ್ರೆಸ್ ಸರಕಾರ ಈಗ ತೈಲ ಬೆಲೆ ಏರಿಸುವ ಮೂಲಕ ಜನರ ಕೈಗೆ ಅಕ್ಷರಶಃ ಚೊಂಬು ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಲೆ ಏರಿಕೆ ಬಗ್ಗೆ ಉದ್ದುದ್ದ ಭಾಷಣ ಬಿಗಿದು, ಕೇಂದ್ರ ಸರಕಾರದತ್ತ ಬೊಟ್ಟು ಮಾಡಿ ಜನರ ದಿಕ್ಕು ತಪ್ಪಿಸುತ್ತ ಬಂದಿರುವ ರಾಜ್ಯ ಕಾಂಗ್ರೆಸ್ ಸರಕಾರ ಈಗ ರಾಜ್ಯದ ಜನಸಾಮಾನ್ಯರಿಗೆ ತಾನೇ ಬೆಲೆ ಏರಿಕೆ ಬಿಸಿ ತಟ್ಟಿಸಿದೆ ಎಂದು ಕಿಡಿಕಾರಿದರು. ಕೇಂದ್ರ ಸರಕಾರ ಇಂಧನ ಬೆಲೆ ಕಡಿಮೆ ಮಾಡಿದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಏಕಾಏಕಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿ ಜನರಿಗೆ ಹೊರೆ ಮಾಡಿದೆ. ಕಾಂಗ್ರೆಸ್ ಸರಕಾರ ರಾಜ್ಯಕ್ಕೆ ಭ್ರಷ್ಟಾಚಾರ, ದುರಾಡಳಿತ, ರೈತರ ಆತ್ಮಹತ್ಯೆ, ಹಗರಣಗಳ ಭಾಗ್ಯಗಳನ್ನು ನೀಡಿದೆಯೇ ಹೊರತು ಜನರ ಪಾಲಿಗೆ ಭಾಗ್ಯಶಾಲಿಯಾಗಿ ಉಳಿದಿಲ್ಲ ಎಂದು ಅವರು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ವಹಿಸಿಕೊಂಡಾಗಿನಿಂದ ಅಭಿವೃದ್ಧಿ ಕಾರ್ಯಗಳನ್ನೆ ಕೈಗೊಂಡಿಲ್ಲ. ಈಗ ನೇರವಾಗಿ…
ನವದೆಹಲಿ: ಕರಾಳ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿತರಾಗಿರುವ ಮುಸ್ಲಿಮರು, ಆದಿವಾಸಿಗಳು ಮತ್ತು ದಲಿತರ ಭವಿಷ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಈ ಚುನಾವಣಾ ಫಲಿತಾಂಶದಿಂದಲೂ ಮೋದಿ ಸರ್ಕಾರ ಪಾಠ ಕಲಿತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. “ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆ ಫಲಿತಾಂಶದಿಂದ ಪಾಠ ಕಲಿಯುತ್ತಾರೆ ಎಂಬ ನಿರೀಕ್ಷೆ ನನಗಿತ್ತು. ಆದರೆ ಇದಕ್ಕೆ ತಣ್ಣೀರೆರಚಿದ್ದಾರೆ” ಎಂದು ಹೈದರಾಬಾದ್ ಸಂಸದ ಶನಿವಾರ ಅಭಿಪ್ರಾಯಪಟ್ಟರು. “ಯುಎಪಿಎ ಕಾನೂನು ಇಂದು ಮತ್ತೆ ಸುದ್ದಿಯಲ್ಲಿದೆ. ಇದು ಅತ್ಯಂತ ನಿರ್ದಯ ಕಾನೂನು ಆಗಿದ್ದು, ಇದರಡಿ ಸಾವಿರಾರು ಮಂದಿ ಮುಸ್ಲಿಮರು, ದಲಿತರು ಮತ್ತು ಆದಿವಾಸಿಗಳನ್ನು ಜೈಲಿಗೆ ಕಳುಹಿಸಲಾಗಿದ್ದು, ಅವರ ಬದುಕು ನಾಶವಾಗಿದೆ” ಎಂದು ಓವೈಸಿ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. 85 ವರ್ಷದ ಸ್ಟ್ಯಾನ್ ಸ್ವಾಮಿಯವರ ಸಾವಿಗೆ ಈ ಕರಾಳ ಕಾನೂನು ಕಾರಣ ಎಂದು ಓವೈಸಿ ಆಪಾದಿಸಿದ್ದಾರೆ. ಆದಿವಾಸಿ ಹಕ್ಕುಗಳ ಹೋರಾಟಗಾರ ಸ್ವಾಮಿ…
ಲಂಡನ್: ಬ್ರಿಟನ್ ನಲ್ಲಿ ಜುಲೈ 4ರಂದು ನಡೆಯುವ ಚುನಾವಣೆಯಲ್ಲಿ ಪ್ರಧಾನಿ ರಿಷಿ ಸುನಾಕ್ ನೇತೃತ್ವದ ಕನ್ಸರ್ವೇಟಿವ್ ಪಕ್ಷಕ್ಕೆ ಹೀನಾಯ ಸೋಲು ಎದುರಾಗಲಿದ್ದು, ಪಕ್ಷ ವಿನಾಶದ ಅಂಚಿಗೆ ತಲುಪುವ ನಿರೀಕ್ಷೆ ಇದೆ ಎಂದು ಶನಿವಾರ ಬಿಡುಗಡೆ ಮಾಡಲಾದ ಚುನಾವಣಾ ಪೂರ್ವ ಸಮೀಕ್ಷೆಯ ಫಲಿತಾಂಶವೊಂದು ವಿವರಿಸಿದೆ. ಚುನಾವಣೆ ಘೋಷಣೆ ಬಳಿಕ ಪ್ರಚಾರ ಕಾರ್ಯ ಅರ್ಧದ ಹಂತಕ್ಕೆ ತಲುಪಿದ್ದು, ಕನ್ಸರ್ವೇಟಿವ್ ಮತ್ತು ಲೇಬರ್ ಪಕ್ಷಗಳು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಒಂದು ವಾರದಲ್ಲಿ ಮತ್ತು ಮತದಾರರು ಶೀಘ್ರದಲ್ಲೇ ಅಂಚೆ ಮತಪತ್ರಗಳನ್ನು ಪಡೆಯುವ ಸಂದರ್ಭದಲ್ಲಿ ಈ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಮೇ 22ರಂದು ಅವಧಿಪೂರ್ವ ಚುನಾವಣೆ ಘೋಷಿಸುವ ಮೂಲಕ ಸುನಾಕ್ ಸ್ವಪಕ್ಷೀಯರಲ್ಲೇ ಅಚ್ಚರಿ ಮೂಡಿಸಿದ್ದರು. 40 ವರ್ಷಗಳಲ್ಲೇ ಗರಿಷ್ಠ ಹಣದುಬ್ಬರವನ್ನು ಕಂಡ ದೇಶದಲ್ಲಿ ಜೀವನಮಟ್ಟ ಸುಧಾರಿಸುವ ವರೆಗೆ ಅಂದರೆ ಈ ವರ್ಷದ ಅಂತ್ಯದವರೆಗೆ ಚುನಾವಣೆಯನ್ನು ಮುಂದೂಡಲಿದ್ದಾರೆ ಎಂಬ ನಿರೀಕ್ಷೆ ವ್ಯಾಪಕವಾಗಿ ಇತ್ತು. ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಸವಂತಾ ಸಮೀಕ್ಷೆ ಪ್ರಕಾರ ಶೇಕಡ 46ರಷ್ಟು ಮಂದಿ ಕೀರ್ ಸ್ಟಾರ್ಮರ್…
ಚಿಕ್ಕಮಗಳೂರು: ಇ–ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ಮತ್ತಷ್ಟು ಹಣ ಪೀಕಲು ಪ್ಲಾನ್ ಮಾಡಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಚಿಕ್ಕಮಗಳೂರು ನಗರಸಭೆ ವಾರ್ಡ್ 2ರ ಬಿಲ್ ಕಲೆಕ್ಟರ್ ಪ್ರದೀಪ್ ಸಿಕ್ಕಿಬಿದ್ದಿದ್ದಾನೆ. ಸದಾಶಿವಮೂರ್ತಿ ಎಂಬುವವರ ಬೈಪಾಸ್ ರಸ್ತೆಯ ಜಾಗದ ಇ–ಸ್ವತ್ತು ಮಾಡಿಕೊಡಲು ಚಿಕ್ಕಮಗಳೂರು ನಗರಸಭೆ ವಾರ್ಡ್2 ಬಿಲ್ ಕಲೆಕ್ಟರ್ ಪ್ರದೀಪ್ ಲಂಚ ಪಡೆಯುವ ವೇಳೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾನೆ. ಸದಾಶಿವಮೂರ್ತಿ ಮಗ ರಾಕೇಶ್ ನೀಡಿದ ದೂರಿನ ಮೇರೆಗೆ ಇಂದು ಕಾರ್ಯಾಚರಣೆ ನಡೆಸಿದ ಲೋಕಾ ಇನ್ಸ್‌ಪೆಕ್ಟರ್ ಅನಿಲ್ ರಾಥೋಡ್ ಹಾಗೂ ಮಲ್ಲಿಕಾರ್ಜುನ ನೇತೃತ್ವದ ತಂಡ ಪ್ರದೀಪ್ ನನ್ನು ನಗರಸಭೆ ಕಚೇರಿ ಎದುರು ಬಂಧಿಸಿದ್ದಾರೆ ಫೋನ್ ಪೇ ಮೂಲಕ ರಾಕೇಶ್ ಮೊಬೈಲ್ ನಿಂದ ಮೊದಲಿಗೆ 3,000 ಹಾಕಿಸಿಕೊಂಡಿದ್ದ ಪ್ರದೀಪ್ ನಂತರ ನಗದು 2,000 ಹಾಗೂ ಇದೀಗ ಮತ್ತೆ 2,000 ಕ್ಕೆ ಬೇಡಿಕೆ ಇಟ್ಟಿದ್ದು ಅದನ್ನು ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಕಾರ್ಯಾಚರಣೆ ತಂಡದಲ್ಲಿ ಲೋಕಾಯುಕ್ತ ಪೊಲೀಸರಾದ…
ವಿದ್ಯುತ್ ಶಾಕ್ ನಿಂದ 7ನೇ ತರಗತಿ ಬಾಲಕ ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ. ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಆಕಾಶ್ (13) ಮೃತ ದುರ್ದೈವಿ ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಮರ ಹತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ನೇರಳೆ ಹಣ್ಣು ಕೀಳಲು ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು ಮರದಿಂದ ಜಾರಿ ಬೀಳುವಾಗ ವಿದ್ಯುತ್ ತಂತಿ ಹಿಡಿದ ಬಾಲಕ ವಿದ್ಯುತ್ ಶಾಕ್ ನಿಂದ ಕೆಳಗೆ ಬಿದ್ದಿದ್ದಾನೆ. ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA