Subscribe to Updates
Get the latest creative news from FooBar about art, design and business.
- ಕೇಂದ್ರ ಶಿಕ್ಷಣ ಸಚಿವರ ರಾಜಿನಾಮೆ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ದ್ರೋಹ ಬಗೆದ ಸರ್ಕಾರ!
- ಅಕ್ರಮ ಸಾರಾಯಿ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಿ: ಗೌತಮ್ ಪಿ. ಮೇತ್ರೆ ಆಗ್ರಹ
- ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್
- ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ
- ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀರಿಳಿಸಲು ಬಿಜೆಪಿ–ಜೆಡಿಎಸ್ ಸಜ್ಜು: ಬಿ.ವೈ.ವಿಜಯೇಂದ್ರ
- ತುಮಕೂರು: ನಡುರಸ್ತೆಯಲ್ಲೇ ರೌಡಿಶೀಟರ್ ಮಲ್ಲ ಬರ್ಬರ ಹತ್ಯೆ!
- ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್
- ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ
Author: admin
ತುಮಕೂರು: ಖಾಸಗಿ ಕಾಲೇಜುಗಳ ಸರ್ಕಾರಿ ಕೋಟಾದಲ್ಲಿ 96,574 ರೂ ಗಳಿಂದ 1,06,231 ರೂ.ಗಳ ವರೆಗೆ ಶುಲ್ಕ ಏರಿಸಿದ್ದು, ಟೈಪ್-1 ಕಾಲೇಜುಗಳಲ್ಲಿ 1.69 ಲಕ್ಷ ರೂ.ಗಳಿಂದ 1.86ಲಕ್ಷ ರೂಗಳವರೆಗೆ ಹಾಗೂ ಟೈಪ್-2 ಕಾಲೇಜುಗಳಲ್ಲಿ 2.37 ಲಕ್ಷ ರೂಗಳಿಂದ 2.61 ಲಕ್ಷ ರೂ.ಗಳವರೆಗೆ ಶುಲ್ಕ ಏರಿಸಲಾಗಿದೆ ಇದು ಖಂಡನೀಯ ಎಂದು ಎಐಡಿಎಸ್ ಓ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಸಿ. ಬಿ. ಹೇಳಿದ್ದಾರೆ. ಈಗಾಗಲೇ ಯಾವುದೇ ಅಡೆ–ತಡೆ ಇಲ್ಲದೇ ಮ್ಯಾನೇಜ್ಮೆಂಟ್ ಕೋಟಾ ಅಡಿಯಲ್ಲಿ ಬರುವ ಶುಲ್ಕವನ್ನು ಮನಸೋಇಚ್ಛೆ ಖಾಸಗಿ ಕಾಲೇಜುಗಳು ಏರಿಸುತ್ತಿವೆ. ಬೆಂಗಳೂರಿನ ಕಾಲೇಜು ಒಂದರಲ್ಲಿ ಮ್ಯಾನೇಜ್ಮೆಂಟ್ ಸೀಟಿನ ಶುಲ್ಕ 26 ಲಕ್ಷದಷ್ಟಿದೆ. ಇಂತಹ ಸಂದರ್ಭದಲ್ಲಿ, ಸರ್ಕಾರದ ನಿಯಂತ್ರಣದ ಕೆಳಗೆ ಬರುವ ಶುಲ್ಕವನ್ನಾದರೂ ಏರಿಸದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಈ ರೀತಿ ಪ್ರತಿ ವರ್ಷ ಶೈಕ್ಷಣಿಕ ಶುಲ್ಕ ಏರಿಕೆ, ಶಿಕ್ಷಣವನ್ನು ಸಂಪೂರ್ಣವಾಗಿ ವ್ಯಾಪಾರೀ ವಹಿವಾಟಿನಂತೆ ಮಾಡಲು ಸರ್ಕಾರವೇ ಅನುಮತಿ ನೀಡುತ್ತಿದೆ. ಇದು ಅತ್ಯಂತ ದುರಾದೃಷ್ಟಕರ ಎಂದು ಅವರು ಹೇಳಿದ್ದಾರೆ. ಖಾಸಗೀ ಕಾಲೇಜುಗಳಲ್ಲಿ, ಇಂಜಿನಿಯರಿಂಗ್ ಶಿಕ್ಷಣ ಪಡೆಯುವುದು…
ಖಾದ್ಯವೊಂದು ಮನುಷ್ಯರ ಜೀವ ತೆಗೆಯೋಕೆ ಸಾಧ್ಯನಾ.? ಹೌದು, ಸಿಕ್ಕ ಸಿಕ್ಕದನ್ನೆಲ್ಲಾ ತಿನ್ನುವ ಜನರು ಕೊಂಚ ಹುಷಾರಾಗಿರ್ಬೇಕು. ಯಾಕಂದ್ರೆ, ಈ ಒಂದು ಖಾದ್ಯ ಇದುವರೆಗೂ 20 ಸಾವಿರ ಜನರ ಜೀವ ತೆಗೆದುಬಿಟ್ಟಿದೆ. ಈ ಖಾದ್ಯದ ಹೆಸ್ರು ಕೋಯಿ ಪ್ಲಾ(koi pla) ಮಸಾಲೆಗಳು ಮತ್ತು ಸುಣ್ಣದೊಂದಿಗೆ ಕಚ್ಚಾ ಮೀನುಗಳಿಂದ ಮಾಡಿದ ಸ್ಥಳೀಯ ಖಾದ್ಯವಿದು. ಇದು ಯಕೃತ್ತಿನ ಕ್ಯಾನ್ಸರ್’ಗೆ ಕಾರಣವಾಗುತ್ತೆ ಅನ್ನೋ ಅಘಾತಕಾರಿ ಅಂಶ ಸಧ್ಯ ಬೆಳಕಿಗೆ ಬಂದಿದೆ. ಇದು ಅಗ್ಗದಲ್ಲಿ ಸಿಗುವ ಮತ್ತು ರುಚಿಕರ ಊಟವಾಗಿದೆ. ಆದ್ರೆ, ಇದು ಮಾರಣಾಂತಿಕ ಪಿತ್ತಜನಕಾಂಗದ ಕ್ಯಾನ್ಸರ್ಗೆ ಕಾರಣವಾಗಬಹುದು. ಇನ್ನೀದು ವಾರ್ಷಿಕವಾಗಿ ಸರಿಸುಮಾರು 20,000 ಥಾಯ್ ಜನರನ್ನ ಕೊಲ್ಲುತ್ತಿದೆ. ಒಮ್ಮೆ ತಿಂದ ನಂತರ, ಹುಳುಗಳು ಪಿತ್ತರಸ ನಾಳಗಳಲ್ಲಿ ವರ್ಷಗಳವರೆಗೆ ಪತ್ತೆಯಾಗದೆ ಹುದುಗುತ್ತವೆ. ಇನ್ನೀದು ಉರಿಯೂತವನ್ನ ಉಂಟು ಮಾಡುತ್ತಾ, ಕಾಲಾನಂತರದಲ್ಲಿ ಆಕ್ರಮಣಕಾರಿ ಕ್ಯಾನ್ಸರ್ ಪ್ರಚೋದಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…
ಜುಲೈ 1 ರಿಂದ ಎಟಿಎಂನಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ. ಭಾರತದಲ್ಲಿ ಹೆಚ್ಚಿನ ಜನರು ಹಣವನ್ನು ವಿತ್ ಡ್ರಾ ಮಾಡಲು ಎಟಿಎಂ ಬಳಸುತ್ತಾರೆ ಆದರೆ ಜುಲೈ 1 ರಿಂದ ಬ್ಯಾಂಕ್ ಶಾಖೆಯಿಂದ ಹಣವನ್ನು ಹಿಂಪಡೆಯುವುದು ದುಬಾರಿಯಾಗಲಿದೆ. ಎಟಿಎಂ ನಿರ್ವಾಹಕರು ಇಂಟರ್ಚೇಂಜ್ ಶುಲ್ಕವನ್ನು ಹೆಚ್ಚಿಸಲು ಒತ್ತಾಯಿಸಿದ್ದಾರೆ. ಇಂಟರ್ಚೇಂಜ್ ಶುಲ್ಕವು ಎಟಿಎಂಗಳಿಂದ ಹಣವನ್ನು ಹಿಂಪಡೆಯುವಾಗ ಗ್ರಾಹಕರು ಪಾವತಿಸುವ ಶುಲ್ಕವಾಗಿದೆ. ಇದರ ಶುಲ್ಕವನ್ನು ಹೆಚ್ಚಿಸಿದರೆ, ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ಗ್ರಾಹಕರು ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಿಎಟಿಎಂಐ ಪ್ರಕಾರ, ಕೆಲವು ಬ್ಯಾಂಕುಗಳು ಪ್ರತಿ ವಹಿವಾಟಿಗೆ 21 ರೂ.ಗಳ ಹೆಚ್ಚಳಕ್ಕೆ ಒತ್ತಾಯಿಸಿವೆ ಮತ್ತು ಕೆಲವು 23 ರೂ.ಗಳ ಹೆಚ್ಚಳಕ್ಕೆ ಒತ್ತಾಯಿಸಿವೆ. ಎಟಿಎಂ ವಹಿವಾಟು ಶುಲ್ಕವನ್ನು ಕೊನೆಯ ಬಾರಿಗೆ 2021 ರಲ್ಲಿ ಹೆಚ್ಚಿಸಲಾಗಿತ್ತು. ಆ ಸಮಯದಲ್ಲಿ ಈ ಶುಲ್ಕವನ್ನು ೧೫ ರೂ.ಗಳಿಂದ ೧೭ ರೂ.ಗೆ ಹೆಚ್ಚಿಸಲಾಯಿತು. ಈಗ ಈ ಬಾರಿ ಅದನ್ನು ೨೦ ರೂ.ಗಳಿಂದ ೨೧ ರೂ.ಗೆ ಹೆಚ್ಚಿಸಲು ಒತ್ತಾಯಿಸಲಾಗಿದೆ. ಆದಾಗ್ಯೂ, ಕೆಲವು ಬ್ಯಾಂಕುಗಳು ಈ ಶುಲ್ಕವನ್ನು 23 ರೂ.ಗೆ ಹೆಚ್ಚಿಸಲು…
ರಾಜ್ಯ ಸರಕಾರ ಜನತೆಗೆ ಶಾಕ್ ನೀಡಿದ್ದು, ಕರ್ನಾಟಕದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ರಾಜ್ಯ ಸರ್ಕಾರ ಹೆಚ್ಚಿಸಿದೆ. ಇದುವರೆಗೆ ಪೆಟ್ರೋಲ್‌ಗೆ ರಾಜ್ಯ ಸರ್ಕಾರವು ಶೇ.25.92ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಈಗ ಶೇ.3.9ರಷ್ಟು ಹೆಚ್ಚಳ ಮಾಡಿದ್ದು, ಇನ್ನು ಮುಂದೆ ಒಟ್ಟು ಶೇ.29.84ರಷ್ಟು ತೆರಿಗೆ ವಸೂಲಿ ಮಾಡಲಿದೆ. ಇನ್ನು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.4.1ರಷ್ಟು ಏರಿಕೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಇನ್ನು ಶೇ.18.44ರಷ್ಟು ತೆರಿಗೆ ವಸೂಲಿ ಮಾಡಲಿದೆ. ಒಂದು ಲೀಟರ್ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಇನ್ನು ಮುಂದೆ ಪೆಟ್ರೋಲ್ ದರ ಲೀಟರ್‌ಗೆ 103 ರೂ.ಗೆ ಹಾಗೂ ಡೀಸೆಲ್ 91 ರೂ. 50 ಪೈಸೆ ಏರಿಕೆಯಾಗಿದೆ. ಈ ಹಿಂದೆಯೇ ಡೀಸೆಲ್ ಮತ್ತು ಪೆಟ್ರೋಲ್ ಮಾರಾಟ ತೆರಿಗೆ ದರವನ್ನು ಏರಿಸಬೇಕೆಂಬ ಪ್ರಸ್ತಾವನೆ ಸರ್ಕಾರದ…
ತನ್ನ ಸಹೋದರಿಗಾಗಿ ವ್ಯಕ್ತಿಯೊಬ್ಬರು ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ನಲ್ಲಿ ಮನುಷ್ಯನ ಕೈಬೆರಳು ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ಮಲಾಡ್ ನ ಡಾ.ಸೆರಾವೊ ಎಂಬ ವ್ಯಕ್ತಿ, ಆನ್ ಲೈನ್ ನಲ್ಲಿ ದಿನಸಿ ವಸ್ತುಗಳನ್ನು ಆರ್ಡರ್ ಮಾಡಿದ್ದರು. ಈ ವೇಳೆ ಅವರ ಸಹೋದರಿಗಾಗಿ ಐಸ್ ಕ್ರೀಮ್ ಅನ್ನೂ ಆರ್ಡರ್ ಮಾಡಿದ್ದರು. ಬಳಿಕ ಆರ್ಡರ್ ಮಾಡಿದ್ದ ಐಸ್ ಕ್ರೀಮ್ ಬರುತ್ತಿದ್ದಂತೆ ಓಪನ್ ಮಾಡಿದ್ದಾರೆ. ಈ ವೇಳೆ, ಅವರಿಗೆ ಬೆರಳು ನಟ್ಸ್ ರೀತಿ ಕಾಣಿಸಿಕೊಂಡಿದೆ. ಬಳಿಕ ಅದು ಮನುಷ್ಯನ ಕೈ ಬೆರಳು ಎಂಬುದು ಅವರ ಅರಿವಿಗೆ ಬಂದಿದೆ. ಆನ್ ಲೈನ್ ನಲ್ಲಿ ಹಂಚಿಕೊಳ್ಳಲಾದ ಫೋಟೋದಲ್ಲಿ ಐಸ್ ಕ್ರೀಮ್ ನಲ್ಲಿ ಕೈಬೆರಳಿರುವುದು ಕಾಣಿಸುತ್ತದೆ. ಈ ಬಗ್ಗೆ ಸೆರಾವೊ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಐಸ್ ಕ್ರೀಮ್ ನ್ನು ಮತ್ತು ಬೆರಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ರೀತಿ ಕೈ ಬೆರಳು ಪತ್ತೆಯಾಗಿರುವುದು ದೊಡ್ಡ ಅಪರಾಧದ ಶಂಕೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ…
ಮಹಾರಾಷ್ಟ್ರದ ನಾಗಪುರದಲ್ಲಿ ಇತ್ತೀಚೆಗೆ ನಡೆದಿದ್ದ 82 ವರ್ಷದ ಉದ್ಯಮಿಯ ಹಿಟ್ ಆಂಡ್ ರನ್ ಸಾವಿನ ಪ್ರಕರಣ ರೋಚಕ ತಿರುವು ಪಡೆದಿದೆ. ಸುಮಾರು 300 ಕೋಟಿ ರೂ ಮೌಲ್ಯದ ಕುಟುಂಬ ಆಸ್ತಿಗಾಗಿ ವೃದ್ಧನ ಸೊಸೆಯೇ ಅವರ ಕೊಲೆಗೆ ಸಂಚು ರೂಪಿಸಿದ್ದ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಮೇ 22ರಂದು ಬಾಲಾಜಿ ನಗರಿಯಲ್ಲಿ ಕಾರು ಹರಿದು ಮಾವ ಪುರುಷೋತ್ತಮ್ ಪುಟ್ಟೇವರ್ ಮೃತಪಟ್ಟ ಪ್ರಕರಣದಲ್ಲಿ, ಪಟ್ಟಣ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿರುವ ಅರ್ಚನಾ ಮನೀಶ್ ಪುಟ್ಟೇವರ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮಾವನಿಗೆ ಕಾರು ಡಿಕ್ಕಿ ಹೊಡೆಸಿ ಸಾಯಿಸಲು ಅರ್ಚನಾ ಅವರು ಬಾಡಿಗೆ ಜನರನ್ನು ಖರೀದಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. “ಮಾವನನ್ನು ಕೊಲ್ಲಲು ಬಳಸಿದ ಹಳೆಯ ಕಾರನ್ನು ಖರೀದಿಸುವುದಕ್ಕಾಗಿ ಆರೋಪಿಗಳಿಗೆ ಆಕೆ ಹಣ ನೀಡಿದ್ದರು. ಕೊಲೆಯನ್ನು ಅಪಘಾತದ ರೀತಿ ಬಿಂಬಿಸುವುದು ಆಕೆಯ ಉದ್ದೇಶವಾಗಿತ್ತು. ಇದು ಅವರ 300 ಕೋಟಿ ರೂ ಮೌಲ್ಯದ ಆಸ್ತಿ ಮೇಲೆ ನಿಯಂತ್ರಣ ಸಾಧಿಸಲು ನಡೆಸಿದ ಕೃತ್ಯ ಎನ್ನುವುದು ಸ್ಪಷ್ಟವಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು…
ನನ್ನ ಮುಗಿಸಲು ಹಲವರಿಂದ ಪ್ರಯತ್ನ ನಡೀತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನನ್ನ ವಿರುದ್ಧ ಕೇಸ್ ಇದೆಯಾ ಅಂತಾ ಚೆಕ್ ಮಾಡ್ತಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕುಮಾರಸ್ವಾಮಿನ ಹೇಗೆ ಮುಗಿಸಿಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಜೆಡಿಎಸ್ ಮುಗಿಸಿದ್ದೇವೆ ಅಂತಾ ಮಾತನಾಡುವವರಿಗೆ ಉತ್ತರ ಕೊಡಲ್ಲ. ದುರಹಂಕಾರದಲ್ಲಿ ಮಾತನಾಡಿದ್ದವರಿಗೆ ನಾನು ಉತ್ತರ ಕೊಡಲ್ಲ. ನನಗೆ ಬೇಕಾಗಿದ್ದು ರಾಜಕೀಯ ಅಲ್ಲ, ರಾಜ್ಯದ ಜನರ ಸಮಸ್ಯೆಗೆ ಪರಿಹಾರ ಎಂದು ಹೇಳಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ವಿಚಾರವಾಗಿ ಮಾತನಾಡಿದ್ದು, ಸರ್ಕಾರದ 4 ತಿಂಗಳ ನಡುವಳಿಕೆ ಮೇಲೆ ಅನುಮಾನ ಪಡಬೇಕು. ಸರ್ಕಾರದಲ್ಲಿ ಕಾನೂನು ಅನುಭವ ಇರುವವರು ಸಾಕಷ್ಟು ಜನರಿದ್ದಾರೆ. ಸಿಎಂ ಸಿದ್ದರಾಮಯ್ಯ ನಾಲ್ಕು ತಿಂಗಳ ನಂತರ ಈ ಕೇಸ್ ಕೆದಕಿದ್ದಾರೆ ಎಂದು ಹೇಳಿದ್ದಾರೆ. ನಟ ದರ್ಶನ್ ಮತ್ತು ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿನಗರ ಠಾಣೆಗೆ ಶಾಮಿಯಾನ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಇತಿಹಾಸದಲ್ಲಿ ಈ ರೀತಿ…
ಮಂಡ್ಯ : ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಯಲು ಅಪಘಾತ ವಲಯಗಳಲ್ಲಿ ಸಂಚಾರಿ ಸೂಚನಾ ಫಲಕಗಳನ್ನು ಅಳವಡಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತಾ ಸಮಿತಿಯಲ್ಲಿ ಇರುವ 15 ಲಕ್ಷ ರೂ ಅನುದಾನದಲ್ಲಿ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಟ್ರಾಫಿಕ್ ಸಿಗ್ನಲ್ ಸರಿಪಡಿಸುವ ಕೆಲಸಗಳು, ಬ್ಲ್ಯಾಕ್ ಸ್ಪಾಟ್ ಗಳ ಬಳಿ ಸೂಚನಾ ಫಲಕಗಳು, ಹಂಪ್ ಗಳು ಸೇರಿದಂತೆ ಅವಶ್ಯಕ ಕಾಮಗಾರಿಗಳನ್ನು ತುರ್ತಾಗಿ ಕೈಗೊಳ್ಳುವಂತೆ ತಿಳಿಸಿದರು. ಪೊಲೀಸ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿರುವ ಬ್ಲ್ಯಾಕ್ ಸ್ಪಾಟ್ ಗಳನ್ನು ಗುರುತಿಸಿ ಅಪಘಾತ ತಡೆಗಟ್ಟಲು ಕೈಗೊಳ್ಳಬೇಕಿರುವ ಕ್ರಮ ಹಾಗೂ ಅದಕ್ಕೆ ತಗಲುವ ವೆಚ್ಚದ ವಿವರವನ್ನು ನಿಗದಿತ ನಮೂನೆಯಲ್ಲಿ ಸಿದ್ಧಪಡಿಸಿ ಅನುದಾನ ಕೋರಿ ಪ್ರಸ್ತಾವನೆಯನ್ನು ಕಳುಹಿಸಿಕೊಡುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಲೋಕೋಪಯೋಗಿ…
ತುಮಕೂರು: ತಾಲೂಕಿನ ಬೆಳಧರ ಸರ್ಕಾರಿ ಶಾಲಾ ಮಕ್ಕಳು ತಮ್ಮ ಶಾಲೆಗೆ ಕಾಂಪೌಂಡ್ ನಿರ್ಮಿಸುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಕಳೆದ ಹಲವಾರು ತಿಂಗಳುಗಳಿಂದ ಶಾಲಾ ಕಾಂಪೌಂಡ್ ವಿವಾದ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ದಿಟ್ಟ ನಿರ್ಧಾರ ಕೈಗೊಳ್ಳಲು ವಿಫಲವಾಗಿರುವ ಹಿನ್ನಲೆ ಶಾಲಾ ಮಕ್ಕಳು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಗಮನ ಸೆಳೆದರು. ಬೆಳೆಧರ ಸರ್ಕಾರಿ ಶಾಲೆಯ ಸಮೀಪ ಕಲ್ಯಾಣ ಮಂಟಪವಿದ್ದು, ಮದುವೆ ಮುಂತಾದ ಸಮಾರಂಭಗಳು , ಕಾರ್ಯಕ್ರಮಗಳು ನಡೆಯುತ್ತಿರುತ್ತವೆ, ಇಂತಹ ಸಂದರ್ಭಗಳಲ್ಲಿ ನಮ್ಮ ವ್ಯಾಸಂಗಕ್ಕೆ ತೊಂದರೆಯಾಗುತ್ತಿದೆ. ಶಾಲಾ ಕಾಂಪೌಂಡ್ ನಲ್ಲಿ ಕುಡಿದ ಮದ್ಯದ ಬಾಟಲ್ ಗಳನ್ನು ಬಿಸಾಕುತ್ತಾರೆ, ಊಟವನ್ನು ಚೆಲ್ಲಾಡುತ್ತಾರೆ, ವಾಹನಗಳನ್ನು ಎಲ್ಲೆಂದರಲ್ಲೇ ನಿಲ್ಲಿಸುವುದರಿಂದ ಆಟ ಆಡಲು ನಮಗೆ ಮೈದಾನವೇ ಇಲ್ಲದ್ದಂತಾಗಿದೆ. ಇದರಿಂದ ನಮ್ಮ ವ್ಯಾಸಂಗಕ್ಕೆ ಬಹಳಷ್ಟು ತೊಂದರೆಯಾಗಿದೆಂದು ಮನ ನೊಂದ ಮಕ್ಕಳು ಜಿಲ್ಲಾಧಿಕಾರಿಗಳಿಗೆ ತಮ್ಮ ಅಹವಾಲು ನೀಡಿದ್ದಾರೆ. ಘಟನೆಯ ವಿಚಾರ ಅರಿತ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮಕ್ಕಳ ಮನವೊಲಿಸಲು ಮುಂದಾದರೂ ಸಹ…
ಸರಗೂರು: ತಾಲೂಕಿನ ಹಾದನೂರು ಗ್ರಾ.ಪಂ. ವ್ಯಾಪ್ತಿಯ ಹಾದನೂರು ಗ್ರಾಮದ ಸುರೇಶ್ (30) ಎಂಬುವರು ಗುರುವಾರ ಬೆಳಿಗ್ಗಿನ ಜಾವ ಮನೆಯಿಂದ ಕಾಣೆಯಾಗಿದ್ದು, ಈ ಸಂಬಂಧ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಎಂದಿನಂತೆಯೇ ಬುಧವಾರ ಮನೆಯಲ್ಲಿ ಮಲಗಿದ್ದ ಸುರೇಶ್ ರವರು ಗುರುವಾರ ಬೆಳಗ್ಗಿನ ಜಾವದ 4 ಗಂಟೆ ಸಮಯದಲ್ಲಿ ಕಾಣೆಯಾಗಿದ್ದಾನೆ ಎಂದು ಎನ್ನಲಾಗಿದೆ. ಮನೆಯವರು ಬೆಳಿಗ್ಗೆ ಎದ್ದು ನೋಡಿದಾಗ ಸುರೇಶ್ ಯಾಗಿರುವುದು ಬೆಳಕಿಗೆ ಬಂದಿದೆ. ನಂತರ ಗ್ರಾಮಸ ಸಂಬಂಧಿಕರು ಹಾಗೂ ಗೆಳೆಯರ ಬಳಿ ಆತನ ಬಗ್ಗೆ ವಿಚಾರಿಸಿದರೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಸುರೇಶ್ ಮನೆ ಬಿಟ್ಟುವಾಗ ಅವರು ನೀಲಿ ಟಿ ಶರ್ಟ್, ಕಪ್ಪು ಪ್ಯಾಂಟ್ ಧರಿಸಿದ್ದ ಎಂದು ಸುರೇಶ್ ಅಣ್ಣ ರವಿಕುಮಾರ್ ತಿಳಿಸಿದ್ದಾರೆ. ಈತನ ಗುರುತು ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ಹಾಗೂ ರವಿಕುಮಾರ್ 9964354061 ಶಿವರಾಜು ಅರಸು 6360092138 ನಂಬರಿಗೆ ತಿಳಿಸಿ ನೀಡುವಂತೆ ಕೋರಲಾಗಿದೆ. ವರದಿ: ಹಾದನೂರು ಚಂದ್ರ ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ…