Author: admin

ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ಕ್ಷೌರದಂಗಡಿಯ ಕ್ಷೌರಿಕನೊಬ್ಬ ತನ್ನ ಗ್ರಾಹಕನಿಗೆ ಎಂಜಲು ಉಗಿದು ಫೇಸ್ ಮಸಾಜ್ ಮಾಡಿದ್ದು, ಈತನ ಈ ಹೇಯ  ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚಿಗೆ ಯುವಕರು ಕೂಡಾ ಹೇರ್‌ ಕಟ್‌ ಜೊತೆಗೆ  ಫೇಶಿಯಲ್‌, ಫೇಸ್‌ ಮಸಾಜ್‌ ಮಾಡಿಸಿಕೊಳ್ಳುವುದು ಕಾಮನ್ ಆಗಿರುವ ವಿಷಯ. ಆಶ್ಚರ್ಯ ಅಂದ್ರೆ ಇಲ್ಲೊಬ್ಬ ಯುವಕ ಕೂಡಾ ತನ್ನ ಸೌಂದರ್ಯವನ್ನು ಹೆಚ್ಚಿಸಲು ಕ್ಷೌರದಂಗಡಿಯಲ್ಲಿ ಫೇಸ್ ಮಸಾಜ್ ಮಾಡಿಕೊಂಡಿದ್ದಾನೆ. ಆದರೆ ಫೇಸ್ ಮಸಾಜ್ ಮಾಡುತ್ತಿರುವ ಜೊತೆಗೆ ಕೈ ಮೇಲೆ ಎಂಜಲು ಉಗಿದು ಅದನ್ನು ಮಿಕ್ಸ್ ಮಾಡಿ ಗ್ರಾಹಕನಿಗೆ ಫೇಸ್ ಮಸಾಜ್  ಮಾಡಿದ್ದಾನೆ. ಈ ಕುರಿತ ವಿಡಿಯೋ ತುಣುಕೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸೆಲೂನ್ ಒಂದರ ಕ್ಷೌರಿಕ ಅಮ್ಜದ್ ಎಂಬಾತ ಎಂಜಲು ಉಗುಳಿ ತನ್ನ ಗ್ರಾಹಕರಿಗೆ ಫೇಸ್ ಮಸಾಜ್ ಮಾಡಿದ್ದಾನೆ. ಈತನ ಕೃತ್ಯದ ವಿಡಿಯೋ ತುಣುಕು ಸದ್ಯ @TruestoryUP ಎಂಬ ಹೆಸರಿನ ಎಕ್ಸ್…

Read More

ನೀಟ್ 2024 (NEET UG 2024) ಪರೀಕ್ಷೆಯಲ್ಲಿ ರ‍್ಯಾಂಕ್ ನೀಡುವುದರಲ್ಲಿ ಮತ್ತು ನಿರಂತರವಾಗಿ ಅಭ್ಯಾಸ ಮಾಡಿ ಬರೆದ ವಿದ್ಯಾರ್ಥಿಗಳಿಗೆ ದೊಡ್ಡ ಅನ್ಯಾಯವಾಗಿದೆ. ಈ ಬಗ್ಗೆ ತನಿಖೆಯಾಗಬೇಕು ಮತ್ತು ಮರು ಪರೀಕ್ಷೆ ನಡೆಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಮೈಸೂರು ನಗರದಲ್ಲಿ ಮಾಧ್ಯಮದವರ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಕೃಪಾಂಕ ಕೊಟ್ಟು ಉತ್ತೀರ್ಣ ಮಾಡುವುದು ಒಂದು ಕೆಟ್ಟ ಅಭ್ಯಾಸ. ಎನ್‌ ಟಿಎ ಪರೀಕ್ಷೆಯನ್ನು ಸರಿಯಾಗಿ ನಡೆಸದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದಿದ್ದಾರೆ. ದಕ್ಷಿಣ ಭಾರತದಲ್ಲಿ ಜನ ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ದಕ್ಷಿಣ ಭಾರತದ ಏಳು ಜನರು ಕೇಂದ್ರದಲ್ಲಿ ಸಚಿವರಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಏನು ಮಾಡಿದರೂ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಜನ ಬೆಂಬಲಿಸುವುದಿಲ್ಲ. ಏಕೆಂದರೆ ಬಿಜೆಪಿಯು ಆರ್‌ ಎಸ್‌ ಎಸ್‌ ನ ರಾಜಕೀಯ ಮುಖವಾಡ. ಹಾಗಾಗಿ ಉತ್ತರ ಭಾರತದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಗಿದೆ. ಆರ್‌ಎಸ್‌ಎಸ್‌ನ ಮುಖ್ಯಸ್ಥರು ಅಹಂಕಾರಕ್ಕೆ ಜನ ಸರಿಯಾದ ಪಾಠ ಕಲಿಸಿದ್ದಾರೆ ಎಂದು ಹೇಳಿದ್ದಾರೆ ಎಂದರು. ಇದೀಗ ಎಸ್.ಸಿ.ಎಸ್.ಟಿ ಮೆರಿಟ್ ವಿದ್ಯಾರ್ಥಿ ವೇತನವನ್ನು…

Read More

ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್‌ ಮಾಡಿದ ಕಾರಣ ರೇಣುಕಾಸ್ವಾಮಿ ಹತ್ಯೆ ಮಾಡಿದ್ದಾರೆ ಎಂಬ ಆರೋಪದಡಿ ದರ್ಶನ್‌ ಸೇರಿ 17 ಜನರು ಸದ್ಯ ಪೊಲೀಸ್‌ ವಿಚಾರಣೆ ಎದುರಿಸುತ್ತಿದ್ದಾರೆ. ದರ್ಶನ್ ಕೊಲೆ ಆರೋಪದ ಬಗ್ಗೆ ಕೊನೆಗೂ ಮೌನ ಮುರಿದು ಹೀಗೆ ಉತ್ತರ ಕೊಟ್ಟಿದ್ದಾರೆ ಸಹೋದರ ದಿನಕರ್ ತೂಗುದೀಪ. ದರ್ಶನ್ ಬಗ್ಗೆ ಸಹೋದರ ದಿನಕರ್ ತೂಗುದೀಪ ಮೊದಲ ರಿಯಾಕ್ಷನ್ ನೀಡಿದ್ದಾರೆ. ದರ್ಶನ್‌ ಬಂಧನದ ವಿಚಾರವನ್ನು ಮಾತನಾಡಲು ನಿರಾಕರಿಸಿದ ದಿನಕರ್ ತೂಗುದೀಪ, ನನಗೇನು ಕೇಳಬೇಡಿ ಎಂದಿದ್ದಾರೆ. ನನ್ನ ಜೊತೆ ಏನು ಕೇಳಬೇಡಿ. ನಾನು ಏನು ಮಾತನಾಡುವುದಿಲ್ಲ. ನನಗೇನು ಗೊತ್ತಿಲ್ಲ ಎಂದು ನೋವಿನಲ್ಲೇ ದಿನಕರ್ ತೂಗುದೀಪ ಹೇಳಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA

Read More

ಕಲಿಕೆಯೊಂದಿಗೆ ಗಳಿಕೆಯೂ ಸಾಧ್ಯ ಕೋರ್ಸ್ ಆಯ್ಕೆಯ ವಾಸ್ತವಿಕತೆ ದ್ವಿತೀಯ ಪಿಯುಸಿ ಫಲಿತಾಂಶದ ನಂತರ ಯಾವ ಕೋರ್ಸ್ ಪದವಿಗೆ ಸೇರಿದರೆ ಉತ್ತಮ ಭವಿಷ್ಯವಿದೆ ಎಂಬ ಹುಡುಕಾಟದಲ್ಲಿ ಪಾಲಕರು ಮಕ್ಕಳು ಹೆಣಗಾಡುತ್ತಾರೆ. ಆರೋಗ್ಯವು ಜೀವನದ ಸಂಪತ್ತು ಎಂಬಂತೆ ಶಿಕ್ಷಣವು ವಿಶ್ವದ ಶಕ್ತಿಯುತ ಅಸ್ತ್ರ ಎಂಬುದು ಎಲ್ಲರಿಗೂ ಗೊತ್ತು. ಅಂತೆಯೇ ಯಾವ ಕೋರ್ಸ್ ಪದವಿ ಪಡೆದರೆ ಏನೇನು ಲಾಭ? ಯಾವ ಯಾವ ಉದ್ಯೋಗ ಪಡೆಯಬಹುದು ಎಂಬ ಚಿಂತನೆಗಳಿಗೆ ಒಳಗಾಗುವುದು ಸಹಜವಾಗಿದೆ. ಬಹುಪಾಲು ಪಾಲಕರು ವಿದ್ಯಾರ್ಥಿಗಳು ಇಂತಹ ಸಂಗತಿಗಳ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದಿರುವವರೇ ಹೆಚ್ಚು. ಪಿಯುಸಿ ಮತ್ತು ಐಟಿಐ ಪಾಸಾದವರು ತಮ್ಮ ಅಭಿವೃದ್ಧಿ ಆಸಕ್ತಿಯ ವಿಷಯಗಳಲ್ಲಿ ಶಿಕ್ಷಣ ಪಡೆಯಲು ಕೆಲ ಪಾಲಕರೇ ಬಿಡುತ್ತಿಲ್ಲ ಎಂಬುದು ಹಲವು ಮಕ್ಕಳ ಕೊರಗಾಗಿದೆ. ಕಾರಣ ಕೆಲ ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೂಲಕ ಈಡೇರಿಸಿಕೊಳ್ಳುವ ಇರಾದೆಯಲ್ಲಿರುತ್ತಾರೆ. ಇದರಿಂದ ಮಕ್ಕಳ ಕಲಿಕಾ ಹಂಬಲ ಹಾಗೂ ಆಸಕ್ತಿಯನ್ನೇ ಕುಸಿಯುವಂತೆ ಮಾಡಿ ಅವರಲ್ಲಿ ಆತಂಕ ಒತ್ತಡ ಹೆಚ್ಚಲು ಕಾರಣವಾಗಬಹುದು. ಇನ್ನೊಂದೆಡೆ ವಿದ್ಯಾರ್ಥಿಗಳು ತಮ್ಮ ಸಹಪಾಠಿ…

Read More

ಪಾವಗಡ :  ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ  ಅಧ್ಯಕ್ಷರಾಗಿದ್ದ ಸುವರ್ಣಮ್ಮನವರ  ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅರುಂಧತಿ ನಾಗಲಿಂಗಪ್ಪನವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಾಲ್ಲೂಕಿನ  ಸಿ.ಕೆ.ಪುರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 15 ಸದಸ್ಯರುಗಳಿದ್ದು, ಇದರಲ್ಲಿ 8 ಸದಸ್ಯರು ಅರುಂಧತಿ ನಾಗಲಿಂಗಪ್ಪನವರ‌ ಪರ ಮತ ಚಲಾಯಿಸಿದ್ದು,‌ ಇವರ ಪ್ರತಿಸ್ಪರ್ಧೆ ಸಣ್ಣಬೊಮ್ಮಕ್ಕ ಸಣ್ಣಚಿತ್ತಪ್ಪ ನವರಿಗೆ 5 ಸದಸ್ಯರು ಮತ ನೀಡಿದ್ದಾರೆ. ಇನ್ನುಳಿದ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರಿಂದ ಅರುಂಧತಿ ನಾಗಲಿಂಗಪ್ಪನವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಚುನಾವಣೆಯ ಅಧಿಕಾರಿಯಾಗಿ ಆಗಮಿಸಿದ್ದು ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಈ ವೇಳೆ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಶಾಂತಿನಿಕೇತನ ಕಾನ್ವೆಂಟಿನ ಅಧ್ಯಕ್ಷರಾದ ಕೊತ್ತೂರು ನಾಗೇಶ್ ರವರು ಮಾತನಾಡುತ್ತಾ, ಸಿ.ಕೆ.ಪುರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕು ಹಾಗೂ ಮೂಲಭೂತ ಸೌಕರ್ಯಗಳ ಕಡೆಗೆ ಹೆಚ್ಚುನ  ಒತ್ತು ಇಡಬೇಕು ಎಂದು ತಿಳಿಸಿದರು. ಕಾಂಗ್ರೆಸ್ ಪಕ್ಷದ ಮುಖಂಡ ಕೊಂಡಪ್ಪನವರು ಮಾತನಾಡುತ್ತಾ ಸಿ.ಕೆ.ಪುರ ಗ್ರಾಮ…

Read More

ಈ ಆನ್ಲೈನ್ ಅನ್ನೋ ದೊಡ್ಡ ಜಾಲ, ಇಂದು ಕೂತಲ್ಲಿಗೇ ಎಲ್ಲವನ್ನೂ ತಂದಿರಿಸುತ್ತೆ. ಒಟ್ಟಿನಲ್ಲಿ ಎಲ್ಲವೂ ಆನ್ಲೈನ್ ಮಯ. ಅಂತೆಯೇ ಮಹಿಳೆಯೊಬ್ಬರು ಆನ್ಲೈನ್ ಅಲ್ಲಿ ಐಸ್ ಕ್ರೀಂ ಆರ್ಡರ್ ಮಾಡಿದ್ದು, ಅದು ಮನೆ ಬರುತ್ತಿದ್ದಂತೆ ಆಕೆಗೆ ಶಾಕ್ ಎದುರಾಗಿದೆ. ಯಾಕೆಂದರೆ ಅದರಲ್ಲಿ ಚೇಳು ಪತ್ತೆಯಾಗಿದೆ. ಇದುವರೆಗೂ ಆನ್ಲೈನ್ ಅಲ್ಲಿ ತರಿಸಿದ ಬಿರಿಯಾನಿ, ಊಟದಲ್ಲಿ ಹುಳ, ಜಿರಳೆ, ಕೀಟ ಏನಾದರೂ ಒಂದು ಇರುವುದು ಸುದ್ದಿಯಾಗುತ್ತಿತ್ತು. ಮೊನ್ನೆ ಮೊನ್ನೆ ತಾನೆ ಮುಂಬೈ ನಲ್ಲಿ ಮಹಿಳೆಯೊಬ್ಬರು ಆರ್ಡರ್ ಮಾಡಿದ ಐಸ್ ಕ್ರೀಂ ನಲ್ಲಿ ಮಾನವನ ಬೆರಳು ಪತ್ತೆಯಾಗಿ ಭಾರಿ ಚರ್ಚೆಯಾಗಿತ್ತು. ಆದರೀಗ ಮತ್ತದೇ ಆನ್ಲೈನ್ ಐಸ್ ಕ್ರೀಂ ನಲ್ಲಿ ಇಂದು ಚೇಳು ಪತ್ತೆಯಾಗಿದೆ. ನೋಯ್ಡಾ ಸೆಕ್ಟರ್ 12ರ ನಿವಾಸಿ ದೀಪಾ(Deepa) ಮಕ್ಕಳ ಆಸೆಯಂತೆ ಐಸ್ ಕ್ರೀಮ್ ಆರ್ಡರ್ ಮಾಡಿದ್ದಾರೆ. ಮಕ್ಕಳು ಮ್ಯಾಂಗೋ ಮಿಲ್ಕ್ ಶೇಕ್(Mango Milkshake) ಬೇಕು ಎಂದಿದ್ದಕ್ಕೆ ಅದನ್ನೇ ಮಾಡುವುದಾಗಿ ಭರವಸೆ ನೀಡಿದ್ದ ದೀಪಾ, ಅಮೂಲ್ ವೆನಿಲ್ಲಾ ಐಸ್ ಕ್ರೀಮ್(Amul Icecream) ಆರ್ಡರ್ ಮಾಡಿದ್ದಾರೆ. ಆನ್‌…

Read More

ಮೈಸೂರು ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಸಿಹಿಸುದ್ದಿ ಸಿಕ್ಕಿದ್ದು ಇನ್ಮುಂದೆ ವಾಟ್ಸಾಪ್ ಆನ್ ಲೈನ್ ಟಿಕೆಟ್’ ಲಭ್ಯವಾಗಲಿದೆ. ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ  ವಾಟ್ಸಾಪ್ ಆನ್ಲೈನ್ ಟಿಕೆಟ್ ಉದ್ಘಾಟನೆ ಮಾಡಿದರು.  ಇನ್ಮುಂದೆ ಪ್ರವಾಸಿಗರಿಗೆ ವಾಟ್ಸಾಪ್ ಆನ್ಲೈನ್ ಟಿಕೆಟ್ ಲಭ್ಯವಿರಲಿದೆ. ಮೃಗಾಲಯ ವೀಕ್ಷಣೆಗೆ ಇನ್ಮೇಲೆ ವಾಟ್ಸಾಪ್ ನಲ್ಲೂ ಟಿಕೆಟ್ ಖರೀದಿಗೆ ಅವಕಾಶವಿರಲಿದೆ. ಮೃಗಾಲಯದಲ್ಲಿ ಪ್ರಾಣಿ ಪಕ್ಷಿ ವೀಕ್ಷಣೆ ಮಾಡಿ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರು ಕ್ಯೂನಲ್ಲಿ ನಿಂತು ಕಿರಿ ಕಿರಿ ಅನುಭವಿಸುತ್ತಿದ್ದರು. ಹೀಗಾಗಿ ವಾಟ್ಸಾಪ್ ಆನ್ಲೈನ್ ಟಿಕೆಟ್ ಉದ್ಘಾಟನೆ ಮಾಡಿದ್ದೇವೆ. ಮೃಗಾಲಯಕ್ಕೆ ಆಗಮಿಸುವ ಪ್ರವಾಸಿಗರು ಮೊಬೈಲ್ ವಾಟ್ಸಾಪ್ ಮೂಲಕ ಟಿಕೆಟ್ ಪಡೆಯಬಹುದು. ಲೈವ್ ಫೀಡ್ ಕೂಡ ಉದ್ಘಾಟನೆ ಮಾಡಿದ್ದೇವೆ. ಮೃಗಾಲಯದಲ್ಲಿನ ಹಾವುಗಳಿಗೆ ಹೊರಗಿನಿಂದ ಆಹಾರ ತರಲಾಗುತ್ತಿತ್ತು. ಈಗ ನಮ್ಮಲ್ಲಿಯೇ ಮೊಲ, ಇಲಿ ಸಂತತಿ ಹೆಚ್ಚಳಕ್ಕೆ ಮುಂದಾಗಿದ್ದೇವೆ. ಇದರ ಜೊತೆ ಮೃಗಾಲಯದ ಅಭಿವೃದ್ಧಿಗೂ ನಾವು ಸಿದ್ದರಿದ್ದೇವೆ ಎಂದರು. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ…

Read More

ಕನ್ನಡದ ಜನಪ್ರಿಯ ನಟ ದರ್ಶನ್ ತೂಗುದೀಪ ಅವರು ಚಿತ್ರಹಿಂಸೆ ನೀಡಿ ಕೊಂದಿದ್ದಾರೆ ಎಂದು ಹೇಳಲಾದ ವ್ಯಕ್ತಿ “ ಆಘಾತ ಮತ್ತು ರಕ್ತಸ್ರಾವದಿಂದ “ ಸಾವನ್ನಪ್ಪಿದ್ದಾರೆ ಎಂದು ಶವಪರೀಕ್ಷೆ ವರದಿ ಬಹಿರಂಗಪಡಿಸಿದೆ. ಸಂತ್ರಸ್ತೆ ರೇಣುಕಾ ಸ್ವಾಮಿ ಅವರ ದೇಹದ ಮೇಲೆ 15 ಗಾಯಗಳಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.  ನಟ ದರ್ಶನ್ ಮತ್ತು ಅವರ ಸಹಚರರು ಸ್ವಾಮಿಯನ್ನು ಹೊಡೆದು ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ರೇಣುಕಾ ಸ್ವಾಮಿ ಚಿತ್ರದುರ್ಗ ಮೂಲದವರಾಗಿದ್ದು, ಜೂನ್ 9 ರಂದು ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಮೃತದೇಹ ಪತ್ತೆಯಾಗಿದೆ. ದರ್ಶನ್‌ , ಗೆಳತಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಿಸಿದ್ದಕ್ಕಾಗಿ ಆತನನ್ನು ಚಿತ್ರದುರ್ಗದಿಂದ ಕಿಡ್ನಾಪ್ ಮಾಡಲಾಗಿತ್ತು. ಆತನ ತಲೆ, ಹೊಟ್ಟೆ, ಎದೆ ಮತ್ತು ಇತರ ಭಾಗಗಳಲ್ಲಿ ಅನೇಕ ಗಾಯಗಳು ಮತ್ತು ಗಾಯದ ಗುರುತು ಪತ್ತೆಯಾಗಿತ್ತು. ಶವಪರೀಕ್ಷೆಯಲ್ಲಿ, ಮೃತ ಸ್ವಾಮಿಯ ತಲೆಯನ್ನು ವಾಹನವೊಂದಕ್ಕೆ ಬಲವಾಗಿ ಡಿಕ್ಕಿ ಹೊಡೆಸಿ ಹಲ್ಲೆ ನಡೆಸಲಾಗಿತ್ತು ಎಂಬುದು ದೃಢಪಟ್ಟಿದೆ ಎನ್ನಲಾಗಿದೆ. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ…

Read More

ಕರ್ನಾಟಕ ರಾಜ್ಯ ಸರ್ಕಾರವು ಪೊಲೀಸ್‌ ಇಲಾಖೆಯ ಮೀಸಲು ಪೊಲೀಸ್‌ ಪಡೆಗಳಲ್ಲಿ ಅಗತ್ಯ ಇರುವ 1,500 ವಿಶೇಷ ಮೀಸಲು ಪೊಲೀಸ್‌ ಕಾನ್ಸ್‌’ಟೇಬಲ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ ಮಾಡಲು ಅವಕಾಶ ನೀಡಿದೆ. ಈಗಾಗಲೇ ಇಲಾಖೆಯ ವಿವಿಧ ಪಡೆಗಳಲ್ಲಿ ಎಷ್ಟೆಷ್ಟು ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬುದರ ಸಮತಳ ವರ್ಗೀಕರಣ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ SSLC ಅಥವಾ ತತ್ಸಮಾನ ವಿದ್ಯಾರ್ಹತೆ ಪಡೆದವರು ಅರ್ಜಿ ಸಲ್ಲಿಸಬಹುದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. ಪ್ರಮುಖವಾಗಿ ಈ ಕೆಳಗಿನ 3ಹಂತದ ಪರೀಕ್ಷೆಗಳು ನಡೆಯುತ್ತದೆ. ಸಹಿಷ್ಣುತಾ ಪರೀಕ್ಷೆ : ಉದ್ದ ಜಿಗಿತ / ಎತ್ತರ ಜಿಗಿತ / ಗುಂಡು ಎಸೆತ / ಓಟ. ದೈಹಿಕ ಸಾಮರ್ಥ್ಯ ಪರೀಕ್ಷೆ : ಕನಿಷ್ಠ ಎತ್ತರ / ಎದೆ ಸುತ್ತಳತೆ. ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ : ಬಹು ಆಯ್ಕೆ ಉತ್ತರಗಳ, ಲಿಖಿತ ಪರೀಕ್ಷೆ. ಲಿಖಿತ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕು ಎಂದರೆ ಮೊದಲು ಸಹಿಷ್ಣುತೆ ಹಾಗೂ ದೈಹಿಕ ಸಾಮಾರ್ಥ್ಯ ಪರೀಕ್ಷೆಗಳಲ್ಲಿ ಅರ್ಹತೆ ಪಡೆಯಬೇಕಾಗಿರುತ್ತದೆ.…

Read More

ಸರಗೂರು: ತಾಲ್ಲೂಕಿನ ಹಂಚೀಪುರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ  ಮೇಲೆ ಲಿಂಗಾಯತ ಸಮುದಾಯಕ್ಕೆ ಸೇರಿದ ಹಲವು ಜಮೀನುದಾರರು ಪರಿಶಿಷ್ಟ ಜಾತಿಯವರ ಜಮೀನಿಗೆ ಹೋಗಲು ದಾರಿಯೇ ಬಿಡದೆ ತೊಂದರೆ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಕಳೆದ 30 ರಿಂದ 45 ವರ್ಷಗಳಿಂದ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ.  ಇಲ್ಲಿನ ಸರ್ಕಾರಿ ಜಮೀನು ಮೂಲಕ ತಿರುಗಾಡುತ್ತಿದ್ದೇವೆ ಹಾಗೂ ದನಕರುಗಳನ್ನು ಇಲ್ಲೇ ಮೇಯಿಸುತ್ತಿದ್ದೇವೆ. ಆದರೆ ಇತ್ತೀಚಿನ ಮೂರು ವರ್ಷಗಳಿಂದ ಜಮೀನಲ್ಲಿ ವ್ಯವಸಾಯ ಮಾಡಲು ಹಾಗೂ ತಿರುಗಾಡಲು ದನಕರುಗಳು ಮೇಯಿಸಲು ಬಿಡದೇ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಲಿಂಗಾಯತ ಸಮುದಾಯದ ಸುರೇಶ್, ಮಹೇಶ್, ನವೀನ್, ಶೃತಿ,  ಸಣ್ಣ ಮುದಪ್ಪ,  ಮಹದೇವಪ್ಪ,  ಲೋಕೇಶ್ ಇನ್ನೂ ಮುಂತಾದವರು ನಮಗೆ ತೊಂದರೆ ನೀಡುತ್ತಿದ್ದಾರೆ. ಅವರಿಂದ ನಮಗೆ ನಮ್ಮ ಜಮೀನಿಗೆ ತಿರುಗಾಡಲು ಹಾಗೂ ದನಕರುಗಳನ್ನು ಮೇಯಿಸಲು ಅನುಮತಿ ನೀಡಬೇಕೆಂದು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಮನವಿ ಮಾಡಲಾಗಿದೆ. ಸರ್ಕಾರಿ ಜಮೀನಿನ ಸರ್ವೇ ನಂಬರ್ 14/2.ರಲ್ಲಿ20 ಗುಂಟೆ ಹಾಗೂ 15 ರಲ್ಲಿ20 ಗುಂಟೆ,  ಹಳಿಯೂರು…

Read More