Subscribe to Updates
Get the latest creative news from FooBar about art, design and business.
- ಅಕ್ರಮ ಸಾರಾಯಿ ಮಾರಾಟಕ್ಕೆ ತಕ್ಷಣ ಕಡಿವಾಣ ಹಾಕಿ: ಗೌತಮ್ ಪಿ. ಮೇತ್ರೆ ಆಗ್ರಹ
- ಕೂಡ್ಲಿಗಿ: “ದೈವ ಒಂದೇ, ಅದು ದೇಶ – ದೇಶ ಸೇವೆಯೇ ದೈವ ಸೇವೆ”: ಮಾಜಿ ಸೈನಿಕ ಕಾಟೇರ ರಮೇಶ್
- ಬಿಪಿಎಲ್ ಕಾರ್ಡ್ ಪಡೆಯಲು ವಾರ್ಷಿಕ ಆದಾಯ ಮಿತಿ ₹3 ಲಕ್ಷಕ್ಕೆ ಹೆಚ್ಚಿಸಲು ಕ್ರಮ: ಸಚಿವ ಕೆ.ಹೆಚ್. ಮುನಿಯಪ್ಪ
- ವಿಧಾನಸಭೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೀರಿಳಿಸಲು ಬಿಜೆಪಿ–ಜೆಡಿಎಸ್ ಸಜ್ಜು: ಬಿ.ವೈ.ವಿಜಯೇಂದ್ರ
- ತುಮಕೂರು: ನಡುರಸ್ತೆಯಲ್ಲೇ ರೌಡಿಶೀಟರ್ ಮಲ್ಲ ಬರ್ಬರ ಹತ್ಯೆ!
- ಧರ್ಮೇಂದ್ರ ಪ್ರಧಾನ್ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಿರುವುದು ಸ್ವಾಗತಾರ್ಹ: ಡಾ.ಜಿ.ಪರಮೇಶ್ವರ್
- ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ: 2028ರ ಚುನಾವಣೆಗೆ ಸ್ಪರ್ಧಿಸಲ್ಲವೆಂದು ಸ್ಪಷ್ಟನೆ
- ರಾಜ್ಯದಲ್ಲಿ ಬರ ಪರಿಸ್ಥಿತಿ: ದೆಹಲಿಯಲ್ಲಿ ಸಂಸದರು, ಕೇಂದ್ರ ಸಚಿವರ ಸಭೆ ಕರೆದ ಸಿಎಂ ಡಿ.ಕೆ. ಶಿವಕುಮಾರ್
Author: admin
ನಟ ದರ್ಶನ್ ಮತ್ತು ಸಹಚರರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಆರೋಪಿ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆರೋಪಿ ಅನು ಅಲಿಯಾಸ್ ಅನು ಕುಮಾರ್ ತಂದೆ ಚಂದ್ರಣ್ಣ(60) ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದ ಬೆನ್ನಲ್ಲೇ ಆಘಾತಕ್ಕೊಳಗಾಗಿದ್ದ ಚಂದ್ರಣ್ಣ ಸಾವನ್ನಪ್ಪಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನುಕುಮಾರ್ 7ನೇ ಆರೋಪಿಯಾಗಿದ್ದು, ಇವತ್ತು ಪೊಲೀಸರು ಅನುಕುಮಾರ್ ನನ್ನು ಬಂಧಿಸಿದ್ದರು. ಪುತ್ರನ ಬಂಧನದ ಸುದ್ದಿ ತಿಳಿದ ಚಿತ್ರದುರ್ಗದ ಸಿಹಿನೀರು ಹೊಂಡ ಸಮೀಪ ಇರುವ ಮನೆಯಲ್ಲಿ ಚಂದ್ರಣ್ಣ ಮೃತಪಟ್ಟಿದ್ದಾರೆ. ಅನು@ ಅನು ಕುಮಾರ್ ಕಳೆದ ಮೂರು ವರ್ಷದಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಸಭ್ಯ ಹುಡುಗನಾಗಿದ್ದು ಅಕ್ಕನ ಮದುವೆ ಕೂಡ ಮಾಡಿದ್ದನು. ಆದರೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತಿಗೆ ಮರುಳಾಗಿ ಇದೀಗ ಪೊಲೀಸರ ವಶದಲ್ಲಿದ್ದಾನೆ ಎನ್ನಲಾಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್…
ತೋಳುಗಳ ಕೆಳಗೆ, ಗಂಟಲಿನ ಬಳಿ ಮತ್ತು ಪಾದದ ಕೆಳಗೆ ಕಚಗುಳಿ ಇಟ್ಟಾಗ ಕೂಗಿ, ಕುಣಿದು ಕುಪ್ಪಳಿಸುತ್ತೇವೆ. ಇದ್ದಕ್ಕಿದ್ದಂತೆ ಕಚಗುಳಿ ಇಟ್ಟಾಗ, ನಾವು ತುಂಬಾ ನಗುತ್ತೇವೆ! ಏಕೆಂದರೆ ಮೆದುಳಿನ ಹೈಪೋಥಾಲಮಸ್ ಪ್ರದೇಶವು ಮೃದುವಾದ ಸ್ಪರ್ಶವನ್ನು ಅನುಭವಿಸಿದಾಗ ನಗುವ ಆಜ್ಞೆಯನ್ನು ನೀಡುತ್ತದೆ. ವಿಕಸನೀಯ ಜೀವಶಾಸ್ತ್ರಜ್ಞರು ಮತ್ತು ನರವಿಜ್ಞಾನಿಗಳು ಹೇಳುವ ಪ್ರಕಾರ, ನಮ್ಮ ಮೆದುಳಿನ ಎರಡು ಭಾಗಗಳೇ ಕಚಗುಳಿ ಇಡುವ ಸಂವೇದನೆಗೆ ಕಾರಣವಾಗಿದೆ. ಕಚಗುಳಿಯ ಅವಧಿಯಲ್ಲಿ ಬಿಡುಗಡೆಗೊಂಡ ಎಂಡಾರ್ಫನ್ ಅನ್ನು ಕ್ಯಾರೋಲೀನ್ ಎಂದು ಕೂಡ ಕರೆಯಲಾಗುತ್ತದೆ. ಕಚಗುಳಿಯ ಸಂವೇದನೆಯು ನೋವು ಮತ್ತು ಸ್ಪರ್ಶ ಎರಡಕ್ಕೂ ಸಂಬಂಧಿಸಿದ ನರತಂತುಗಳ ಸಂಜ್ಞೆಗಳನ್ನು ಒಳಗೊಳ್ಳುತ್ತದೆ ಎಂದು ತೋರುತ್ತದೆ. ಮನಃಶಾಸ್ತ್ರಜ್ಞರಾದ ಸ್ಟ್ಯಾನ್ಲಿ ಹಾಲ್ ಮತ್ತು ಆರ್ಥರ್ ಆಲಿನ್ “ಕಚಗುಳಿ”ಯನ್ನು ಎರಡು ಭಿನ್ನ ಪ್ರಕಾರಗಳ ವಿದ್ಯಮಾನಗಳೆಂದು ವಿವರಿಸಿದರು.ಒಂದು ಪ್ರಕಾರವು ಚರ್ಮಕ್ಕೆ ಅಡ್ಡಲಾಗಿ ಬಹಳ ಹಗುರ ಚಲನೆಯಿಂದ ಉಂಟಾಗುತ್ತದೆ. ಈ ಪ್ರಕಾರದ ಕಚಗುಳಿಯನ್ನು ನಿಸ್ಮೆಸಿಸ್ ಎಂದು ಕರೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ ನಗೆಯನ್ನು ಉಂಟುಮಾಡುವುದಿಲ್ಲ ಮತ್ತು ಇದರ ಜೊತೆ ಕೆಲವೊಮ್ಮೆ ನವೆಯ ಸಂವೇದನೆ ಇರುತ್ತದೆ.
ಹಸ್ತ ಮುದ್ರಿಕೆಯ ಪ್ರಕಾರ ಅಂಗೈ ಹಾಗೂ ಬೆರಳುಗಳ ಬುಡದಲ್ಲಿ ಗ್ರಹಗಳು ಇರುತ್ತವೆ. ಈ ಗ್ರಹಗಳ ಸ್ಥಳವನ್ನು ಗ್ರಹಗಳ ಪರ್ವ ಎಂದು ಸಹ ಕರೆಯಲಾಗುವುದು. ಗ್ರಹಗಳ ಪರ್ವ ಯಾವ ರೀತಿಯಲ್ಲಿ ಇರುತ್ತವೆ ಎನ್ನುವುದರ ಆಧಾರದ ಮೇಲೂ ಸಹ ವ್ಯಕ್ತಿಯ ಭವಿಷ್ಯ ಹಾಗೂ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂದು ಹೇಳಲಾಗುವುದು. ಹಲವಾರು ಸಾವಿರ ವರ್ಷಗಳ ಹಿಂದೆ, ಹಿಂದೂ ಋಷಿ ವಾಲ್ಮೀಕಿ ಚರಣಗಳನ್ನು ಒಳಗೊಂಡಿರುವ ಪುಸ್ತಕವನ್ನು ಬರೆದಿದ್ದಾರೆ ಎಂದು ಭಾವಿಸಲಾಗಿದೆ , ಅದರ ಶೀರ್ಷಿಕೆಯು ಇಂಗ್ಲಿಷ್‌ನಲ್ಲಿ ದಿ ಟೀಚಿಂಗ್ಸ್ ಆಫ್ ವಾಲ್ಮೀಕಿ ಮಹರ್ಷಿ ಆನ್ ಪುರುಷ ಹಸ್ತಸಾಮುದ್ರಿಕ ಶಾಸ್ತ್ರ ಎಂದು ಅನುವಾದಿಸುತ್ತದೆ . ಭಾರತದಿಂದ, ಹಸ್ತಸಾಮುದ್ರಿಕ ಕಲೆಯು ಚೀನಾಕ್ಕೆ ಹರಡಿತು,ಟಿಬೆಟ್ ಮತ್ತು ಯುರೋಪ್ನ ಇತರ ದೇಶಗಳಿಗೆ . ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ ಕೈನಲ್ಲಿ ಇರುವ ರೇಖೆಗಳು ಒಂದೊಂದು ರೀತಿಯ ಅದೃಷ್ಟವನ್ನು ತರುತ್ತದೆ..ಪ್ರೀತಿ ಯಾರ ಕೈಯಲ್ಲಿ ಸೂರ್ಯನ ರೇಖೆ ಇರುತ್ತದೋ ಅಂತಹ ವ್ಯಕ್ತಿ ತುಂಬಾ ಅದೃಷ್ಟ ಶಾಲೆಯಂತೆ. ಸೂರ್ಯನ ರೇಖೆಯಿಂದ ಬೇರೆ ಯಾವುದೇ ರೇಖೆಯು ಹೊರಹೊಮ್ಮಿ ಗುರು ಪರ್ವತವನ್ನು ತಲುಪಿದರೆ, ಅಂತಹ ವ್ಯಕ್ತಿಯು ತುಂಬಾ ಅದೃಷ್ಟಶಾಲಿ. ಇದರೊಂದಿಗೆ ಜೀವನದಲ್ಲಿ ಸರ್ಕಾರಿ ಹುದ್ದೆಯೂ…
ದರ್ಶನ್ ಕೇಸ್ ವಿಚಾರದಲ್ಲಿ ಸರ್ಕಾರದ ಮೇಲೆ ಒತ್ತಡದ ಆರೋಪ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಯಾವ ಒತ್ತಡವೂ ಇಲ್ಲ, ಏನು ಇಲ್ಲ ನಾನು ವಿಚಾರಿಸಿದ್ದೇನೆ. 13 ಜನ ಆರೋಪಿಗಳು ಇದಾರೆ. ಬೆಳಗ್ಗೆಯಿಂದ ಟಿವಿಯವರು ಕ್ಯಾಮರಾ ಹಾಕೊಂಡು ಕುಳಿತಿರ್ತಿರಾ. ಪೊಲೀಸರಿಗೆ ಫ್ರೀಯಾಗಿ ಕೆಲಸ ಮಾಡಲು ಅವಕಾಶ ಬೇಕು. ಆ ದೃಷ್ಟಿಯಿಂದ ರಕ್ಷಣೆಗೆ ಶಾಮಿಯಾನ ಹಾಕಿಸಿಕೊಂಡಿದ್ದಾರೆ. ನಮ್ಮ ನಮ್ ಮಿನಿಸ್ಟರ್ ಇನ್ವಾಲ್ವ್ ಆಗಿಲ್ಲ. ಯಾರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡ್ತಿಲ್ಲ. ಈ ಪ್ರಕರಣದ ಬಗ್ಗೆ ನಾವು ರೆಸ್ಪಾನ್ಸ್ ಸಹ ಮಾಡ್ತಿಲ್ಲ ಎಂದರು. ದರ್ಶನ ಪ್ರಕರಣ ಮುಚ್ಚಿಹಾಕಲು ನಿಮ್ಮ ಸಚಿವರು ಯಾರಾದರೂ ಒತ್ತಡ ಹಾಕಿದಾರಾ ಎಂಬ ಪ್ರಶ್ನೆಗೆ, “ಈ ವಿಚಾರವಾಗಿ ನನ್ನ ಬಳಿ ಯಾರೂ ಮಾತನಾಡಿಲ್ಲ. ನನಗೆ ಅಷ್ಟಾಗಿ ಸಂಪರ್ಕವಿಲ್ಲ. ಸಚಿವರ ಪ್ರಯತ್ನದ ಬಗ್ಗೆ ನಿಮ್ಮಿಂದ ಮಾಹಿತಿ ಬಂದಿದೆ. ಈ ಬಗ್ಗೆ ವಿಚಾರಿಸುತ್ತೇನೆ’ ಎಂದರು. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್…
ಬಿಳಿಗಿರಿರಂಗನಬೆಟ್ಟದಲ್ಲಿ ಒಂಟಿ ಸಲಗನ ಆರ್ಭಟದಿಂದ ಗಿರಿಜನರು ನಲುಗಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಬಂಗಲೆಪೋಡು ಬಳಿ ಆನೆ ಆರ್ಭಟಿಸಿದೆ. ಬಿಳಿಗಿರಿರಂಗನಬೆಟ್ಟದ ಮುಖ್ಯರಸ್ತೆಯಲ್ಲಿ ಸಂಚರಿಸಿ ಕಳೆದ ಒಂದು ವಾರದಿಂದ ಸಲಗ ಉಪಟಳ ನೀಡುತ್ತಿದೆ. ಸಾರ್ವಜನಿಕರು ಸಂಚರಿಸುವ ಕೆ.ಎಸ.ಆರ್.ಟಿ.ಸಿ. ಬಸ್ಸನ್ನು ಒಂಟಿಸಲಗ ಅಟ್ಟಾಡಿಸಿದೆ. ಆನೆ ಆರ್ಭಟಕ್ಕೆ ಬಸ್ಸಿನೊಳಗೆ ಪ್ರಯಾಣಿಕರು ಚೀರಾಟ ಮಾಡಿದ್ದಾರೆ. ಬಂಗಲೆ ಪೋಡಿನ ಸುತ್ತಾಮುತ್ತಾ ಪ್ರತಿನಿತ್ಯ ಆನೆ ಉಪಟಳ ನಡೆಸಿದ್ದಾರೆ. ಭಾರೀ ಗಾತ್ರದ ಕೊಂಬಿನಿಂದ ಜನರನ್ನು ಆನೆ ಹೆದರಿಸುತ್ತಿದೆ. ಘೀಳಿಟ್ಟು ರಸ್ತೆಯ ಸುತ್ತಾ ಮುತ್ತಾ ಸಂಚರಿಸಿ ಒಂಟಿಸಲಗ ದಾದಾಗಿರಿ ಮಾಡುತ್ತಿದೆ. ಪೋಡಿನ ಸುತ್ತಾಮುತ್ತಾಲಿನ ಮನೆಗಳಿಗೆ ತೆರಳಲು ಸೋಲಿಗರು ಆತಂಕ ಪಡುತ್ತಿದ್ದಾರೆ. ಆನೆಯ ದಾದಾಗಿರಿ ಕಂಡು ಅರಣ್ಯ ಇಲಾಖೆ ಸಿಬ್ಬಂಧಿಗಳು ದಂಗಾಗಿದೆ. ಕೂಡಲೆ ಆನೆ ಉಪಟಳ ತಪ್ಪಿಸುವಂತೆ ಸೋಲಿಗರು ಆಗ್ರಹಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ:…
ಕುವೈತ್ ನ ವಸತಿ ಅಪಾರ್ಟ್ಮೆಂಟ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 45 ಭಾರತೀಯರು ಸೇರಿದಂತೆ ಒಟ್ಟು 49 ಜನ ಸಜೀವ ದಹನವಾಗಿದ್ದಾರೆ. ಇದೀಗ ಖ್ಯಾತ ಎನ್ ಆರ್ ಐ ಉದ್ಯಮಿ ಮತ್ತು ಯುಎಇ ಮೂಲದ ಲುಲು ಗ್ರೂಪ್ ಅಧ್ಯಕ್ಷ ಎಂಎ ಯೂಸುಫ್ ಅಲಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಕುವೈತ್ ನ ದಕ್ಷಿಣ ನಗರವಾದ ಮಂಗಾಫ್ ನಲ್ಲಿ 196 ವಲಸೆ ಕಾರ್ಮಿಕರು ತಂಗಿದ್ದ ಏಳು ಅಂತಸ್ತಿನ ಕಟ್ಟಡದಲ್ಲಿ ಬುಧವಾರ ಭಾರಿ ಅಗ್ನಿ ಅವಘಡ ಸಂಭವಿಸಿತ್ತು. ಘಟನೆಯಲ್ಲಿ ಕನಿಷ್ಠ 49 ವಿದೇಶಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ. ಪರಿಹಾರ ನಿಧಿಯ ಭಾಗವಾಗಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ನೀಡಲಾಗುವುದು ಎಂದು ಅಬುಧಾಬಿಯಲ್ಲಿ ಲುಲು ಗ್ರೂಪ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ. ಕೇಂದ್ರ ಸರ್ಕಾರ ಮತ್ತು ಕೇರಳ ಸರ್ಕಾರ ಕೂಡ ಮೃತರ ಕುಟುಂಬಕ್ಕೆ ಇದೇ ರೀತಿಯ ಪರಿಹಾರ ಘೋಷಿಸಿವೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು…
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಇದಕ್ಕಾಗಿ ನೀವು ತಿನ್ನುವ ರೊಟ್ಟಿಯ ಪ್ರಮಾಣದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ತೂಕ ಇಳಿಸಿಕೊಳ್ಳುವ ಸಮಯದಲ್ಲಿ ಮಹಿಳೆಯರು 1400 ಕ್ಯಾಲೊರಿಗಳನ್ನು ಸೇವಿಸಬೇಕು. ಅಂತಹ ಸಂದರ್ಭದಲ್ಲಿ ಅವರು ಬೆಳಗ್ಗೆ ಎರಡು ರೊಟ್ಟಿ ಮತ್ತು ಸಂಜೆ ಎರಡು ರೊಟ್ಟಿಗಳನ್ನು ಸೇವಿಸಿದರೆ, ಅದು ಅವರಿಗೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಇನ್ನು, ಪುರುಷರ ವಿಚಾರಕ್ಕೆ ಬಂದರೆ ತೂಕವನ್ನು ಕಳೆದುಕೊಳ್ಳಲು ಅವರು 1700 ಕ್ಯಾಲೋರಿಗಳನ್ನು ತಿನ್ನಲು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪುರುಷರು ಬೆಳಗ್ಗೆ ಮತ್ತು ಸಂಜೆ ಮೂರು ಚಪಾತಿ ತಿನ್ನಬಹುದು. ಗೋಧಿ, ಸಜ್ಜೆ, ಜೋಳದಲ್ಲಿ ಮಾಡಿದ ರೊಟ್ಟಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ತೂಕ ಇಳಿಸುವ ಪ್ಲಾನ್ ನಲ್ಲಿರುವ ಜನರು ರೊಟ್ಟಿಗೆ ಮೊದಲ ಆದ್ಯತೆ ನೀಡುತ್ತಾರೆ. ಕೆಲವರು ತುಂಬಾನೇ ಹಸಿವು ಆದಾಗ 5 ರಿಂದ 6 ಚಪಾತಿ ತಿನ್ನುತ್ತಾರೆ. ಒಂದೇ ಸಮಯಕ್ಕೆ ಇಷ್ಟು ಚಪಾತಿ ಅಥವಾ ರೊಟ್ಟಿ ತಿನ್ನೋದರಿಂದ ಏನೆಲ್ಲಾ ಪರಿಣಾಮ ಬೀರುತ್ತೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ರೊಟ್ಟಿಯಲ್ಲಿ ಕಾರ್ಬ್ಸ್, ಕ್ಯಾಲೋರಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ.…
ಮನೆಯಲ್ಲಿ ಮಂಡಕ್ಕಿ ಮಸಾಲ ತಯಾರಿಸಿ ಡಬ್ಬದಲ್ಲಿ ಶೇಖರಿಸಿಟ್ಟಿರುತ್ತಾರೆ. ಸಂಜೆಯ ಸ್ನಾಕ್ಸ್‌ಗೆ, ಟೈಂ ಪಾಸ್ ಆಗಲು ಈ ಮಂಡಕ್ಕಿಯನ್ನು ತಿನ್ನುತ್ತಾರೆ. ನಾವೇನೋ ಮಂಡಕ್ಕಿಯನ್ನು ಟೈಂ ಪಾಸ್‌ಗೆಂದು ತಿನ್ನುತ್ತೇವೆ. ಆದರೆ ಅದರಲ್ಲಿರುವ ಆರೋಗ್ಯ ಪ್ರಯೋಜನಗಳು ಯಾವುವು? ಮಂಡಕಕ್ಕಿಯ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಯಾಕೆ ಅನ್ನೋದನ್ನು ನಾವಿಲ್ಲಿ ನೋಡೋಣ. ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ಮಂಡಕ್ಕಿಯು ಒಂದು ಪ್ರಬಲವಾದ ಜೀರ್ಣಕಾರಿ ಉತ್ತೇಜಕವಾಗಿದೆ. ಈ ಆಹಾರವು ಹೊಟ್ಟೆ ಮತ್ತು ಕರುಳಿನಲ್ಲಿರುವ ಆಹಾರದ ಕಣಗಳನ್ನು ಜೀರ್ಣಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಇದರಿಂದಾಗಿ ಕರುಳಿನ ಮೂಲಕ ಅಗತ್ಯವಾದ ಪೋಷಕಾಂಶ ಹೀರಿಕೊಳ್ಳುವುದನ್ನು ಹೆಚ್ಚಿಸುತ್ತದೆ. ಇದು ಕಿಬ್ಬೊಟ್ಟೆಯ ಅನಿಲವನ್ನುಹೊರಹಾಕಿ ಕಿಬ್ಬೊಟ್ಟೆ ಉಬ್ಬುವುದು, ಎದೆಯುರಿ, ಅತಿಸಾರ, ವಾಯು, ಜಠರ ಹುಣ್ಣು ಮತ್ತು ಗ್ಯಾಸ್ಟಿಕ್ ನೋವಿನಂತಹ ಜಠರಗರುಳಿನ ಅಸ್ವಸ್ಥತೆಗಳ ಚಿಕಿತ್ಸೆಗೆ ಸಹಕಾರಿಯಾಗಿದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕಡಿಮೆ ಸೋಡಿಯಂ ಅಂಶವನ್ನು ಹೊಂದಿರುವ ಮಂಡಕ್ಕಿಯು, ರಕ್ತದೊತ್ತಡದ ಮಟ್ಟವನ್ನು ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಮತ್ತು ಕಡಿಮೆ ರಕ್ತದೊತ್ತಡದ ಪರಿಸ್ಥಿತಿಗಳಲ್ಲಿ ಇದು ಅತ್ಯಂತ ಪ್ರಮುಖವಾಗಿದೆ.…
ಒಬ್ಬರ ಜೀವ ಉಳಿಸಲು ವೈದ್ಯರೇ ಆಗಬೇಕಿಲ್ಲ. ರಕ್ತದಾನ ಮಾಡುವ ಮೂಲಕವೂ ಜೀವ ಉಳಿಸಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ಬೆಂಗಳೂರಿನಲ್ಲಿ ಇಂದು ವಿಧಾನ ಸೌಧದಿಂದ ಕಂಠೀರವ ಕ್ರೀಡಾಂಗಣದ ವರೆಗೆ ರಕ್ತ ದಾನದ ಕುರಿತು ನಡೆದ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ರಕ್ತಕ್ಕಿರುವ ಬೇಡಿಕೆಯನ್ನ ಗಮನದಲ್ಲಿಟ್ಟುಕೊಂಡು ರಕ್ತದಾನಕ್ಕೆ ನಾವೆಲ್ಲರು ಮುಂದಾಗಬೇಕಿದೆ. ಹೆಚ್ಚು ರಕ್ತದಾನದ ಅಗತ್ಯತೆ ಇದ್ದು, ರಕ್ತದಾನ ಮಾಡುವ ಮೂಲಕ ಹಲವರ ಜೀವನದಲ್ಲಿ ಬದಲಾವಣೆ ತರಬಹುದು ಎಂದು ಹೇಳಿದರು. ರಕ್ತದಾನದ ಕುರಿತು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವತ್ತ ಆರೋಗ್ಯ ಇಲಾಖೆ ಹಾಗೂ ಕರ್ನಾಟಕ ಸ್ಟೇಟ್ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಅವರು ಹಮ್ಮಿಕೊಂಡಿದ್ದ ಈ ರೀತಿಯ ಜಾಥಾ ಕಾರ್ಯಕ್ರಮಗಳು ಉತ್ತಮವಾದವು ಎಂದರು. ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 14 ರಂದು ಜಗತ್ತಿನಾದ್ಯಂತ 2004 ರಿಂದ ಆಚರಿಸಿಕೊಂಡು ಬರಲಾಗಿತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಸಹ ವಿಶ್ವರಕ್ತದಾನಿಗಳ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ…
ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹರ್ನಿಯಾ ಹಿನ್ನೆಲೆ ಶಸ್ತ್ರ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಮಲ್ಟಿಸ್ಪೆಷಾಲಿಟಿ ಘಟಕಕ್ಕೆ ದಾಖಲಾಗಿದ್ದಾನೆ. 60ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾಗಿರುವ ರವಿ ಪೂಜಾರಿ ಮೇಲೆ ಕರ್ನಾಟಕ, ಮಹಾರಾಷ್ಟ್ರ, ಕೇರಳ ಸೇರಿ ಹಲವೆಡೆ ಕೇಸ್ ದಾಖಲಾಗಿದ್ದವು. ಭೂಗತವಾಗಿದ್ದುಕೊಂಡೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ರವಿ ಪೂಜಾರಿಯನ್ನು ಅರೆಸ್ಟ್ ಮಾಡಲು ಭಾರತದ ತನಿಖಾ ಸಂಸ್ಥೆಗಳು ಸೆನೆಗಲ್ ದೇಶದೊಂದಿಗೆ ಸಂಪರ್ಕದಲ್ಲಿದ್ದವು. ಈ ಹಿನ್ನೆಲೆಯಲ್ಲಿ 2019 ರಲ್ಲಿ ಸೆನೆಗಲ್ ಪೊಲೀಸರು ರವಿ ಪೂಜಾರಿಯನ್ನು ಬಂಧಿಸಲಾಗಿತ್ತು. ವಿಚಾರಣೆ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296 ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA