ನಟ ದರ್ಶನ್ ಮತ್ತು ಸಹಚರರಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಆರೋಪಿ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಆರೋಪಿ ಅನು ಅಲಿಯಾಸ್ ಅನು ಕುಮಾರ್ ತಂದೆ ಚಂದ್ರಣ್ಣ(60) ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದ ಬೆನ್ನಲ್ಲೇ ಆಘಾತಕ್ಕೊಳಗಾಗಿದ್ದ ಚಂದ್ರಣ್ಣ ಸಾವನ್ನಪ್ಪಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅನುಕುಮಾರ್ 7ನೇ ಆರೋಪಿಯಾಗಿದ್ದು, ಇವತ್ತು ಪೊಲೀಸರು ಅನುಕುಮಾರ್ ನನ್ನು ಬಂಧಿಸಿದ್ದರು. ಪುತ್ರನ ಬಂಧನದ ಸುದ್ದಿ ತಿಳಿದ ಚಿತ್ರದುರ್ಗದ ಸಿಹಿನೀರು ಹೊಂಡ ಸಮೀಪ ಇರುವ ಮನೆಯಲ್ಲಿ ಚಂದ್ರಣ್ಣ ಮೃತಪಟ್ಟಿದ್ದಾರೆ.
ಅನು@ ಅನು ಕುಮಾರ್ ಕಳೆದ ಮೂರು ವರ್ಷದಿಂದ ಆಟೋ ಚಾಲಕ ವೃತ್ತಿ ಮಾಡುತ್ತಿದ್ದು, ಸಭ್ಯ ಹುಡುಗನಾಗಿದ್ದು ಅಕ್ಕನ ಮದುವೆ ಕೂಡ ಮಾಡಿದ್ದನು. ಆದರೆ ದರ್ಶನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರನ ಮಾತಿಗೆ ಮರುಳಾಗಿ ಇದೀಗ ಪೊಲೀಸರ ವಶದಲ್ಲಿದ್ದಾನೆ ಎನ್ನಲಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA