Author: admin

ಕೆಲ ವಾರಗಳಿಂದ ತಟಸ್ಥವಾಗಿದ್ದ ಅಕ್ಕಿ ಬೆಲೆ ಈಗ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಗೋಧಿ ಸಹ ತುಸು ಏರಿಕೆಯತ್ತ ಸಾಗಿದೆ.ಸೊಪ್ಪಿನ ದರ ಇಳಿಕೆಯತ್ತ ಮುಖ ಮಾಡಿದ್ದರೆ, ಟೊಮೆಟೊ ಗಗನಮುಖಿಯಾಗಿದ್ದು, ಬೀನ್ಸ್ ಸೇರಿದಂತೆ ತರಕಾರಿ ಬೆಲೆ ಅಲ್ಪ ಇಳಿಕೆಯಾಗಿದೆ. ಅಕ್ಕಿ ಧಾರಣೆ ತುರು ಏರಿಕೆ ಕಂಡಿದ್ದು, ಕೋಳಿ ಮಾಂಸದ ಬೆಲೆಯಲ್ಲಿ ತುಂಬಾ ವ್ಯತ್ಯಾಸ ಕಂಡು ಬಂದಿಲ್ಲ. ಮಸಾಲೆ ಪದಾರ್ಥಗಳ ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಮೆಣಸು ಮತ್ತೆ ಕೆ.ಜಿಗೆ ₹40 ಏರಿಕೆಯಾಗಿದೆ. ಜೀರಿಗೆ, ಮೆಣಸಿನಕಾಯಿ, ಗೋಡಂಬಿ ದರ ಕೊಂಚ ಹೆಚ್ಚಳ ಕಂಡಿದೆ. ಈ ವಾರ ಸೊಪ್ಪಿನ ಧಾರಣೆ ಅರ್ಧದಷ್ಟು ತಗ್ಗಿದೆ. ಹಿಂದಿನ ವಾರಗಳಲ್ಲಿ ಕೆ.ಜಿ ₹200 ಗಡಿ ದಾಟಿದ್ದರೆ, ಈಗ ₹100 ಸಮೀಪಕ್ಕೆ ಬಂದಿದೆ. ಆದರೆ ಮೆಂತ್ಯ ಸೊಪ್ಪಿನ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಕೊತ್ತಂಬರಿ ಸೊಪ್ಪು ಕೆ.ಜಿ ₹100-120, ಸಬ್ಬಕ್ಕಿ ಕೆ.ಜಿ ₹100-120, ಮೆಂತ್ಯ ಸೊಪ್ಪು ಕೆ.ಜಿ ₹150-160, ಪಾಲಕ್ ಸೊಪ್ಪು (ಕಟ್ಟು) ₹70-80ಕ್ಕೆ ಇಳಿಕೆ ಕಂಡಿದೆ. ಬೇಳೆ ಕಾಳು, ಧಾನ್ಯಗಳ ಧಾರಣೆ ಏರಿಳಿತ…

Read More

ರಾಜ್​ ಕುಮಾರ್ ಕುಟುಂಬದ ಕುಡಿ ಯುವ ರಾಜ್‌ ಕುಮಾರ್‌ ಅವರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.ಪತ್ನಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಉಂಟಾಗಿದೆ ಎಂದು ಯುವ ವಿಚ್ಛೇದನ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇತ್ತು ಎಂದು ಮೂಲ ತಿಳಿಸಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇದ್ದರೂ, ಪುನೀತ್‌ ರಾಜ್ ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು ಎನ್ನಲಾಗಿದೆ. ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ. ಕಳೆದೊಂದು ವರ್ಷದಿಂದ ದಂಪತಿ ದೂರವೇ ಇದ್ದರು ಎನ್ನಲಾಗಿದೆ. ಸದ್ಯ ಅಮೆರಿಕಾದಲ್ಲಿ ಶ್ರೀದೇವಿ ಉನ್ನತ ಶಿಕ್ಷಣಕ್ಕಾಗಿ ವಾಸಿಸುತ್ತಿದ್ದಾರೆ. ಯುವ ಡಿವೋರ್ಸ್ ನೋಟಿಸ್​ ಗೆ ಶ್ರೀದೇವಿ ಅವರು ಯಾವುದೇ ರೀತಿಯ ಪ್ರತಿಕ್ರಿಯೆ ಇನ್ನೂ ನೀಡಿಲ್ಲ. ʻಯುವ…

Read More

ಸದೃಡ ದೇಹ ಹೊಂದಬೇಕು, ಸದಾ ಫಿಟ್ ಎಂಡ್ ಫೈನ್ ಆಗಿ ಇರಬೇಕು ಎಂಬ ಕಾರಣಕ್ಕೆ ಪ್ರೋಟೀನ್​​ ಪೌಡರ್​ ಸಹ ಬಳಸುತ್ತಾರೆ. ಆದರೆ ಈ ಪ್ರೋಟೀನ್‌ ಪೌಡರ್‌ ಬಳಸುವ ಮುನ್ನ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ICMR ಭಾರತೀಯರ ಫುಡ್ ಡಯಟ್ರಿ ಗೈಡ್‌ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ ಪೌಡರ್ ಬಳಕೆದಾರರನ್ನು ಅಚ್ಚರಿ ಮೂಡಿಸುವ ಅಂಶಗಳು ಈ ವರದಿಯಲ್ಲಿವೆ. ಅತಿಯಾಗಿ ಪ್ರೋಟಿನ್ ಪೌಡರ್ ಸೇವನೆಯಿಂದ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದಲ್ಲಿ ಅತಿಹೆಚ್ಚು ಪ್ರೋಟೀನ್ ಪೌಡರ್‌ಗಳು ಮಾರಟವಾಗುತ್ತಿವೆ. ಇದರಲ್ಲಿ ಸಕ್ಕರೆ, ಸೋಡಿಯಂ, ಪೋಟ್ಯಾಷಿಯಂ ಸೇರಿದಂತೆ ಹಲವು ಕೆಮಿಕಲ್ ಅಂಶಗಳು ಪತ್ತೆಯಾಗಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿರುವ ಅನೇಕ ಕಂಪನಿಗಳ ಪ್ರೋಟೀನ್ ಪೌಡರ್‌ಗಳಲ್ಲಿ ಜೀವಕ್ಕೆ ಕುತ್ತು ತರುವಂತಹ ಕೆಮಿಕಲ್ ಬಳಕೆ ಮಾಡಲಾಗುತ್ತಿದೆಯಂತೆ. ಹೆಚ್ಚಾಗಿ ಸಕ್ಕರೆ ಅಂಶಗಳು ಪ್ರೋಟಿನ್ ಪೌಡರ್​ ಗಳಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಡಯಾಬಿಟಿಸ್‌ನಂತಹ ಸಮಸ್ಯೆ ಬರುವ ಸಾಧ್ಯತೆಯಿದೆ. ದೇಹಕ್ಕೆ ಕ್ಯಾಲೋರಿ ಒದಗಿಸುವ ಹಿನ್ನಲೆ ಅದರಲ್ಲಿ ಬಳಸುವ ಒಂದಿಷ್ಟು…

Read More

ಬೆಂಗಳೂರು: ಆಂಬುಲೆನ್ಸ್​ ನ್ನು ಅಡ್ಡಗಟ್ಟಿ​ ಚಾಲಕನ ಮೇಲೆ ಹಲ್ಲೆ ಮಾಡಿ ಪುಂಡಾಟ ನಡೆಸಿದ ಘಟನೆ ಬೆಂಗಳೂರಿನ ನೆಲಮಂಗಲ ಟೋಲ್ ಬಳಿ ನಡೆದಿದೆ. ಆಂಬ್ಯೂಲೆನ್ಸ್ ಚಾಲಕ ಜಾನ್ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ತುಮಕೂರಿನ ಖಾಸಗಿ ಆಸ್ಪತ್ರೆಯಿಂದ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರೋಗಿಯೊಬ್ಬರನ್ನು ತುರ್ತು ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಆಂಬ್ಯೂಲೆನ್ಸ್​​​ ನ್ನು ಕುಡಿದ ನಶೆಯಲ್ಲಿದ್ದ ನಾಲ್ವರು ಕಾರಿನಲ್ಲಿ ಚೇಸ್ ಮಾಡಿ ಅಡ್ಡಗಟ್ಟಿ ಚಾಲಕನನ್ನು ಥಳಿಸಿದ್ದಾರೆ. ಐದು ತಿಂಗಳ ಮಗುವಿಗೆ ತುರ್ತು ಚಿಕಿತ್ಸೆಗೆ ಆಕ್ಸಿಜನ್ ಮೂಲಕ ಕರೆ ತರಲಾಗುತ್ತಿತ್ತು. ಮಗುವಿನ ಕಂಡಿಷನ್ ಕ್ರಿಟಿಕಲ್ ಇದೆ ಬಿಟ್ಬಿಡಿ ಎಂದು ಮಗುವಿನ ಪೋಷಕರು ಕೈ ಮುಗಿದರೂ ಯುವಕರು ಬಿಡದೇ ಪುಂಡಾಟ ಮೆರೆದಿದ್ದಾರೆ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಹೊಸಕೋಟೆ: ಬಟ್ಟೆ ಒಣ ಹಾಕಲು ಹೋದ ಬಾಲಕನಿಗೆ ವಿದ್ಯುತ್ ಶಾಕ್ ​​​​​ನಿಂದ ಬಾಲಕ ಮೃತಪಟ್ಟಿರುವ ಘಟನೆ ಹೊಸಕೋಟೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ಸಾಯಿಭುವನ್ ಮೃತ ಬಾಲಕನಾಗಿದ್ದಾನೆ. ಬೆಳಗ್ಗೆ ಹಾಸ್ಟೆಲ್​​​ ಮಹಡಿ ಮೇಲೆ ಬಟ್ಟೆ ಒಣ ಹಾಕಲು ಹೋದಾಗ ಹಾಸ್ಟೆಲ್ ಮೇಲಿನ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದು, ಮೃತ ವಿದ್ಯಾರ್ಥಿ ಹೊಸಕೋಟೆ ತಾಲೂಕಿನ ಸೂಲಿಬೆಲೆ ನಿವಾಸಿ ಎನ್ನಲಾಗಿದೆ. ಬಾಲಕನ ಸಾವಿಗೆ ವಿದ್ಯಾರ್ಥಿನಿಲಯದ ವಾರ್ಡನ್, ಸಮಾಜ ಕಲ್ಯಾಣ ಇಲಾಖೆ ಮತ್ತು ಬೆಸ್ಕಾಂ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಳ್ಳದೆ ಇರುವುದು ಕಾರಣ ಎಂದು ಪೋಷಕರು ಆರೋಪಿಸಿದ್ದು, ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಮೈಸೂರು ಸಿದ್ಧಾರ್ಥನಗರ ಸಮೀಪ ಬನ್ನೂರು ರಸ್ತೆಯಲ್ಲಿರುವ ಅನ್ನದಾನೇಶ್ವರ ಮಠದ ಶಿವಾನಂದ ಸ್ವಾಮೀಜಿ (90) ಅವರನ್ನು ಸೋಮವಾರ ಮಾರಕಾಸ್ತ್ರದಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ಮಾಹಿತಿ ಪ್ರಕಾರ, ಆಸ್ತಿ ವಿಚಾರದಲ್ಲಿ ಇದ್ದ ತಕರಾರು ಕಾರಣ ಎನ್ನಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ನಜರ್‌ಬಾದ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿ ರವಿ (60) ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಆತ, ಸ್ವಾಮೀಜಿ ಅವರ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಮಂಚದ ಮೇಲೆ ಮಲಗಿದ್ದಲ್ಲೇ ಶಿವಾನಂದ ಸ್ವಾಮೀಜಿಗೆ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296  

Read More

ಡಾ. ರಾಜ್‌ ಕುಮಾರ್‌ ಅವರ ಕುಟುಂಬದ ಕುಡಿ ಗುರು ರಾಜ್‌ ಕುಮಾರ್‌ / ಯುವ ರಾಜ್‌ ಕುಮಾರ್‌ ಅವರ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಯುವ ರಾಜ್‌ ಕುಮಾರ್‌ ಅವರು ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಡಾ ರಾಜ್‌ ಕುಮಾರ್ ಅವರ ಮೊಮ್ಮಗ ಯುವರಾಜ್‌ ಕುಮಾರ್ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದು, ಕಳೆದ 6 ತಿಂಗಳಿನಿಂದ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರೆ. ಜೂ. 6 ರಂದು ವಿಚ್ಛೇದನಕ್ಕಾಗಿ ಯುವ ರಾಜ್‌ ಕುಮಾರ್‌ ಅವರು ತಮ್ಮ ಪತ್ನಿ ಶ್ರೀದೇವಿ ಭೈರಪ್ಪ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಜು. 4 ಕ್ಕೆ ವಿಚಾರಣೆ ನಿಗದಿ ಮಾಡಿದೆ. ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ಈ ಜೋಡಿ ಹಸೆಮಣೆ ಏರಿದ್ದರು. ಅಲ್ಲದೇ, ಶ್ರೀದೇವಿ ಭೈರಪ್ಪ ಡಾ. ರಾಜ್‌ಕುಮಾರ್ ಸಿವಿಲ್ ಅಕಾಡೆಮಿಯ ಜವಾಬ್ದಾರಿಯನ್ನು ಸಹ ವಹಿಸಿಕೊಂಡಿದ್ದರು. ನಮ್ಮತುಮಕೂರಿನ ಕ್ಷಣ ಕ್ಷಣದ…

Read More

ಅಪ್ರಾಪ್ತ ಬಾಲಕನೊಬ್ಬ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ನಡುರಸ್ತೆಯಲ್ಲಿ ಹಣೆಗೆ ಸಿಂಧೂರವಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೀಕ್ಷಕರನ್ನು ಆಶ್ಚರ್ಯ ಮೂಡಿಸಿದೆ. ಸದ್ಯ ಅಪ್ರಾಪ್ತ ಬಾಲಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ಸಿಂಧೂರವಿಟ್ಟಿರುವ ಈ ಘಟನೆ ಯಾವ ಪ್ರದೇಶದಲ್ಲಿ ನಡೆದಿದೆ, ಅವರಿಬ್ಬರೂ ಯಾರು ಮತ್ತು ಯಾವ ಧರ್ಮದವರು ಎಂದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಈ ಘಟನೆಯನ್ನು ಸ್ಥಳದಲ್ಲಿದ್ದವರೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರಿಸಿದ್ದು ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಶಾಲಾ ಬ್ಯಾಗ್ ಹಾಕಿಕೊಂಡು ತನ್ನ ಸ್ನೇಹಿತೆಯರೊಂದಿಗೆ ಬರುತ್ತಿದ್ದ ವಿದ್ಯಾರ್ಥಿನಿಯ ಹಣೆಗೆ ಈ ಅಪ್ರಾಪ್ತ ಬಾಲಕ ಸಿಂಧೂರವಿಟ್ಟಿದ್ದಾನೆ. ಆಕೆಯೂ ಇದಕ್ಕೆ ಯಾವುದೇ ಪ್ರತಿರೋಧ ತೋರಿಸದಿರುವುದನ್ನು ಗಮನಿಸಿದರೆ ಪರಸ್ಪರ ಒಪ್ಪಿಗೆಯಿಂದಲೇ ನಡೆದಿದೆ ಎಂದು ಹೇಳಬಹುದಾಗಿದೆ. ಅಷ್ಟೇ ಅಲ್ಲ, ಶಾಲಾ ಬಾಲಕಿ ಜೊತೆಯಿದ್ದ ವಿದ್ಯಾರ್ಥಿನಿಯರು ಕೂಡ ಅವರ ಪಕ್ಕದಲ್ಲೇ ಇದ್ದುದನ್ನು ಗಮನಿಸಬಹುದು. ಈ ವಿಡಿಯೋ ಈಗ ಫುಲ್ ವೈರಲ್ ಆಗಿದ್ದು ನೆಟ್ಟಿಗರು ಹಲವು ರೀತಿ ಕಮೆಂಟ್ ಮಾಡುತ್ತಿದ್ದಾರೆ. ಮೊದಲೇ ಸಮಾಜದಲ್ಲಿ ಯಾವಾಗ ಏನು ನಡೆಯುತ್ತದೆ ಎನ್ನುವುದು ತಿಳಿಯುವುದಿಲ್ಲ. ಇನ್ನು…

Read More

ಅಮೆರಿಕಾದ ನ್ಯೂಯಾರ್ಕ್‌ನಲ್ಲಿ ಭಾನುವಾರ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ ನ 19ನೇ ಪಂದ್ಯದಲ್ಲಿ ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 6 ರನ್ ಗಳ ರೋಚಕ ಗೆಲುವು ಸಾಧಿಸಿದೆ. ಇಂದು ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ, 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸಾಧರಣ ಮೊತ್ತ ಕಲೆ ಹಾಕಿತು. ಭಾರತ ತಂಡದ ಬ್ಯಾಟಿಂಗ್ ತೀರಾ ಕಳಪೆಯಾಗಿತ್ತು. ಅಗ್ರ ಕ್ರಮಾಂಕ, ಮಧ್ಯಮ ಕ್ರಮಾಂಕ ಎಲ್ಲವೂ ವಿಫಲವಾಯಿತು. ಹೀಗಾಗಿ ತಂಡ 119 ರನ್‌ ಗಳಿಗೆ ಆಲೌಟ್ ಆಯಿತು. ಗೆಲುವಿಗೆ 120 ರನ್ ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 113 ರನ್ ಗಳಿಸುವ ಮೂಲಕ ಸೋಲು ಒಪ್ಪಿಕೊಂಡಿತು. ಟೀಂ ಇಂಡಿಯಾ ಬೌಲರ್ ಗಳು ಅದ್ಭುತವಾಗಿ ಬೌಲಿಂಗ್ ಮಾಡಿ, ಪಾಕಿಸ್ತಾನದ ಬ್ಯಾಟರ್ ಗಳು ರನ್‌…

Read More

ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿರಂಗನ ಬೆಟ್ಟದ ಮೇಲಿಂದ ಜಿಗಿದು ರಿಯಲ್ ಎಸ್ಟೇಟ್ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಹದೇವನಾಯಕ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿಯಾಗಿದ್ದಾರೆ. ಬೆಟ್ಟದ ಕಡಿದಾದ ಜಾಗದಲ್ಲಿ ಸಿಲುಕಿದ್ದ ಮಹದೇವನಾಯಕ ಅವರ ಮೃತದೇಹವನ್ನು ಶನಿವಾರ ಡ್ರೋನ್ ಬಳಸಿ ಪತ್ತೆ ಮಾಡಲಾಗಿದೆ. ಮಹದೇವನಾಯಕ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಕವಲಂದೆ ಕುಂಬಾರಹಳ್ಳಿಯ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಮಹದೇವನಾಯಕ ಮೇ 5 ರಂದು ನಾಪತ್ತೆಯಾಗಿದ್ದಾರೆ ಎಂದು ಕವಲಂದೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜೂ.6 ರಂದು ಬಿಳಿಗಿರಿರಂಗನಬೆಟ್ಟದ ಬಳಿ ಬೈಕ್ ಪತ್ತೆಯಾಗಿದೆ. ಈ ಜಾಡನ್ನು ಹಿಡಿದ ಪೊಲೀಸರು ಶನಿವಾರ ಡ್ರೋನ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದ್ದಾರೆ. ಡ್ರೋನ್ ಕ್ಯಾಮೆರಾದಲ್ಲಿ ಕಮರಿನ ನಡುವೆ ಮೃತದೇಹಸಿಲುಕಿರುವುದು ಪತ್ತೆಯಾಗಿದೆ. ಶವದ ಮೇಲಿನ ಬಟ್ಟೆಯನ್ನು ಸಂಬಂಧಿಕರು ಗುರುತಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ ಎನ್ನಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More