Author: admin

ಸುವಾಸನೆ ಭರಿತವಾದ ಜಾಕಾಯಿಯನ್ನು ಭಾರತ, ಬರ್ಮಾ, ಮಲೇಷಿಯಾ, ಇಂಡೋನೇಷಿಯಾ ಮುಂತಾದ ದೇಶಗಳಲ್ಲಿ ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಜಾಕಾಯಿಗೆ ಸುಗಂಧ ದ್ರವ್ಯಗಳಲ್ಲಿ ಪ್ರತ್ಯೇಕ ಸ್ಥಾನವಿದೆ. ಆಹಾರಕ್ಕೆ ರುಚಿ, ಸುವಾಸನೆ ಹೆಚ್ಚಿಸುತ್ತೆ. ವಿಶೇಷವಾದ ಪರಿಮಳ ಹಾಗೂ ಔಷಧೀಯ ಗುಣಗಳಿಂದ ಆಯುರ್ವೇದದಲ್ಲಿ ಜಾಕಾಯಿಗೆ ಮಹತ್ವದ ಸ್ಥಾನ ನೀಡಲಾಗಿದೆ. ಪ್ರಪಂಚದಲ್ಲಿ ಎಲ್ಲಾ ಕಡೆ ಬಳಸುವ ಮಸಾಲೆ ಪದಾರ್ಥ ಇದಾಗಿದೆ. ಜಾಯಿಕಾಯಿಯನ್ನು ಅಡಿಗೆಗೆ ಮಾತ್ರವಲ್ಲದೆ, ಆಯುರ್ವೇದ ಔಷಧೀಯವಾಗಿಯೂ, ಆರೋಗ್ಯ ರಕ್ಷಣೆಯಲ್ಲೂ ಬಳಸುತ್ತಾರೆ. ಈ ವೃಕ್ಷ ಸುಮಾರು 25 ರಿಂದ 60 ಅಡಿ ಎತ್ತರ ಬೆಳೆಯುತ್ತದೆ. ಇನ್ನು ಜಾಪತ್ರೆ ಅಥವಾ ಜಾಯಿಕಾಯಿ ಸಾಮಾನ್ಯವಾಗಿ ಆಗ್ನೇಯ ಏಶಿಯಾ ಖಂಡದಲ್ಲಿ ಬೆಳೆಯುವ ಸದಾ ಹಸಿರಾಗಿರುವ ಮರಗಳಲ್ಲೊಂದು. ಇದನ್ನು ಸಾಂಬಾರು ಪದಾರ್ಥವಾಗಿ ಬಳಸುತ್ತಾರೆ. ಇದರ ಎಣ್ಣೆ ಸುಗಂಧ ದ್ರವ್ಯಗಳನ್ನು ತಯಾರಿಸುವಲ್ಲಿ, ಔಷಧಗಳಲ್ಲಿ ಬಳಸುತ್ತಾರೆ. ಜಾಯಿಕಾಯಿ ಮಾನಸಿಕ ಒತ್ತಡವನ್ನು ತಗ್ಗಿಸುತ್ತದೆ, ಕಾಮ ವಾಂಛೆಯನ್ನು ಹೆಚ್ಚಿಸುತ್ತದೆ, ವೀರ್ಯ ಕಣಗಳ ಉತ್ಪತ್ತಿಯನ್ನು ವೃದ್ಧಿ ಮಾಡುತ್ತೆ. ಜಾಕಾಯಿ ನೀರಿನಲ್ಲಿ ಬೇಯಿಸಿ, ನೆರಳಲ್ಲಿ ಒಣಗಿಸಿ, ಚೂರ್ಣ ಮಾಡಿಟ್ಟುಕೊಂಡು, ಬೆಳಗ್ಗೆ ಮತ್ತು ಸಂಜೆ…

Read More

ತೆಲುಗು ದೇಶಂ ಪಕ್ಷದ ಸಂಸದ ಕಿಂಜರಾಪು ರಾಮಮೋಹನ್ ನಾಯ್ಡು 36ರ ವಯಸ್ಸಿನಲ್ಲಿ ಕೇಂದ್ರ ಸಚಿವರಾಗಿ ದಾಖಲೆ ಬರೆದಿದ್ದಾರೆ. ರಾಮಮೋಹನ್ ನಾಯ್ಡು ಅವರಿಗೆ ಈಗ ವಯಸ್ಸು ಕೇವಲ 36 ವರ್ಷ. ಇಷ್ಟು ಕಿರಿಯ ವಯಸ್ಸಿನಲ್ಲಿ ಕೇಂದ್ರ ಮಂತ್ರಿಯಾದ ದಾಖಲೆ ಅವರದ್ದಾಗಿದೆ. ನರೇಂದ್ರ ಮೋದಿ ಸತತ ಮೂರು ಬಾರಿ ಪ್ರಧಾನಿ ಆದಂತೆ ರಾಮಮೋಹನ್ ನಾಯ್ಡು ಸತತ ಮೂರನೇ ಬಾರಿ ಸಂಸದರಾಗಿದ್ದಾರೆ. 2014ರಲ್ಲಿ ಅವರು 26ನೇ ವಯಸ್ಸಿಗೆ ಸಂಸದರಾಗಿದ್ದರು. ಎರಡನೇ ಅತ್ಯಂತ ಕಿರಿಯ ವಯಸ್ಸಿನ ಸಂಸದರೆಂಬ ದಾಖಲೆಯನ್ನು ಅವರು ಬರೆದಿದ್ದರು. ಈಗ ಅತ್ಯಂತ ಕಿರಿಯ ವಯಸ್ಸಿನ ಕೇಂದ್ರ ಮಂತ್ರಿ ಎಂಬ ದಾಖಲೆ ಅವರದ್ದಾಗಿದೆ. ಆಂಧ್ರದ ಶ್ರೀಕಾಕುಲಂ ಕ್ಷೇತ್ರದಿಂದ ಟಿಡಿಪಿ ಟಿಕೆಟ್​ನಲ್ಲಿ ಸತತವಾಗಿ ಮೂರನೇ ಬಾರಿ ಗೆದ್ದಿರುವ ರಾಮಮೋಹನ್ ರೆಡ್ಡಿ ಅವರು ಮಾಜಿ ಕೇಂದ್ರ ಸಚಿವ ಕೆ ಯರನ್ ನಾಯ್ಡು ಅವರ ಮಗ. ಪಕ್ಷ ಸಂಘಟನೆಯಲ್ಲಿ ಮಾತ್ರವಲ್ಲ, ಸಂಸದರಾಗಿಯೂ ರಾಮಮೋಹನ್ ನಾಯ್ಡು ಮೆಚ್ಚುಗೆ ಪಡೆದಿದ್ದಾರೆ. 2020ರಲ್ಲಿ ಸರ್ಕಾರದಿಂದ ಸಂಸದ ರತ್ನ ಪ್ರಶಸ್ತಿ ಕೂಡ ಲಭಿಸಿತ್ತು. ನಮ್ಮತುಮಕೂರಿನ ಕ್ಷಣ…

Read More

ಚಾಮರಾಜನಗರ: ಕಾವೇರಿ ನದಿಯಲ್ಲಿ ಬಹಿರ್ದೆಸೆಗೆ ತೆರಳಿದ್ದವನ ಮೇಲೆ ಮೊಸಳೆ ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕೊಳ್ಳೇಗಾಲ ತಾಲೂಕಿನ ಯಡಕುರಿಯಾ ಗ್ರಾಮದ ಕಾವೇರಿ ನದಿಯಲ್ಲಿ ಯುವಕ ಬಹಿರ್ದೆಸೆಗೆ ತೆರಳಿದ್ದ. ಇದೇ ವೇಳೆ ಆತನ ಮೇಲೆ ಮೊಸಳೆ ದಾಳಿ ಮಾಡಿದೆ. ಸತ್ತೇಗಾಲ ಗ್ರಾಮದ ನಿವಾಸಿ ನಂಜುಂಡಸ್ವಾಮಿ (37) ಗಾಯಗೊಂಡ ವ್ಯಕ್ತಿ ಎನ್ನಲಾಗಿದೆ. ಕಾವೇರಿ ನದಿಯ ಬಳಿ ಬಹಿರ್ದೆಸೆಗೆ ತೆರಳಿದ್ದಾಗ ಘಟನೆ ಜರುಗಿದೆ. ಮೊಸಳೆ ದಾಳಿಯಿಂದ ಮುಖ ಹಾಗೂ ಕೈಗೆ ಗಾಯವಾಗಿದೆ. ಮೊಸಳೆಯಿಂದ ತಪ್ಪಿಸಿಕೊಂಡು ನದಿಯ ದಡದ ಮೇಲೆ ಬಂದು ವ್ಯಕ್ತಿ ಪ್ರಜ್ಞೆ ತಪ್ಪಿದ್ದಾನೆ. ಸಾರ್ವಜನಿಕರಿಂದ ಯುವಕನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಡಾಲಿ ಧನಂಜಯ್ ಮತ್ತು ಶಿವರಾಜ್ ಕುಮಾರ್ ನಟನೆಯ ಉತ್ತರಕಾಂಡ ಸದ್ಯ ಒಂದಲ್ಲ ಒಂದು ಕಾರಣಕ್ಕೆ ಸದಾ ಸದ್ದು ಮಾಡುತ್ತಿರುತ್ತದೆ. ಈಗಾಗ್ಲೆ ಸಾಕಷ್ಟು ಸ್ಟಾರ್ ನಟ, ನಟಿಯರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ನಿರ್ಮಾಣ ಹಂತದಲ್ಲಿರುವ ಚಿತ್ರದಲ್ಲಿ ನಟಿ ಭಾವನಾ ಮೆನನ್ ಕೂಡ ನಟಿಸಿದ್ದು ವೀರವ್ವ ಆಗಿ ಕಾಣಿಸಿಕೊಂಡಿದ್ದಾರೆ. ‌ ಸದ್ಯ ಭಾವನಾ ಅವರ ಫಸ್ಟ್ ಲುಕ್ ಔಟ್ ಆಗಿದೆ. ಉತ್ತರಕಾಂಡ ಚಿತ್ರದ ಮೂಲಕ ತಮಿಳು ನಟಿ ಐಶ್ವರ್ಯಾ ರಾಜೇಶ್ ಅವರು ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದರೊಂದಿಗೆ ನಟಿ ಭಾವನಾ ಮೆನನ್ ಅವರು ನಿರ್ಣಾಯಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕ್ಷನ್–ಪ್ಯಾಕ್ಡ್ ಕಮರ್ಷಿಯಲ್ ಎಂಟರ್‌ ಟೈನರ್ ಎಂದು ಬಿಂಬಿತವಾಗಿರುವ ಉತ್ತರಕಾಂಡ ಚಿತ್ರತಂಡ ಇದೀಗ ಭಾವನಾ ಅವರ ಜನ್ಮದಿನದ ಅಂಗವಾಗಿ ಅವರ ಪಾತ್ರವನ್ನು ಪರಿಚಯಿಸಿದ್ದು, ನಟಿ ವೀರವ್ವ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಉಮಾಶ್ರೀ, ದಿಗಂತ್ ಮಂಚಾಲೆ, ಚೈತ್ರ ಜೆ ಆಚಾರ್, ರಂಗಾಯಣ ರಘು, ವಿಜಯ್ ಬಾಬು, ಮತ್ತು ಗೋಪಾಲ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿದ್ದಾರೆ. KRG ಸ್ಟುಡಿಯೋಸ್…

Read More

ನೀವು ಒಳ್ಳೆ ಕಥೆ ಬರೀತಿರಾ? ಎಲ್ಲಿ ಪಬ್ಲಿಷ್ ಮಾಡ್ಬೇಕು ಅಂತ ಗೊತ್ತಿಲ್ವಾ? ಹಾಗಾದ್ರೆ ಚಿಂತೆಬೇಡಿ. ‘ಕಾಂಗರೂ’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಆರೋಹ ಪ್ರೊಡಕ್ಷನ್ಸ್ ಹೊಸ ಚಿತ್ರದ ಕಥೆ ಬರೆಯಲು ಪ್ರತಿಭಾವಂತ ಬರಹಗಾರರಿಗೆ ಆಹ್ವಾನ ನೀಡಿದೆ. ಒಳ್ಳೆ ಕಥೆ ಬರೆದವವರಿಗೆ ಸೂಪರ್ ಬಹುಮಾನ ಗೆಲ್ಲವ ಅವಕಾಶ ಕೂಡ ಇದೆ. ಮೊದಲನೇ ಬಹುಮಾನ ₹1 ಲಕ್ಷ ಮತ್ತು ಎರಡನೇ ಬಹುಮಾನವಾಗಿ ₹50,000 ನೀಡಲಾಗುವುದು. ಟಾಪ್ 10 ಉತ್ತಮ ಕಥೆಗಳಿಗೆ ತಲಾ ₹25,000 ಬಹುಮಾನ ಕೊಡಲಾಗುವುದು. ಸಿನಿಮಾ ಒಂದಕ್ಕೆ ಈ ಕಥೆಯನ್ನು ಬಳಸಿಕೊಳ್ಳಲಾಗುತ್ತದೆ. ನಿಮ್ಮ ಶಾಲೆ ಅಥವಾ ಕಾಲೇಜಿನ ಅನುಭವದ ಮೇಲೆ ಕಥೆಯನ್ನು ಬರೆಯಬೇಕು. ಈ ಕಥೆ ಮೂರು ಪುಟಗಳ ಒಳಗೆ ಇರಬೇಕು. ನೀವು ಬರೆದ ಕಥೆಯನ್ನು ಇಮೈಲ್(E-Mail) ಅಥವಾ ವಾಟ್ಸ್‌ ಅಪ್(WhatsApp) ಮೂಲಕ ಕಳುಹಿಸಬಹುದು. ಸೆಲೆಕ್ಟ್ ಆದ ಕಥೆ ಬಹುಮಾನ ಪಡೆಯಲಿದೆ. ಬೆಸ್ಟ್ ಕಥೆ ಬರೆಯುವ ಬರಹಗಾರರು ಚಿತ್ರದಲ್ಲಿ ಕೆಲಸ ಮಾಡುವ ಅವಕಾಶ ಕೂಡ ಗಿಟ್ಟಿಸಿಕೊಳ್ಳಲಿದ್ದಾರೆ. ನಿಮ್ಮ ಲೇಖನವನ್ನ ಕಳುಹಿಸಬೇಕಾದ ನಂ. 9844460128 ಅಥವಾ…

Read More

ಬಿಗ್‌ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘ಜೊತೆಯಾಗಿರಲು ಗಟ್ಟಿಯಾದ ಭರವಸೆ ಬೇಕು, ದೂರಾಗಲು ಚಿಕ್ಕದಾದ ಸಂಶಯ ಸಾಕು’ ಎಂದು ಚಂದನ್‌ ಕುರಿತಾಗಿ ಬರೆದುಕೊಂಡಿದ್ದರು. ಚಂದನ್‌ ಹಾಗೂ ನಿವೇದಿತಾ ಬಗ್ಗೆ ಯೂಟ್ಯೂಬ್ ಚಾನೆಲ್‌  ವೊಂದರ ಸಂದರ್ಶನದಲ್ಲಿ ಕೆಲವು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಪ್ರಶಾಂತ್‌ ಸಂಬರಗಿ ಮಾತನಾಡಿ ʻʻನನಗೆ ಚಂದನ್‌ ಆತ್ಮೀಯ ಗೆಳೆಯ. ಚಂದನ್‌ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಚಂದನ್‌ ನಾಯಕ. ನಾನು ಅದರಲ್ಲಿ ಪೊಲೀಸ್‌ ಪಾತ್ರ ಮಾಡಿದ್ದೇನೆ. 15 ದಿನಗಳ ಕಾಲ ಒಟ್ಟಿಗೆ ಶೂಟಿಂಗ್‌ ಮಾಡಿದ್ದೇವೆ. ಖುಷಿ ಪಟ್ಟಿದ್ದೇವೆ, ಹೊಡೆದಾಡಿಕೊಂಡಿದ್ದೇವೆ,, ಮಜಾ ಮಾಡಿದ್ದೇವೆ. ಚಂದನ್‌ ಹಾಗೂ ನಿವೇದಿತಾ ಸ್ಯಾಂಡಲ್‌ವುಡ್‌ ಪವರ್‌ ಕಪಲ್‌. ಆದರೆ ಏಕಾಏಕಿ ಅವರು ದೂರ ಆದರು. ಎಲ್ಲರೂ ಈ ವಿಷಯ ಕೇಳಿ ಶಾಕ್‌ ಆದರು. ಆದರೆ ನನಗೆ ಈ ವಿಚಾರ ಹೊಸದಲ್ಲ. ಒಂದು ವರ್ಷದ ಹಿಂದೆಯೇ ಗೊತ್ತಿತ್ತುʼʼ ಎಂದರು. ʻʻಚಂದನ್‌ ದಸರಾದಲ್ಲಿ ಪ್ರಪೋಸ್‌ ಮಾಡಿರುವ ಬಗ್ಗೆ ನನ್ನ ಧಿಕ್ಕಾರ ಕೂಡ…

Read More

ಪೆಟ್ರೋಲ್​ ಬಂಕ್​ ಗಳಿಗೆ ಕೆಲವೊಂದು ಷರತ್ತುಗಳ ಆಧಾರದ ಮೇಲೆ ಲೈಸೆನ್ಸ್ ನೀಡಲಾಗುತ್ತದೆ. ಆ ಷರತ್ತುಗಳನ್ನು ಪೂರೈಸದಿದ್ದರೆ, ಅಂಥಹ ಪೆಟ್ರೋಲ್ ಬಂಕ್ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಆ ಷರತ್ತುಗಳಲ್ಲಿ ಸಾಮಾನ್ಯ ನಾಗರಿಕರಿಗೆ ಹಲವು ಉಚಿತ ಸೇವೆಗಳನ್ನೂ ಸಹ ಸೇರಿಸಲಾಗಿದೆ. ಟೈರ್ ನಲ್ಲಿ ಏರ್ ಫಿಲ್ಲಿಂಗ್: ನೀವು ಪೆಟ್ರೋಲ್ ಪಂಪ್ ನಲ್ಲಿ ಯಾವುದೇ ಸೇವೆಯನ್ನು ತೆಗೆದುಕೊಳ್ಳದಿದ್ದರೂ ಸಹ, ನಿಮ್ಮ ಕಾರಿನ ಟೈರ್ ಗಳಲ್ಲಿ ಗಾಳಿಯನ್ನು ಉಚಿತವಾಗಿ ತುಂಬಿಸಬಹುದು. ಇದಕ್ಕಾಗಿ ಹಣವನ್ನು ಕೇಳಿದರೆ, ನೀವು ಪಂಪ್ ನಿರ್ವಹಣೆ ಅಥವಾ ಸಂಬಂಧಿತ ಕಂಪನಿಗೆ ದೂರು ನೀಡಬಹುದು. ಕುಡಿಯುವ ನೀರು: ಎಲ್ಲಾ ಪೆಟ್ರೋಲ್ ಪಂಪ್ ಗಳು ಶುದ್ಧ ಕುಡಿಯುವ ನೀರನ್ನು ಒದಗಿಸುವುದು ಕಡ್ಡಾಯವಾಗಿದೆ. ಆದ್ದರಿಂದ ಅಗತ್ಯವಿದ್ದರೆ, ನೀವು ಇಲ್ಲಿ ಕುಡಿಯುವ ನೀರನ್ನು ಕೇಳಬಹುದು ಅಥವಾ ನಿಮ್ಮ ಬಾಟಲಿಯನ್ನು ತುಂಬಿಸಬಹುದು. ವಾಶ್ ರೂಮ್: ನೀವು ಪೆಟ್ರೋಲ್ ಪಂಪ್ ನ ವಾಶ್ ರೂಮ್ ಅನ್ನು ಸಹ ಬಳಸಬಹುದು. ವಿಶೇಷವೆಂದರೆ ಶೌಚಾಲಯದ ಶುಚಿತ್ವದ ಬಗ್ಗೆ ನಿಮಗೆ ತೃಪ್ತಿ ಇಲ್ಲದಿದ್ದರೆ ಅಥವಾ ಶೌಚಾಲಯದ ಬಾಗಿಲು…

Read More

ದೇಹ ಬಲಾಢ್ಯಗಾಗಿ ಪ್ರೋಟೀನ್​​ ಪೌಡರ್​ ಬಳಸುವ ಮುನ್ನ ಎಚ್ಚರ.. ICMR ವರದಿಯಲ್ಲಿ ಅಚ್ಚರಿ ವಿಷಯ ಬಹಿರಂಗವಾಗಿದೆ. 13 ವರ್ಷದ ಬಳಿಕ ICMR ಭಾರತೀಯರ ಫುಡ್ ಡಯಟ್ರಿ ಗೈಡ್ ಲೈನ್ಸ್ ಬಿಡುಗಡೆ ಮಾಡಿದ್ದು, ಪ್ರೋಟಿನ್ ಪೌಡರ್ ಬಳಕೆದಾರರನ್ನು ಅಚ್ಚರಿ ಮೂಡಿಸುವ ಅಂಶಗಳನ್ನು ವರದಿ ನೀಡಿದೆ. ಜಿಮ್, ಸ್ಪೋರ್ಟ್​ ಗಳಲ್ಲಿ ತೊಡಗಿಕೊಂಡಿರುವ ಯುವಕ ಯುವತಿಯರಂತೂ ಪ್ರೋಟೀನ್ ಹೆಸರಿನಲ್ಲಿ ಸ್ಲೋ ಪಾಯಿಸನ್ ಸೇವನೆ ಮಾಡುತ್ತಿದ್ದು, ಜೀವಕ್ಕೆ ಕುತ್ತು ತಂದು ಕೊಳ್ಳುತ್ತಿದ್ದಾರೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೇಳಿದೆ. ಅತಿಯಾದ ಪ್ರೋಟಿನ್ ಪೌಡರ್ ಸೇವನೆಯಿಂದ ಜೀವಕ್ಕೆ ಅಪಾಯವಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಿದೆ. ಭಾರತದಲ್ಲಿ ಅತಿ ಹೆಚ್ಚು ಚೀಪ್ ಪ್ರೋಟಿನ್ ಪೌಡರ್‌ಗಳು ಮಾರಟವಾಗುತ್ತಿದ್ದು ಅದರಲ್ಲಿ ಸಕ್ಕರೆ, ಸೋಡಿಯಂ, ಪೋಟ್ಯಾಷಿಯಂ ಸೇರಿದಂತೆ ಹಲವು ಕೆಮಿಕಲ್ ಅಂಶಗಳು ಹೆಚ್ಚಾಗಿ ಪತ್ತೆಯಾಗಿದ್ದು, ಆರೋಗ್ಯದ ದುಷ್ಪರಿಣಾಮ ಬೀರುತ್ತಿದೆ. ಭಾರತದಲ್ಲಿ ನೆಲೆಯೂರಿರುವ ಅನೇಕ ಚೀಪ್ ಬ್ರಾಂಡ್ ಪ್ರೋಟಿನ್ ಪೌಡರ್ಗಳಲ್ಲಿ ಜೀವಕ್ಕೆ ಕುತ್ತು ತರುವಂತಹ ಅನೇಕ ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ಹೆಚ್ಚಾಗಿ ಸಕ್ಕರೆ ಅಂಶಗಳು…

Read More

ಕಷ್ಟ ಬಂದಾಗ ನಿವಾರಣೆಯಾಗಲಿ ಎಂದು ದೇವರ ಮೊರೆ ಹೋಗುವುದು, ಹರಕೆ ಹೇಳುವುದು ಸಹಜ. ಆದರೆ ಕೆಲವೊಮ್ಮೆ ಅತಿಯಾದ ನಂಬಿಕೆ ಅನಾಹುತವನ್ನೇ ಸೃಷ್ಟಿಸುತ್ತದೆ. ಇಲ್ಲೊಬ್ಬ ಬಿಜೆಪಿ ಅಭಿಮಾನಿಯೋರ್ವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಕಾರಣ ತನ್ನ ಎಡಕೈ ಬೆರಳೊಂದನ್ನು ಕಾಳಿ ದೇವಿಗೆ ಅರ್ಪಿಸಿದ್ದಾನೆ..! ಈ ಘಟನೆ ನಡೆದದ್ದು ಛತ್ತಿಸ್‌ಘಡದ ಬಲರಾಮ್‌ಪುರದಲ್ಲಿ. ಇಲ್ಲಿನ ಬಿಜೆಪಿ ಕಾರ್ಯಕರ್ತ ದುರ್ಗೇಶ್‌ ಪಾಂಡೆ (30 )ಎಂಬಾತ ಬೆರಳು ಕತ್ತರಿಸಿಕೊಂಡ ಯುವಕ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದುದನ್ನು ವೀಕ್ಷಿಸುತ್ತಿದ್ದ. ಆರಂಭದಲ್ಲಿ ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಕೂಟ ಮುನ್ನಡೆ ಕಾಯ್ದುಕೊಂಡಿತ್ತು. ಇದರಿಂದ ತೀರಾ ಖಿನ್ನತೆಗೊಳಗಾದ ಯುವಕ ಸಮೀಪದಲ್ಲಿದ್ದ ಕಾಳಿ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯಲ್ಲಿ ಪ್ರಾರ್ಥಿಸಿಕೊಳ್ಳುತ್ತಾನೆ. ಈ ಬಾರಿ ಬಿಜೆಪಿ ಗೆಲುವು ಸಾಧಿಸಿದರೆ ತನ್ನ ಒಂದು ಬೆರಳನ್ನು ಕಾಳಿ ದೇವಿಗೆ ಅರ್ಪಿಸುತ್ತೇನೆ ಎಂದು ಹರಕೆ ಹೊತ್ತುಕೊಳ್ಳುತ್ತಾನೆ. ಕ್ರಮೇಣ ಫಲಿತಾಂಶ ಪ್ರಕಟವಾಗಿ ಎನ್‌ಡಿಎ ಗೆಲುವು ಸಾಧಿಸುತ್ತದೆ. ಯುವಕನ ಈ ಖುಷಿಗೆ ಪಾರವೇ ಇರಲಿಲ್ಲ. ತಕ್ಷಣ ಕಾಳಿ ದೇವಿಯ ದೇವಸ್ಥಾನಕ್ಕೆ ತೆರಳಿ…

Read More

ಆಂಧ್ರ ಪ್ರದೇಶ ವಿಧಾನ ಸಭೆ, ಲೋಕಸಭಾ ಚುನಾವಣೆಯಲ್ಲಿ ಚಂದ್ರ ಬಾಬು ನಾಯ್ಡು ನೇತೃತ್ವದ ‘ತೆಲುಗು ದೇಶಂ ಪಕ್ಷ’ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಚಂದ್ರ ಬಾಬು ನಾಯ್ಡು ಆಸ್ತಿ ಮೌಲ್ಯ ಒಂದೇ ವಾರಕ್ಕೆ 870 ಕೋಟಿ ರೂ. ಹೆಚ್ಚಳವಾಗಿದೆ. ನಾಯ್ಡು ಕುಟುಂಬಸ್ಥರು ಪ್ರವರ್ತಕರಾಗಿರುವ ಹಾಗೂ ಷೇರುಗಳನ್ನು ಹೊಂದಿರುವ ಹೆರಿಟೇಜ್ ಫಂಡ್ಸ್ ಕಂಪೆನಿಯ ಷೇರು ಮೌಲ್ಯ ಜೂ.3ರಂದು 424 ರೂ.ಗಳಿತ್ತು. ಶುಕ್ರವಾರ ಅದು 661.25 ರೂ.ಗೆ ಏರಿದೆ. ಹೀಗಾಗಿ ಜೂ.3ರಂದು 3,700 ಕೋಟಿ ರೂ.ಗಳಿದ್ದ ಕಂಪೆನಿಯ ಮಾರುಕಟ್ಟೆ ಬಂಡವಾಳ ಜೂ.7ಕ್ಕೆ 6,136 ಕೋಟಿ ರೂ.ಗೆ ಏರಿದೆ. ಈ ಮೂಲಕ ನಾಯ್ಡು ಕುಟುಂಬದ ನಿವ್ವಳ ಆಸ್ತಿ ಮೌಲ್ಯವೂ 870 ಕೋಟಿ ರೂ. ಏರಿ, 2,190 ಕೋಟಿ ರೂ.ಗೆ ತಲುಪಿದೆ ಎಂದು ತಿಳಿದು ಬಂದಿದೆ. ಬಿಜೆಪಿ ಮತ್ತು ಪವನ್ ಕಲ್ಯಾಣ್ ಜನ ಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಟಿಡಿಪಿ ಸ್ಪಷ್ಟ ಬಹುಮತ ಸಾಧಿಸಿತ್ತು. ಮಾತ್ರವಲ್ಲ ಲೋಕ ಸಭಾ ಚುನಾವಣೆಯಲ್ಲೂ ಭರ್ಜರಿ ಬೇಟೆಯಾಡುವುದರ ಮೂಲಕ ಬಿಜೆಪಿ ನೇತೃತ್ವದ ಎನ್ ಡಿಎ…

Read More