Author: admin

ಮಧುಮೇಹವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ರಕ್ತ ಪರೀಕ್ಷೆಗಳನ್ನು ಮಾಡಿ. ಇದಲ್ಲದೇ ಆಹಾರಕ್ರಮವನ್ನು ಬದಲಾಯಿಸಬೇಕು. ಅನೇಕ ಜನರು ಮಧುಮೇಹದಿಂದ ಬಳಲುತ್ತಾರೆ. ಮಧುಮೇಹಿಗಳಿಗೆ ವಿವಿಧ ರೋಗಗಳ ಅಪಾಯವೂ ಕೂಡ ಹೆಚ್ಚು. ಅದರಲ್ಲೂ ಅಧಿಕ ರಕ್ತದೊತ್ತಡದ ಸಮಸ್ಯೆ, ಇದಲ್ಲದೆ, ಮೂತ್ರಪಿಂಡ ಮತ್ತು ಹೃದ್ರೋಗದ ಅಪಾಯವೂ ಹೆಚ್ಚಾಗಿರುತ್ತದೆ. ವಿವಿಧ ಕಾಯಿಲೆಗಳನ್ನು ತಪ್ಪಿಸಲು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಮಧುಮೇಹವನ್ನು ನಿಯಂತ್ರಣದಲ್ಲಿಡಲು ನಿಯಮಿತವಾಗಿ ರಕ್ತ ಪರೀಕ್ಷೆಗಳನ್ನು ಮಾಡಿ. ಇದಲ್ಲದೇ ಮಧುಮೇಹವನ್ನು ನಿಯಂತ್ರಿಸಲು ಅನೇಕರು ಆಹಾರಕ್ರಮವನ್ನು ಬದಲಾಯಿಸುತ್ತಾರೆ. ಆದರೆ, ಮಧುಮೇಹವನ್ನು ನಿಯಂತ್ರಿಸಲು ನುಗ್ಗೆ ಸೊಪ್ಪು ತುಂಬಾ ಉಪಯುಕ್ತವೆಂದು ನಿಮಗೆ ತಿಳಿದಿದೆಯೇ? ದಿನವೂ ನುಗ್ಗೆ ಸೊಪ್ಪು ಚಟ್ನಿ ತಿಂದರೆ ಸಕ್ಕರೆ ಖಾಯಿಲೆ ಕಡಿಮೆಯಾಗುತ್ತಾ ಬರುತ್ತದೆ. ಪೋಷಕಾಂಶಗಳಿಂದ ಕೂಡಿದ ನುಗ್ಗೆ ಸೊಪ್ಪಿನಲ್ಲಿ ಹಲವು ಬಗೆಯ ಆ್ಯಂಟಿ ಆಕ್ಸಿಡೆಂಟ್‌ಗಳಿವೆ. ಪರಿಣಾಮವಾಗಿ, ಮಧುಮೇಹ ಸೇರಿದಂತೆ ವಿವಿಧ ದೈಹಿಕ ಸಮಸ್ಯೆಗಳಿಗೆ ಇದರ ಸೇವನೆ ತುಂಬಾ ಉಪಯುಕ್ತವಾಗಿವೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್-ಸಿ, ವಿಟಮಿನ್-ಇ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ. ಪರಿಣಾಮವಾಗಿ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ…

Read More

ಮೂರು ಬಾರಿ ಬ್ರೆಜಿಲ್‌ ನ ರಿಯೊ ಡಿ ಜನೈರೊ ಎಂಬಲ್ಲಿನ ಮೇಯರ್ ಆಗಿದ್ದ ಸೀಸರ್ ಮಾಯಾ ಎಂಬವರು ತನ್ನ ಪಕ್ಷದ ಸಭೆಯಲ್ಲಿ ಭಾಗಿಯಾದ ವೇಳೆ ಎಡವಟ್ಟು ಮಾಡಿಕೊಂಡಿದ್ದು, ಟಾಯ್ಲೆಟ್ ನಿಂದ ಭಾಗವಹಿಸಿದ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ರಿಯೊ ಡಿ ಜನೈರೊದಲ್ಲಿನ ಸಿಟಿ ಹಾಲ್ ‌ನ ಮಾಜಿ ಮೇಯರ್ ಸೀಸರ್ ಮಾಯಾ ಇತರ ಕೌನ್ಸಿಲ್ ಸದಸ್ಯರೊಂದಿಗಿನ ಅಧಿವೇಶನಕ್ಕಾಗಿ ಆನ್‌ ಲೈನ್‌ ನಲ್ಲಿ ಜಾಯಿನ್‌ ಆಗಿದ್ದಾರೆ. ಝೂಮ್‌ ಕಾಲ್‌ ಮೂಲಕ ಲಾಗಿನ್‌ ಆಗಿ ಅವರು ಸಭೆಗೆ ಜಾಯಿನ್‌ ಆಗಿದ್ದಾರೆ. ಸಭೆ ನಡೆಯುವಾಗ ಸೀಸರ್‌ ಟಾಯ್ಲೆಟ್ ‌ನಲ್ಲಿ ಕೂತಿದ್ದರು ಕಂಡಿದೆ. ಝೂಮ್‌ ಕಾಲ್‌ ನಲ್ಲಿದ್ದ ಅವರು ಕ್ಯಾಮರಾವನ್ನು ಕಾಲಿನತ್ತ ಇಟ್ಟಿದ್ದಾರೆ. ಇದರಿಂದ ಅವರು ಟಾಯ್ಲೆಟ್‌ ನಲ್ಲಿ ಕೂತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ಇದು ಗೊತ್ತಾದ ಕೂಡಲೇ ಸೀಸರ್‌ ಕ್ಯಾಮರಾವನ್ನು ತನ್ನ ಮುಖದತ್ತ ತಿರುಗಿಸಿದ್ದಾರೆ. ಇದನ್ನು ನೋಡಿದ ಇತರೆ ಸದಸ್ಯರು ಮುಜುಗರಕ್ಕೆ ಒಳಗಾಗಿದ್ದಾರೆ. ಕ್ಯಾಮರಾವನ್ನು ಆಫ್‌ ಮಾಡಿ ಎಂದು ಕೌನ್ಸಿಲರ್‌ ಸೀಸರ್‌ ಅವರಿಗೆ ಹೇಳಿದ್ದಾರೆ. ಸೀಸರ್‌…

Read More

ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸತ್ ಪ್ರವೇಶಿಸುವ ಮುನ್ನ ಕಂಗನಾ ರಣಾವತ್​ ಗೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಕುಲ್ವಿಂದರ್​ ಕೌರ್ ಎಂಬಾಕೆ ಕೆನ್ನೆಗೆ ಬಾರಿಸಿದ್ದರು. ಇದೀಗ ಈ ಯೋಧೆಗೆ ತಮಿಳುನಾಡಿನಿಂದ ಚಿನ್ನದುಂಗುರ ಉಡುಗೊರೆ ನೀಡಲಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಈ ಘಟನೆಯಲ್ಲಿ ಕೆಲವರು ಮಹಿಳಾ ಉದ್ಯೋಗಿಯನ್ನು ಬೆಂಬಲಿಸುತ್ತಿದ್ದಾರೆ. ಈ ಘಟನೆ ಬಳಿಕ ಕುಲ್ವಿಂದರ್​ ಹೆಸರು ದೇಶಾದ್ಯಂತ ಜನಪ್ರಿಯವಾಗುತ್ತಿದೆ. ಸಂಸದರೊಬ್ಬರಿಗೆ ಹೊಡೆದಿದ್ದಕ್ಕಾಗಿ ಹರಿಯಾಣ ಸರ್ಕಾರ ಆಕೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಿದೆ. ಆದರೆ, ಪಂಜಾಬ್ ರೈತರು ಕುಲ್ವಿಂದರ್ ಕೌರ್ ಬೆಂಬಲಕ್ಕೆ ನೀಡಿದ್ದಾರೆ. ಇದೀಗ ತಮಿಳುನಾಡಿನ ಪೆರಿಯಾರ್ ಅವರ ಅಭಿಮಾನಿಗಳ ಸಂಘವು ಕುಲ್ವಿಂದರ್​ ಕೌರ್ ​ಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸಲು ನಿರ್ಧರಿಸಿದೆ. ಕೊಯಮತ್ತೂರಿನ ತಂತೈ ಪೆರಿಯಾರ್ ದ್ರಾವಿಡರ್ ಕಳಗಂ (TPDK) 8 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ಘೋಷಿಸಿದ್ದು, ಈ ಸಂಗತಿ ಇದೀಗ ಭಾರಿ ಸಂಚಲನ ಮೂಡಿಸಿದೆ. ಈ ಬಗ್ಗೆ ಟಿಪಿಡಿಕೆ ಪ್ರಧಾನ ಕಾರ್ಯದರ್ಶಿ ಕೋವೈ ರಾಮಕೃಷ್ಣನ್ ಮಾತನಾಡಿ, ಪ್ರತಿಭಟನೆ ನಡೆಸುತ್ತಿರುವ…

Read More

ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಸಂಪುಟದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಬಹಳಷ್ಟು ಮಂದಿ ಹಿರಿಯರು ಸಚಿವ ಸ್ಥಾನ ಪಡೆದಿದ್ದು, ಪಕ್ಷದ ಹೊಸ ಅಧ್ಯಕ್ಷ ಯಾರು ಎನ್ನುವ ಕುತೂಹಲ ಸೃಷ್ಟಿಯಾಗಿದೆ. ಭೂಪೇಂದ್ರ ಯಾದವ್, ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಧರ್ಮೇಂದ್ರ ಪ್ರಧಾನ್ ಕೂಡಾ ಸಚಿವ ಸ್ಥಾನ ಪಡೆದಿದ್ದು, ಬಿಜೆಪಿಯನ್ನು ಮುನ್ನಡೆಸಲು ಹೊಸ ಮುಖಕ್ಕೆ ಅವಕಾಶ ಸಿಗುವುದು ಖಚಿತ. ಕಳೆದ ಬಾರಿ ಸಚಿವರಾಗಿದ್ದ ಕೆಲ ಹಳಬರಿಗೆ ಪಕ್ಷದ ಅಧ್ಯಕ್ಷ ಹುದ್ದೆಯ ಚುಕ್ಕಾಣಿ ನೀಡಿದರೂ ಆಶ್ಚರ್ಯವಿಲ್ಲ. ನಡ್ಡಾ ಅವರ ವಿಸ್ತರಿತ ಅಧ್ಯಕ್ಷಾವಧಿ ಈ ತಿಂಗಳು ಕೊನೆಗೊಳ್ಳುತ್ತದೆ. ಪಕ್ಷದ ಸಂವಿಧಾನ ಅವರಿಗೆ ಎರಡು ಹುದ್ದೆಗಳನ್ನು ಹೊಂದಲು ಅವಕಾಶ ನೀಡಿದ್ದರೂ, ಪಕ್ಷದ ಮುಖಂಡರು ಹೊಸ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಅಧಿಕ. ದಕ್ಷಿಣ ರಾಜ್ಯಗಳ ಪ್ರಮುಖ ಹಿಂದುಳಿದ ವರ್ಗಕ್ಕೆ ಸೇರಿದ ಮಹಿಳೆಗೆ ಈ ಹುದ್ದೆ ನೀಡಲಾಗುತ್ತಿದೆ ಎಂಬ ಸುಳಿವು ಲಭ್ಯವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ಮೂರನೇ ಬಾರಿಗೆ ಪ್ರಧಾನಿಯಾಗಿ ಮೋದಿ ಪದಗ್ರಹಣ ಹಿನ್ನೆಲೆ ನಿನ್ನೆ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಮೈತ್ರಿ ಪಕ್ಷಗಳ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರು ಎಂಬಲ್ಲೂ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ನಡೆಸುತ್ತಿದ್ದರು. ಈ ವೇಳೆ ರಸ್ತೆ ಮೇಲೆ ನಿಂತಿದ್ದ ಇಬ್ಬರಿಗೆ ಚೂರಿ ಇರಿಯಲಾಗಿದೆ. ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಿಯಾರು ಎಂಬಲ್ಲಿ ಘಟನೆ ನಡೆದಿದೆ. ಬೋಳಿಯಾರು ನಿವಾಸಿಗಳಾದ ಸುರೇಶ್ ‌ಹಾಗೂ ನಂದ ಕುಮಾರ್‌ಗೆ ಚೂರಿ ಇರಿಯಲಾಗಿದೆ. ಮೋದಿ ಪದಗ್ರಹಣ ಹಿನ್ನೆಲೆಯಲ್ಲಿ ಬೋಳಿಯಾರ್‌ನಲ್ಲಿ ವಿಜಯೋತ್ಸವ ಆಯೋಜಿಸವಾಗಿತ್ತು. ವಿಜಯೋತ್ಸವ ಮುಗಿಸಿ ಬೋಳಿಯಾರು ಪೇಟೆಯಲ್ಲಿ ನಿಂತಿದ್ದ ಇಬ್ಬರು ಯುವಕರ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿದ್ದಾರೆ. ಈ ವೇಳೆ ಬಂದ ಅಪರಿಚಿತ ದುಷ್ಕರ್ಮಿಗಳ ತಂಡದಿಂದ ಏಕಾಏಕಿ ಯುವಕರ ಮೇಲೆ ಅಟ್ಯಾಕ್ ನಡೆದಿದೆ. ಈ ವೇಳೆ ಇಬ್ಬರೂ ಗಾಯಗೊಂಡಿದ್ದು, ಸದ್ಯ ಇಬ್ಬರಿಗೂ ದೇರಳಕಟ್ಟೆಯ…

Read More

ಬಹು ದೊಡ್ಡ ದುರಂತವೊಂದು ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಲ್ಪದರಲ್ಲಿ ತಪ್ಪಿದೆ. ನಿನ್ನೆ ಶನಿವಾರ, ಜೂನ್ 8ರಂದು ಸಂಜೆ ಒಂದೇ ರನ್‌ ವೇಯಲ್ಲಿ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆದರೆ, ಇಂಡಿಗೋ ವಿಮಾನ ಲ್ಯಾಂಡಿಂಗ್‌ ಆಗಿದೆ. ಮುಂಬೈನಲ್ಲಿ ಏರ್‌ ಇಂಡಿಯಾ ವಿಮಾನ ತಿರುವನಂತಪುರಂಗೆ ಟೇಕಾಫ್‌ ಆಗುತ್ತಿತ್ತು. ಸರಿಯಾಗಿ ಆ ಸಮಯದಲ್ಲಿ ಇಂದೋರ್‌ನಿಂದ ಇಂಡಿಗೋ ವಿಮಾನ ಆಗಮಿಸಿದೆ. ಇಂಡಿಗೋ ವಿಮಾನಕ್ಕೆ ಕೂಡ ಲ್ಯಾಂಡಿಂಗ್ ಆಗಲು ಅನುಮತಿ ಸಿಕ್ಕಿದೆ. ಅನುಮತಿ ಸಿಕ್ಕಿದ ಕಾರಣ ಪೈಲಟ್‌ ರನ್‌ವೇಯಲ್ಲಿ ಇಳಿಸಿ ಅದರ ಚಕ್ರಗಳು ಭೂ ಸ್ಪರ್ಶ ಆಗುತ್ತಿದ್ದಾಗ ಏರ್‌ ಇಂಡಿಯಾ ವಿಮಾನ ಆಗ ತಾನೇ ಜಸ್ಟ್‌ ಟೇಕಾಫ್‌ ಆಗಿತ್ತು. ಅದೇ ಒಂದು ವೇಳೆ ಏರ್‌ ಇಂಡಿಯಾ ಟೇಕಾಫ್‌ ಕೆಲ ಸೆಕೆಂಡ್‌ ವಿಳಂಬವಾಗಿದ್ದರೆ ದುರಂತ ನಡೆದು ಹೋಗಿರುತ್ತಿತ್ತು. ಕ್ಷಣಗಳ ಅಂತರ ಇಲ್ಲದೆ ಹೋಗಿದ್ದರೆ ಹಿಂದಿನಿಂದ ಏರ್‌ ಇಂಡಿಯಾ ವಿಮಾನ ಕ್ರಾಶ್ ಹೊಡೆಯುವ ಸಾಧ್ಯತೆ ಇತ್ತು. ಇದೀಗ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆಗೆ…

Read More

ಮೂರು ದಿನಗಳ ಹಿಂದೆ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ ಎಂದು ಇಂಡೋನೇಷ್ಯದಲ್ಲಿ ದೂರು ನೀಡಲಾಗಿತ್ತು. ಇದಾದ 3 ದಿನಗಳ ಬಳಿಕ ಆ ಮಹಿಳೆ ಹೆಬ್ಬಾವಿನ ಹೊಟ್ಟೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ನಡೆದಿದೆ. 16 ಅಡಿಯ ಹೆಬ್ಬಾವು ಆಕೆಯನ್ನು ಪೂರ್ತಿಯಾಗಿ ನುಂಗಿತ್ತು ಎನ್ನಲಾಗಿದೆ. 45 ವರ್ಷದ ಫರೀದಾ ಪತಿ ಮತ್ತು ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಶುಕ್ರವಾರ ಐದು ಮೀಟರ್(16 ಅಡಿ) ಅಳತೆಯ ಹೆಬ್ಬಾವಿನೊಳಗೆ ಮಹಿಳೆ ಇರುವುದನ್ನು ಪತ್ತೆ ಮಾಡಿದ್ದಾರೆ. ನಾಲ್ಕು ಮಕ್ಕಳ ತಾಯಿ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು, ಈ ಕುರಿತು ಮನೆ ಹತ್ತಿರದ ಕಾಡಿನೊಳಗೆ ಹುಡುಕಾಟ ನಡೆಸಲಾಗಿತ್ತು ಎನ್ನಲಾಗಿದೆ. ಸ್ಥಳದಲ್ಲಿ ಆಕೆಗೆ ಸಂಬಂಧಿಸಿದ ವಸ್ತುಗಳು ಕಂಡುಬಂದಾಗ ಪತಿಗೆ ಅನುಮಾನ ಉಂಟಾಗಿತ್ತು. ನಂತರ ಗ್ರಾಮಸ್ಥರು ಆ ಪ್ರದೇಶದಲ್ಲೆಲ್ಲಾ ಹುಡುಕಾಡಿದ್ದಾರೆ. ಆಗ ಅವರಿಗೆ ದೊಡ್ಡ ಹೊಟ್ಟೆಯ ಹೆಬ್ಬಾವು ಕಾಣ ಸಿಕ್ಕಿತು ಎನ್ನಲಾಗಿದೆ. ಬಳಿಕ ಸ್ಥಳೀಯರು, ಊರಿನವರು ಸೇರಿ ಹೆಬ್ಬಾವಿನ ಹೊಟ್ಟೆಯನ್ನು ಸಿಗಿದಿದ್ದಾರೆ, ಈ ವೇಳೆ ಫರೀದಾ ಅವರ ತಲೆ ಗೋಚರಿಸಿತು ಎಂದು ವರದಿ ತಿಳಿಸಿದೆ.…

Read More

ಮಳೆಗಾಲ ಆರಂಭವಾಗಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಜೋರು ಮಳೆ. ಅತ್ತ ಧಾರವಾಡ ಜಿಲ್ಲೆಯಾದ್ಯಂತ ಕೂಡಾ ಮಳೆ ಅಬ್ಬರ ಜೋರಾಗಿದೆ. ಜಿಲ್ಲೆಯ ರಸ್ತೆಯಲ್ಲೆಲ್ಲ ನೀರು ನಿಂತು ಮಿನಿ ಹೊಳೆ ಸೃಷ್ಟಿಯಾಗಿದೆ. ಇದರ ಮಧ್ಯೆ ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಎದುರು ಹಿರಿಯ ಜೀವಿಯೊಬ್ಬರು ಮಳೆ ಬರುತ್ತಿರುವ ಸಂದರ್ಭವೇ ರಸ್ತೆ ಮಧ್ಯೆಯೇ ಘೋರ ತಪಸ್ಸಿಗೆ ಕುಳಿತ ಘಟನೆ ಕಂಡು ಬಂದಿದೆ. ಧಾರವಾಡದಲ್ಲಿ ಜೋರಾಗಿ ಬರುತ್ತಿದ್ದ ಸಂದರ್ಭ ಮಳೆಯಲ್ಲಿ ರಸ್ತೆಯಲ್ಲಿಯೇ ಕಣ್ಣು ಮುಚ್ಚಿ ವೃದ್ಧರೊಬ್ಬರು ಗಾಢ ತಪಸ್ಸು ಕೈಗೊಂಡಿದ್ದಾರೆ. ಅವರು ನಡು ರಸ್ತೆಯಲ್ಲಿ ಕುಳಿತು ತಪಸ್ಸು ಮಾಡುತ್ತಿದ್ದಾರೆ. ಅತ್ತ ಇತ್ತ ಮಿಸುಕದೆ ಕಣ್ಣು ಮುಚ್ಚಿ, ಬೆನ್ನನ್ನು ನೇರವಾಗಿ ಇಟ್ಟು ಒಂಚೂರು ಅಲುಗಾಡದೆ ಮಾಡುತ್ತಿರುವ ಅಜ್ಜನ ತಪಸ್ಸು ಭಯಂಕರವಾಗಿದೆ. ಈಗ ಆಸಕ್ತ ದಾರಿಹೋಕ ಯುವಕರು ಈ ದೃಶ್ಯವನ್ನು ಮೊಬೈಲ್‌ ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.…

Read More

ರಾಜ್ಯದ ವಿವಿಧೆಡೆ ಮುಂದಿನ 5 ದಿನ ಭಾರಿ ಮಳೆಯಾಗುವ ಸಾಧ್ಯತೆಯಿದೆಯೆಂದು ಹವಾಮಾನ ಇಲಾಖೆಯು ಎಚ್ಚರಿಸಿದೆ. ಉತ್ತರ ಕನ್ನಡ, ಧಾರವಾಡ, ಗದಗ, ಬೆಳಗಾವಿ ಹಾಗೂ ಕೊಪ್ಪಳ ಜಿಲ್ಲೆಗೆ ಸೋಮವಾರ ‘ರೆಡ್ ಅಲರ್ಟ್’ ಘೋಷಿಸಲಾಗಿದೆ. ಅದಲ್ಲದೆ ಉಡುಪಿ ಸೇರಿದಂತೆ ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಗೆ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಕೂಡಾ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ. ಉಳಿದಂತೆ ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಯಚೂರು, ದಾವಣಗೆರೆ, ಚಿಕ್ಕಮಗಳೂರಿಗೆ ‘ಯೆಲ್ಲೊ ಅಲರ್ಟ್’ ಘೋಷನೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಈ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಮಳೆ, ಜತೆಗೆ ಗಂಟೆಗೆ 40 ರಿಂದ 50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಅದೇ ಕರಾವಳಿಯಲ್ಲಿ ಗಾಳಿಯ ವೇಗವು 55 ಕಿ.ಮೀ. ವೇಗದಲ್ಲಿ ಬೀಸುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂಮೀನುಗಾರರು ಸಮುದ್ರಕ್ಕೆ ಇಳಿಯಬಾರದು, ಸಮುದ್ರದಲ್ಲಿ ಭಾರಿ ಅಲೆಗಳು ಕಾಣಿಸಿಕೊಳ್ಳಬಹುದು ಎಂದು ಹವಾಮಾನ…

Read More

ಮಾಧ್ಯಮ ಲೋಕದ ದಿಗ್ಗಜ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಮೋಜಿ ರಾವ್(87) ಪಾರ್ಥಿವ ಶರೀರದ ಅಂತ್ಯಕ್ರಿಯೆ ನಿನ್ನೆ ರಾಮೋಜಿ ಫಿಲಂ ಸಿಟಿಯಲ್ಲಿ ಸಕಲ ವಿಧಿ ವಿಧಾನ ಮತ್ತು ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಈ ವೇಳೆ ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು. ಈ ಕಾರ್ಯದಲ್ಲಿ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು. ರಾಮೋಜಿ ಅವರ ಪುತ್ರ ಕಿರಣ್ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿತು. ಸುದ್ದಿ ಮತ್ತು ಮನರಂಜನಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಾಮೋಜಿ ರಾವ್ ಶನಿವಾರ ಮುಂಜಾನೆ ಹೈದರಾಬಾದ್‌ನ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದರು. ಆಂಧ್ರಪ್ರದೇಶ ಸರ್ಕಾರ ಜೂನ್ 9 ಮತ್ತು 10 ರಂದು ರಾಜ್ಯದಲ್ಲಿ ಶೋಕಾಚರಣೆಯನ್ನು ಆಚರಿಸಲು ನಿರ್ಧರಿಸಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More