Subscribe to Updates
Get the latest creative news from FooBar about art, design and business.
- ಶುಂಠಿ ಬೇಗ ಹಾಳಾಗದಂತೆ ಇಡುವುದು ಹೇಗೆ?
- ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ 56 ಜವಾನ ಹುದ್ದೆಗಳ ಭರ್ತಿ: ಆನ್ ಲೈನ್ ಅರ್ಜಿ ಆಹ್ವಾನ
- ಮಾಜಿ ಸಚಿವ ಸಿ. ವೀರಣ್ಣ ಇನ್ನಿಲ್ಲ: ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ | ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ನಾಯಕರಿಂದ ಸಂತಾಪ
- NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ
- ಜು. 29ರಂದು ಔರಾದ್ನಲ್ಲಿ ತಾಲೂಕು ಪತ್ರಿಕಾ ದಿನಾಚರಣೆ: ಶಾಸಕ ಪ್ರಭು ಚವ್ಹಾಣ್ ಉದ್ಘಾಟನೆ
- ಡಾ.ದರಗೊಂಡ ಉದಯಸಿಂಗ್ ‘ಜೈ ಕರವೇ’ ವೈದ್ಯಕೀಯ ಘಟಕದ ಬೀದರ್ ಜಿಲ್ಲಾಧ್ಯಕ್ಷರಾಗಿ ಆಯ್ಕೆ
- ಗ್ರಾಮೀಣ ಪ್ರತಿಭೆಯ ವೈದ್ಯಕೀಯ ಕನಸು ನನಸು: ನೀಟ್ ನಲ್ಲಿ ಕೊರಟಗೆರೆಯ ಸುಭಾಷ್ ಗೆ ಭರ್ಜರಿ ಸಾಧನೆ!
- ಕೊರಟಗೆರೆ: ಮತದಾರರ ಗಣಕೀಯ ನಮೂನೆ ತಲುಪಿಸುವಲ್ಲಿ 100% ಸಾಧನೆ; ಶೇ.82.25 ರಷ್ಟು ಡಿಜಿಟಲ್ ಸೇರ್ಪಡೆ ಪೂರ್ಣ
Author: admin
ಬೆಂಗಳೂರು: ನೆಲಮಂಗಲ ತಾಲ್ಲೂಕಿನಲ್ಲಿ ಮಗಳ ಪ್ರೇಮ ವಿವಾಹಕ್ಕೆ ಮನನೊಂದು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಂಜನಾ ನಗರದ ಲಕ್ಷ್ಮಮ್ಮ(45) ನೇಣಿಗೆ ಶರಣಾದ ಮಹಿಳೆಯಾಗಿದ್ದಾರೆ. ಇತ್ತೀಚೆಗಷ್ಟೇ ತನ್ನ ಮಗಳು ಪ್ರೇಮ ವಿವಾಹವಾಗಿ ಮನೆಬಿಟ್ಟು ಹೋಗಿದ್ದಳು. ಇದರಿಂದ ಮನನೊಂದಿದ್ದ ಲಕ್ಷ್ಮಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಕರ್ನಾಟಕ ಬಿಡಿ. ಇಡೀ ದೇಶದಲ್ಲೇ ವಿದೇಶಿ ನೇರ ಬಂಡವಾಳ ಹೂಡಿಕೆಯು (ಎಫ್‌ಡಿಐ) ಕಳೆದ ಎರಡು – ಮೂರು ವರ್ಷಗಳಿಂದ ಸತತವಾಗಿ ಇಳಿಮುಖ ಆಗಿದೆ. ಹಾಗಾದರೆ ಇದಕ್ಕೆ ಯಾರು ಹೊಣೆʼ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ ಅಂಶಗಳೇ ದೇಶದಲ್ಲಿನ ಎಫ್ ಡಿಐ ಒಳಹರಿವು ಕುಸಿದಿರುವುದರ ವಾಸ್ತವ ಚಿತ್ರಣ ನೀಡುತ್ತವೆ ಎಂದು ಸಚಿವರು ವಿವರಗಳನ್ನು ಹಂಚಿಕೊಂಡಿದ್ದಾರೆ. ʼದೇಶದಲ್ಲಿ ಎಫ್ ಡಿಐ ಇಳಿಕೆ ಆಗಲು ಕೇಂದ್ರ ಸರ್ಕಾರದ ದೂರದೃಷ್ಟಿ ಇಲ್ಲದ, ದೋಷಪೂರಿತ ನೀತಿಗಳೇ ಕಾರಣ. ಹಾಗೆಯೇ ಜಾಗತಿಕ ವಿದ್ಯಮಾನಗಳು ಕೂಡ ಸೇರಿರಬಹುದು’ ಎಂದು ಅವರು ತಿಳಿಸಿದರು. ಕುಸಿತದ ವಿವರಗಳು: ʼಹಣಕಾಸು ವರ್ಷ 2023ರಲ್ಲಿ 71 ಶತಕೋಟಿ ಡಾಲರ್‌ಗಳಷ್ಟಿದ್ದ ದೇಶಿ ಎಫ್‌ಡಿಐ, ಹಣಕಾಸು ವರ್ಷ 2024 ರಲ್ಲಿ 70 ಶತಕೋಟಿ ಡಾಲರ್ ಗೆ ಕುಸಿದಿದೆ. ʼಹಣಕಾಸು ವರ್ಷ 2020-21ರಲ್ಲಿ ₹ 4.42 ಲಕ್ಷ ಕೋಟಿ,…
ಟೋಕಿಯೊ: ಜಪಾನ್ ನ ಇಶಿಕವಾ ಪ್ರದೇಶದಲ್ಲಿ ಬೆಳಿಗ್ಗೆ 6.31ರ ಸುಮಾರಿಗೆ 5.9 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ನ ಹವಾಮಾನ ಇಲಾಖೆ ಪ್ರಕಟಿಸಿದೆ. ಈ ಭೂಕಂಪದ ಹಿನ್ನೆಲೆಯಲ್ಲಿ ಯಾವುದೇ ಸುನಾಮಿ ಭೀತಿ ಇಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದ್ದು, ವಜೀಮಾ ಮತ್ತು ಸುಝು ನಗರಗಳಲ್ಲಿ ಭಾರಿ ಕಂಪನ ಅನುಭವಕ್ಕೆ ಬಂದಿದೆ. ಜಪಾನ್ ಭೂಕಂಪ ಮಾಪನದಲ್ಲಿ 5ಕ್ಕಿಂತ ಹೆಚ್ಚಿನ ತೀವ್ರತೆ ದಾಖಲಾಗಿದೆ. ನೋಟೊ ಪಟ್ಟಣದಲ್ಲಿ ಕೂಡಾ ಭಾರಿ ಕಂಪನ ಅನುಭವಕ್ಕೆ ಬಂದಿದ್ದರೂ, ತೀವ್ರತೆ 5ಕ್ಕಿಂತ ಕಡಿಮೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಶಿಕವಾ ಪ್ರಾಂತ್ಯದ ನನಾವೊ ನಗರ ಮತ್ತು ಅನಮಿಝು ಪಟ್ಟಣಗಳಲ್ಲಿ ಭೂಕಂಪ ಸಂಭವಿಸಿದ್ದು, ನೀಗತ ಪ್ರಾಂತ್ಯದ ಕೆಲ ಭಾಗಗಳಲ್ಲೂ 4 ತೀವ್ರತೆಯ ಕಂಪನ ಸಂಭವಿಸಿದೆ. ಭೂಕಂಪದ ಪರಿಣಾಮ, ಈಸ್ಟ್ ಜಪಾನ್ ರೈಲ್ವೆ ಹೊಕುರಿಕು ಶಿಂಕನ್ಸೆನ್ ಮತ್ತು ಜೊಯೆತ್ಸು ಶಿಂಕನ್ಸೆನ್ ಬುಲೆಟ್ ರೈಲುಮಾರ್ಗದಲ್ಲಿ ವಿದ್ಯುತ್ ಸಂಪರ್ಕ ಕಡಿತದ ಹಿನ್ನೆಲೆಯಲ್ಲಿ ಸೇವೆಗಳನ್ನು ತಾತ್ಕಾಲಿಕವಾಗಿ…
ಎರಡು ದಿನಗಳಿಂದ ರಾಜ್ಯದಲ್ಲಿ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಭಾನುವಾರ ಪ್ರವಾಹ ಪರಿಸ್ಥಿತಿಯಲ್ಲಿ ಅಲ್ಪ ಸುಧಾರಣೆ ಕಂಡುಬಂದಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹದಿಂದ 535246 ಮಂದಿ ಹಾನಿಗೀಡಾಗಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಕೋಪ ನಿರ್ವಹಣಾ ಪ್ರಾಧಿಕಾರ ಪ್ರಕಟಿಸಿದೆ. ಭಾನುವಾರ ಮತ್ತೆ ಮೂರು ಮಳೆ ಸಂಬಂಧಿ ಸಾವುಗಳು ವರದಿಯಾಗಿದ್ದು, ಮೇ 28 ರಿಂದೀಚೆಗೆ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 14ಕ್ಕೇರಿದೆ. ಇನ್ನೂ ಹಲವು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರವಾಹ ಬಾಧಿತರಾಗಿರುವವರ ಸಂಖ್ಯೆ ಶನಿವಾರ 6 ಲಕ್ಷಕ್ಕೂ ಅಧಿಕ ಇತ್ತು. ಭಾನುವಾರ ಸ್ವಲ್ಪ ಕಡಿಮೆಯಾಗಿದೆ. ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳು ಅಪಾಯಕ್ಕಿಂತ ಕೆಳಮಟ್ಟದಲ್ಲಿ ಹರಿಯುತ್ತಿವೆ. ಎಲ್ಲ ಅಣೆಕಟ್ಟುಗಳ ಪ್ರಮುಖ ಗೇಟುಗಳನ್ನು ತೆರೆಯಲಾಗಿದ್ದು, ನಿಂತ ನೀರನ್ನು ಹೊರಬಿಡಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಹೈಲಕಂಡಿ, ಕರೀಂಗಂಜ್, ಹೊಲೈ, ಧೇಮಜಿ, ಕರ್ಮುಪ್, ದಿಬ್ರೂಗಢ, ನಾಗೋನ್, ಮೊರಿಗಾಂವ್, ಕಚಾರ್, ದಕ್ಷಿಣ ಸಾಲ್ಮರ, ಕಬ್ರಿ ಅಂಗ್ಲಾಂಗ್ ಪಶ್ಚಿಮ, ಗೋಲಘಾಟ್ ಮತ್ತು ಡಿಮಾ ಹಸ್ಸಾವೊ ಜಿಲ್ಲೆಗಳು ತೀವ್ರ ಹಾನಿಗೀಡಾಗಿವೆ. ನಾಗಾಂವ್ ಜಿಲ್ಲೆಯೊಂದರಲ್ಲೇ…
ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂದು ಮೈಸೂರಿನ ಶ್ವಾನವೊಂದು ಭವಿಷ್ಯ ನುಡಿದಿದೆ. ಮೈಸೂರಿನಲ್ಲಿ ಈ ವಿಶೇಷವಾದ ದೇವರ ನಾಯಿ ಮೋದಿ ಮತ್ತೊಂದು ಬಾರಿ ಪ್ರಧಾನಿಯಾಗುತ್ತಾರೆ ಎಂದಿದೆ. ಮೋದಿ ಹಾಗೂ ರಾಹುಲ್ ಗಾಂಧಿ ಫೋಟೋವನ್ನ ಕಾಲಭೈರವೇಶ್ವರ ದೇವರ ಮುಂದೆ ದೇವಾಲಯದ ಅರ್ಚಕ ಇಟ್ಟಿದ್ದಾರೆ. ಈ ಬಾರಿ ಯಾರು ಪ್ರಧಾನಿಯಾಗುತ್ತಾರೆ ಎಂಬುದನ್ನ ನಮ್ಮ ಭೈರವ ತಿಳಿಸ್ತಾನೆ ಎಂದು ಹೇಳಿ ಅರ್ಚಕರು ಪೂಜೆ ಸಲ್ಲಿಸಿದ್ದಾರೆ. ನಂತರ ಅಲ್ಲಿದ್ದ ಫೋಟೊವನ್ನು ಅದಲು ಬದಲು ಮಾಡಿಟ್ಟಿದ್ದಾರೆ. ತಕ್ಷಣ ಭೈರವೇಶ್ವರ ಶ್ವಾನವು ಮೋದಿ ಫೋಟೋವನ್ನು ಹುಡುಕಿ ತೆಗೆದು ಬಾಯಿಯಿಂದ ಕಚ್ಚಿಕೊಂಡು ಬಂದಿದೆ. ಆ ಮೂಲಕ ಶ್ವಾನ ಮೋದಿ ಪ್ರಧಾನಿಯಾಗುತ್ತಾರೆ ಎಂದಿದೆ ಎಂದು ಕಾಲಭೈರವೇಶ್ವರನ ಅರ್ಚಕರು ತಿಳಿಸಿದ್ದಾರೆ. ಈ ಸಂಬಂಧಿ ಇನ್ಸ್ಟಾಗ್ರಾಮ್ ಪೋಸ್ಟ್ ಇದೀಗ ವೈರಲ್ ಆಗಿದೆ. ಇದೇ ಸಂದರ್ಭದಲ್ಲಿ ಮೈಸೂರಿನ ರಾಜ ಮನೆತನದ ಯದುವೀರ್ ಫೋಟೋ ಸೆಲೆಕ್ಟ್ ಮಾಡಿರುವ ಭೈರವೇಶ್ವರ ಶ್ವಾನವು ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಗೆಲ್ಲುತ್ತಾರೆಂದು ಕೂಡ ಭವಿಷ್ಯ ಹೇಳಿದೆ. ಭೈರವೇಶ್ವರ ಶ್ವಾನ ಭವಿಷ್ಯ…
ಚಪ್ಪಲಿ ಇಲ್ಲದೆ ಮನೆಯಿಂದ ಆಚೆ ಬರೋದು ಸ್ವಲ್ಪ ಕಷ್ಟ. ಇನ್ನು ಜೀವನಪೂರ್ತಿ ಬರಿಗಾಲಿನಲ್ಲಿ ಓಡಾಡಲು ಸಾಧ್ಯವೇ? ಕೆಲವು ಸಾಧು ಮತ್ತು ಸಂತರನ್ನು ಹೊರತುಪಡಿಸಿ, ಎಲ್ಲ ಸಾಮಾನ್ಯ ಜನರು ಚಪ್ಪಲಿಯನ್ನು ಧರಿಸುತ್ತಾರೆ. ವಿಶೇಷ ಅಂದ್ರೆ ಕಾಲಿವುಡ್‌ನ ಖ್ಯಾತ ನಟ ವಿಜಯ್ ಆಂಟೋನಿ ಜೀವನ ಪರ್ಯಂತ ಚಪ್ಪಲಿ ಧರಿಸದೇ ಇರಲು ನಿರ್ಧರಿಸಿದ್ದಾರೆ. ವಿಜಯ್ ಆಂಟೋನಿ ಓರ್ವ ಬಹುಮುಖ ಪ್ರತಿಭೆ. ಮ್ಯೂಸಿಕ್ ಡೈರೆಕ್ಟರ್, ಗಾಯಕ, ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ವಲಂಡಿಲ್ ಪತ್ತೆನೆ, ಡಿಸುಮೆ, ವೆಡೆತ್ತಕಾರನ್ ಮತ್ತು ಅಂಗಡಿತ್ ಸ್ಟ್ರೀಟ್ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನಾನ್, ಕಲಿ, ಪಿಚೈಕಾರನ್, ಸೈತಾನ್, ಕೊಲೈಗಾರ, ವಿಜಯ್ ರಾಘವನ್, ಪಿಚೈಕಾರನ್ 2 ಮತ್ತು ತಿಮಿರು ಪುಡಿಚವನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪಿಚೈಕಾರನ್ 1 ಮತ್ತು ಭಾಗ 2ನ್ನು ವಿಜಯ್ ಅವರೇ ನಿರ್ದೇಶನ ಮಾಡಿದ್ದು, ಈ ಎರಡು ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಇದೀಗ ವಿಜಯ್ ಆಂಟೋನಿ ತುಫಾನ್ ಎಂಬ…
ಮುಂದಿನ 2-3 ದಿನಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ಕರ್ನಾಟಕ, ರಾಯಲಸೀಮಾ, ಕರಾವಳಿ ಆಂಧ್ರಪ್ರದೇಶ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಭಾಗಗಳಲ್ಲಿ ಮಳೆಯಾಗುವ ಎಲ್ಲಾ ಸಂಭವನೀಯತೆ ಇದೆ ಎಂದು IMD ಹೇಳಿದೆ. ಹವಾಮಾನ ಇಲಾಖೆ ಅಧಿಕಾರಿ, ಜೂನ್ 15ರ ವೇಳೆಗೆ ನೈರುತ್ಯ ಮುಂಗಾರು ಮಧ್ಯಪ್ರದೇಶ ತಲುಪುವ ಸಾಧ್ಯತೆ ಇದೆ ಎನ್ನಲಾಗಿದೆ. ನೈಋತ್ಯ ಮಾನ್ಸೂನ್ ಗುರುವಾರ ಕೇರಳ ಮತ್ತು ಈಶಾನ್ಯ ಪ್ರದೇಶದಲ್ಲಿ ಅಕಾಲಿಕವಾಗಿ ಆಗಮಿಸಿದೆ. ಜೂನ್ 02-04 ರಂದು ಅಸ್ಸಾಂ ಮತ್ತು ಮೇಘಾಲಯದಲ್ಲಿ ಭಾರೀ (64.5-115.5 ಮಿಮೀ) ರಿಂದ ಅತಿ ಹೆಚ್ಚು (115.5-204.4 ಮಿಮೀ) ಮಳೆಯಾಗುವ ಸಾಧ್ಯತೆಯಿದೆ ಎಂದು IMD ಹೇಳಿದೆ. ಉಪ-ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಜೂನ್ 3 ರಿಂದ 6 ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ದಿನಗಳಲ್ಲಿ ವಾಯುವ್ಯ, ಮಧ್ಯ ಮತ್ತು ಪೂರ್ವ ಭಾರತದಲ್ಲಿ ಬಿಸಿಗಾಳಿ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ (ಜೂನ್ 3), ಪಂಜಾಬ್,…
ಕಾಡುಗಳ್ಳ ವೀರಪ್ಪನ್ ನನ್ನು ಕೊಂದಿದ್ದ ಎನ್ ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ವೆಲ್ಲಾದುರೈ ಸಸ್ಪೆಂಡ್ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ. ಹೌದು, ಕಾಡುಗಳ್ಳ ವೀರಪ್ಪನ್ ನನ್ನು ಹೊಡೆದುರುಳಿಸಿದ ವಿಶೇಷ ಕಾರ್ಯಪಡೆಯಲ್ಲಿ ತಮಿಳುನಾಡು ಪೊಲೀಸ್ ಹೆಚ್ಚುವರಿ ಅಧೀಕ್ಷಕ ಎಸ್ ವೆಲ್ಲಾದುರೈ ಅವರ ನಿವೃತ್ತಿಗೆ ಒಂದು ದಿನ ಮೊದಲು ಅಮಾನತು ಮಾಡಲಾಗಿದೆ. ಈಗಾಗಲೇ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ವೆಲ್ಲಾದುರೈ ಅವರನ್ನು ತಮಿಳುನಾಡು ಗೃಹ ಇಲಾಖೆ ಅಮಾನತುಗೊಳಿಸಿದೆ. ಮೂಲಗಳ ಪ್ರಕಾರ, 2013ರಲ್ಲಿ ತಮಿಳುನಾಡಿನ ಶಿವಗಂಗಾ ಜಿಲ್ಲೆಯಲ್ಲಿ ‘ಕೊಕ್ಕಿ’ ಕುಮಾರ್ ಅಲಿಯಾಸ್ ರಾಮು ಎಂಬಾತನ ಲಾಕಪ್ ಡೆತ್ ಪ್ರಕರಣದಲ್ಲಿ ವೆಲ್ಲಾದುರೈ ಭಾಗಿಯಾಗಿದ್ದರು ಎಂದು ಆರೋಪಿಸಿ ಅಮಾನತುಗೊಳಿಸಲಾಗಿತ್ತು. ಆದರೆ, ವೆಲ್ಲಾದುರೈ ಅಮಾನತು ಆಗಿರುವ ಹಿನ್ನೆಲೆ ಅಪಾರ ವಿರೋಧ ವ್ಯಕ್ತವಾದ ಕಾರಣ ಶುಕ್ರವಾರದ ನಂತರದ ಆದೇಶದಲ್ಲಿ ಇಲಾಖೆ ಕೆಲವು ಷರತ್ತುಗಳಿಗೆ ಒಳಪಟ್ಟು ದಂಡ ವಿಧಿಸಿ ನಿವೃತ್ತಿ ಅಮಾನತು ಹಿಂಪಡೆದಿದೆ. ಹೌದು, ವೆಲ್ಲಾದುರೈ ಅವರ ನಿವೃತ್ತಿ ಫಂಡ್ ನಲ್ಲಿ 5 ಲಕ್ಷ ರೂ. ಕಡಿತಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ನಮ್ಮತುಮಕೂರಿನ ಕ್ಷಣ…
ವಿಷಕಾರಿ ಹಾವು ಕಚ್ಚಿದ ಪರಿಣಾಮ ಸುಬ್ರಹ್ಮಣ್ಯ ಸಮೀಪದ ಹರಿಹರದಲ್ಲಿ ಮಹಿಳೆಯೊಬ್ಬರು ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ದೇವಮ್ಮ (60 ವರ್ಷ) ಸಾವಿಗೀಡಾದ ಮಹಿಳೆಯಾಗಿದ್ದಾರೆ. ಅವರು ಭಾನುವಾರ ಬೆಳಗ್ಗೆ 9.45 ರ ಹೊತ್ತಿಗೆ ಮನೆಯಲ್ಲಿದ್ದ ವೇಳೆ ಹಾವು ಕಚ್ಚಿದೆ. ಕೋಳಿ ಮೊಟ್ಟೆಯನ್ನು ತಿನ್ನುವುದಕ್ಕಾಗಿ ಕೋಳಿ ಕಾಪುವಿನ ಜಾಗಕ್ಕೆ ಹಾವು ಬಂದಿತ್ತು. ಈ ಹಾವು ಇರುವುದು ಮಹಿಳೆಯ ಗಮನಕ್ಕೆ ಬಂದಿರುವುದಿಲ್ಲ. ಅರಿವಿಲ್ಲದೆ ಕಾಪಿನತ್ತ ಹೋದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರು ಇರಲಿಲ್ಲ. ಹೀಗಾಗಿ ಮನೆಯವರಿಗೆ ವಿಷಯ ಗೊತ್ತಾಗಲಿಲ್ಲ ಎಂದು ತಿಳಿದು ಬಂದಿದೆ. ಮನೆಯವರಿಗೆ ವಿಷಯ ಗೊತ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸುಳ್ಯದ ಆಸ್ಪತ್ರೆಗೆ ತಲುಪಿದಾಗ ವೈದ್ಯರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಭಾರತೀಯ ರೈಲ್ವೆ ಇಲಾಖೆಯು ಮುಂದಿನ ಜುಲೈ ಹಾಗೂ ಸೆಪ್ಟೆಂಬರ್ ತಿಂಗಳ ನಡುವೆ ಹಲವು ನೇಮಕ ಅಧಿಸೂಚನೆಗಳನ್ನು ಬಿಡುಗಡೆ ಮಾಡಲಿದೆ. ಅವುಗಳ ಪೈಕಿ ದ್ವಿತೀಯ ಪಿಯುಸಿ ಪಾಸಾದವರಿಗೆ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿ – ಪದವಿಗಿಂತ ಕೆಳಹಂತದ ಅರ್ಹತೆಯ ಹುದ್ದೆಗಳಿಗೆ ಸಹ ನೇಮಕ ನೋಟಿಫಿಕೇಶನ್ ಬಿಡುಗಡೆ ಮಾಡುವ ಕುರಿತು ತನ್ನ ನೇಮಕಾತಿ ಕ್ಯಾಲೆಂಡರ್ ನಲ್ಲಿ ಮಾಹಿತಿ ನೀಡಿದೆ. ರೈಲ್ವೆಯಲ್ಲಿ ನಾನ್ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯಲ್ಲಿ ಲೆವೆಲ್ 2 ಹಾಗೂ ಲೆವೆಲ್ 3 ಹುದ್ದೆಗಳಾದ – ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್, ಜೂನಿಯರ್ ಟೈಮ್ ಕೀಪರ್, ಟ್ರೈನ್ಸ್ ಕ್ಲರ್ಕ್, ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ಗೂಡ್ಸ್ ಗಾರ್ಡ್, ಸೀನಿಯರ್ ಟೈಮ್ ಕೀಪರ್ ಹುದ್ದೆಗಳಿವೆ. ಈ ಹುದ್ದೆಗಳಿಗೆ 7ನೇ ವೇತನ ಆಯೋಗದ ಲೆವೆಲ್ 2, 3 ಸಂಭಾವನೆ ಇರುತ್ತದೆ. ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ (ಲೆವೆಲ್ 2): Rs.19,900. ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್…