Author: admin

ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಕೋರ್ಟ್ ನಿಂದ ವಾರೆಂಟ್ ಹೊರಡಿಸುವಂತೆ ಮಾಡಿಸಿ ಅದನ್ನು ಜಾರಿ ಮಾಡಲು ಲಂಚ ಸ್ವೀಕರಿಸಿದ ಆರೋಪದಲ್ಲಿ ಪೊಲೀಸ್ ಪೇದೆಯೊಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಸರಸ್ವತಿ ನಗರದ ನಿವೃತ್ತ ಶಿಕ್ಷಕ ಲಕ್ಕಪ್ಪ ಎಂಬವರು ಸೈಯದ್ ತ್ವಾಹಿರುದ್ದೀನ್ ಎಂಬವರ ವಿರುದ್ದ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ನ್ಯಾಯಾಯಲದಿಂದ ವಾರೆಂಟ್ ಹೊರಡಿಸುವಂತೆ ಮಾಡಿಸಿ ಅದನ್ನು ಜಾರಿ ಮಾಡಲು ಪೊಲೀಸ್ ಸಿಬ್ಬಂದಿ ಹನುಮಂತಪ್ಪ 2 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ. ಲಕ್ಕಪ್ಪಈ ಸಂಬಂಧ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು. ಮೇ 31ರಂದು ಆರೋಪಿ ಪೊಲೀಸ್ ಹನುಮಂತಪ್ಪ 2 ಸಾವಿರ ರೂ. ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡು ಸ್ವೀಕರಿಸಿದ ವೇಳೆ ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಕಾರ್ಯಾಚರಣೆ ಮಾಡಿದ್ದಾರೆ. ಅದರಂತೆ ಆರೋಪಿ ಹನುಮಂತಪ್ಪರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಲೋಕಾಯುಕ್ತ ಅಧೀಕ್ಷಕ ಎಂ.ಎಸ್. ಕೌಲಾಪೂರೆ, ಲೋಕಾಯುಕ್ತ ಉಪಾಧೀಕ್ಷಕ ಕಲಾವತಿ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ…

Read More

ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆ ಹಿನ್ನೆಲೆಗೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ 8 ಮಂದಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ. ವಿಧಾನ ಪರಿಷತ್ ಚುನಾವಣೆಗೆ ಸೋಮವಾರ ಕೊನೆಯ ದಿನವಾಗಿದ್ದು, ಈ ಹಿನ್ನೆಯಲ್ಲಿ 8 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದೆ. ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯನಿಗಾಗಿ ವರುಣ ಕ್ಷೇತ್ರ ಬಿಟ್ಟುಕೊಟ್ಟಿದ್ದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯಗೆ, ಈಗ ವಿಧಾನ ಪರಿಷತ್ ಟಿಕೆಟ್ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಎನ್‌.ಎಸ್. ಬೋಸರಾಜು, ವಂಸತ್ ಕುಮಾರ್, ಕೆ. ಗೋವಿಂದ ರಾಜ್, ಐವಾನ್ ಡಿಸೋಜ, ಜಗದೇವ್ ಗುತ್ತೇದಾರ್, ಬಿಲ್ಕಿಸ್ ಬಾನೊ, ಬಸನಗೌಡ ಬಾರ್ದಿಲಿ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಜಗದೀಶ್ ಶೆಟ್ಟರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬಸನಗೌಡ ಬಾರ್ದಿಲಿಗೆ ಟಿಕೆಟ್ ನೀಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಬಾಗಲಕೋಟೆ: ಕಾಂಗ್ರೆಸ್‌ ಮುಖಂಡನೊಬ್ಬರು ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿರುವ ಘಟನೆ ಬಾಗಲಕೋಟೆ ತಾಲೂಕಿನ ಹವೇಲಿ ಗ್ರಾಮದಲ್ಲಿ ನಡೆದಿದೆ. ಹಳೆ ಹವೇಲಿ ಗ್ರಾಮದ ಕಾಂಗ್ರೆಸ್ ಮುಖಂಡ ರಮೇಶ್ ರಾಠೋಡ ತಲ್ವಾರ್‌ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಸಾಂಗ್ ಹಾಕಿ ಕಾಂಗ್ರೆಸ್‌ ಮುಖಂಡ ಕೇಕ್ ಕಟ್ ಮಾಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ತಲ್ವಾರ್‌ ನಿಂದ ಕೇಕ್ ಕತ್ತರಿಸಿದ ಮುಖಂಡನಿಗೆ ಬೆಂಬಲಿಗರು ಸನ್ಮಾನ ಮಾಡಿದ್ದಾರೆ. ಲೈಸೆನ್ಸ್ ಇಲ್ಲದೇ ಮಾರಕಾಸ್ತ್ರ ಹೊಂದುವುದು, ಸಾರ್ವಜನಿಕವಾಗಿ ಮಾರಕಾಸ್ತ್ರ ಬಳಸುವುದು ಕಾನೂನು ಪ್ರಕಾರ ಅಪರಾಧ. ಹೀಗಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ನನ್ನ ಕ್ರಿಕೆಟ್ ಕರಿಯರ್ ಹಾಳಾಗಿದ್ದೆ ಕೊಹ್ಲಿಯಿಂದ ಎಂದು ಹೇಳುವ ಮೂಲಕ 2019ರ ಘಟನೆ ಬಗ್ಗೆ ಅಂಬಾಟಿ ರಾಯುಡು ಸತ್ಯ ಬಿಚ್ಚಿಟ್ಟಿದ್ದಾರೆ. 2019ರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಳ್ಳಲು ಕೊಹ್ಲಿಯೇ ಕಾರಣ ಎಂದು ಹೇಳುವ ಮೂಲಕ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ನನಗೂ ಬಿಸಿಸಿಐ ಆಯ್ಕೆ ಸಮಿತಿಯಲ್ಲಿದ್ದ ಒಬ್ಬ ಸದಸ್ಯರಿಗೂ ಒಂದು ಸಮಸ್ಯೆ ಇತ್ತು. ಆಂಧ್ರದ ಪರ ಆಡುತ್ತಿದ್ದಾಗ ನನ್ನ ಕ್ರಿಕೆಟ್‌ ವೃತ್ತಿ ಜೀವನದ ಆರಂಭದಲ್ಲೂ ಇವರಿಂದ ನನಗೆ ಸಮಸ್ಯೆ ಆಗಿತ್ತು. ಆ ಒಬ್ಬ ವ್ಯಕ್ತಿಯಿಂದಲೇ ನಾನು 2019ರ ಏಕದಿನ ವಿಶ್ವಕಪ್‌ ಟೂರ್ನಿಯ ಭಾರತ ತಂಡದಿಂದ ಹೊರಗುಳಿದೆ. ಅಂದು ಕೊಹ್ಲಿ ನನ್ನನ್ನು ಸಪೋರ್ಟ್ ಮಾಡಬಹುದಿತ್ತು. ಕ್ಯಾಪ್ಟನ್ ಆಗಿದ್ದ ಕೊಹ್ಲಿಗೆ ಆ ಹಕ್ಕು ಇತ್ತು. ಆದರೆ, ಅಂದು ನನ್ನ ಪರ ಕೊಹ್ಲಿ ನಿಲ್ಲಲಿಲ್ಲ ಎಂದು ರಾಯುಡು ದೂರಿದ್ದಾರೆ. ಒಂದು ಅರ್ಥದಲ್ಲಿ ನನ್ನ ಕ್ರಿಕೆಟ್ ಕರಿಯರ್ ಹಾಳಾಗಿದ್ದೆ ಕೊಹ್ಲಿಯಿಂದ. 4 ವರ್ಷಗಳ ಕಾಲ ಭಾರತ ತಂಡದ ನಾಲ್ಕನೇ ಕ್ರಮಾಂಕಕ್ಕೆ ನನ್ನನ್ನು ತಯಾರಿ ಮಾಡಲಾಗಿತ್ತು.…

Read More

ವಿಮಾನದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಮಾನ ನಿಲ್ದಾಣವು ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. 2024 ರ ಹೊಸ ನಿಯಮದಂತೆ ಇನ್ಮುಂದೆ ದುಬೈಗೆ ಪ್ರಯಾಣಿಸುವವರು ವಿಮಾನದಲ್ಲಿ ಕೆಲವು ವಸ್ತುಗಳನ್ನು ಕೊಂಡೊಯ್ಯಲು ಸಾಧ್ಯವಿಲ್ಲ. ದುಬೈ ವಿಮಾನ ಬ್ಯಾಗೇಜ್ ನಿಯಮಗಳಲ್ಲಿ ಬದಲಾವಣೆಯಾಗಿದ್ದು ಕೆಲವು ವಸ್ತುಗಳನ್ನು ವಿಮಾನದಲ್ಲಿ ಸಾಗಿಸಲು ಕಾನೂನು ಅಪರಾಧವೆಂದು ಪರಿಗಣಿಸಲಾಗಿದೆ. ಯಾವುದೇ ಪ್ರಯಾಣಿಕರು ಈ ನಿಷೇಧಿತ ವಸ್ತುಗಳನ್ನು ಸಾಗಿಸುತ್ತಿರುವುದು ಕಂಡುಬಂದಲ್ಲಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಈ ಉತ್ಪನ್ನಗಳ ಸಾಗಾಟ ನಿಷಿದ್ಧ: *  ಕೊಕೇನ್, ಹೆರಾಯಿನ್, ಗಸಗಸೆ ಮತ್ತು ತಲೆತಿರುಗುವಿಕೆಗೆ ಕಾರಣವಾಗುವ ಔಷಧಗಳು. *  ವೀಳ್ಯದೆಲೆ ಮತ್ತು ಕೆಲವು ಗಿಡಮೂಲಿಕೆಗಳು *  ಆನೆ ದಂತ ಮತ್ತು ಘೇಂಡಾಮೃಗಗಳ ಕೊಂಬು, ಜೂಜಾಟದ ಉಪಕರಣಗಳು, ಮೂರು ಪದರಗಳ ಮೀನುಗಾರಿಕೆ ಬಲೆಗಳು ಮತ್ತು ಬಹಿಷ್ಕರಿಸಿದ ದೇಶಗಳಿಂದ ಆಮದು ಮಾಡಿಕೊಳ್ಳುವ ಸರಕುಗಳ ಸಾಗಣೆಯೂ ಸಹ ಅಪರಾಧವೆಂದು ಪರಿಗಣನೆ. *  ಮುದ್ರಿತ ವಸ್ತುಗಳು, ತೈಲ ವರ್ಣಚಿತ್ರಗಳು, ಛಾಯಾಚಿತ್ರಗಳು, ಪುಸ್ತಕಗಳು ಮತ್ತು ಕಲ್ಲಿನ ಶಿಲ್ಪಗಳು *  ನಕಲಿ ನೋಟು, ಮನೆಯಲ್ಲಿ ಬೇಯಿಸಿದ…

Read More

ರಾಜ್ಯದಲ್ಲಿ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಇದು ಗುಡ್ ನ್ಯೂಸ್. ಭಾರತೀಯ ಅಂಚೆ ಇಲಾಖೆಯಲ್ಲಿ (Post office recruitment ) ಒಟ್ಟು 33,000 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಕೆಳಗೆ ನೀಡಿದ ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳ ಭರ್ತಿ ಮಾಡಲು ಅಂಚೆ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಲಿದೆ. ಪೊಸ್ಟ್ ಮ್ಯಾನ್ ಹುದ್ದೆ ಮೇಲ್ ಗಾರ್ಡ್ ಹುದ್ದೆ ಎಂಟಿಎಸ್ ಹುದ್ದೆ ಚಾಲಕ ಹುದ್ದೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿ 18 ರಿಂದ 27 ವರ್ಷ ಒಳಗಿರಬೇಕು. ಯಾವುದಾದರೂ ಮಾನ್ಯತೆ ಪಡೆದ ಮಂಡಳಿಯಿಂದ 10 ನೆಯ ಅಥವಾ 12 ನೆಯ ತರಗತಿ ಪಾಸಗಿರಬೇಕು. ಈ ಹಿಂದೆ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ಇರಬಾರದು. ಅರ್ಜಿಯ ಶುಲ್ಕವನ್ನು 100 ರೂಪಾಯಿ ನೀಡಬೇಕಾಗುತ್ತದೆ. ಈ ಹುದ್ದೆಗೆ ಅರ್ಜಿ ಹಾಕಲು sc/st ವರ್ಗದ ವಿಧ್ಯಾರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.  https://indiapostgdsonline.gov.in/ ನಮ್ಮತುಮಕೂರಿನ…

Read More

ಯಾದಗಿರಿ: VRL ಬಸ್ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬಳಿ ನಡೆದಿದೆ. ಅಲ್ಲಿನ ಹತ್ತಿಗೂಡುರ ಗ್ರಾಮದ ಬ್ರಿಡ್ಜ್ ಬಳಿ ಬಸ್ ಪಲ್ಟಿ ಹೊಡೆದಿದೆ. 7ಜನ ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ. ಸಾವನ್ನಪ್ಪಿದ ಇಬ್ಬರು ನಿವಾಸಿಗಳು ಕಲಬುರ್ಗಿಯ ಮೂಲದವರು ಎಂದು ತಿಳಿದುಬಂದಿದೆ.ವಿಆರ್ಎಲ್ ಬಸ್ ಕಲಬುರ್ಗಿಯಿಂದ ಬೆಂಗಳೂರು ಕಡೆ ತೆರಳುತ್ತಿತ್ತು. ಬಸ್ ನಲ್ಲಿ 37 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಬಸ್ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಹಲವಾರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಬಳಿಕ ಅವರನ್ನು ಚಿಕಿತ್ಸೆಗಾಗಿ ಶಹಾಪುರ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸುರಪುರ ಡಿವೈಎಸ್ಪಿ ಜಾವೇದ್ ಇನಾಮ್ದಾರ್ ಮೃತಪಟ್ಟ ಪ್ರಯಾಣಿಕರ ಬಗ್ಗೆ ಖಚಿತ ಪಡಿಸಿದ್ದಾರೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್…

Read More

ಪಲ್ಲಕ್ಕಿ ಟ್ರಾಕ್ಟರ್ ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಗೊಲ್ಲಹಳ್ಳಿ ಬಳಿ ಜರುಗಿದೆ. ವೀರಸಂದ್ರ ವಾಸಿ ರಂಗನಾಥ(33) ಯಾರಂಡಹಳ್ಳಿ ವಾಸಿ, ಹರಿಬಾಬು(25) ಮೃತರು ಎನ್ನಲಾಗಿದೆ. ಗೊಲ್ಲಹಳ್ಳಿ ಗ್ರಾಮದ ಜಾತ್ರೆ ಪಲ್ಲಕಿ ಉತ್ಸವದ ವೇಳೆ ಅವಘಡ ಸಂಭವಿಸಿದೆ. ಪಲ್ಲಕ್ಕಿ ಉತ್ಸವ ಮುಗಿಸಿ ವಾಪಸ್ ಬರುವಾಗಿ ಪಲ್ಲಕ್ಕಿಗೆ ವಿದ್ಯುತ್ ತಂತಿ ತಗುಲಿದೆ. ಈ ವೇಳೆ ಟ್ರಾಕ್ಟರ್ ಚಾಲಕ ಮತ್ತು ಆತನನ್ನು ರಕ್ಷಣೆ ಧಾವಿಸಿದ ವ್ಯಕ್ತಿಗೆ ವಿದ್ಯುತ್ ಶಾಕ್ ದೊರೆತಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆ ಸಿಬ್ಬಂದಿಯಿಂದ ರಕ್ಷಣೆ ಮಾಡಲಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯೆ ಇಬ್ಬರು ಸಾವನ್ನಪ್ಪಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ಚಾಮರಾಜನಗರ: ಅನೈತಿಕ ಸಂಬಂಧ ಹಿನ್ನಲೆ ಅಣ್ಣನನ್ನು ಚಾಕುವಿನಿಂದ ಇರಿದು ತಮ್ಮ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚೌಡಳ್ಳಿ ಗ್ರಾಮದಲ್ಲಿ ಜರುಗಿದೆ. ಚೌಡಳ್ಳಿ ಗ್ರಾಮದ ಪ್ರಸಾದ್( 45) ಮೃತಪಟ್ಟ ದುರ್ದೈವಿ ಎನ್ನಲಾಗಿದೆ. ಚೌಡಳ್ಳಿ ಗ್ರಾಮದ ಅವಿವಾಹಿತ ಕುಮಾರ್ ಅಣ್ಣನ ಕೊಲೆ‌ ಮಾಡಿದ ಆರೋಪಿ ಎನ್ನಲಾಗಿದೆ. ಆರೋಪಿ ಕುಮಾರ ಎಂಬಾತ ಅಣ್ಙ ಪ್ರಸಾದ ಪತ್ನಿ( ಅತ್ತಿಗೆ) ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗದಿರಲಿ ಎಂದು ಯೋಜನೆ ರೂಪಿಸಿ ಅಣ್ಣನನ್ನು ಆರೋಪಿ ಕುಮಾರ್ ಕೊಲೆ ಮಾಡಿದ್ದಾನೆ. ಶನಿವಾರ ತಡರಾತ್ರಿ ಘಟನೆ ಸಂಭವಿಸಿದೆ. ಕೊಲೆ ಮಾಡಿದ 2 ಗಂಟೆಯಲ್ಲಿಯೇ ಆರೋಪಿಯನ್ನು ಗುಂಡ್ಲುಪೇಟೆ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆ ಮಾಡಿ ಪರಾರಿಯಾಗಲು ಆರೋಪಿ ಕುಮಾರ್ ಯತ್ನಿಸಿದ್ದ. ಗುಂಡ್ಲುಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ. ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

Read More

ದೇಶದ ಜನರಿಗೆ ಅಮುಲ್ ಶಾಕಿಂಗ್ ನ್ಯೂಸ್ ನ್ಯೂಡಿದ್ದು, ಹಾಲಿನ ಬೆಲೆಯಲ್ಲಿ 2 ರೂಪಾಯಿ ಏರಿಕೆ ಮಾಡಿದೆ. ಹಾಲಿನ ನಿರ್ವಹಣೆ ಮತ್ತು ಉತ್ಪಾದನೆ ವೆಚ್ಚ ಹೆಚ್ಚಳ ಆಗುತ್ತಿರುವ ಕಾರಣ ನೀಡಿರುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್), ಅಮುಲ್ ಹಾಲಿನ ಬೆಲೆಯನ್ನು 2 ರೂಪಾಯಿ ಏರಿಕೆ ಮಾಡಲಾಗಿದೆ. ದೇಶದಲ್ಲಿರುವ ಎಲ್ಲಾ ಮಾರುಕಟ್ಟೆಗಳಲ್ಲೂ ಅಮುಲ್ ಹಾಲಿನ ಬೆಲೆಯಲ್ಲಿ ಲೀಟರ್‌ ಗೆ 2 ರೂಪಾಯಿ ಏರಿಕೆ ಆಗಲಿದೆ. ಪರಿಷ್ಕೃತ ದರವು ಇಂದಿನಿಂದಲೇ ಜಾರಿಗೆ ಬರುತ್ತಿದೆ ಎಂದು ಜಿಸಿಎಂಎಂಎಫ್‌ನ ಎಂಡಿ ಜಯನ್ ಮೆಹ್ತಾ ಹೇಳಿದ್ದಾರೆ. GCMMF 2023 ಫೆಬ್ರವರಿಯಲ್ಲಿ ಹಾಲಿನ ದರವನ್ನು ಹೆಚ್ಚಿಸಿತ್ತು. ರೈತರಿಗೆ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ಕಾರಣದಿಂದ ಹಾಲಿನ ದರದಲ್ಲಿ ಏರಿಕೆ ಮಾಡಲಾಗಿತ್ತಿದೆ ಎಂದು ಸಂಸ್ಥೆ ತಿಳಿಸಿದೆ. 500 ml ಅಮುಲ್ ಎಮ್ಮೆ ಹಾಲು 36 ರೂಪಾಯಿ 500 ml ಅಮುಲ್ ಗೋಲ್ಡ್ ಮಿಲ್ಕ್ 33 ರೂಪಾಯಿ 500 ml ಅಮುಲ್ ಶಕ್ತಿ ಮಿಲ್ಕ್ 30 ರೂಪಾಯಿ ನಮ್ಮತುಮಕೂರಿನ ಕ್ಷಣ ಕ್ಷಣದ…

Read More