ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯ ದಶಮಿ ಸಂಭ್ರಮ ಮನೆ ಮಾಡಿದ್ದು, ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿ ಬಿದ್ದಿದ್ದಾರೆ.
ಬೆಂಗಳೂರು ನಗರದ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಮಲ್ಲೇಶ್ವರಂ, ಜಯನಗರ, ವಿಜಯನಗರ, ಬಸವನಗುಡಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಹೂ, ಬಾಳೆಕಂದು, ಮಾವಿನ ಸೊಪ್ಪು, ಬೂದುಗುಂಬಳಕಾಯಿ ಖರೀದಿ ಜೋರಾಗಿದೆ.
ಕಳೆದ ಕೆಲವು ದಿನಗಳಿಂದ ಕುಸಿದಿದ್ದ ಹೂವಿನ ಬೆಲೆ ಹಬ್ಬದ ಪ್ರಯುಕ್ತ ಮತ್ತೆ ಏರಿಕೆಯಾಗಿದೆ. ಸೇವಂತಿಗೆ, ಕನಕಾಂಬರ, ಗುಲಾಬಿ, ಮಲ್ಲಿಗೆ ಹೂಗಳ ಬೇಡಿಕೆ ಹೆಚ್ಚಳವಾಗಿದೆ.
ಮಲ್ಲಿಗೆ ಕೆ.ಜಿ.ಗೆ 800, ಕನಕಾಂಬರ 2,000, ಗುಲಾಬಿ 350, ಸೇವಂತಿಗೆ 300, ಸುಗಂಧರಾಜ 350, ಚೆಂಡು ಹೂ 100 ರೂ.ಗೆ ಮಾರಾಟವಾಗುತ್ತಿದೆ.
ಬಾಳೆಕಂದು ಜೋಡಿಗೆ 50, ಮಾವಿನ ಸೊಪ್ಪು 1 ಕಟ್ 20, ನಿಂಬೆಹಣ್ಣು ಒಂದಕ್ಕೆ 7 ರೂ. ದ್ರಾಕ್ಷಿ 250, ಸೇಬು 120, ದಾಳಿಂಬೆ 200, ಏಲಕ್ಕಿ ಬಾಳೆಹಣ್ಣು 100, ಸೀತಾಫಲ 100 ರೂ.ಗೆ ಮಾರಾಟವಾಗುತ್ತಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296