ಬಳ್ಳಾರಿ: ನಟ ದರ್ಶನ್ ಅವರಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆ ದರ್ಶನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದರ ಬೆನ್ನಲ್ಲೇ ಡಿ ಕಂಪೆನಿ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿಕೊಂಡಿದೆ.
ಎಲ್ಲಾ ತೂಗುದೀಪ ಪರಿವಾರದ ಅಭಿಮಾನಿಗಳಿಗೆ ಈ ಮೂಲಕ ತಿಳಿಸುವುದು ಏನೆಂದರೆ ಡಿ ಬಾಸ್ ರವರು ಬಿಡುಗಡೆಯಾಗಿರುವುದು ಚಿಕಿತ್ಸೆಯ ಸಲುವಾಗಿ ಆದ್ದರಿಂದ, ಅಭಿಮಾನಿಗಳು ದರ್ಶನ್ ಅವರ ಮನೆ ಮುಂದೆ ಹೋಗಿ ಪಟಾಕಿ ಹೊಡೆಯುವುದು, ಕೂಗಾಡುವುದು ಮಾಡುವಂತಿಲ್ಲ, ಹಾಗೂ ಮಾಧ್ಯಮಗಳಿಗೆ, ಬೇರೆ ನಟರಿಗೆ, ಪೊಲೀಸ್ ಅಧಿಕಾರಿಗಳ ಬಗ್ಗೆ ಹಗುರವಾಗಿ ಮಾತನಾಡುವಂತಿಲ್ಲ ಎಂದು ತಿಳಿಸುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಡಿ ಕಂಪನಿ ಎಂಬ ಟ್ವಿಟರ್ ಖಾತೆಯಲ್ಲಿ ವಿಡಿಯೋ ವೊಂದನ್ನು ಶೇರ್ ಮಾಡಿರುವ ಫ್ಯಾನ್ಸ್, ಡೆವಿಲ್ ಈಸ್ ಬ್ಯಾಕ್ ಎಂದು ವಿಡಿಯೋವೊಂದನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಈ ನಡುವೆ ದರ್ಶನ್ ಬಿಡುಗಡೆ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಬಳ್ಳಾರಿ ಜೈಲಿನ ಮುಂಭಾಗ ಕಾದು ಕುಳಿತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296