nammatumakuru

    Subscribe to Updates

    Get the latest creative news from FooBar about art, design and business.

    What's Hot

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ

    February 17, 2026

    ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ

    February 17, 2026
    Facebook Twitter Instagram
    ಟ್ರೆಂಡಿಂಗ್
    • ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ
    • ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ
    • ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ
    • ಜನರ ತೆರಿಗೆ ಹಣ ಜಾಹೀರಾತಿಗೆ ಪೋಲು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
    • ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ, ಮಾರ್ಚ್ 18 ರಿಂದ SSLC ಪರೀಕ್ಷೆ ಪ್ರಾರಂಭ
    • ಪೆರು ದೇಶದ ಈ ವಿಚಿತ್ರ ಮಾರುಕಟ್ಟೆ ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ!
    • ಜೇನು ಕೃಷಿ: ಕಡಿಮೆ ಖರ್ಚಿನಲ್ಲಿ ಲಾಭದಾಯಕ ಉದ್ಯೋಗ ಆರಂಭಿಸುವುದು ಹೇಗೆ?
    • ಬೀದರ್‌ | ಕಾರಂಜಾ ಕಾಲುವೆಗೆ ಬಿದ್ದು ತಂದೆ–ಮಗ ಸಾವು
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಕನ್ನಡಕ್ಕೆ ಮೊದಲ ಪ್ರತಿಷ್ಟಿತ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಕ್: ತುಮಕೂರು ಜಿಲ್ಲಾ ಕಸಾಪ ಅಭಿನಂದನೆ
    ರಾಜ್ಯ ಸುದ್ದಿ May 22, 2025

    ಕನ್ನಡಕ್ಕೆ ಮೊದಲ ಪ್ರತಿಷ್ಟಿತ ಬೂಕರ್ ಪ್ರಶಸ್ತಿ ತಂದು ಕೊಟ್ಟ ಬಾನು ಮುಷ್ತಾಕ್: ತುಮಕೂರು ಜಿಲ್ಲಾ ಕಸಾಪ ಅಭಿನಂದನೆ

    By adminMay 22, 2025No Comments2 Mins Read
    Banu Mushtaq

    ತುಮಕೂರು: ಕನ್ನಡಕ್ಕೆ ಮೊದಲ ಪ್ರತಿಷ್ಟಿತ ಬೂಕರ್ ಪ್ರಶಸ್ತಿಯನ್ನು ತಂದು ಕೊಟ್ಟ ಲೇಖಕಿ ಬಾನು ಮುಷ್ತಾಕ್ ಮತ್ತು ಈ ಕೃತಿಯನ್ನು ಸಮರ್ಥವಾಗಿ ಇಂಗ್ಲಿಷ್ ಗೆ ಅನುವಾದಿಸಿ ಬೂಕರ್ ಪುರಸ್ಕಾರ ಬರಲು ಕಾರಣಕರ್ತರಾದ ಅನುವಾದಕಿ ದೀಪಾ ಭಸ್ತಿಯವರನ್ನೂ ಸಹ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪ ಅಭಿನಂದಿಸಿದ್ದಾರೆ.

    ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದ್ದು, ಅನುವಾದ ಸಾಹಿತ್ಯದ ಮಹತ್ವವೂ ರುಜುವಾತಾಗಿದೆ. ಈ ಮೊದಲೇ ಕನ್ನಡದ ಅನೇಕ ಕೃತಿಗಳು ಇಂಗ್ಲೀಷ್ ಗೆ ಸಮರ್ಥವಾಗಿ ಅನುವಾದವಾಗಿದ್ದರೆ ನೋಬಲ್ ಪುರಸ್ಕಾರಕ್ಕೂ ಸಹ ಅರ್ಹವಾಗುತ್ತಿದ್ದವು. ಬಾನು ಮುಷ್ಕಾಕ್ ಅವರ ‘ಹಸೀನಾ’ ಕಥೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ನಿರ್ದೇಶಿಸಿದ ಚಿತ್ರ ರಾಷ್ಟ್ರ ಪುರಸ್ಕಾರವನ್ನು ಪಡೆದಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನೊಮ್ಮೆ ಬಾನು ಮುಷ್ತಾಕ್ ಅವರಿಂದ ಅಂತಹದೇ ಇತಿಹಾಸ ಸೃಷ್ಟಿಯಾಗಿದೆ ಎಂದು ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಪ್ರಶಂಸಿಸಿದ್ದಾರೆ.


    Provided by
    Provided by

    ಬಾನು ಮುಷ್ತಾಕ್ ಅವರು 1990ರಿಂದ 2023ರ ನಡುವೆ ಬರೆದ ಹನ್ನೆರಡು ಕಥೆಗಳ ಇಂಗ್ಲೀಷ್ ಅನುವಾದವನ್ನು ದೀಪಾ ಭಸ್ತಿಯವರು “ಹಾರ್ಟ್ ಲ್ಯಾಂಪ್” ಶೀರ್ಷಿಕೆಯಲ್ಲಿ ಅನುವಾದ ಮಾಡಿದ್ದರು. ಈ ಕೃತಿಗೆ ಮೊದಲು ಅಂತರರಾಷ್ಟ್ರೀಯ ಪೆನ್ ಟ್ರಾನ್ಸ್ ಲೇಟ್ಸ್ ಪ್ರಶಸ್ತಿ ದೊರಕಿತು. ನಂತರ ಸಂಕಲನದ ‘ರೆಡ್ ಲುಂಗಿ’ ಕಥೆ, 2024ರ ಜೂನ್ ಜುಲೈ ತಿಂಗಳ ದ ಪ್ಯಾರಿಸ್ ರಿವ್ಯೂ ಮ್ಯಾಗಝೀನ್ ನಲ್ಲಿ ಪ್ರಕಟವಾಯಿತು. ಸಂಕಲನದ ಇನ್ನೊಂದು ಕಥೆ “ಒಮ್ಮೆ ಹೆಣ್ಣಾಗು ಪ್ರಭುವೆ”ಯ ಅನುವಾದ ಇನ್ನೊಂದು ಸಾಹಿತ್ಯಕ ಪತ್ರಿಕೆ ಯಾದ “ದಿ ಬ್ಯಾಫ್ಲರ್”ನಲ್ಲಿ ಪ್ರಕಟವಾಯಿತು.

    ನಂತರ ಹಾರ್ಟ್ ಲ್ಯಾಂಪ್ ಕಥಾ ಸಂಕಲನವು ಅಮೆರಿಕದಲ್ಲಿ ಹಾಗೂ ಬ್ರಿಟನ್ ನಲ್ಲಿ ನಂತರ ಭಾರತದಲ್ಲಿ ಪೆಂಗ್ವಿನ್ ರಾಂಡಮ್ ಹೌಸ್ ನಿಂದ 2025ರ ಏಪ್ರಿಲ್ ನಲ್ಲಿ ಬಿಡುಗಡೆಯಾಗಿದ್ದು ಪ್ರಕಟಣಾ ಪೂರ್ವದಲ್ಲಿಯೇ ಕಥಾ ಸಂಕಲನ 2025 ರ ಅಂತರ ರಾಷ್ಟ್ರೀಯ ಬುಕ್ಕರ್ ಬಹುಮಾನದ ಪ್ರಧಾನ ಸುತ್ತಿಗೆ ಆಯ್ಕೆಯಾಗಿದ್ದು ಈಗ ಅಂತಿಮವಾಗಿ ಪುರಸ್ಕಾರವನ್ನು ಪಡೆದಿದೆ.

    ಇದು ಕನ್ನಡಕ್ಕೆ ದೊರೆತ ಮೊದಲ ಬೂಕರ್ ಪುರಸ್ಕಾರ ಮತ್ತು ಭಾರತಕ್ಕೆ ದೊರೆತ ಆರನೆಯದು ಎಂದು ಪ್ರಸ್ತಾಪಿಸಿರುವ ಕೆ.ಎಸ್.ಸಿದ್ದಲಿಂಗಪ್ಪನವರು ಪುರಸ್ಕಾರದ ಹಾದಿಯನ್ನು ನೆನಪು ಮಾಡಿಕೊಂಡರು. ಬಾನು ಮುಷ್ತಾಕ್ ನಿರಂತರವಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ನಿಕಟ ಸಂಪರ್ಕ ಇಟ್ಟುಕೊಂಡವರು. ಮಂಡ್ಯದಲ್ಲಿ ನಡೆದ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು “ಪುನಶ್ಚೇತನವಾಗಬೇಕಾಗಿರುವ ಸಾಹಿತ್ಯ ಪ್ರಕಾರಗಳು” ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಿ ಬಹು ಮೌಲಿಕವಾದ ಮಾತುಗಳನ್ನಾಡಿದ್ದರು. ವಿಧಾನ ಸೌಧದ ಆವರಣದಲ್ಲಿ ಅಯೋಜಿತವಾಗಿದ್ದ ‘ಪುಸ್ತಕ ಮೇಳ’ದ ಸಂದರ್ಭದಲ್ಲಿ 2.03.2025ರಂದು ನಡೆದ “ಕನ್ನಡ ಸಾಹಿತ್ಯದಲ್ಲಿ ಸರ್ವ ಸಮಭಾವ ಚಿಂತನೆಗಳು” ಗೋಷ್ಟಿಯಲ್ಲಿ ಭಾಗವಹಿಸಿದ್ದನ್ನು ಸ್ಮರಿಸಬಹುದು ಎಂದು ಕೆ.ಎಸ್.ಸಿದ್ಧಲಿಂಗಪ್ಪ ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

    ————————————

     

    admin
    • Website

    Related Posts

    ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ

    February 17, 2026

    ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ

    February 17, 2026

    ಫೆಬ್ರವರಿ 28 ರಿಂದ ದ್ವಿತೀಯ ಪಿಯುಸಿ, ಮಾರ್ಚ್ 18 ರಿಂದ SSLC ಪರೀಕ್ಷೆ ಪ್ರಾರಂಭ

    February 17, 2026

    Comments are closed.

    Our Picks

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಷ್ಟ್ರೀಯ ಸುದ್ದಿ

    ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026: ಆಲೋಚನೆ ಮತ್ತು ನಾವೀನ್ಯತೆಗಳ ಪ್ರಬಲ ಸಂಗಮ ಎಂದ ಪ್ರಧಾನಿ ಮೋದಿ

    February 17, 2026

    ನವದೆಹಲಿ: ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ‘ಇಂಡಿಯಾ ಎಐ ಇಂಪ್ಯಾಕ್ಟ್ ಎಕ್ಸ್‌ಪೋ 2026’ (India AI Impact Expo 2026)…

    ಬೆಂಗಳೂರಿನ ಯಲಹಂಕದಲ್ಲಿ ದೇಶದ ಅತಿದೊಡ್ಡ ರೈಲ್ವೆ ಮೆಗಾ ಕೋಚಿಂಗ್ ಟರ್ಮಿನಲ್: ಸಚಿವ ವಿ. ಸೋಮಣ್ಣ ಘೋಷಣೆ

    February 17, 2026

    ಅಧಿಕಾರ ಹಂಚಿಕೆ: ಸಮಯ ಬಂದಾಗ ಸಿಎಂನವರೇ ಎಲ್ಲವನ್ನೂ ಬಹಿರಂಗ ಮಾಡುತ್ತಾರೆ: ಡಿಕೆಶಿ

    February 17, 2026

    ಜನರ ತೆರಿಗೆ ಹಣ ಜಾಹೀರಾತಿಗೆ ಪೋಲು: ರಾಜ್ಯ ಸರ್ಕಾರದ ವಿರುದ್ಧ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ

    February 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.