ಜಮಖಂಡಿ: ಸದಾ ಸಂಸಾರಿಕ ಹಾಗೂ ವ್ಯವಹಾರದ ಜಂಜಾಟದಿಂದ ಮುಕ್ತಿ ಹೊಂದಲು ಭಜನೆಗಳು ಪೂರಕವಾಗಿವೆ ಎಂದು ಹಿರಿಯ ಸಾಹಿತಿ ಬಿ.ಪಿ.ನ್ಯಾಮಗೌಡ ಅಭಿಪ್ರಾಯ ಪಟ್ಟರು.
ಅವರಿಂದು ಬಾಗಲಕೋಟೆ ಜಿಲ್ಲೆ, ಜಮಖಂಡಿಯಲ್ಲಿ ಭಾರತೀಯ ಜೈನ್ ಮಿಲನ್ ವಲಯ ಎಂಟರ ಜಿನ ಭಜನಾಕಾರ್ಯಕ್ರಮದ ಸೀಸನ್ –8 ರ ಜಮಖಂಡಿ ವಲಯ ಮಟ್ಟದ ಜನಭಜನೆಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಜನೆಯಿಂದ ಮಾನವ ನೆಮ್ಮದಿ ಅಹಿಂಸೆ, ಶಾಂತಿ, ಪಡೆಯಲು ಸಾಧ್ಯ ಇದು ಮಾನವನಿಗೆ ಸುಖ ನೀಡುತ್ತದೆ, ಜಿನ ಭಜನೆಗಳ ಸ್ಪರ್ಧೆಗಳು ಮಾನವನಿಗೆ ಕೇವಲ ಬಹುಮಾನ ಪಡೆಯಲು ಸೀಮಿತವಾಗಬಾರದು, ಸ್ಪರ್ಧಿಸುವುದು ಮುಖ್ಯ ಜಿನ ಭಜನೆ ಸಂಸ್ಕೃತಿ ಸಂಸ್ಕಾರದ ಪ್ರತೀಕವಾಗಿದೆ ಎಂದರು.
ಸಾಹಿತಿ ಜೀವoದರ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಸ್ಪರ್ಧೆಗಳು ಒಬ್ಬರಿಗೆ ಇದರಲ್ಲಿ ಯಾವುದೇ ಭೇದಭಾವವಿಲ್ಲ ಎಂದರು ಸೀಮಿತವಾಗಿಲ್ಲ.
ಕಾರ್ಯಕ್ರಮದಲ್ಲಿ ಭಾರತಿ ಶಹಪುರ, ಸುಶೀಲ್ ಕುಮಾರ್ ಬೆಳಗಲಿ ,ಜನಭಜನೆಯ ಮುಖ್ಯ ಸಂಯೋಜಕ ಮಹಾವೀರ್ ಶಾಹಪುರ್, ದಯಾನಂದ ಶಿರಗಾರ, ನೇಮಿನಾಥ ನರಸಗೊಂಡ, ಪ್ರಶಾಂತ್ ಉಪಾಧ್ಯೆ, ದೇವದ ದೇಸಾಯಿ, ರಾವ್ ಸಾಹೇಬ್ ನ್ಯಾಮಗೌಡ , ಸಿ.ಟಿ.ಉಪಾದ್ಯೆ, ಸಾಗರ್ ಹಲಗೂರ, ಮಹಾವೀರ ಕೋರಿ, ನೇಮಿನಾಥ ಜಕನೂರ, ಕುಮಾರ್ ಸಕಳೆ, ಮಹಾವೀರ್ ಶಾ. ಪಾಟೀಲ್, ಭರತೇಶ ಹಳಂಗಳಿ, ನಿರ್ದೇಶಕರಾಧಾ ಪದ್ಮಣ್ಣ ಜಕನೂರ ಪಾಶ್ವನಾಥ ರ ಸಕಳಿ,ಚನ್ನಪ್ಪ ಮನೆಪ್ಪನವರ್, ಜಯಪಾಲ ನಡುವಿನಮನಿ ,ಅಭಯ್ ಕುಮಾರ್ ದೇಸಾಯಿ, ಬಾಹುಬಲಿ ಕಡಕೋಳ,ಯಾದಪ್ಪ ನಂದೇಶ್ವರ, ಅಣ್ಣಪ್ಪ ಪಿ. ಶಿರಹಟ್ಟಿ, ಪವನ ಶ್ಯಾಮ್ ಪಾಟೀಲ್, ಪಾರಸ್ ಮಲಗುಂಡ, ಸುರೇಂದ್ರ ಬಸರಿ ಕೂಡಿ, ಚಂದು .ಮ .ಪರಮ ಕೊಂಡ ಸೇರಿದಂತೆ ಜಮಖಂಡಿ ಶುಗರ್ ಹಾಗೂ ಪ್ರಭುಲಿಂಗೇಶ್ವರ ಶುಗರ್ ಸಿಬ್ಬಂದಿಗಳು ಭಾಗವಹಿಸಿದ್ದರು.
ತೀರ್ಪುಗಾರರಾಗಿ ಧೀರಜ್ ಜೈನ್ ಹೊಳೆನರಸೀಪುರ, ನಮಿತಾ ರಾಜು ಪರಮಜ್ಜ, ಸಿದ್ದರಾಜ ಪೂಜಾರಿ ಉಪಸ್ಥಿತರಿದ್ದರು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx