ಮೈಸೂರು: ಮೈಸೂರು ದಸರಾ ಜಂಬೂಸವಾರಿಗೆ ಇಂದಿನಿಂದ ತಾಲೀಮು ಆರಂಭಗೊಂಡಿದೆ. ಈ ಬಾರಿಯೂ ಅಂಬಾರಿ ಹೊರುವ ಆನೆಗಳ ತೂಕವನ್ನು ಪರೀಕ್ಷಿಸಲಾಗಿದೆ. ಅಂಬಾರಿ ಹೊರುವ ಅಭಿಮಾನ್ಯುವಿಗಿಂತಲೂ ಹೆಚ್ಚು ತೂಕವನ್ನು ಭೀಮಾ ಆನೆ ದಾಖಲಿಸಿದ್ದಾನೆ. ಈ ಮೂಲಕ ಹೆಚ್ಚು ಬಲಶಾಲಿ ಆನೆಯಾಗಿ ಭೀಮಾ ಹೊರಹೊಮ್ಮಿದ್ದಾನೆ
ತೂಕ ಎಷ್ಟಿದೆ?
ಅಭಿಮನ್ಯು : 5,360 ಕೆಜಿ
ಭೀಮ : 5,465 ಕೆಜಿ
ಧನಂಜಯ : 5,310 ಕೆಜಿ
ಕಾವೇರಿ : 3,010 ಕೆಜಿ
ಲಕ್ಷ್ಮೀ : 3,730 ಕೆಜಿ
ಏಕಲವ್ಯ : 5,305 ಕೆಜಿ
ಮಹೇಂದ್ರ : 5,120 ಕೆಜಿ
ಕಂಜನ್ : 4,880 ಕೆಜಿ
ಪ್ರಶಾಂತ : 5,110 ಕೆಜಿ
ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಆನೆಗಳ ತೂಕ ಪರಿಶೀಲನೆ ಮಾಡಿ, ಬಳಿಕ ಮೆರವಣಿಗೆ ನಡೆಸಲಾಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC