ತುಮಕೂರು: ಭೂಮಿ ಮತ್ತು ವಸತಿ ವಂಚಿತರ ಆಹೋರಾತ್ರಿ ಧರಣಿ 37ನೇ ದಿನಕ್ಕೆ ಕಾಲಿಟ್ಟಿದ್ದು, ಈ ದಿನ ಪ್ರತಿಭಟನಾಕಾರರಿಗೆ ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಬೆಂಬಲ ನೀಡಿತು.
BSP ಪಕ್ಷದ ಕೊರಟಗೆರೆ ತಾಲ್ಲೂಕು ಅಧ್ಯಕ್ಷರಾದ ಜಟ್ಟಿ ಅಗ್ರಹಾರ ನಾಗರಾಜು ಹಾಗೂ ಪಕ್ಷದ ಇನ್ನಿತರ ಮುಖಂಡರು ಭೂಮಿ, ವಸತಿಗಾಗಿ ಹಗಲು ರಾತ್ರಿ ಎನ್ನದೇ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರಿಗೆ ಬೆಂಬಲ ಘೋಷಿಸಿದರು.
ಈ ವೇಳೆ ತಾಲ್ಲೂಕು ಪದಾಧಿಕಾರಿಗಳು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗಧಾಮಯ್ಯ, ಸ್ನೇಹಿತರಾದ ಲಾರೆನ್ಸ್ ದಿನಪತ್ರಿಕೆ ಹಂಚಿಕೆದಾರರ ಒಕ್ಕೂಟದ ರಾಜ್ಯ ಕಾರ್ಯದರ್ಶಿ ನಾದೂರು ವಾಸು,ಲಿಂಗದಹಳ್ಳಿ ಚೇತನ್, ಸೀಗಲಹಳ್ಳಿ ಮೂರ್ತಿ ಜೊತೆಗಿದ್ದರು.
ಈಗಾಗಲೇ ಅನೇಕ ಸಮಸ್ಯೆಗಳು ಬಗೆಹರಿದಿದ್ದು,ಇನ್ನೇನು ಕೆಲವೇ 4,5 ಸಮಸ್ಯೆಗಳಷ್ಟೆ ಬಾಕಿ ಉಳಿದಿರುತ್ತವೆ.ಇವುಗಳು ಕೂಡ 3,4 ದಿನಗಳಲ್ಲಿ ಬಗೆಹರಿಯುವ ಭರವಸೆಯೂ ಕೂಡ ಇದ್ದು ಬಗೆಹರಿದ ತಕ್ಷಣ ಈ ನಮ್ಮ ಧರಣಿಯನ್ನು ಕೈ ಬಿಡಲಾಗುವುದು ಎಂದು ಹೋರಾಟದ ನೇತೃತ್ವ ವಹಿಸಿರುವ ಹಂದ್ರಾಳ್ ನಾಗಭೂಷಣ್ ತಿಳಿಸಿದ್ದಾರೆ.