ತುಮಕೂರು: ಟಾಸ್ಕ್‌ಗಳಿಗೆ ಹಣ ಹೂಡಿಕೆ ಮಾಡಿ ದುಪ್ಪಟ್ಟು ಲಾಭ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ತುರುವೇಕೆರೆ ತಾಲ್ಲೂಕಿನ ಮುದ್ದನಹಳ್ಳಿ ಹೊಸೂರಿನ ಬಸವರಾಜು ಎಂಬುವರು 7.44 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಆರೋಪಿಗಳು ಕರೆ ಮಾಡಿ, ನೀವು ರಿಲಿಯನ್ ಪ್ರಾಪರ್ಟಿಸ್ ಗೆ ಸದಸ್ಯರಾಗಿದ್ದು, ನಿಮಗೆ ಮೂರು ಸ್ಲಾಟ್ ಗಳನ್ನು ಕೊಡುತ್ತೇವೆ. ಅದನ್ನು ಪೂರ್ಣಗೊಳಿಸಿದರೆ ಹಣ ನೀಡಲಾಗುವುದು ಎಂದಿದ್ದಾರೆ. ಇದಾದ ಬಳಿಕ ಬಸವರಾಜು ಖಾತೆಗೆ 820 ವರ್ಗಾಯಿಸಿದ್ದಾರೆ.
ಸ್ಲಾಟ್ ಮುಂದುವರಿಸಲು 11,228 ರೀಚಾರ್ಜ್ ಮಾಡಬೇಕು ಎಂದು ತಿಳಿಸಿದ್ದಾರೆ. ಬಸವರಾಜು ತಮ್ಮ ಪತ್ನಿ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದು, ವಾಪಸ್ 18 ಸಾವಿರ ಅವರ ಖಾತೆಗೆ ಹಾಕಿದ್ದಾರೆ.
ಫ್ಲಾಟ್ ಮುಂದುವರಿಸಲು ಮತ್ತಷ್ಟು ರೀಚಾರ್ಜ್ ಮಾಡಬೇಕು ಎಂದು 10 ಸಾವಿರ ಪಡೆದಿದ್ದಾರೆ. ಇದೇ ಕಾರಣ ಹೇಳಿ ಡಿ. 7ರಿಂದ 12ರ ವರೆಗೆ ಹಂತ ಹಂತವಾಗಿ ಒಟ್ಟು 7,62,131 ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಅವರಿಗೆ ಕೇವಲ 18 ಸಾವಿರ ಹಿಂದಿರುಗಿಸಿದ್ದಾರೆ.
ಇದುವರೆಗೆ ವರ್ಗಾವಣೆ ಮಾಡಿದ ಹಣ ವಾಪಸ್ ಕೊಡುವಂತೆ ಬಸವರಾಜು ಕೇಳಿದ್ದಾರೆ. ಇನ್ನೂ 4.60 ಲಕ್ಷ ಕಟ್ಟಿದರೆ ಮಾತ್ರ ಹಣ ನೀಡಲಾಗುತ್ತದೆ’ ಎಂದು ಆರೋಪಿಗಳು ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


