ಡಿಸೆಂಬರ್ 19 ರಿಂದ 30 ವರೆಗೆ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯಲಿದೆ.
ಈ ಅಧಿವೇಶನವು 15ನೇ ವಿಧಾನಸಭೆಯ ಕೊನೆಯ ಅಧಿವೇಶನವಾಗಿದ್ದು, ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ಈ ಸಿದ್ಧತೆಗಳನ್ನು ವಿಧಾನಸಭೆಯ ಸಭಾಪತಿಗಳಾದ ವಿಶ್ವನಾಥ್ ಹೆಗಡೆ ಕಾಗೇರಿ ಅವರು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಲಿರುವ ಇದು 8ನೇ ಅಧಿವೇಶನ. ಒಟ್ಟು ಬೆಳಗಾವಿಯಲ್ಲಿ ಹತ್ತು ಅಧಿವೇಶನಗಳು ಜರುಗಿದ್ದು, ಅದರಲ್ಲಿ ಎರಡು ಅಧಿವೇಶನ ಕೆ .ಎಲ್ .ಇ .ಜೆ ಎಂ ಸಿ ಮೆಡಿಕಲ್ ಕಾಲೇಜಿನಲ್ಲಿ ಅಧಿವೇಶನ ನಡೆಸಲಾಗಿತ್ತು. ಬಿಜೆಪಿ ಸರಕಾರದ ಅವಧಿಯಲ್ಲಿ ನಡೆಯುವ 5ನೇ ವರ್ಷದ ಹಾಗೂ ಕೊನೆಯ ಅಧಿವೇಶನ ನಡೆಯಲಿದೆ ಎಂದು ತಿಳಿಸಿದರು.
ಈ ಅಧಿವೇಶನದಲ್ಲಿ ಒಟ್ಟು 6 ವಿಧೇಯಕಗಳು ಮಂಡಿಸಲಾಗುವುದು. ಸಮಯ ಇರುವರಿಂದ ಹೆಚ್ಚಿನ ವಿಧೇಯಕಗಳು ಸರ್ಕಾರಗಳಿಂದ ಪ್ರಸ್ತಾವನೆಯ ನಿರೀಕ್ಷೆಯಲ್ಲಿ ನಾವಿದ್ದೇವೆ.
6 ವಿಧೇಯಕಗಳಲ್ಲಿ ಮೊದಲನೇ ವಿಧೇಯಕ ಅಭಿವೃದ್ಧಿ ವಿದಾಯಕವಾಗಿದ್ದು, ಇದು ಈಗಾಗಲೇ ಸದನದಲ್ಲಿ ಮಂಡನೆಯಾಗಿದ್ದು, ಆದರೆ ಅನುಮೋದನೆ ಹಾಗೂ ಚರ್ಚೆ ನಡೆಯಬೇಕಿದೆ. 2ನೇ ವಿಧೇಯಕ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರದ ಕುರಿತಾಗಿದ್ದು, 3ನೇ ವಿಧೇಯಕ ಕನ್ನಡ ಭೂ ಕಂದಾಯ ವಿಧೇಯಕವಾಗಿದೆ. 4ನೇ ಅನುಸೂಚಿತ ಜಾತಿ ಅನುಸೂಚಿತ ಪಂಗಡಗಳ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಸೇವೆಗಳಲ್ಲಿ ನೇಮಕಾತಿ ಮೀಸಲಾತಿ ಹಾಗೂ ಹುದ್ದೆಗಳ ಮೀಸಲಾತಿಯೇ ವಿಧೇರಕವಾಗಿದೆ. 5ನೇ ವಿಧೇಯಕ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶದ ಕುರಿತಾಗಿದ್ದು, 6ನೇ ವಿಧೇಯಕ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ವಿಧೇಯಕವಾಗಿದೆ.
ಈ ಸದನದಲ್ಲಿ ಈ ಬಾರಿಯ ವಿಶೇಷವೆಂದರೆ ಅತ್ಯುತ್ತಮ ಶಾಸಕರ ಪ್ರಶಸ್ತಿಯನ್ನು ನೀಡಲಾಗುವುದು. ಕಳೆದ ಬಾರಿ ಮಾಜಿ ಮುಖ್ಯಮಂತ್ರಿಗಳಾದ ಬಿ .ಎಸ್ .ಯಡಿಯೂರಪ್ಪ ಅವರಿಗೆ ಈ ಪ್ರಶಸ್ತಿಯಗೆ ಬಾಜನರಾಗಿದ್ದರು. ಈ ಬಾರಿ ಪ್ರಶಸ್ತಿಯನ್ನು ಬೆಳಗಾವಿಯಲ್ಲಿ ನೀಡಲು ತೀರ್ಮಾನ ಮಾಡಲಾಗಿದೆ.
ಸುವರ್ಣಸೌಧ ಕಟ್ಟುವ ಉದ್ದೇಶ ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕದ ಜನರ ಅಭಿಲಾಷೆಗಳು ಅವರ ನೋವುಗಳನ್ನು ಅವರ ಅಭಿವೃದ್ಧಿಗಳನ್ನು ಚರ್ಚೆಯ ಮೂಲಕ ಪರಿಹಾರ ನೀಡುವುದು ಇದರ ಉದ್ದೇಶವಾಗಿದೆ ಎಂದರು.
ಇದು ಅಖಂಡ ಕರ್ನಾಟಕದ ಉದ್ದೇಶವೂ ಕೂಡ ಹೌದು, ಉತ್ತರ ಕರ್ನಾಟಕದ ಅಭಿವೃದ್ಧಿಯ ಚರ್ಚೆಯ ಅಧಿವೇಶನ ದಲ್ಲಿ ಸಚಿವರು ಶಾಸಕರಗಳು ಕಡ್ಡಾಯವಾಗಿ ಹಾಜರಿರಬೇಕೆಂದು ಎಲ್ಲಾ ಶಾಸಕರುಗಳಿಗೆ ಸಂದೇಶ ರವಾನಿಸಿದ್ದರು.
ಕೆಲ ಶಾಸಕರು ಹಾಗೂ ನಾಯಕರಗಳು ಸದನದ ಕುರಿತು ಹಗುರವಾಗಿ ಮಾತನಾಡುವುದು ಬಿಡಬೇಕು ಸಂಸದೀಯ ಪ್ರಜಾಪ್ರಭುತ್ವವನ್ನ ಗಟ್ಟಿಗೊಳಿಸಲು ಎಲ್ಲರೂ ಪ್ರಯತ್ನಶೀಲರಾಗಬೇಕು.ಈ ಸದನದ ಸಭಾಧ್ಯಕ್ಷನಾಗಿ ನಾನು ಹಗುರವಾದ ಮಾತುಗಳನ್ನು ಸಹಿಸಲಾರೆ ಎಂದು ಇದೇ ಸಂದರ್ಭದಲ್ಲಿ ಶಾಸಕರಗಳಿಗೆ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಆಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy