ಶ್ರವಣಬೆಳಗೊಳ: ಭಾರತೀಯ ಸಾಂಸ್ಕೃತಿಕ– ಸಂಸ್ಕಾರದ ಪರಂಪರೆಯಲ್ಲಿ ಕರ್ಮ ಯೋಗಿ ಶ್ರೀ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ದೂರದರ್ಷಿತ್ವಹಾಗೂ ದೂರ ದೃಷ್ಟಿ ಇತಿಹಾಸ ಪರಂಪರೆಯಲ್ಲಿ ಮಹತ್ವದ ಮೈಲುಗಲುಗಳಾಗಿವೆ ಎಂದು ಪದ್ಮಭೂಷಣ ರಾಜ್ಯಸಭಾ ಸದಸ್ಯ ರಾಜರ್ಷಿ, ಶ್ರೀ ಡಾ.ಡಿ ವೀರೇಂದ್ರ ಹೆಗ್ಡೆ ತಿಳಿಸಿದರು.
ಅವರಿಂದು ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟಾರಕ ಮಹಾಸ್ವಾಮಿಗಳ ಮಂಟಪ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋಮಟೇಶ್ವರರು ವಿಶ್ವಕ್ಕೆ ಶಾಂತಿ ಬಯಸಿ, ತ್ಯಾಗ ಮೂರ್ತಿಗಳಾಗಿದ್ದರು. ಇದರ ಪ್ರತಿರೂಪವಾಗಿ ಶ್ರೀ ಚಾರು ಕೀರ್ತಿ ಭಟ್ಟಾರಕ ಶ್ರೀಗಳು ತ್ಯಾಗ ಮೂರ್ತಿಗಳಾಗಿದ್ದರು, ಉತ್ತರದಲ್ಲಿ ಎಷ್ಟೇ ವಿಗ್ರಹಗಳು ಸ್ಥಾಪನೆಯಾದರು ಶ್ರೀ ಕ್ಷೇತ್ರದ ಬಾಹುಬಲಿಯ ಎತ್ತರ, ಇತಿಹಾಸ ಮುರಿಯಲು ಸಾಧ್ಯವಿಲ್ಲ, ಜನರ ವಿಶ್ವಾಸ ದೊಡ್ಡದಿದ್ದು, ನಿಷಿದಿಗೆ ಇತಿಹಾಸವಿದೆ ಎಂದರು.
ಪೂಜ್ಯರ ಮಾರ್ಗದರ್ಶನದಿಂದ ನಾಲ್ಕು ಮಹಾಮಸ್ತಕ ಅಭಿಷೇಕಗಳನ್ನು ಕಂಡಿದ್ದು, ಹಲವಾರು ಭಟ್ಟಾರಕ ಶ್ರೀಗಳನ್ನು ನಾಡಿಗೆ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು. ಅವರ ತ್ಯಾಗ ಜೀವನದಿಂದ ಸನ್ಯಾಸತ್ವ ಶಿಕ್ಷಣ ನೀಡಿ, ಪಟ್ಟಾಭಿಷೇಕ ಮಾಡಿ ಹಲವಾರು ಭಟ್ಟರಕರು ಗಳನ್ನ ನಾಡಿಗೆ ನೀಡಿದ್ದಾರೆ ಎಂದರು. ಇವರೊಬ್ಬ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಮಹಾತ್ಮ ಇವರು ದೂರ ದರ್ಶಿತ್ವ ,ದೂರದೃಷ್ಟಿಗಳು ಸಮಾಜಕ್ಕೆ ಮಹತ್ವದ ಮೈಲುಗಲಿಗಳಾಗಿವೆ ಎಂದರು. ಸಮಾಜದಲ್ಲಿನ ಸಮಸ್ಯೆಗಳಿಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ನಾವು ಸಮಾಜದಲ್ಲಿ ಸ್ವಾಭಿಮಾನಿಗಳಾಗಿ ಬದುಕಲು ಕಳಕಳಿ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದವರು, ಶ್ರೀಮಂತಿಕೆ ಎಂಬುದು ಹೃದಯದಲ್ಲಿರುತ್ತದೆ, ಅದರ ತೋರ್ಪಡೇ ಅಗತ್ಯವಿಲ್ಲ ಎಂದು ಅವರು, ರಾಜಕೀಯ ಹಾಗೂ ಧಾರ್ಮಿಕ ಶಕ್ತಿಗಳು ಹೊಂದಾಣಿಕೆ ಮಾಡಿಕೊಂಡು ನಡೆಯಬೇಕೆಂದು ಸಲಹೆ ನೀಡಿದರು .ಕ್ಷೇತ್ರದ ಹಲವು ಧರ್ಮಕಾರ್ಯಗಳು ಶ್ರೀ ಕ್ಷೇತ್ರದ ಧರ್ಮಸ್ಥಳ ದಲ್ಲಿ ನಡೆದಿವೆ ಎಂದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಮಾತನಾಡಿ, ಕರ್ಮ ಯೋಗಿ ಸ್ವಸ್ತಿ ಶ್ರೀ ಚಾರು ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳ ಹೆಸರಿನಲ್ಲಿ ಕವನ ವಾಚಿಸಿ ಭಕ್ತಿ ಮೆರೆದರು.
ರಾಜ್ಯ ಯೋಜನಾ ಹಾಗೂ ಸಾಂಕೀಕ ಸಚಿವ ಡಿ.ಸುಧಾಕರ್ ಮಾತನಾಡಿ, ಇದೊಂದು ಜೈನ ಕಾಶಿಯಾಗಿದ್ದು, ಜೈನ ಧರ್ಮದ ತಳಹದಿಯಾಗಿರುವ ಶಾಂತಿ, ಅಹಿಂಸೆಯ ತಳಹದಿಯ ಮೇಲೆ ನಿಂತಿದೆ, ತ್ಯಾಗಕ್ಕೆ ಹೆಸರಾಗಿದೆ. ಹಿರಿಯರ ತ್ಯಾಗದ ಫಲವೇ ಶ್ರವಣಬೆಳಗೊಳವಾಗಿದೆ ಜೈನ ಧರ್ಮದ ಮೂಲವಾದ ಅಹಿಂಸೆ ಪಾಲಿಸುವಂತೆ ಕರೆ ನೀಡಿದರು. ಶ್ರೀ ಹೆಗ್ಗಡೇ ಯವರು ಜೈನ ಧರ್ಮದ ಕಳಸ ಪ್ರಾಯವಾಗಿದ್ದು, ಅಹಿಂಸೆಯನ್ನ ಜಗತ್ತಿಗೆ ಸಾರಿ ಮಠವನ್ನು ಬೆಳೆಸಬೇಕು ಎಂದರಲ್ಲದೇ ಸಿದ್ದರಾಮಯ್ಯ ಸರ್ಕಾರ ವಿಶೇಷ ಅನುದಾನ ನೀಡಿದೆ ಎಂದರು.
ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಹಿರಿಯರ ಆದರ್ಶ, ಶ್ರೀಗಳವರ ಮಾರ್ಗದರ್ಶನ ಸಮಾಜಕ್ಕೆ ನೀಡಿದ ಕೊಡುಗೆ ಮುಂದಿನ ಪೀಳಿಗೆಗೆ ದಾರಿ ದೀಪವಾಗಿದೆ. ಶ್ರೀಗಳವರ ಮಾರ್ಗದರ್ಶನ ಸಾಮಾಜಿಕ ಶಕ್ತಿಯಾಗಿದೆ ಎಂದ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಜಾತ್ಯಾತೀತ ಕ್ಷೇತ್ರವಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಬಡವರು ಉತ್ತಮ ಜೀವನ ನಡೆಸಲು ಮಾರ್ಗದರ್ಶನ ನೀಡುತ್ತಿದ್ದಾರೆ, ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಈ ಮಧ್ಯೆ ನಾವು ನೀಡುವ ಕೊಡುಗೆ ಶಾಶ್ವತವಾದದ್ದು ಇದು ಜೈನ ಧರ್ಮದ ಕೊಡುಗೆಯಾಗಿದೆ ಎಂದರು.
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಜಾರಿಗೆ ತಂದ ಸಿ.ಇ.ಟಿ. ಪದ್ಧತಿಯಿಂದ ಬಹಳಷ್ಟು ಜನ ಉನ್ನತ ಹುದ್ದೆ ಗಳಲ್ಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಶ್ರವಣಬೆಳಗೊಳ ಶಾಸಕ ಸಿ.ಎಂ. ಬಾಲಕೃಷ್ಣ ಮಾತನಾಡಿ, ಶ್ರೀ ಕ್ಷೇತ್ರವನ್ನು ಪ್ರಪಂಚಕ್ಕೆ ಪರಿಚಯಿಸಿದ ದೈವ ಸ್ವರೂಪಿಯಾಗಿದ್ದಾರೆ. ಸರ್ವ ಜನಾಂಗಕ್ಕೆ ಧರ್ಮ, ಸನ್ಮಾರ್ಗ ತೋರಿಸಿದವರು ಇದೊಂದು ಧರ್ಮರಹಿತ ಧಾರ್ಮಿಕ ಕ್ಷೇತ್ರವಾಗಿದೆ ಎಂದರು.
ಹಾಸನ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಗುರುಗಳ ಆಶೀರ್ವಾದದಿಂದ ಕ್ಷೇತ್ರದ ಏಳಿಗೆಗೆ ಪ್ರಾಮಾಣಿಕ ಸೇವೆ ಸಲ್ಲಿಸುವುದು ತಿಳಿಸಿದರು .
ಬೆಳಗಾವಿ ಶಾಸಕ ಅಭಯ ಪಾಟೀಲ್ ಮಾತನಾಡಿ, ವೀರೇಂದ್ರ ಹೆಗ್ಗಡೆ ಹಾಗೂ ಚಾರುಕೀರ್ತಿ ಭಟ್ಟರಕ ಶ್ರೀಗಳು ಸಮಾಜದ ಎರಡು ಕಣ್ಣುಗಳಿದ್ದಂತೆ ಎಂದರು.
ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳ , ಸಿದ್ಧಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ಕ್ಷೇತ್ರ ಕನಕ ಗಿರಿ ಜೈನ ಮಠದ ಸ್ವಸ್ತಿ ಶ್ರೀ ಭುವನ ಕೀರ್ತಿ ಭಟ್ಟರಕ ಶ್ರೀಗಳು ಪಾವನ ಸಾನಿಧ್ಯ ಉಳಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಜೈನ್ ಮಿಲನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಧರ್ಮಸ್ಥಳ ಸುರೇಂದ್ರ ಕುಮಾರ್ ,ಶ್ರೀ ಕ್ಷೇತ್ರ ಅರಿಹಂತಗಿರಿ ಜೈನಮಠದ ಸ್ವಸ್ತಿ ಶ್ರೀ ದವಳ ಕೀರ್ತಿ ಭಟ್ಟರಕ ಶ್ರೀಗಳು, ಮೂಡುಬಿದರೆ ಜೈನಮಠದ ಸ್ವಸ್ತಿ ಶ್ರೀ ಚಾರು ಕೀರ್ತಿ ಪಂಡಿತಚಾರ್ಯ ಮಹಾಸ್ವಾಮಿಗಳು ,ಕಾರ್ಕಳ ಧಾನಶಾಲಾ ಜೈನ ಮಠದ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು, ಹೊಂಬುಜ ಕ್ಷೇತ್ರದ ಸ್ವಸ್ತಿ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ,ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿಮಠದ ಸ್ವಸ್ತಿ ಶ್ರೀ ಲಕ್ಷ್ಮಿ ಸೇನಾ ಭಟ್ಟರಕ ಶ್ರೀಗಳು, ಸೊಂದ ಜೈನ ಮಠದ ಸ್ವಸ್ತಶ್ರೀ ಭಟ್ಟ ಅಕಳಂಕ ಭಟ್ಟರಕ ಶ್ರೀಗಳು, ಕಂಬದಹಳ್ಳಿ ಜೈನಮಠದ ಸ್ವಸ್ತಿ ಶ್ರೀಬಾನು ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು , ಅರತಿಪುರ ಜೈನಮಠದ ಸ್ವಸ್ತಿ ಶ್ರೀ ಸಿದ್ಧಾಂತ ಕೀರ್ತಿ ಭಟ್ಟರಕ ಪಟ್ಟಾಚರ್ಯ ಶ್ರೀಗಳು, ಶ್ರೀ ಕ್ಷೇತ್ರ ವರೂರು ಜೈನ ಮಠದ ಧರ್ಮಸೇನ ಭಟ್ಟಾರಕ ಶ್ರೀಗಳು ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ವೀರಕುಮಾರ್ ಪಾಟೀಲ್, ಮಾಜಿ ಶಾಸಕ ಗೋಪಾಲಸ್ವಾಮಿ, ಸಂಜಯ್ ಪಾಟೀಲ್, ರತ್ನತ್ರೆಯ ಕ್ರಿಯೇಷನ್ ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷ ಡಾ. ನೀರಜಾ ನಾಗೇಂದ್ರ ಕುಮಾರ್, ದಾವಣಗೆರೆ ಕೆ. ಜೆ.ಎ.ನಿರ್ದೇಶಕ ಸುನಿಲ್ ಕುಮಾರ್, ನಿವೃತ್ತ ನ್ಯಾಯಮೂರ್ತಿ ಪಿ.ಡಿ. ದೇಸಾಯಿ ,ರಾಜಕೀರ್ತಿ ,ಉದ್ಯಮಿ ಬಿ . ಆರ್. ಶೀತಲ್ ಕುಮಾರ್, ಜಿ.ಪಿ. ಉಮೇಶ್ ಕುಮಾರ್,
ನಿಟ್ಟೂರು ಜ್ವಾಲಾ ಮಾಲಿನಿ ಯಾತ್ರಾ ಸಂಘದ ಏನ್ ಜೆ ಸತ್ಯೇಂದ್ರ ಕುಮಾರ್, ಮಂಥರ ಗಿರಿ ಯಾತ್ರಾ ಸಂಘದ ಅಧ್ಯಕ್ಷರು ಹಾಗೂ ತುಮಕೂರು ತ್ಯಾಗಿ ಸೇವಾ ಸಮಿತಿ ಅಧ್ಯಕ್ಷ ಕೆ .ಪಿ. ವೀರೇಂದ್ರ, ಪೇಪರ್ ಪ್ರಸಾದ್ ಜೈನ್, ತುಮಕೂರು ದಿಗಂಬರ ಜೈನ ಸಮಾಜದ ಅಧ್ಯಕ್ಷ ಟಿ.ಡಿ ಬಾಹುಬಲಿ ಬಾಬು, ಬ್ರಹ್ಮ ಪ್ರಕಾಶ್ , ತೋವಿನಕೆರೆ ಶೀತಲ್, ಕಾಂತರಾಜ್ , ಎನ್ .ಬಿ.ನಾಗೇಂದ್ರ, ಸುಭೋದ ಜೈನ್, ಟಿಎನ್ ಅಜಿತ್, ಶಾಂತಲಾ ಅಜಿತ್, ಎಸ್. ಜೆ. ನಾಗರಾಜ್ ಎ .ಆರ್.ರಾಜೇಂದ್ರ ಕುಮಾರ್ , ಚಿತ್ರ ಕಲಾವಿದ ಎಂ. ಎಂ.ಜಿನೇಂದ್ರ, ಶ್ರೀ ಪಾರ್ಶ್ವನಾಥಬ್ಯಾಂಕ್ ನ ನಿರ್ದೇಶಕ ರಾಜೇಂದ್ರ ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಆಫ್ಟರ್ ಪಾಷಾ ., ಹಾಸನ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ , ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭಾಗವಹಿಸಿದ್ದರು. ಲಲಿತಾ ಜೈನ್ ಕ್ಷೇತ್ರದ ಬಗ್ಗೆ ವರದಿ ಮಂಡಿಸಿದರು.
ಚಿತ್ರ ಕಲಾವಿದ ಎಂ.ಎಂ .ಜಿನೇಂದ್ರ ಕೈಚಳಕದ ಚಾರುಕೀರ್ತಿ ಭಟ್ಟರಕ ಪಟ್ಟಾ ಚಾರ್ಯ ಶ್ರೀಗಳ ಕಂಚಿನ ಪ್ರತಿಮೆ ಜನರ ಗಮನ ಸೆಳೆಯಿತು. ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಅಭಿನವ ಚಾರುಕೀರ್ತಿ ಭಟ್ಟರಕ ಪಟ್ಟಾಚಾರ್ಯ ಶ್ರೀಗಳು ಎಲ್ಲರನ್ನ ಸ್ವಾಗತಿಸಿದರು. ಕುಮುದ ನಾಗಭೂಷಣ್ ಕಾರ್ಯಕ್ರಮ ನಿರೂಪಿಸಿದರು.
ವರದಿ: ಜೆ.ರಂಗನಾಥ, ತುಮಕೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx