ಕೊರಟಗೆರೆ: ರಾಜ್ಯದಲ್ಲಿ ಮಹಿಳಾ ಹಾಗೂ ಮಕ್ಕಳ ಸುರಕ್ಷತೆಗೆ ನಿರಂತರ ಶ್ರಮವಹಿಸುತ್ತಿರುವ ಡಾ.ನಾಗಲಕ್ಷ್ಮೀ ಚೌಧರಿಯವರು ಪಟ್ಟಣದ ಕೆಲ ವಾರ್ಡ್ ಗಳಿಗೆ ಭೇಟಿ ನೀಡಿ ಮಹಿಳೆಯರ ಸಮಸ್ಯೆ ಆಲಿಸಿದರು.
ಇಡೀ ರಾಜ್ಯದಲ್ಲಿ ಅನೇಕ ಮಹಿಳೆಯರಿಗೆ ನ್ಯಾಯ ದೊರಕಿಸುವಲ್ಲಿ ಅತ್ಯಂತ ಪರಿಶ್ರಮವಹಿಸಿ ಹಗಲಿರುಳು ದುಡಿಯುತ್ತಿರುವ ಡಾ. ನಾಗಲಕ್ಷ್ಮೀ ಯವರಿಗೆ ಅಭಿಮಾನಿಗಳ ಮಹಾಪೂರವೇ ಹರಿದು ಬಂದು ಸನ್ಮಾನಿಸುವ ಮೂಲಕ ಗೌರವ ನೀಡಿದರು.
ವಾರ್ಡ್ ಗಳಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸಂಬಂಧಪಟ್ಟ ಇಲಾಖೆಗಳಿಗೆ ತಿಳಿಸಿ ಮುಂದಿನ ದಿನಗಳಲ್ಲಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ರಾಜ್ಯದಲ್ಲಿ ಮಹಿಳೆಯರು ಹಾಗೂ ಮಕ್ಕಳು ಆತ್ಮಸ್ಥೈರ್ಯದಿಂದ ಜೀವನ ನಡೆಸಿ ಸಮಾಜದ ಮುಖ್ಯ ವಾಹಿನಿ ಬರುವಂತ್ತಾಗಬೇಕಾಗಿದ್ದು, ಶಿಕ್ಷಣದಲ್ಲಿ ಅತ್ಯಂತ ಸಾಮರ್ಥ್ಯವನ್ನು ಕಂಡು ಕೊಳ್ಳವಂತ್ತಾಗಿ ಗುರು ಹಿರಿಯರಿಗೆ ಗೌರವಿಸುವ ಸಮಾಜ ನಿರ್ಮಾಣಕ್ಕೆ ಎಲ್ಲಾರೂ ಬದ್ಧರಾಗಬೇಕು ಎಂದರು.
ರಾಜ್ಯ ಸೇರಿದಂತೆ ಎಲ್ಲಾ ಗ್ರಾಮಗಳಲ್ಲಿನ ಮಹಿಳಾ ಶೋಷಣೆಯನ್ನು ತೀವ್ರ ರೂಪದಲ್ಲಿ ಖಂಡಿಸಿ ನೊಂದ ಕುಟುಂಬಗಳಿಗೆ ಸಮರ್ಪಕ ನ್ಯಾಯ ಹೊಂದಿಸುವಂತಹ ಕೆಲಸ ಮಾಡುತ್ತಿರುವ ಡಾ.ನಾಗಲಕ್ಷ್ಮೀ ಚೌಧರಿ ಯವರಿಗೆ ಕೃತಜ್ಞತೆಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ವಾರ್ಡ್ ಗಳಲ್ಲಿನ ಮಹಿಳೆಯರು– ಮಕ್ಕಳು ಪ್ರೀತಿ ಪೂರಕವಾಗಿ ಬರಮಾಡಿ ಕೊಂಡಿದ್ದು, ಜೊತೆಗೆ ಅನೇಕರು ಅವರ ಸಮಸ್ಯೆಗಳ ಅಳಲನ್ನು ತೋಡಿಕೊಂಡಿದ್ದು, ಸ್ಥಳದಲ್ಲಿಯೇ ಪರಿಹಾರ ಒದಗಿಸುತ್ತಿರುವುದು ಕಂಡು ಬಂದಿತು.
ಇದೇ ಸಂದರ್ಭದಲ್ಲಿ ಕವಿತಾ, ಗ್ರಾ.ಪಂ ಮಾಜಿ ಸದಸ್ಯ ಮಂಜು ಕೆ ಎಲ್ ಎಂ, ಮಾಜಿ ಪ.ಪಂ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ, ಸಾಮಾಜಿಕ ಕಾರ್ಯಕರ್ತ ಅರುಣ್ ತಾರೇಹಳ್ಳಿ, ಕಾಂಗ್ರೆಸ್ ಮುಖಂಡರಾದ ರಾಕೇಶ್, ಹರೀಶ್, ಗೀತಾ, ತನುಜ, ಸೇರಿದಂತೆ ಅನೇಕ ಮಹಿಳೆಯರು, ಮಕ್ಕಳು ಇದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


