nammatumakuru

    Subscribe to Updates

    Get the latest creative news from FooBar about art, design and business.

    What's Hot

    ಪೂಜೆ ವೇಳೆ ಕಣ್ಣೀರಿಟ್ಟ ಭವಾನಿ ರೇವಣ್ಣ!

    August 22, 2026

    ‘ಟೋಲ್ ಕಟ್ಟಬೇಡಿ’ ಎಂದು ಪ್ರಚೋದಿಸುವುದು ಸರಿಯಲ್ಲ: ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

    August 22, 2026

    ಕೇಂದ್ರ ತನಿಖಾ ಸಂಸ್ಥೆಗಳ ಕಿರುಕುಳದಿಂದ 12 ಲಕ್ಷ ಉದ್ಯಮಿಗಳು ಭಾರತ ತೊರೆದಿದ್ದಾರೆ: ಡಿ.ಕೆ. ಶಿವಕುಮಾರ್

    August 22, 2026
    Facebook Twitter Instagram
    ಟ್ರೆಂಡಿಂಗ್
    • ಪೂಜೆ ವೇಳೆ ಕಣ್ಣೀರಿಟ್ಟ ಭವಾನಿ ರೇವಣ್ಣ!
    • ‘ಟೋಲ್ ಕಟ್ಟಬೇಡಿ’ ಎಂದು ಪ್ರಚೋದಿಸುವುದು ಸರಿಯಲ್ಲ: ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
    • ಕೇಂದ್ರ ತನಿಖಾ ಸಂಸ್ಥೆಗಳ ಕಿರುಕುಳದಿಂದ 12 ಲಕ್ಷ ಉದ್ಯಮಿಗಳು ಭಾರತ ತೊರೆದಿದ್ದಾರೆ: ಡಿ.ಕೆ. ಶಿವಕುಮಾರ್
    • ಸ್ಯಾಂಡಲ್ ವುಡ್ ನಿರ್ದೇಶಕ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ: ದೂರು ದಾಖಲು
    • ತುಮಕೂರಿನಲ್ಲಿ ಚಿರತೆ ಸುಟ್ಟು ಹಾಕಿದ ಪ್ರಕರಣ: ಮೂವರ ಬಂಧನ
    • ಬೀದರ್: ಬರ ಘೋಷಣೆ, ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತರಿಂದ ಬೃಹತ್ ರಸ್ತೆ ತಡೆ
    • ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಮಹಾಲಕ್ಷ್ಮಿ ಅಮ್ಮನ ದರ್ಶನಕ್ಕೆ ಆಗಮಿಸಿದ ಭಕ್ತಸಾಗರ
    • ತುಮಕೂರು: ಗೊಲನ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ನಟ ಚೇತನ್ ಅವರನ್ನು ಬಿಡುಗಡೆಗೊಳಿಸಲು ಸಾಮಾಜಿಕ ಕಾರ್ಯಕರ್ತ ನಾಗಣ್ಣ ಜಿ.ಕೆ. ಒತ್ತಾಯ
    ತುಮಕೂರು February 23, 2022

    ನಟ ಚೇತನ್ ಅವರನ್ನು ಬಿಡುಗಡೆಗೊಳಿಸಲು ಸಾಮಾಜಿಕ ಕಾರ್ಯಕರ್ತ ನಾಗಣ್ಣ ಜಿ.ಕೆ. ಒತ್ತಾಯ

    By adminFebruary 23, 2022No Comments2 Mins Read
    press meet

    ತುಮಕೂರು: ಚಿತ್ರನಟ ಚೇತನ್ ಕುಮಾರ್ ನ್ಯಾಯಧೀಶರಿಗೆ ನಿಂದನೆ ಮಾಡಿದ್ದಾರೆಂಬ ಆಕ್ಷೇಪಾರ್ಹ ಟ್ವೀಟ್ ನ ಆರೋಪದಡಿಯಲ್ಲಿ ಏಕಾಏಕಿ ಪೊಲೀಸರು ಯಾವುದೇ ಪೂರ್ವ ಮಾಹಿತಿ ನೀಡದೆ ಬಂಧಿಸಿರುವುದು ಖಂಡನೀಯ ಎಂದು ಸಾಮಾಜಿಕ ಕಾರ್ಯಕರ್ತ ನಾಗಣ್ಣ ಜಿ.ಕೆ. ಟೀಕಿಸಿದರು.

    ನಗರದ ಖಾಸಗಿ ಹೋಟೆಲ್ ನಲ್ಲಿ ಬುಧವಾರ ಸಾಮಾಜಿಕ ಕಾರ್ಯಕರ್ತ, ನಟ ಚೇತನ್ ಅವರ ಬಂಧನ ಸಂಬಂಧ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಟ ಚೇತನ್ ಒಬ್ಬ ಸಾಮಾಜಿಕ ಕಳಕಳಿ ಹೊಂದಿರುವ ಸಾಮಾಜಿಕ ಹೋರಾಟಗಾರ. ಅನ್ಯಾಯ ಪ್ರಶ್ನಿಸುವ ಮಾನವತಾದಿ, ಬುದ್ಧ ಬಸವ, ಪೆರಿಯಾರ್, ಡಾ.ಬಿ.ಆರ್.ಅಂಬೇಡ್ಕರ್ ಅಂತಹವರ ತತ್ವಾದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸದಾ ಧ್ವನಿಯಿಲ್ಲದವರಿಗೆ ದನಿಯಾಗುವ ನಿಟ್ಟಿನಲ್ಲಿ ಸಮಾನತೆ ಪಾಲಿಸುವ ಹಿತದೃಷ್ಟಿಯ ಚಿಂತಕ ಅಂದರೆ ಅತಿಶಯೋಕ್ತಿಯೆನಿಸದು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಕದಡುವ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ ಸದಾ ಶಾಂತಿ, ಸೌಹಾರ್ಧತೆ, ಸೋದರತ್ವ ಭಾವನೆ ಇರುವ ಭಾವುಕ ಜೀವಿ ಚೇತನ್ ಅವರ ಮೇಲೆ ಕೋಮು ಪ್ರಚೋದನೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಜೊತೆಗೆ ರಾಜ್ಯದ ಮುಖ್ಯಮಂತ್ರಿಗಳ ಸರ್ಕಾರ ಕೂಲಂಕುಶವಾಗಿ ಸತ್ಯಾ ಸತ್ಯತೆಯನ್ನ ಅರಿಯದೆ ಬಂಧಿಸಿರುವುದು ಈ ಪ್ರಜಾಪ್ರಭುತ್ವದ ವಿರೋಧದ ನಡೆ ಸಮಂಜಸವಲ್ಲ ಎಂದರು.

    ಪ್ರಜಾಪ್ರಭುತ್ವದ ಅಂಕುಡೊಂಕು ಅಸಮಾನತೆಗಳನ್ನ ಭಿನ್ನ ಧ್ವನಿಯಲ್ಲಿ ಪ್ರಶ್ನಿಸುವ ನಟ ಚೇತನ್ ಅವರ ಮೇಲೆ ಯಾವುದೇ ಪೂರ್ವ ಮಾಹಿತಿ ನೀಡದೆ ಐಪಿಸಿ 504 ಮತ್ತು 505 ಸೆಕ್ಷನ್ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಿರುವುದು ಕಾನೂನು ಉಲ್ಲಂಘನೆ. ಜೊತೆಗೆ ಚೇತನ್ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಷಡ್ಯಂತ್ರ ಸರ್ಕಾರ ಮಾಡಿದೆ ಎಂದು ನೇರವಾಗಿಯೇ ಆರೋಪ ಮಾಡಿದರು.

    ಈ ಕೂಡಲೇ ನಟ, ರಾಜ್ಯದ ಬಹು ಸಂಖ್ಯಾತ ಜನರ ಹಕ್ಕುಗಳಿಗೆ ಹೋರಾಟ ನಡೆಸಿದ ಚೇತನರನ್ನು ಸರ್ಕಾರ ವಿಧಿಸಿರುವ ಪ್ರಕರಣ ವಾಪಸ್ಸು ಪಡೆದು ಬಿಡುಗಡೆಗೊಳಿಸಬೇಕು, ಇಲ್ಲವಾದಲ್ಲಿ ಮುಂದಿನ ಹಂತದಲ್ಲಿ ಸಂವಿಧಾನಾತ್ಮಕ ನಮ್ಮ ಹಕ್ಕು ಕೇಳುವ ಧ್ವನಿಗಳನ್ನು ಹೆಚ್ವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಈ ವೇಳೆ ಬಂಧಿತ ಚೇತನ್ ಅವರ ಕುಟುಂಬಸ್ಥರಿಗೆ ಇಡಿ ರಾಜ್ಯದ ಬಹುಸಂಖ್ಯಾತ ಜನರ ಬೆಂಬಲವಿದೆ ಎಂದು ಧೈರ್ಯ ತುಂಬುವ ವಿಶ್ವಾಸ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಕುಣಿಗಲ್ ಅಹಿಂದಾ ಜನಾಂಗದ ಕ್ಷೇಮಾಭಿವೃದ್ಧಿ ಪ್ರಧಾನ ಕಾರ್ಯದರ್ಶಿ ಧನುಂಜಯ್ ವಿ.ಎಸ್., ಡಾ.ಬಿ.ಆರ್.ಅಂಬೇಡ್ಕರ್ ಯುವಸೇನೆ ಬಳ್ಳಾರಿ ಜಿಲ್ಲಾಧ್ಯಕ್ಷ ಪಿ.ಸಂತೋಷ್ ಕುಮಾರ್,ಮುಖಂಡ ನರಸಿಂಹಮೂರ್ತಿ ಉಪಸ್ಥಿತರಿದ್ದರು.

    ವರದಿ: ಎ.ಎನ್. ಪೀರ್, ತುಮಕೂರು.


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB

    admin
    • Website

    Related Posts

    ತುಮಕೂರಿನಲ್ಲಿ ಚಿರತೆ ಸುಟ್ಟು ಹಾಕಿದ ಪ್ರಕರಣ: ಮೂವರ ಬಂಧನ

    August 22, 2026

    ತುಮಕೂರು: ಗೊಲನ ಎಂಟರ್ ಪ್ರೈಸಸ್ ನಲ್ಲಿ ಉದ್ಯೋಗಾವಕಾಶ: ನೇರ ಸಂದರ್ಶನ

    August 21, 2026

    ತುಮಕೂರು: ಸೆ.4ರಂದು ಶ್ರೀ ಕೃಷ್ಣ ಜಯಂತಿ: ಮೆರವಣಿಗೆ ನಡೆಸಲು ಎಡಿಸಿ ಸೂಚನೆ

    August 21, 2026

    Leave A Reply Cancel Reply

    Our Picks

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026

    ನಕಲಿ ಐಡಿ ಬಳಸಿ 25 ಮಹಿಳೆಯರ ಮದುವೆ: ‘ವಂಚಕನಿಗೆ ಮಗಳನ್ನು ಕೊಟ್ಟು ಮೋಸಹೋದೆ’ ಎಂದ ಬಿಜೆಪಿ ಶಾಸಕ!

    August 9, 2026

    ಬಾಲಕಿಯನ್ನು ಪ್ರೇಮದ ಬಲೆಗೆ ಬೀಳಿಸಿ ವೇಶ್ಯಾವಾಟಿಕೆಗೆ ಮಾರಿದ ಪಾಪಿ: ಬಾಲಕಿಯ ರಕ್ಷಣೆ, ಇಬ್ಬರ ಬಂಧನ

    August 9, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಪೂಜೆ ವೇಳೆ ಕಣ್ಣೀರಿಟ್ಟ ಭವಾನಿ ರೇವಣ್ಣ!

    August 22, 2026

    ಹಾಸನ: ಹೊಳೆನರಸೀಪುರದ ಪ್ರಸಿದ್ಧ ಬೆಟ್ಟದ ಮಾವಿನಕೆರೆ ರಂಗನಾಥಸ್ವಾಮಿ ದೇವಾಲಯದಲ್ಲಿ ಭವಾನಿ ರೇವಣ್ಣ ಅವರು ಪೂಜೆ ಸಲ್ಲಿಸುವಾಗ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಎರಡನೇ…

    ‘ಟೋಲ್ ಕಟ್ಟಬೇಡಿ’ ಎಂದು ಪ್ರಚೋದಿಸುವುದು ಸರಿಯಲ್ಲ: ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

    August 22, 2026

    ಕೇಂದ್ರ ತನಿಖಾ ಸಂಸ್ಥೆಗಳ ಕಿರುಕುಳದಿಂದ 12 ಲಕ್ಷ ಉದ್ಯಮಿಗಳು ಭಾರತ ತೊರೆದಿದ್ದಾರೆ: ಡಿ.ಕೆ. ಶಿವಕುಮಾರ್

    August 22, 2026

    ಸ್ಯಾಂಡಲ್ ವುಡ್ ನಿರ್ದೇಶಕ ಓಂಪ್ರಕಾಶ್ ರಾವ್ ವಿರುದ್ಧ 3.85 ಕೋಟಿ ರೂ. ವಂಚನೆ ಆರೋಪ: ದೂರು ದಾಖಲು

    August 22, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.