ತುಮಕೂರು: ಲಸಿಕೆ ಹಾಕಿದ ಕೆಲವೇ ಗಂಟೆಯಲ್ಲಿ ಮಗು ಸಾವನ್ನಪ್ಪಿದ ಆರೋಪ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮಾಗೋಡು ಗ್ರಾಮದಲದಲ್ಲಿ ಕೇಳಿ ಬಂದಿದ್ದು, 5 ತಿಂಗಳ ಶಿಶು ಸಾವನ್ನಪ್ಪಿರುವುದರ ಬಗ್ಗೆ ಶಿರಾ ನಗರ ಠಾಣೆ ಪೊಲೀಸರಿಗೆ ಮಗುವಿನ ತಂದೆ ದೂರು ನೀಡಿದ್ದಾರೆ.
ಗ್ರಾಮದಲ್ಲಿ ಎಎನ್ ಎಂ. ಮುದ್ದಮ್ಮ ಮಗುವಿಗೆ ರೋಟ್ — 2 ಲಸಿಕೆ ಹಾಕಿದ್ದರು. ಕಳೆದ ಗುರುವಾರ 11:-30 ಸುಮಾರಿಗೆ ಲಸಿಕೆ ಪಡೆದ ಮಗು ನಿದ್ದೆಗೆ ಜಾರಿತ್ತು. ಮಧ್ಯಾಹ್ನ 3.30 ಸುಮಾರಿಗೆ ಬೇಧಿಯಿಂದ ಮಗು ಅಸ್ವಸ್ಥಗೊಂಡಿದೆ. ತಕ್ಷಣ ಶಿರಾ ಸರ್ಕಾರಿ ಆಸ್ಪತ್ರೆ ಗೆ ಹೋದಾಗ ಪರಿಶೀಲಿಸಿದ ವೈದ್ಯರು ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ.
ಬಳಿಕ ಶ್ರೀದೇವಿ ಆಸ್ಪತ್ರೆಗೆ ಬಂದಾಗ ಮಗು ಸಾವನಪ್ಪಿದೆ. ಶಿರಾ ಮಕ್ಕಳ ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಹಾಗೂ ವೆಂಟಿಲೇಟರ್ ಇಲ್ಲದಿದ್ದರಿಂದ ಸಾವು ಸಂಭವಿಸಿದೆ ಎಂದು ಮಗುವಿನ ತಂದೆ ದೂರು ನೀಡಿದ್ದಾರೆ. ಕೀರ್ತನಾ ಹಾಗೂ ಲಕ್ಚ್ಮೀಕಾಂತ್ ದಂಪತಿಯ ಮಗಳು ಸಾವನ್ನಪ್ಪಿದ ಮಗುವಾಗಿದ್ದಾಳೆ. ಒಪಿಓ, ರೋಟ, ಪೆಂಟ ಲಸಿಕೆಯಿಂದಲೇ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4