nammatumakuru

    Subscribe to Updates

    Get the latest creative news from FooBar about art, design and business.

    What's Hot

    ಖ್ಯಾತ ಸಾಹಿತಿ ಪ್ರೊ.ಮೊಗಳ್ಳಿ ಗಣೇಶ್ ನಿಧನ!

    October 5, 2025

    ಸರ್ವೇ ವೇಳೆ ಕುರಿ, ಕೋಳಿ, ಚಿನ್ನ, ವಾಚ್ ಎಷ್ಟಿವೆ ಅಂತ ಕೇಳ್ಬೇಡಿ: ಸರ್ವೇದಾರರಿಗೆ ಡಿ.ಕೆ.ಶಿವಕುಮಾರ್ ಸಲಹೆ

    October 5, 2025

    ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ

    October 5, 2025
    Facebook Twitter Instagram
    ಟ್ರೆಂಡಿಂಗ್
    • ಖ್ಯಾತ ಸಾಹಿತಿ ಪ್ರೊ.ಮೊಗಳ್ಳಿ ಗಣೇಶ್ ನಿಧನ!
    • ಸರ್ವೇ ವೇಳೆ ಕುರಿ, ಕೋಳಿ, ಚಿನ್ನ, ವಾಚ್ ಎಷ್ಟಿವೆ ಅಂತ ಕೇಳ್ಬೇಡಿ: ಸರ್ವೇದಾರರಿಗೆ ಡಿ.ಕೆ.ಶಿವಕುಮಾರ್ ಸಲಹೆ
    • ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ
    • ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಆಡಳಿತ ಬರಬೇಕು: ಯತ್ನಾಳ್
    • ತುಮಕೂರು: ರಾಗಿ ಖರೀದಿ ನೋಂದಣಿ ಆರಂಭ
    • ಶೆಡ್, ದನದ ಕೊಟ್ಟಿಗೆಗೆ ಸ್ಟಿಕ್ಕರ್ ಹಾಕಿದ್ದಾರೆ: ಬೆಸ್ಕಾಂ ಸಿಬ್ಬಂದಿ ಯಡವಟ್ಟಿಗೆ ಸಮೀಕ್ಷೆದಾರರು ಕಂಗಾಲು
    • ಒಕ್ಕಲಿಗರ ಮೀಸಲಾತಿಗೆ ಧಕ್ಕೆಯಾದರೆ ಉಗ್ರ ಹೋರಾಟ: ನಂಜಾವಧೂತ ಸ್ವಾಮೀಜಿ
    • ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಮಹಿಳೆಯರು ಸಾವು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮಕ್ಕಳು, ಹದಿಹರೆಯದ ಯುವಕರನ್ನು ಮೊಬೈಲ್ ನಿಂದ ಹೊರ ತರಲು ಜ. 12ರಿಂದ ದೇಶಿಯ ಕ್ರೀಡೆಗಳ ಆಯೋಜನೆ
    ತುಮಕೂರು January 11, 2025

    ಮಕ್ಕಳು, ಹದಿಹರೆಯದ ಯುವಕರನ್ನು ಮೊಬೈಲ್ ನಿಂದ ಹೊರ ತರಲು ಜ. 12ರಿಂದ ದೇಶಿಯ ಕ್ರೀಡೆಗಳ ಆಯೋಜನೆ

    By adminJanuary 11, 2025No Comments2 Mins Read

    ತುಮಕೂರು: ಮಕ್ಕಳನ್ನು, ಹದಿಹರೆಯದ ಯುವಜನರನ್ನು ಮೊಬೈಲ್‌ ನಿಂದ ಹೊರತರಲು ತುಮಕೂರಿನ ಶ್ರೀಸಿದ್ದವನ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಜನವರಿ 12ರಿಂದ 16ರವರೆಗೆ ಹೆರಿಟೇಜ್ ಸ್ಟೋರ್ಟ್ಸ್ ಕಾರ್ನಿವೆಲ್ ಹೆಸರಿನಲ್ಲಿ ದೇಶಿಯ ಪಾರಂಪರಿಕ ಕ್ರೀಡೆಗಳ ಆಯೋಜನೆ ಮಾಡಿದೆ ಎಂದು ಶ್ರೀಸಿದ್ದವನ ಪ್ರೆಂಡ್ಸ್ ಆಸೋಸಿಯೇಷನ್‌ ನ ಧರ್ಮರಾಜ್ ತಿಳಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರೋನ ನಂತರದಲ್ಲಿ ಮಕ್ಕಳು, ಯುವಜನರು ಮೊಬೈಲ್‌ ಗೆ ದಾಸರಾಗಿರುವ ಪರಿಣಾಮ ಅವರ ಮಾನಸಿಕ ಆರೋಗ್ಯ ದಿನದಿಂದ ದಿನಕ್ಕೆ ಕೆಡುತ್ತಿದೆ. ಸ್ವತಹಃ ಶಿಕ್ಷಕರಾಗಿ ನಾವು ಇದನ್ನು ಗಮನಿಸಿದ್ದೇವೆ. ಹೇಗಾದರೂ ಮಾಡಿ ಮೊಬೈಲ್ ಗೀಳಿನಿಂದ ಮಕ್ಕಳು ಮತ್ತು ಯುವಜನರನ್ನು ಹೊರತರಬೇಕೆಂಬ ಉದ್ದೇಶದಿಂದ ಮೆದುಳಿಗೆ ಕೆಲಸ ನೀಡುವ, ನಲಿಯುತ್ತಲೇ ಕಲಿಯಬಹುದಾದ ಕರ್ನಾಟಕದ 8 ದೇಶಿಯ ಪಾರಂಪರಿಕ ಆಟಗಳು ಸೇರಿದಂತೆ ವಿಶ್ವದ 50 ಆಟಗಳನ್ನು ಆಡಿಸಲು ಒಂದು ವೇದಿಕೆ ಸಿದ್ದಗೊಳಿಸಲಾಗಿದೆ. ಉಪ್ಪಾರಹಳ್ಳಿ ರೈಲ್ವೆ ಅಂಡರ್ ಪಾಸ್ ಸಮೀಪವಿರುವ ಶೈವಿ ನಿವಾಸದಲ್ಲಿ ಪಾರಂಪರಿಕ ಕ್ರೀಡೆಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಚಟುವಟಿಕೆಯನ್ನು ಉದ್ದೀಪನಗೊಳಿಸಲು ಹೊಸ ಪ್ರಯತ್ನ ಇದಾಗಿದೆ ಎಂದರು.


    Provided by
    Provided by
    Provided by

    ಕರ್ನಾಟಕದ ದೇಶಿಯ ಪಾರಂಪರಿಕ ಕ್ರೀಡೆಗಳಾದ ಹಾವು, ಎಣಿ, ಚೆಸ್, ಪಗಡೆ, ಸ್ಮೃತಿ ಆಟ(ಮೆಮೋರಿ), ದಡಿ/ಮಿಲ್, ಬುಗುರಿ, ಚಿಣ್ಣಿ ದಾಂಡು, ಬಾಲ್ ಮತ್ತು ಬ್ಯಾಸ್ಕೇಟ್, ಟೆಕ್ ಟ್ಯಾಕ್ ಟೋ, ಹುಲಿ, ಕುರಿ ಸೇರಿದಂತೆ ಒಗಟುಗಳ ಬಿಡಿಸುವುದು, ಅರ್ಚರಿ, ಡಾರ್ಟ್ಸ್, ಟೆಬಲ್ ಟೆನ್ನಿಸ್ ಸೇರಿದಂತೆ ಒಟ್ಟು ಐವತ್ತು ಆಟಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ. ಆಟಗಳನ್ನು ಹೇಳಿಕೊಡಲು ನುರಿತ ತಜ್ಞರನ್ನು ಆಯೋಜಿಸಲಾಗಿದೆ. ಒಬ್ಬ ವ್ಯಕ್ತಿ ಒಂದು ಆಟಕ್ಕೆ ಎರಡು ರೂಗಳಂತೆ 100 ರೂ. ಪಾವತಿಸಿ, 50 ಆಟಗಳನ್ನು ನಿಗದಿತ 1 ಗಂಟೆಯೊಳಗೆ ಆಡಬಹುದಾಗಿದೆ. ಈಗಾಗಲೇ 26 ಜನರು ನೋಂದಾವಣೆ ಮಾಡಿಕೊಂಡಿದ್ದಾರೆ. ಅತ್ಯುತ್ತಮವಾಗಿ ಆಟವಾಡುವ ಆಟಗಾರರಿಗೆ ಸ್ಥಳದಲ್ಲಿಯೇ ಬಹುಮಾನಗಳನ್ನು ನೀಡಲಾಗುವುದು ಎಂದು ಧರ್ಮರಾಜ್ ತಿಳಿಸಿದರು.

    ಶ್ರೀಸಿದ್ದವನ ಫ್ರೆಂಡ್ಸ್ ಅಸೊಸಿಯೇಷನ್ ಉಪನ್ಯಾಸಕರು, ಚಾರ್ಟೇಡ್ ಅಕೌಂಟೆಂಟ್ಸ್, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಮಾನ ಮನಸ್ಕ 30 ಜನರ ತಂಡವೊಂದು ಮಕ್ಕಳು ಮೊಬೈಲ್ ಗೀಳಿನಿಂದ ಅವರ ದೈಹಿಕ, ಮಾನಸಿಕ ಬೆಳವಣಿಗೆಯ ಮೇಲಾಗುತ್ತಿರುವ ದುಷ್ಪರಿಣಾಮಗಳಿಂದ ಹೊರ ತರುವ ಉದ್ದೇಶದಿಂದ ಸುಮಾರು 2 ವರ್ಷಗಳ ಕಾಲ ಸಂಶೋಧನೆ ನಡೆಸಿ, ಬುದ್ದಿಯನ್ನು ಚುರುಕುಗೊಳಿಸುವ, ಮನರಂಜನೆಯನ್ನು ನೀಡುವ ದೇಶಿಯ ಪಾರಂಪರಿಕೆ ಕ್ರೀಡೆಗಳನ್ನು ಆಡಿಸಲು ರಿವೈವಿಂಗ್ ಗೇಮ್ಸ್, ರೀಕಿಂಡ್ಲಿಂಗ್ ಬಾಂಡ್ಸ್ ಹೆಸರಿನಲ್ಲಿ ದೇಶಿ ಆಟಗಳನ್ನು ಕಲಿಯಲು ಮತ್ತು ಆಟವಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಇಲ್ಲಿ ಸಿಗುವ ಪ್ರೋತ್ಸಾಹದ ನಂತರ ಬೇಸಿಗೆ ಶಿಬಿರ ಸಹ ಆಯೋಜಿಸುವ ಉದ್ದೇಶವನ್ನು ಸಿದ್ದವನ ಫ್ರೆಂಡ್ಸ್ ಅಸೋಸಿಯೇಷನ್ ಹೊಂದಿದೆ ಎಂದರು.

    ಶ್ರೀಸಿದ್ದವನ ಫ್ರೆಂಡ್ಸ್ ಅಸೋಸಿಯೇಷನ್‌ನ ಮತ್ತೊರ್ವ ಉಪನ್ಯಾಸಕ ರತನ್ ಜೈನ್ ಮಾತನಾಡಿ, ಮಕ್ಕಳು ಹೆಚ್ಚು ಸಮಯ ಮೊಬೈಲ್‌ನೊಂದಿಗೆ ಕಳೆಯುತ್ತಿರುವುದರಿಂದ ಅವರ ಮೆದುಳು, ಕಣ್ಣಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿವೆ. ಹಾರ್ಮೋನ್‌ ಗಳ ಅಸಮತೋಲನ ಕಂಡುಬರುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಮ್ಮ ಅಸೋಸಿಯೇಷನ್ ದೇಶಿಯ ಪಾರಂಪರಿಕ ಆಟಗಳ ಮೊರೆ ಹೋಗಿದೆ.ಇದರಲ್ಲಿ 12 ಇನ್‌ ಡೋರ್ ಮತ್ತು 26 ಔಟ್‌ ಡೋರ್ ಗೆಮ್ಸ್ ಗಳಿದ್ದು,ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜನವರಿ 12 ರಿಂದ 16ರವರೆಗೆ ಹೆರಿಟೇಜ್ ಸ್ಟೋರ್ಟ್ಸ್ ಕಾರ್ನಿವಲ್‌ ನಲ್ಲಿ ಮಕ್ಕಳೊಂದಿಗೆ, ಪೋಷಕರು ಸಹ ಭಾಗವಹಿಸಿ, ತಾವು ಕಲಿತಿರುವ ಆಟಗಳ ಜೊತೆಗೆ, ಹೊಸ ಆಟಗಳನ್ನು ಕಲಿತು ಆಡುವ ಮೂಲಕ ಹೊಸತನವನ್ನು ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಶ್ರವಣ್ ಮತ್ತು ಕುಸುಮ ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ತುಮಕೂರು: ರಾಗಿ ಖರೀದಿ ನೋಂದಣಿ ಆರಂಭ

    October 5, 2025

    ಬಸ್—ಕಾರಿನ ನಡುವೆ ಭೀಕರ ಅಪಘಾತ: ಮೂವರು ಸಾವು, ಇಬ್ಬರ ಸ್ಥಿತಿ ಗಂಭೀರ

    October 5, 2025

    ಕೆಆರ್ ಎಸ್ ಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಸುಲ್ತಾನ್: ಕೆ.ಎನ್.ರಾಜಣ್ಣ ಹೇಳಿಕೆ

    October 5, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ರಾಜ್ಯ ಸುದ್ದಿ

    ಖ್ಯಾತ ಸಾಹಿತಿ ಪ್ರೊ.ಮೊಗಳ್ಳಿ ಗಣೇಶ್ ನಿಧನ!

    October 5, 2025

    ಬೆಂಗಳೂರು: ಖ್ಯಾತ ಸಾಹಿತಿ, ಹಿರಿಯ ಕತೆಗಾರ ಪ್ರೊ.ಮೊಗಳ್ಳಿ ಗಣೇಶ್ (64) ಭಾನುವಾರ ಅನಾರೋಗ್ಯದಿಂದ ಮನೆಯಲ್ಲಿ ನಿಧನರಾದರು. ಇವರು ಪತ್ನಿ, ಮೂವರು…

    ಸರ್ವೇ ವೇಳೆ ಕುರಿ, ಕೋಳಿ, ಚಿನ್ನ, ವಾಚ್ ಎಷ್ಟಿವೆ ಅಂತ ಕೇಳ್ಬೇಡಿ: ಸರ್ವೇದಾರರಿಗೆ ಡಿ.ಕೆ.ಶಿವಕುಮಾರ್ ಸಲಹೆ

    October 5, 2025

    ನಮ್ಮ ಮೆಟ್ರೋಗೆ “ಬಸವ ಮೆಟ್ರೋ” ನಾಮಕರಣಕ್ಕೆ ಕೇಂದ್ರಕ್ಕೆ ಶಿಫಾರಸು ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ

    October 5, 2025

    ರಾಜ್ಯದಲ್ಲಿ ಉತ್ತರ ಪ್ರದೇಶ ಮಾದರಿಯ ಆಡಳಿತ ಬರಬೇಕು: ಯತ್ನಾಳ್

    October 5, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.