ಶ್ರೀರಂಗಪಟ್ಟಣ: ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಉಗಮ ಚೇತನ ಟ್ರಸ್ಟ್,(ರಿ,) ಹಾಗೂ ಗಮ್ಯಶ್ರೀರಂಗಪಟ್ಟಣ ಇವರ ಸಹಯೋಗದೊಂದಿಗೆ ಸರಳವಾಗಿ ತಾಯಂದಿರ ದಿನಾಚರಣೆಯನ್ನು ಆಚರಣೆ ಮಾಡಲಾಯಿತು.
ಶ್ರೀರಂಗಪಟ್ಟಣ ಕೆ.ಹೆಚ್.ಬಿ. ಕಾಲೋನಿಯಲ್ಲಿ ಗಮ್ಯ ತಂಡದಿಂದ ನಡೆಯುತ್ತಿದ್ದ ಚಿಲಿಪಿಲಿ ಬೇಸಿಗೆ ಶಿಬಿರದಲ್ಲಿ ವಿಶ್ವ ತಾಯಂದಿರ ದಿನಾಚರಣೆಯನ್ನು ಇಂದು ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನೂತನ ವನಿತೆ ವ್ಯವಸ್ಥಾಪನಾ ನಿರ್ದೇಶಕರಾದ ಕನ್ನಿಕಾ ರವರು ವಹಿಸಿಕೊಂಡಿದ್ದರು. ಇದರ ಉದ್ಘಾಟನೆಯನ್ನು ಉಗಮ ಚೇತನ ಟ್ರಸ್ಟಿನ ಅಧ್ಯಕ್ಷರಾದ ಪ್ರಿಯಾ ರಮೇಶ್ ರವರು ವಹಿಸಿಕೊಂಡಿದ್ದರು.

ನಂತರ ತಾಯಿಯ ಬಗ್ಗೆ ಶಿಬಿರದ ಮಕ್ಕಳು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಭಾಗವಾದ ಎಲ್ಲ ತಾಯಂದಿರು ತಮ್ಮ ಮಕ್ಕಳಿಗೆ ಕೈತುತ್ತು ನೀಡುವುದರ ಮೂಲಕ ತನ್ನ ತಾಯಿತನದ ಅನುಭವ ಹಾಗೂ ಮಕ್ಕಳಿಗೆ ಪ್ರೀತಿಯನ್ನು ನೀಡಿ ಕೈತುತ್ತು ನೀಡಿದರು.
ಆನಂತರ ಎಲ್ಲಾ ತಾಯಂದಿರು ತಮ್ಮ ತಮ್ಮ ಮಕ್ಕಳಾ ಜೊತೆಯಲ್ಲಿ ಹಾಡಿ ಕುಣಿದು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಗಮ್ಯ ತಂಡದ ನಾಯಕ ಹಾಗೂ ನಿರ್ದೇಶಕರಾದ ಆದಿತ್ಯ ಭಾರದ್ವಾಜ ಹಾಗೂ ಮನೋಜ್ ಮನು ನಟರಾಜ್ ಇನ್ನೂ ಅನೇಕರು ಹಾಗೂ ಉಗಮ ಚೇತನಾ ಟ್ರಸ್ಟಿನ ಪದಾಧಿಕಾರಿಗಳಾದ ಪಾಲಳ್ಳಿ ನಿಂಗರಾಜ್ ಮೂರ್ತಿ ಇನ್ನೂ ಅನೇಕರು ಪಾಲ್ಗೊಂಡಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


