ಬಾಲಿವುಡ್ನ ಖ್ಯಾತ ನಟಿ ಪೂಜಾ ಹೆಗ್ಡೆ ತಮ್ಮ ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಶ್ರೀಲಂಕಾದಲ್ಲಿ ಪೂಜಾ ಹೆಗ್ಡೆ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ತಮ್ಮ ಬರ್ತ್ಡೇ ಭಾಗವಾಗಿ ದ್ವೀಪರಾಷ್ಟ್ರಕ್ಕೆ ಪ್ರವಾಸ ಹೋದಂತೆ ಕಾಣಿಸುತ್ತಿದೆ. ನಟಿ ಅಲ್ಲಿಯೇ ಬರ್ತ್ಡೇ ಆಚರಿಸಿಕೊಂಡಿದ್ದು ಚಂದದ ಫೋಟೋಗಳನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ನಟಿ ಬಿಳಿ ಹಾಗೂ ಕೆಂಪು ಬಣ್ಣದ ಕಾಂಬಿನೇಷನ್ ಇರುವಂತಹ ಫ್ರಾಕ್ಟ್ ಧರಿಸಿದ್ದು ಆಕರ್ಷಕವಾದ ಸ್ಥಳದಲ್ಲಿ ಪೂಲ್ ಸೈಡ್ ಕುಳಿತು ಪೋಸ್ ಕೊಟ್ಟಿದ್ದಾರೆ. ನಟಿ ಬೋಲ್ಡ್ & ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಪೂಜಾ ಹೆಗ್ಡೆ ಅವರಿಗೆ ಅಂಥಹ ದೊಡ್ಡ ಅವಕಾಶಗಳು ಬರುತ್ತಿರಲಿಲ್ಲ. ನಟಿ ತೆಲುಗಿನಲ್ಲಿ ಸಿನಿಮಾ ಅವಕಾಶ ಕಳೆದುಕೊಂಡಿದ್ದಾರೆ. ಪೂಜಾ ಹೆಗ್ಡೆ ಬಾಲಿವುಡ್ ನಲ್ಲಿ ನಟಿಸಿದ್ದರೂ ಕೂಡಾ ಅಲ್ಲಿಯೂ ಅದೃಷ್ಟ ಕೈಗೂಡಲಿಲ್ಲ.
ಇನ್ನು ತೆಲುಗು ಚಿತ್ರರಂಗದಲ್ಲಿ ಒಂದೆರಡು ಸಿನಿಮಾ ಫ್ಲಾಪ್ ಆದರೆ ನಟಿಯರನ್ನು ಮತ್ತೆ ಕೇಳೋರೆ ಇಲ್ಲ ಎಂಬಂತಹ ಪರಿಸ್ಥಿತಿಯಿದೆ. ಸದ್ಯ ಪೂಜಾಗೆ ಟಾಲಿವುಡ್ ಬಾಗಿಲು ಮುಚ್ಚಿದೆ. ಆದರೆ ನಟಿಗೆ ಬಂಪರ್ ಅವಕಾಶ ಬಂದಿದ್ದು ಕಾಲಿವುಡ್ನಲ್ಲಿ. ಪೂಜಾ ಹೆಗ್ಡೆ ಸಿನಿಮಾ ಅವಕಾಶಗಳಿಲ್ಲದೆ ಕಷ್ಟಪಡುತ್ತಿರುವ ಸಂದರ್ಭದಲ್ಲಿಯೇ ವಿಜಯ್ ಅವರ ಜೊತೆ ಅವಕಾಶ ಸಿಕ್ಕಿದೆ. ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ದಳಪತಿ 69 ಮೂವಿಯಲ್ಲಿ ನಟಿ ಪೂಜಾ ಹೆಗ್ಡೆ ಜೋಡಿಯಾಗಲಿದ್ದಾರೆ.
ವಿಜಯ್ 69 ನೇ ಚಿತ್ರಕ್ಕೆ ಪೂಜಾ ಹೆಗ್ಡೆ ಆಯ್ಕೆ ಆಗಿದ್ದಾರೆ. ಇಲ್ಲಿವರೆಗೂ ಈ ವಿಚಾರ ಕೇವಲ ಸುದ್ದಿ ಆಗಿತ್ತು. ಅದನ್ನ ಇದೀಗ ಸಿನಿಮಾ ತಂಡವೇ ಅಧಿಕೃತಗೊಳಿಸಿದೆ. ನಮ್ಮ ಚಿತ್ರದ ನಾಯಕಿ ಇವರೇ ಅನ್ನೋದನ್ನ ಹೇಳಿಕೊಂಡಿದೆ. ಪೂಜಾ ಹೆಗ್ಡೆ ಸಿನಿಮಾ ವಿಚಾರಕ್ಕೆ ಬಂದ್ರೆ, ಈಗಾಗಲೇ ಹಲವು ಸಿನಿಮಾಗಳನ್ನ ಮಾಡಿದ್ದಾರೆ. ಆ ಲೆಕ್ಕದಲ್ಲಿ ಪೂಜಾ ಹೆಚ್ಚು ತೆಲುಗು ಭಾಷೆಯ ಸಿನಿಮಾಗಳಲ್ಲಿಯೇ ಗುರುತಿಸಿಕೊಂಡಿದ್ದಾರೆ. ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ. ದೇವರ ಚಿತ್ರದ ಪಾರ್ಟ್-2ದಲ್ಲೂ ಪೂಜಾ ಇದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296