- ಆಂಟೋನಿ ಬೇಗೂರು
HSRP: ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಇದೀಗ ಎಲ್ಲೆಡೆ ನೀತಿ ಸಂಹಿತೆ ಜಾರಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಬಿಸಿ ಇದುವರೆಗೂ HSRP ನಂಬರ್ ಪ್ಲೇಟ್ ಹಾಕಿಸದ ವಾಹನಗಳಿಗೂ ಮುಟ್ಟಿದೆ.
ದೇಶಾದ್ಯಂತ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಸಾಕಷ್ಟು ನಿಯಮಗಳಲ್ಲಿ ಕಟ್ಟು ನೆಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಎಸ್‌ಆರ್‌ಪಿ (HSRP) ಇಲ್ಲದೆ ಇರುವ ವಾಹನಗಳ ಚಲಾವಣೆ ನಿರ್ಬಂಧಿಸಲಾಗುತ್ತಿದೆ.
ಅಂದ ಹಾಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಮೇ 31ರ ವರೆಗೆ ಸಮಯವಕಾಶವಿದ್ದರೂ ಚುನಾವಣೆ ನಿಮಿತ್ತ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಅಲ್ಲದೆ ರಾಷ್ಟ್ರ ರಾಜಧಾನಿ ದೆಹಲಿ, ನೋಯಿಡಾ, ಗ್ರೇಟರ್ ನೋಯಿಡಾ, ಫರೀದಾಬಾದ್, ಗೌತಮ್ ಬುದ್ಧ ನಗರ ಮೊದಲಾದ ಕಡೆ ಅಧಿಕಾರಿಗಳು ನಂಬರ್ ಪ್ಲೇಟ್ ಪರೀಕ್ಷೆಯಲ್ಲಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಇಲ್ಲದೇ ಇರುವ ವಾಹನಗಳನ್ನು ತಡೆಹಿಡಿದು ಫೈನ್ ಹಾಕಲಾಗುತ್ತಿದೆ.
ಸದ್ಯಕ್ಕೆ ದೆಹಲಿಯಲ್ಲಿ ಇರುವ ನಿಯಮ ಆಗಿದ್ದರೂ ಕೂಡ ದೇಶಾದ್ಯಂತ ಈ ನಿಯಮ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಹಾಗಾಗಿ ಆದಷ್ಟು ಬೇಗ ನಿಮ್ಮ ವಾಹನಕ್ಕೆ ಹೆಚ್ ಎಸ್ ಆರ್ ಪಿ ಹಾಕಿಸಿಕೊಳ್ಳಿ ಎಂದು RTO ತಿಳಿಸಿದೆ.
HSRP ನಂಬರ್ ಪ್ಲೇಟ್ ಪಡೆಯುವುದು ಹೇಗೆ?
ಮೊದಲಿಗೆ https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಿ ನಂತರ Book HSRP ನ್ನು ಕ್ಲಿಕ್ ಮಾಡಿ.
- ವಾಹನ ತಯಾರಕರನ್ನು ಆಯ್ಕೆ ಮಾಡಿ
- ವಾಹನದ ಮೂಲ ವಿವರ ಭರ್ತಿ ಮಾಡಿ
- ಡೀಲರ್ ಸ್ಥಳವನ್ನು ಆಯ್ಕೆ ಮಾಡಿ (HSRP ಅಳವಡಿಕೆಗೆ ನಿಮ್ಮ ಅನುಕೂಲಕ್ಕೆ ತಕ್ಕಂತೆ)
- HSRP ಶುಲ್ಕವನ್ನು ನಗದು ರೂಪದಲ್ಲಿ ಪಾವತಿ ಮಾಡಲು ಅವಕಾಶವಿಲ್ಲ, ಹಾಗಾಗಿ ಆನ್‌ಲೈನ್‌ನಲ್ಲಿ ಪಾವತಿಸಿ.
- ಆವಾಗ, ವಾಹನ ಮಾಲೀಕರ ಮೊಬೈಲ್ ಸಂಖ್ಯೆಗೆ ಒಟಿಪಿ ರವಾನಿಸಲಾಗುವುದು.
- ನಿಮಗೆ ಯಾವಗ ಸೂಕ್ತ ಅನಿಸುತ್ತದೆಯೋ ಅದಕ್ಕೆ ತಕ್ಕಂತೆ HSRP ಅಳವಡಿಕೆಯ ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ
ನಂತರ ನಿಮ್ಮ ವಾಹನದ ಯಾವುದೇ ತಯಾರಕ/ ಡೀಲರ್ ಸಂಸ್ಥೆಗೆ ಭೇಟಿ ನೀಡಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296