ಬೆಳಗಾವಿ: ಇಲ್ಲಿನ ಕೋಟೆ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ಎದುರಿಗೆ ಸೋಮವಾರ ಬೈಕಿಗೆ ಉಸುಕು ತುಂಬಿದ ಲಾರಿ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಭರತೇಶ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದ ಸಾಬಿಯಾ ಶಬ್ಬೀರ್ ಪಾಳೇಗಾರ (16) ಮೃತಪಟ್ಟವರು. ಬೈಕ್ ಓಡಿಸುತ್ತಿದ್ದ ಪಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಎಂದಿನಂತೆ, ಸೋಮವಾರ ಬೆಳಿಗ್ಗೆ ಕುಡ ಸಾಬಿಯಾ ಅವರನ್ನು ಕಾಲೇಜಿಗೆ ಬಿಡಲು ಅವರ ಪಾಲಕರು ಬೈಕ್ ಮೇಲೆ ಕರೆದುಕೊಂಡು ಹೊರಟಿದ್ದರು. ಕೋಟೆ ರಸ್ತೆಯಲ್ಲಿ ಹಿಂದಿನಿಂದ ಬಂದ ಉಸುಕಿನ ಲಾರಿ ಬೈಕಿಗೆ ಡಿಕ್ಕಿ ಹೊಡೆಯಿತು.
ಡಿಕ್ಕಿ ರಭಸಕ್ಕೆ ಬೈಕ್ ಮಗುಚಿ, ಸಾಬಿಯಾ ಲಾರಿಯ ಚಕ್ರಕ್ಕೆ ಸಿಲುಕಿದರು. ಅವರ ತಲೆಯ ಮೇಲೆಯೇ ಲಾರಿ ಹರಿಯಿತು. ಇದರಿಂದ ಮಿದುಳಿನ ಭಾಗ ರಸ್ತೆಯಲ್ಲಿ ಚೆಲ್ಲಾಡಿತು. ಈ ದೃಶ್ಯ ಕಂಡು ಜನ ಬೆಚ್ಚಿಬಿದ್ದರು. ಬೈಕ್ ಓಡಿಸುತ್ತಿದ್ದವರು ರಸ್ತೆ ಬದಿಗೆ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz