ಆ್ಯಸಿಡ್ ಹಾಕ್ತೀನಿ ಅಂತ ಮಹಿಳಾ ಉದ್ಯೋಗಿಗೆ ಬೆದರಿಕೆ ಹಾಕಿದ ಸಹೋದ್ಯೋಗಿಯೊಬ್ಬನನ್ನು ಕಂಪೆನಿ ಕೆಲಸದಿಂದ ತೆಗೆದು ಹಾಕಿರುವ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಿಖಿತ್ ಎಂಬಾತನ ವಿರುದ್ಧ ಸದ್ಯ ಪ್ರಕರಣ ದಾಖಲಾಗಿದೆ. ಮಹಿಳೆಯ ಪತಿ ಈತನ ವಿರುದ್ಧ ದೂರು ದಾಖಲಾಗಿಸಿದ್ದಾರೆ. ಮಹಿಳೆಯ ಬಟ್ಟೆಯ ಆಯ್ಕೆಯನ್ನು ವಿರೋಧಿಸಿ ಆರೋಪಿ ಆ್ಯಸಿಡ್ ಎರಚುವ ಬೆದರಿಕೆಯೊಡ್ಡಿದ್ದ ಎಂದು ದೂರಲಾಗಿದೆ.
ನನ್ನ ಹೆಂಡತಿಯ ಬಟ್ಟೆಯ ಆಯ್ಕೆಗಾಗಿ ಆಸಿಡ್ ಎರಚುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಯಾವುದೇ ಘಟನೆ ನಡೆಯದಂತೆ ಈ ವ್ಯಕ್ತಿಯ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ ಎಂದು ಶಹಬಾಜ್ ಅನ್ಸಾರ್ ಎನ್ನುವವರು ಕರ್ನಾಟಕ ಡಿಜಿಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ.
ನನ್ನ ಪತ್ನಿಗೆ ಆಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಎಟಿಯೋಸ್ ಡಿಜಿಟಲ್ ಸೇವೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈ ಸಂಸ್ಥೆಯಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಶಹಬಾಜ್ ಆತಂಕ ಹೊರಹಾಕಿದ್ದಾರೆ. ಈ ಘಟನೆ ನಡೆದ ಬಳಿಕ ನಿಕಿತ್ ಶೆಟ್ಟಿಯನ್ನು ಕಂಪನಿಯಿಂದ ವಜಾಗೊಳಿಸಲಾಗಿದೆ ಎಂದು ಬರೆದಿದ್ದಾರೆ.
ನನ್ನ ಪತ್ನಿಗೆ ಆಸಿಡ್ ದಾಳಿಯ ಬೆದರಿಕೆ ಹಾಕಿದ ವ್ಯಕ್ತಿ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ. ಕಂಪನಿಯು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಅವನನ್ನು ವಜಾಗೊಳಿಸಿದೆ. ಇದನ್ನು ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಬಳಿಕ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q