ಬೆಂಗಳೂರು: 3.15 ಕೋಟಿ ರೂ. ಹಣ ಪಡೆದು ವಂಚನೆ ಮಾಡಿರುವುದಾಗಿ ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಪಡೆದಿರುವುದಾಗಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ರಾಘವೇಂದ್ರ ಹೆಗ್ಗಡೆ ಎಂಬುವವರು ಧ್ರುವ ಸರ್ಜಾ ವಿರುದ್ಧ ದೂರು ನೀಡಿದ್ದಾರೆ.
ಸಿನಿಮಾ ಮಾಡುವುದಾಗಿ 3.15 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಧ್ರುವ ಸರ್ಜಾ ಹಾಗೂ ರಾಘವೇಂದ್ರ ಹೆಗ್ಡೆ 2016ರಿಂದ 2018ರವರೆಗೆ ಜೊತೆಗೆ ಕೆಲಸ ಮಾಡಿದ್ದರು. ಧ್ರುವ ಸರ್ಜಾ ಅವರೇ ರಾಘವೇಂದ್ರ ಹೆಗ್ಡೆ ಭೇಟಿ ಮಾಡಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಸೋಲ್ಜರ್ ಎಂಬ ಸಿನಿಮಾ ಮಾಡುವುದಾಗಿ ಧ್ರುವ ಸರ್ಜಾ ಸ್ಕ್ರಿಪ್ಟ್ ಮಾಡಿದ್ದರು. ಆದರೆ ಧ್ರುವ ಸರ್ಜಾ ಒಪ್ಪಂದಕ್ಕೆ ಸಹಿ ಹಾಕುವ ಮೊದಲೇ 3.15 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಘವೇಂದ್ರ ಹೆಗ್ಡೆ ಹೆಚ್ಚಿನ ಬಡ್ಡಿಗೆ 3.15 ಕೋಟಿ ಸಾಲ ಪಡೆದು, ಧ್ರುವ ಒಡೆತನದ ಆರ್.ಹೆಚ್. ಎಂಟರ್ಟೈನ್ಮೆಂಟ್ ಗೆ ಹಣ ವರ್ಗಾವಣೆ ಮಾಡಿದ್ದರು. ಹಣ ಪಡೆದು ಅಪಾರ್ಟ್ಮೆಂಟ್ ಖರೀದಿ ಮಾಡಿರುವ ಧ್ರುವ ಸರ್ಜಾ, ಸಿನಿಮಾ ಮಾಡಿಕೊಡುವ ಭರವಸೆ ನೀಡಿದ್ದರು. 2019 ಫೆ.21ರಂದು ಒಪ್ಪಂದ ಆಗಿತ್ತು. ಆದರೆ ಈ ಹಣದ ವ್ಯವಹಾರವು ಒಪ್ಪಂದ ಮಾಡಿಕೊಳ್ಳುವ ಮುನ್ನವೇ ನಡೆದಿತ್ತು ಎಂದು ಆರೋಪಿಸಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC