nammatumakuru

    Subscribe to Updates

    Get the latest creative news from FooBar about art, design and business.

    What's Hot

    ಹೊಳವನಹಳ್ಳಿಯಲ್ಲಿ ದಸರಾ ಹಬ್ಬಕ್ಕೆ ಗೊಂಬೆಗಳ ಸಂಭ್ರಮದ ಮೆರುಗು

    October 1, 2025

    ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ರಾಜ್ಯಮಟ್ಟದ ಕಲಾ ಉತ್ಸವ

    October 1, 2025

    ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ ಹೆಚ್ಚುವರಿ 8,500 ರೂ. ಪರಿಹಾರ ಘೋಷಣೆ: ಸಚಿವ ಈಶ್ವರ್ ಖಂಡ್ರೆ ಸ್ವಾಗತ

    October 1, 2025
    Facebook Twitter Instagram
    ಟ್ರೆಂಡಿಂಗ್
    • ಹೊಳವನಹಳ್ಳಿಯಲ್ಲಿ ದಸರಾ ಹಬ್ಬಕ್ಕೆ ಗೊಂಬೆಗಳ ಸಂಭ್ರಮದ ಮೆರುಗು
    • ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ರಾಜ್ಯಮಟ್ಟದ ಕಲಾ ಉತ್ಸವ
    • ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ ಹೆಚ್ಚುವರಿ 8,500 ರೂ. ಪರಿಹಾರ ಘೋಷಣೆ: ಸಚಿವ ಈಶ್ವರ್ ಖಂಡ್ರೆ ಸ್ವಾಗತ
    • ಕವನ: ದಸರಾ
    • ತುಮಕೂರಿಗೆ ಮೆಟ್ರೋ: ಅಂದಾಜು 20,649 ಕೋಟಿ ವೆಚ್ಚ: ಸಚಿವ ಡಾ.ಜಿ.ಪರಮೇಶ್ವರ್
    • ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆ: ಎನ್.ಎಸ್.ಜಯಕುಮಾರ್
    • ತಿಪಟೂರು | ರಾಗಿ ಬೆಳೆಗೆ ಡ್ರೋನ್ ಬಳಸಿ ನ್ಯಾನೋ ಯೂರಿಯಾ ಸಿಂಪಡಣೆ ಪ್ರಾತ್ಯಕ್ಷಿಕೆ
    • ಶಿಕ್ಷಕರ ಶ್ರಮಕ್ಕೆ ಬೆಲೆ ಕಟ್ಟಲಾಗದು: ಗುರುವಂದನಾ ಕಾರ್ಯಕ್ರಮದಲ್ಲಿ ಡಾ.ವೈ.ಡಿ.ರಾಜಣ್ಣ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » 6 ತಿಂಗಳಲ್ಲೇ 18.5ಕೋಟಿ ಜನರ ತೆರಿಗೆ ಹಣ ಉಡಾಯಿಸಿದ ಕಾಂಗ್ರೆಸ್ ಸರ್ಕಾರ: ಮಲ್ಲಿಕಾರ್ಜುನ ಭಟ್ಟರಹಳ್ಳಿ ಕಿಡಿ
    ತುಮಕೂರು December 25, 2023

    6 ತಿಂಗಳಲ್ಲೇ 18.5ಕೋಟಿ ಜನರ ತೆರಿಗೆ ಹಣ ಉಡಾಯಿಸಿದ ಕಾಂಗ್ರೆಸ್ ಸರ್ಕಾರ: ಮಲ್ಲಿಕಾರ್ಜುನ ಭಟ್ಟರಹಳ್ಳಿ ಕಿಡಿ

    By adminDecember 25, 2023No Comments3 Mins Read
    krs

    ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ.ಕೇವಲ ಆರೇ ಆರು ತಿಂಗಳಲ್ಲಿ 18.50 ಕೋಟಿ ರು ಜಾಹೀರಾತಿಗೆ ಬಿಡುಗಡೆ ಆಗಿದೆ.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ 2023-24ನೇ ಸಾಲಿನ ಆಯವ್ಯಯದಲ್ಲಿ  ಒದಗಿಸಿದ್ದ 37.95 ಕೋಟಿ ರು. ನಲ್ಲಿ ಈಗಾಗಲೇ 18.50 ಕೋಟಿ ರು. ಗೂ ಹೆಚ್ಚು ಮೊತ್ತದಲ್ಲಿ ಜಾಹೀರಾತು ಬಿಡುಗಡೆ ಆಗಿರುವುದು ಇದೀಗ ಬಹಿರಂಗವಾಗಿದೆ ಎಂದು ಕರ್ನಾಟಕ ರಾಷ್ರ್ಟಸಮಿತಿ ಪಕ್ಷ  ರಾಜ್ಶ ಕಾರ್ಯದರ್ಶಿ ಮಲ್ಲಿಕಾರ್ಜುನ ಭಟ್ಟರಹಳ್ಳಿ ಹೇಳಿದ್ದಾರೆ.

    ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ, ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಹಣ ಬಿಡುಗಡೆ ಮತ್ತು ಬರ  ಪರಿಹಾರಕ್ಕೆ ಹಣ ಹೊಂದಿಸಲು ಏದುಸಿರು ಬಿಡುತ್ತಿರುವ ಸರ್ಕಾರವು ಜಾಹೀರಾತುಗಳಿಗೆ ಕೋಟ್ಯಂತರ ರುಪಾಯಿ ಖರ್ಚು ಮಾಡುತ್ತಿದೆ ಎಂದು ಅವರು ಆರೋಫಿಸಿದ್ದಾರೆ.


    Provided by
    Provided by
    Provided by

    ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲು “ದ ಪಾಲಿಸಿ ಫ್ರಂಟ್‌ ” ನ ಸೇವೆ ಪಡೆಯಲು ವಾರ್ತಾ ಇಲಾಖೆ ಕೋರಿದ್ದ ಪ್ರಸ್ತಾವನೆಯಲ್ಲಿ ಜಾಹೀರಾತಿಗೆ ಮಾಡಿರುವ ಖರ್ಚಿನ ವಿವರವನ್ನು ಪ್ರಸ್ತಾವಿಸಲಾಗಿದೆ. ‘ಸಿದ್ದರಾಮಯ್ಯ ಅವರ ಅಂತರ್ಜಾಲದಿಂದ ಯಾವುದೋ ಯುವಕನ ಫೋಟೋ ಕದ್ದು, ಈತ ಯುವನಿಧಿಯ ಫಲಾನುಭವಿ ಅಂತ ತೋರಿಸುತ್ತಿರುವುದು ಇವರ ಸುಳ್ಳು ಪ್ರಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಮಲ್ಲಿಕಾರ್ಜುನ ಟೀಕಿಸಿದ್ದಾರೆ.

    ಅದೇ ರೀತಿ 2023-24ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಸಂಪಾದಕರು ಮತ್ತು ಮಾಲೀಕತ್ವದ ಪತ್ರಿಕೆಗಳಿಗೆ ಮೇ 2023ರಿಂದಲೇ ಅನುದಾನ ಕೊರತೆಯಾಗಿದೆ. ಈ ಸಂಬಂಧ ಕೃಷಿ ಸಚಿವ ಎನ್‌ .ಚೆಲುವರಾಯಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರವನ್ನೂ ಬರೆದಿದ್ದಾರೆ ಎಂದು ಅವರು ಹೇಳಿದ್ದಾರೆ.

    ಸರ್ಕಾರಿ ಕಾರ್ಯಕ್ರಮಗಳ ಜಾಹೀರಾತು ನೀಡುವ ಕ್ರಿಯಾ ಯೋಜನೆಗೆ  ಈಗಾಗಲೇ ಅನುಮೋದನೆ ದೊರೆತಿದೆ. ಇದರ ಪ್ರಕಾರ 2023ರ ಏಪ್ರಿಲ್‌ ನಿಂದ ಜಾಹೀರಾತು ನೀಡಲಾಗುತ್ತಿದೆ. ಈ ಜಾಹೀರಾತುಗಳಿಗೆ ವಾ‍ರ್ಷಿಕ 22 ಕೋಟಿ ರೂ.. ಅನುದಾನ ಅಗತ್ಯವಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯು ಎಸ್‌ ಸಿಪಿ ಯೋಜನೆಯಡಿಯಲ್ಲಿ ಕೇವಲ 8.57 ಕೋಟಿ ರೂ. ಮಾತ್ರ ಅನುದಾನವನ್ನು ಮೀಸಲಿಟ್ಟಿದೆ ಎಂಬ ಸಂಗತಿಯನ್ನು ಚೆಲುವರಾಯಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ  ಎಂದು ಅವರು ತಿಳಿಸಿದ್ದಾರೆ.

    ಈ ಹಿಂದಿನ ಬಿಜೆಪಿ ಸರ್ಕಾರವೂ ಸಹ ಜಾಹೀರಾತಿಗೆ ಅಪಾರ ಪ್ರಮಾಣದಲ್ಲಿ ಖರ್ಚು ಮಾಡಿತ್ತು. ಕೋವಿಡ್‌-19 ಸಂದರ್ಭದಲ್ಲಿ ಜಾಹೀರಾತುಗಳಿಗೆ 3 ತಿಂಗಳಲ್ಲಿ 11 ಕೋಟಿ ವೆಚ್ಚ ಮಾಡಿತ್ತು. ಮೋದಿ ಹುಟ್ಟುಹಬ್ಬಕ್ಕೆ ಜಾಹೀರಾತು ನೀಡಿದ್ದ ಹಿಂದಿನ ಸರ್ಕಾರವು ಪ್ರಾಯೋಜಿತ ಪುರವಣಿಗಳಿಗೆ 44.85 ಲಕ್ಷ ರು. ವೆಚ್ಚ ಮಾಡಿ ವೆಚ್ಚ ಮಾಹಿತಿ ಮುಚ್ಚಿಟ್ಟಿತ್ತು.  ಕೋವಿಡ್‌ ಪರಿಹಾರ ನೀಡಲು ಚೌಕಾಸಿ ಮಾಡಿದ್ದ ಸರ್ಕಾರವು ತಮಿಳುನಾಡಿನ ರಾಜಕೀಯ ವಿಶ್ಲೇಷಣೆಗೆ 25 ಲಕ್ಷ ನೀಡಿತ್ತು. 2 ವರ್ಷದ ಸಾಧನೆ ಬಿಂಬಿಸಲು 7.96 ಕೋಟಿ ಖರ್ಚು ಮಾಡಿದ್ದ ಸರ್ಕಾರವು ಜಾಹೀರಾತಿಗೆ 6.62 ಕೋಟಿ ವೆಚ್ಚ ಮಾಡಿತ್ತು. ಕೋವಿಡ್ ಲಸಿಕೆ ಅಭಿಯಾನ ಜಾಹೀರಾತು; 3 ತಿಂಗಳಲ್ಲಿ 2.77 ಕೋಟಿ ವೆಚ್ಚವಾದರೂ ಗುರಿ ಮುಟ್ಟಿರಲಿಲ್ಲ.ಸರ್ಕಾರದ ಸಾಧನೆ ಬಿಂಬಿಸಲು ಆರೇ ಆರು ತಿಂಗಳಲ್ಲಿ ಜಾಹೀರಾತಿಗೆ 26.84 ಕೋಟಿ ವೆಚ್ಚ ಮಾಡಿತ್ತು.ರಾಷ್ಟ್ರೀಯ ಶಿಕ್ಷಣ ನೀತಿ ಪ್ರಚಾರಕ್ಕೆ ಜಾಹೀರಾತಿಗೆ 1.02 ಕೋಟಿ ಖರ್ಚು ಮಾಡಿತ್ತು.ಅನುಭವ ಮಂಟಪದಲ್ಲಿ ಸಿ ಎಂ ಭಾಷಣದ ನೇರ ಪ್ರಸಾರಕ್ಕೆ 42.26 ಲಕ್ಷ ವೆಚ್ಚವಾಗಿತ್ತು. ಕೋವಿಡ್‌ ಜಾಹೀರಾತುಗಳಿಗಾಗಿ ನೀಡಿದ್ದ 1. 60 ಕೋಟಿ ವೆಚ್ಚದಲ್ಲಿ ಹೊಸದಿಗಂತಕ್ಕೆ ಸಿಂಹಪಾಲು ಲಭಿಸಿತ್ತು. ಬಜೆಟ್‌ ಸಂದರ್ಭದಲ್ಲಿ ಸಿ ಎಂ ಜತೆ ವಿಶೇಷ ಸಂವಾದಕ್ಕೂ ಸುದ್ದಿವಾಹಿನಿಗಳಿಗೆ 38.97 ಲಕ್ಷ ರು ಪಾವತಿ ಮಾಡಿತ್ತು ಎಂದು ಅವರು ಆರೋಪಿಸಿದ್ದಾರೆ.

    2019-20ರಲ್ಲಿ ಟಿ ವಿ ಚಾನಲ್‌ಗಳಿಗೆ 15.25 ಕೋಟಿ ರೂ., ಮುದ್ರಣ ಮಾಧ್ಯಮಕ್ಕೆ 6.79 ಕೋಟಿ ರು., ಸಾಮಾಜಿಕ ಜಾಲತಾಣಕ್ಕೆ 0.48 ಲಕ್ಷ ರು., 2020-21ರಲ್ಲಿ 17.45 ಕೋಟಿ ರು., ಜಾಹೀರಾತುಗಳಿಗೆ ಬಿಡುಗಡೆ ಮಾಡಿತ್ತು.  ಮುದ್ರಣ ಮಾಧ್ಯಮಗಳಿಗೆ 9.75 ಕೋಟಿ ರು., 2021-22 ಟಿ ವಿ ಚಾನಲ್‌ಗಳಿಗೆ 36.58 ಕೋಟಿ ರು., ಮುದ್ರಣ ಮಾಧ್ಯಮಗಳಿಗೆ 13.26 ಕೋಟಿ ರೂ., ಸಾಮಾಜಿಕ ಜಾಲತಾಣಗಳಿಗೆ 1.18 ಕೋಟಿ ರು., 2022-23ರ ಸಾಲಿಗೆ ಮಾರ್ಚ್‌ 31, 2023ರ ಅಂತ್ಯಕ್ಕೆ 42.23 ಕೋಟಿ ರು. ಸೇರಿ ಒಟ್ಟಾರೆ 111.51 ಕೋಟಿ ರು. ನೀಡಿತ್ತು ಎಂದು ಸರ್ಕಾರವೇ 2023ರ ಫೆ.16ರಂದು ಸದನಕ್ಕೆ ಉತ್ತರಿಸಿದ್ದನ್ನು ಸ್ಮರಿಸಬಹುದು ಎಂದು ಅವರು ಹೇಳಿದ್ದಾರೆ.

    ಸಾಲ ಮಾಡಿ ಆರ್ಥಿಕ ಅಶಿಸ್ತಿಗೆ ಕಾರಣವಾಗಿ ಅಭಿವ್ರುದ್ಧಿಯ ಜನಕಲ್ಶಾಣ ಯೋಜನೆಗಳು ಮರೀಚಿಕೆಯಾಗಿ ಭ್ರಷ್ಠಾಚಾರದ ಕ್ಶಾನ್ಸರ್ ಹೆಚ್ಚಾಗಿ ರಾಜ್ಶವನ್ನು ದಿವಾಳಿ ಅಂಚಿಗೆ ಕೊಂಡೊಯ್ಶುವ ಸಾಧ್ಶತೆಗಳೇ ಹೆಚ್ಚಾಗಿವೆ. ಪ್ರಚಾರಕ್ಕೆ ಸೀಮಿತವಾಗಿ ಸರ್ಕಾರ ನಡೆಸುವವರ ಇಂತಹ ಅಶಿಸ್ತಿನ ಆರ್ಥಿಕ ನಡೆಗಳನ್ನು KRS ಪಕ್ಷ ಗಂಭೀರವಾಗಿ ಖಂಡಿಸುತ್ತಿದೆ. ಹಣಕಾಸು ಹೊಣೆಹೊತ್ತಿರುವ ಮುಖ್ಶಮಂತ್ರಿಸಿದ್ಧರಾಮಯ್ಶನವರು ರಾಜ್ಶದ ಜನರ ಹಿತಾಸಕ್ತಿಯಿಂದ ಸುಳ್ಳು ಪ್ರಚಾರದ ಗೀಳಿನಿಂದ ಹೊರಬಂದು ಆಡಳಿತದಲ್ಲಿನ ಭ್ರಷ್ಠಾಚಾರಕ್ಕೆ ಕಡಿವಾಣ ಹಾಕಿ ಸಾಲದ ಹೊರೆ ತಗ್ಗಿಸಿ ಸರ್ಕಾರ ನಡೆಸಬೇಕು ಎಂದು ರಾಜ್ಶದ ನೈಜ ವಿರೋಧಪಕ್ಷವಾಗಿ KRS ಪಕ್ಷ ಆಗ್ರಹಿಸುತ್ತಿದೆ ಎಂದು ಮಲ್ಲಿಕಾರ್ಜುನ ಭಟ್ಟರಹಳ್ಳಿ  ತಿಳಿಸಿದ್ದಾರೆ.

    admin
    • Website

    Related Posts

    ತುಮಕೂರಿಗೆ ಮೆಟ್ರೋ: ಅಂದಾಜು 20,649 ಕೋಟಿ ವೆಚ್ಚ: ಸಚಿವ ಡಾ.ಜಿ.ಪರಮೇಶ್ವರ್

    September 30, 2025

    ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು: ಆಯುಧ ಪೂಜೆ ಕಾರ್ಯಕ್ರಮ

    September 30, 2025

    ದಸರಾ ಹಬ್ಬ, ಆಯುಧ ಪೂಜೆ ಆಚರಣೆ ನಡುವೆಯೂ ಹೂವಿನ ಬೆಲೆ ಏರಿಕೆಯಾಗಿಲ್ಲ!: ಕಾರಣ ಏನು?

    September 30, 2025

    Comments are closed.

    Our Picks

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025

    ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಲಿ ಕಚ್ಚಿ ನವಜಾತ ಶಿಶು ಸಾವು!

    September 4, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಹೊಳವನಹಳ್ಳಿಯಲ್ಲಿ ದಸರಾ ಹಬ್ಬಕ್ಕೆ ಗೊಂಬೆಗಳ ಸಂಭ್ರಮದ ಮೆರುಗು

    October 1, 2025

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ : ನವರಾತ್ರಿ ಹಬ್ಬಕ್ಕೆ ಪ್ರಮುಖ ಆಕರ್ಷಣೆ ದಸರಾ ಬೊಂಬೆ, ಗ್ರಾಮೀಣ ಭಾಗದ ಜನರಲ್ಲಿ ಹಬ್ಬದ…

    ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ರಾಜ್ಯಮಟ್ಟದ ಕಲಾ ಉತ್ಸವ

    October 1, 2025

    ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ ಹೆಚ್ಚುವರಿ 8,500 ರೂ. ಪರಿಹಾರ ಘೋಷಣೆ: ಸಚಿವ ಈಶ್ವರ್ ಖಂಡ್ರೆ ಸ್ವಾಗತ

    October 1, 2025

    ಕವನ: ದಸರಾ

    September 30, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.