ಬೇಲೂರು: ಹಾಸನ ಜಿಲ್ಲೆ ಬೇಲೂರು ತಾಲೂಕಿನ ಜೈನರ ಗುತ್ತಿಯಲ್ಲಿ 15 ಲಕ್ಷ ರೂ.ಗಳ ವೆಚ್ಚದಲ್ಲಿ ಬ್ರಹ್ಮ ಎಚ್ಚರ ಜೀವನಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಬೆಂಗಳೂರಿನ ಉದ್ಯಮಿ ವಿ.ಜೆ.ಬ್ರಹ್ಮದೇವಯ್ಯ, ತ್ರಿಶಾಲಾ ಬ್ರಹ್ಮದೇವಯ್ಯ ದಂಪತಿಗಳು ಭೂಮಿ ಪೂಜೆ ನೆರವೇರಿಸಿದರು .
ಕ್ಷೇತ್ರಪಾಲ ಪೂಜೆ, ವಾಸ್ತು ದೇವತೆ ಪೂಜೆ, ವಾಯು, ಮೇಘ, ಅಗ್ನಿ ಪೂಜೆಗಳೊಂದಿಗೆ ನೆರವೇರಿಸಿ, ಕಳಸ ಸ್ಥಾಪನೆ ,ವಿವಿಧ ದ್ರವ್ಯಗಳೊಂದಿಗೆ ಭೂಮಿ ಪೂಜೆ ನೆರವೇರಿಸಿ ತೀರ್ಥಂಕರರಿಗೆ ಆರೋಗ್ಯ ಗಳನ್ನು ಸಮರ್ಪಿಸಿ ಶಾಂತಿ ಮಂತ್ರ ಪಠಿಸಲಾಯಿತು .
ಮುನಿಶ್ರೀ ವೀರಸಾಗರ ಮಹಾರಾಜರು ಆಶೀರ್ವಚನ ನೀಡಿ ಶ್ರೀ ಕ್ಷೇತ್ರದಲ್ಲಿ ಧಾರ್ಮಿಕ, ಆರೋಗ್ಯ, ಶಿಕ್ಷಣ ಸೇವೆ ನೀಡುವತ್ತ ಹೆಜ್ಜೆ ಇಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಎ.ಬಿ .ಕಾಂತರಾಜು, ಶಶಿಕುಮಾರ್ ಧವನ್ ಜೈನ, ನಾಗಚಂದ್ರ, ಮನ್ಮಥರಾಜು, ರೇಖಾ ಧವನ್ , ಅಂಜನ, ಶಶಿಕುಮಾರ್ , ನಿಶ್ಚಲ್ , ಮಂಜುಳಾ, ಧನ ಕೀರ್ತಿ, ವಸುಮತಿ , ಪದ್ಮ ಪ್ರಭು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಜೈನ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಶ್ರಾವಕ –ಶ್ರಾವಕಿಯರು ಉಪಸ್ಥಿತರಿದ್ದರು.
ವರದಿ: ಜೆ.ರಂಗನಾಥ ತುಮಕೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx