ಗುಬ್ಬಿ: ತಾಲೂಕು ಸಿ.ಎಸ್.ಪುರ ಠಾಣೆಯ ಪಿ.ಎಸ್.ಐ ಸೋಮಶೇಖರ್.ಎಸ್ ಮತ್ತು ಮುಖ್ಯ ಪೇದೆ ನಯಾಜ್ ಅಹಮ್ಮದ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಕಳೆದ 22ರಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಿ.ಎಸ್.ಪುರ ಠಾಣೆಯಲ್ಲಿ ಚಂದ್ರಣ್ಣ ಅವರ ಮೇಲೆ ದೂರು ದಾಖಲಾಗಿದ್ದು, ಇದರ ವಿಚಾರವಾಗಿ ಚಂದ್ರಣ್ಣ ಅವರ ಕ್ವಿಡ್ ಕಾರ್ ಅನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಚಂದ್ರಣ್ಣ ಅವರು ಕೋರ್ಟ್ ನಲ್ಲಿ ಜಾಮೀನು ಪಡೆದಿದ್ದರು. ನಂತರ ಕಾರ್ ಅನ್ನು ಬಿಡುಗಡೆ ಮಾಡಲು ಪಿ.ಎಸ್.ಐ ಸೋಮಶೇಖರ್ ಅವರು ಮುಖ್ಯ ಪೇದೆ ನಯಾಜ್ ಅಹಮ್ಮದ್ ಅವರ ಮಧ್ಯಸ್ಥಿಕೆಯಲ್ಲಿ 28 ಸಾವಿರಕ್ಕೆ ವಶ ಪಡಿಸಿಕೊಂಡಿದ್ದ ಕಾರು ಬಿಡುಗಡೆ ಮಾಡಲು ಒಪ್ಪಂದ ಮಾಡಿ 12 ಸಾವಿರ ಮುಂಗಡ ಹಣ ಪಡೆಯಲಾಗಿತ್ತು. ಬುಧವಾರವಾದ ಇಂದು ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಬಾಕಿ ಉಳಿಕೆ ಹಣ 16 ಸಾವಿರ ಪಡೆಯುವ ವೇಳೆ ತುಮಕೂರಿನ ಎಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಸಿ ಎಸ್ ಪುರ ಪೋಲಿಸ್ ಠಾಣೆಯಲ್ಲಿ ಇದು ಎರಡನೇ ಪ್ರಕರಣವಾಗಿದ್ದು ಈ ಹಿಂದೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್ ಪೆಕ್ಟರ್ ಕೂಡ ಎಸಿಬಿ ದಾಳಿಗೆ ಒಳಗಾದ ಪ್ರಕರಣ ನಡೆದಿದ್ದು ಇಲ್ಲಿಗೆ ಕರ್ತವ್ಯ ಮಾಡಲು ಬಂದಂತಹ ಅಧಿಕಾರಿಗಳಿಗೆ ಇವರ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ S P ಕಾನ್ಸ್ಟೇಬಲ್ ಮತ್ತು ಇನ್ನಿತರ ಅಧಿಕಾರಿಗಳೇ ಕಾರಣ ಎಂಬ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ ಇದಕ್ಕೆ ಜಿಲ್ಲಾ ವರಿಷ್ಠಾಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದು ಸಾರ್ವಜನಿರು ಒತ್ತಾಯಿಸಿದ್ದಾರೆ.
ವರದಿ: ಯೋಗೀಶ್ ಮೇಳೇಕಲ್ಲಹಳ್ಳಿ