nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

    September 5, 2026
    Facebook Twitter Instagram
    ಟ್ರೆಂಡಿಂಗ್
    • ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!
    • ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ
    • ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ
    • ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ
    • ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
    • ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ
    • ಬಳ್ಳಾರಿ: ಗ್ರಾಮ ಒನ್ ಫ್ರಾಂಚೈಸಿ ನೇಮಕಾತಿಗೆ ಅರ್ಜಿ ಆಹ್ವಾನ
    • ತಿಪಟೂರು ಬಿಜೆಪಿ ಟಿಕೆಟ್ ವಿಚಾರ ಪ್ರಸ್ತಾಪ ಅಪ್ರಸ್ತುತ: ಶ್ರೀ ರುದ್ರಮುನಿಸ್ವಾಮೀಜಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬರ ಪರಿಸ್ಥಿತಿಯಲ್ಲಿ ಹೈನುಗಾರಿಕೆ ಆಸರೆ: ತುಮುಲ್‌  ನಿರ್ದೇಶಕ ಸಂಜೀವಗೌಡ
    ತುಮಕೂರು August 23, 2026

    ಬರ ಪರಿಸ್ಥಿತಿಯಲ್ಲಿ ಹೈನುಗಾರಿಕೆ ಆಸರೆ: ತುಮುಲ್‌  ನಿರ್ದೇಶಕ ಸಂಜೀವಗೌಡ

    By Ganesh TumkuruAugust 23, 2026No Comments2 Mins Read
    tumul

    ತುಮಕೂರು: ಬರ ಪರಿಸ್ಥಿತಿಯಲ್ಲಿ ಹೈನುಗಾರಿಕೆ ಗ್ರಾಮೀಣ ಜನರ ಬದುಕಿಗೆ ಆಸರೆಯಾಗಿದೆ. ಹಾಗಾಗಿ ಹೈನುಗಾರರ ನೆರವಿಗೆ ತುಮಕೂರು ಹಾಲು ಒಕ್ಕೂಟ ಹಲವಾರು ಕ್ರಮಗಳನ್ನು ಪಶುಪಾಲನೆ ಮತ್ತು ಪಶು ಸಂಗೋಪನಾ ಇಲಾಖೆಯ ಸಹಯೋಗದಲ್ಲಿ ಕೈಗೊಂಡಿದೆ ಎಂದು ತುಮುಲ್‌ ನ ನಿರ್ದೇಶಕ ಸಂಜೀವಗೌಡ ತಿಳಿಸಿದ್ದಾರೆ.

    ನಗರದ ಕಾಲ್‌ ಟ್ಯಾಕ್ಸ್ ಸರ್ಕಲ್‌ ನಲ್ಲಿರುವ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಕಚೇರಿ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ತುಮಕೂರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ವತಿಯಿಂದ ಹಮ್ಮಿಕೊಂಡಿದ್ದ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಪಶು ಇಲಾಖೆ ಮತ್ತು ಡೈರಿ ಒತ್ತಾಸೆಯ ಫಲವಾಗಿ ತುಮುಲ್‌ಗೆ ಬರುತ್ತಿದ್ದ ಹಾಲಿನ ಸಂಗ್ರಹ ಪ್ರಮಾಣದಲ್ಲಿ ಗಣನೀಯ ಹೆಚ್ಚಳವಾಗಿದೆ. ತುಮಕೂರು ತಾಲೂಕು ಒಂದರಲ್ಲಿಯೇ 1 ಲಕ್ಷ ಲೀಟರ್ ಬರುತ್ತಿದ್ದ ಹಾಲು, ಪ್ರಸ್ತುತ 1.42 ಲಕ್ಷ ಲೀಟರ್‌ಗೆ ಹೆಚ್ಚಳವಾಗಿದೆ. ಬಡ್ಜಿನ ಅಂಶದ ಆಧಾರದಲ್ಲಿ ರೈತರು ಒಂದು ಲೀಟರ್‌ಗೆ ಗರಿಷ್ಠ 50 ರೂ ಪಡೆಯುತ್ತಿದ್ದಾರೆ. ಇದು ಗ್ರಾಮೀಣ ಭಾಗದಲ್ಲಿ ಆರ್ಥಿಕ ಸಬಲೀಕರಣಕ್ಕೆ ಸಹಾಯವಾಗಿದೆ ಎಂದರು.

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳೂರು ಶಿವಕುಮಾರ್ ಮಾತನಾಡಿ, ಸರ್ಕಾರ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ. ಇದರಿಂದ ಗ್ರಾಮೀಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ತುಮಕೂರು ತಾಲೂಕು ಸಹಾಯಕ ನಿರ್ದೇಶಕರಾದ ಡಾ.ವಿ.ಸಿ.ರುದ್ರಪ್ರಸಾದ್, ಸರ್ಕಾರ 2025-26 ನೇ ಸಾಲಿನಲ್ಲಿ ಫಲಾನುಭವಿಗಳಿಗೆ ಇಂದು 23 ಮೇವು ಕತ್ತರಿಸುವ ಯಂತ್ರ, 68 ರಬ್ಬರ್ ನೆಲಹಾಸು, ಇದು ಹಾಲು ಕರೆಯುವ ಯಂತ್ರ, ಡೈರಿಯ ಸಹಕಾರದಲ್ಲಿ ಮೇವಿನ ಕಿಟ್ ವಿತರಿಸಲಾಗುತ್ತಿದೆ. ಈ ವರ್ಷದಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಸವಲತ್ತು ನೀಡುವ ಸಲುವಾಗಿ ಹೆಚ್ಚಿನ ಫಲಾನುಭವಿಗಳ ಪಟ್ಟಿಯನ್ನು ಸರ್ಕಾರದ ಅನುಮೋದನೆಗೆ ಕಳುಹಿಸಿದೆ. ಸರ್ಕಾರ ನೀಡುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು, ಹೈನುಗಾರಿಕೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಂತೆ ಸಲಹೆ ನೀಡಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಹೆಚ್.ಎಂ.ಶಿವಪ್ರಸಾದ್ ಮಾತನಾಡಿ, ರೈತರಿಗೆ ವಿವಿಧ ಸವಲತ್ತುಗಳ ಜೊತೆಗೆ, ಮೇವಿನ ಬೀಜದ ಕಿಟ್ ವಿತರಿಸುತ್ತಿರುವುದು ವಿನೂತನ ಕಾರ್ಯಕ್ರಮವಾಗಿದೆ. ಬರವನ್ನು ಎದುರಿಸಲು ಇದು ಒಳ್ಳೆಯ ಪರಿಹಾರ. ರಾಷ್ಟ್ರೀಯ ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಈ ವರ್ಷ ಶೇ 10ರಷ್ಟು ಮಳೆ ಕಡಿಮೆಯಾಗಬಹುದು ಎಂಬ ನಿರೀಕ್ಷೆಯಿದೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಸಾಧ್ಯವಾದಷ್ಟು ಮೇವು ಬೆಳೆದು, ಸಂಗ್ರಹಿಸುವ ಉದ್ದೇಶದಿಂದ ಜಿಲ್ಲೆಯಲ್ಲಿರುವ ಸುಮಾರು 1 ಲಕ್ಷ ನೀರಿನ ಸೌಲಭ್ಯ ಹೊಂದಿರುವ ರೈತರಿಗೆ ತುಮುಲ್ ಸಹಯೋಗದಲ್ಲಿ ತಲಾ ಒಂದು ಮೇವಿನ ಬೀಜದ ಕಿಟ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 80 ಸಾವಿರ ಕಿಟ್ ವಿತರಿಸಲಾಗಿದೆ ಎಂದರು.

    ಈ ವೇಳೆ ಕುರಿ ನಿಗಮದ ಸಹಾಯಕ ನಿರ್ದೇಶಕ ಡಾ.ಮೋಹನ್ ಸೇರಿದಂತೆ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಜರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    Ganesh Tumkuru
    • Website

    Related Posts

    ತುಮಕೂರು: ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

    September 4, 2026

    ತುಮಕೂರು:  ಶಿಕ್ಷಕ ಪ್ರಶಸ್ತಿ ಆಯ್ಕೆ ಪಟ್ಟಿ ಪ್ರಕಟ

    September 4, 2026

    ಸ್ಲಂ ನಿವಾಸಿಗಳಿಗೆ ಕಾಯಿದೆ ಅನ್ವಯ ಹಕ್ಕುಪತ್ರಕ್ಕೆ ಕ್ರಮ: ಜಿಲ್ಲಾಧಿಕಾರಿ ಶುಭಕಲ್ಯಾಣ್

    September 3, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಜಿಲ್ಲಾ ಸುದ್ದಿ

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಹೊಳೆನರಸೀಪುರ: ಅಧಿಕಾರದ ಮದ, ಕಾನೂನು ಉಲ್ಲಂಘನೆ ಮತ್ತು ಅಧಿಕಾರಿಗಳ ದುರುಪಯೋಗ — ಹೊಳೆನರಸೀಪುರದ ತಾಲ್ಲೂಕು ಕಚೇರಿ ಮುಂಭಾಗದ ಸಾರ್ವಜನಿಕ ರಸ್ತೆ…

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    ಶ್ರೀ ಕರಿಯಮ್ಮ ದೇವಿ–ಶ್ರೀ ಬನಶಂಕರಿ ದೇವಿಯ ನೂತನ ದೇವಾಲಯ ಪ್ರವೇಶ ಮತ್ತು ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

    September 5, 2026

    ತುಮಕೂರು: ಪ್ರಜಾ ಸೇವಾ ಆಂದೋಲನಕ್ಕೆ ಸಿದ್ಧತೆ:  ಜಿಲ್ಲಾಧಿಕಾರಿ ಶುಭ ಕಲ್ಯಾಣ್‌ ರಿಂದ ಪರಿಶೀಲನೆ

    September 4, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.