ಬೆಂಗಳೂರು : ನಟ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಸಿಲುಕುತ್ತಿದ್ದಂತೆಯೇ ಬಾಯಿಗೆ ಬಂದಂತೆ ಮಾತನಾಡಿದ್ದ ನಟ ಪ್ರಥಮ್ ಇದೀಗ ಪ್ಲೇಟ್ ಚೇಂಜ್ ಮಾಡಿದ್ದಾರೆ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪ್ರಥಮ್ ಅಚ್ಚರಿಯ ಪೋಸ್ಟ್ ಹಂಚಿಕೊಂಡಿದ್ದಾರೆ.
ಈಶ್ವರನಲ್ಲಿ ಪಾಮಾಣಿಕ ಪ್ರಾರ್ಥನೆ. ದರ್ಶನ್ ಸರ್ ಬಿಡುಗಡೆಯಾಗಿ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡುವಂತಾಗಲಿ. ಕೆಟ್ಟ ಕಾಲ ಎಲ್ಲರಿಗೂ ಬರುತ್ತದೆ. ಅದನ್ನು ದಾಟಿ ಅಭಿಮಾನಿಗಳನ್ನ ರಂಜಿಸಲಿ ಎಂದು ಪೋಸ್ಟ್ ಮಾಡಿದ್ದಾರೆ.
ಅಂಧಾಭಿಮಾನಿ ಅಂದಿದ್ದು ನೋವಾಗಿದ್ದರೆ ಮರೆತುಬಿಡಿ. ವ್ಯಂಗ್ಯ ಬೇಡ;ದೇವ್ರಾಣೆ ಬಿಡುಗಡೆಯಾಗಲಿ. ಮನಸ್ಸಿನಿಂದ ಈಶ್ವರನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಪ್ರಥಮ್ ಬರೆದುಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296