ಬೆಂಗಳೂರಿನ ಪಟ್ಟಣಗೆರೆ ಶೆಡ್ಡಿನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ವಿಚಾರಣೆ ನಡೆಸಲಾಗುತ್ತಿದ್ದು, ನಿತ್ಯ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ
ರೇಣುಕಾ ಸ್ವಾಮಿ ಹತ್ಯೆ ಕೇಸ್ ನ ಆರೋಪಿ, ನಟ ದರ್ಶನ್, ಪ್ರಕರಣಕ್ಕೆ ಸಂಬಂಧಿಸಿ ಸ್ವ ಇಚ್ಛೆ ಹೇಳಿಕೆ ನೀಡಿದ್ದಾರೆ ಎನ್ನಲಾದ ಮಾಹಿತಿಯೊಂದು ಹೊರಬಿದ್ದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿ ಹಾಕಲು ನಟ ದರ್ಶನ್ 30 ಲಕ್ಷ ಡೀಲ್ ಮಾಡಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.ಪೊಲೀಸ್, ಲಾಯರ್, ಶವ ಸಾಗಿಸುವವರಿಗಾಗಿ 30 ಲಕ್ಷ ವೆಚ್ಚ ಮಾಡಿರುವುದಾಗಿ ಡಿ ಬಾಸ್ ಹೇಳಿದ್ದಾರೆ. ಈ ಕೇಸ್‌ನಲ್ಲಿ ತಮ್ಮ ಹೆಸರು ಬಾರದಂತೆ ನೋಡಿಕೊಳ್ಳಲು ಪರಮಾಪ್ತ ಪ್ರದೂಶ್‌ಗೆ ಹಣ ನೀಡಿರುವುದಾಗಿ ದರ್ಶನ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.
ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಹಲ್ಲೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ದರ್ಶನ್ ಒಪ್ಪಿಕೊಂಡಿಲ್ಲ. ಶೆಡ್ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು, ಜೂನ್ 8ರಂದು ರಾತ್ರಿ ದರ್ಶನ್ ತನ್ನ ಜೀಪಿನಲ್ಲಿ ಶೆಡ್ ಕಡೆಗೆ ಆಗಮಿಸಿದ್ದನ್ನು ತೋರಿಸಿವೆ. ಹತ್ಯೆಯ ನಂತರ ದರ್ಶನ್ ಆರೋಪಿಗಳ ಜೊತೆಗೆ ಪಾರ್ಟಿ ಮಾಡಿದ್ದು ಕೂಡ ಪ್ರತ್ಯಕ್ಷದರ್ಶಿಗಳ ಸಾಕ್ಷಿಯಿಂದ ಗೊತ್ತಾಗಿದೆ.
ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ಉಳಿಸಿಲ್ಲ.
ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ನಡೆಸಲಾದ ಹಲ್ಲೆಯನ್ನು ಈ ಮೊಬೈಲ್‌ಗಳಲ್ಲಿ ಆರೋಪಿಗಳು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ರೇಣುಕಾಸ್ವಾಮಿ ಹಾಗೂ ಆರೋಪಿ ರಾಘವೇಂದ್ರರ ಮೊಬೈಲ್‌ಗಳು ಪ್ರಮುಖ ಸಾಕ್ಷಿಯಾಗಿವೆ.
ಇಬ್ಬರ ಮೊಬೈಲ್‌ಗಳನ್ನೂ ರಾಜಕಾಲುವೆಗೆ ಬಿಸಾಡಿದ್ದಾಗಿ ಪ್ರದೂಶ್ ಹೇಳಿಕೆ ನೀಡಿದ್ದಾನೆ.
ಆತ ತೋರಿಸಿದ ಸುಮನಹಳ್ಳಿ ರಾಜಕಾಲುವೆಯ ಬಳಿ ಪೋಲಿಸ್ ಅಧಿಕಾರಿಗಳು ಮಹಜರು ನಡೆಸಿದ್ದಾರೆ. ಬಿಬಿಎಂಪಿ ಪೌರ ಕಾರ್ಮಿಕರ ಸಹಾಯದಿಂದ ರಾಜಕಾಲುವೆಯಲ್ಲಿ ಮೊಬೈಲ್ ಹುಡುಕಾಡಿಸಿದ್ದಾರೆ. ಆದರೆ ಪತ್ತೆಯಾಗಿಲ್ಲ. ಹೀಗಾಗಿ ಮೊಬೈಲ್ ಪತ್ತೆ ಮಾಡಿಕೊಡುವಂತೆ ಪೊಲೀಸರು ರಾಜಾಜಿನಗರ ಅಗ್ನಿಶಾಮಕ ಠಾಣೆ ಅಧಿಕಾರಿಗಳಿಗೆ ಮೊರೆ ಹೋಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA