ಕರ್ನಾಟಕದ ಹಿರಿಯ ರಾಜಕಾರಣಿಗಳ ಮೇಲೆ ದೆಹಲಿಯಲ್ಲಿ ಪೊಲೀಸರು ಬಲ ಪ್ರಯೋಗ ನಡೆಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರು ಹಾಗೂ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡುರಾವ್ ಅವರೊಂದಿಗೆ ದೆಹಲಿ ಪೊಲೀಸರು ಅಗೌರವವಾಗಿ ನಡೆದುಕೊಂಡಿದ್ದು, ತಳ್ಳಾಟ ನೂಕಾಟ ನಡೆಸಿದ್ದಾರೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂ ಅವರನ್ನು ಎರಡನೇ ದಿನವೂ ವಿಚಾರಣೆ ನಡೆಸುತ್ತಿದೆ. ಇದನ್ನು ವಿರೋ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ದೆಹಲಿಯಲ್ಲೂ ಕಾನೂನು ಸುವಸ್ಥೆ ಕಾವೇರಿದ್ದು, ಪ್ರತಿಭಟನೆಗೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸುತ್ತಿದ್ದಾರೆ.
ಇಂದು ಬೆಳಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಗೆ ಹೋಗುತ್ತಿದ್ದ ಡಿ.ಕೆ.ಸುರೇಶ್ ಮತ್ತು ಹಿರಿಯ ನಾಯಕರನ್ನು ಪೊಲೀಸರು ತಡೆದಿದ್ದಾರೆ. ಯಾವ ಕಾನೂನಿನಲ್ಲಿ ನಮ್ಮನ್ನು ತಡೆದಿದ್ದೀರಾ, ಯಾವ ಆದೇಶ ಇದೆ ಕೊಡಿ. ಹಿರಿಯ ಅಧಿಕಾರಿಗಳನ್ನು ಕರೆಯಿರಿ ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಸುರೇಶ್ ಹೇಳಿದ್ದಾರೆ.
ಸಂಸದರು ಅವರು ತಮ್ಮ ಗುರುತಿನ ಕಾರ್ಡ್ ತೋರಿಸಿ ಬಳಿಕವೂ ಪೊಲೀಸರು ಕ್ಯಾರೆ ಎನ್ನದೆ ಬಲಪ್ರಯೋಗ ನಡೆಸಿದ್ದಾರೆ. ಕಾನ್ಸಟೆಬಲ್ ಒಬ್ಬರು ಸಂಸದರನ್ನು ಅವರನ್ನು ತಳ್ಳುವ ಮೂಲಕ ಬಲವಂತವಾಗಿ ವ್ಯಾನ್‍ಗೆ ಹತ್ತಿಸಿದ್ದಾರೆ. ಈ ವೇಳೆ ಸುರೇಶ್ ಅವರು ಕೇಂದ್ರ ಸರ್ಕಾರದ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮತ್ತೊಂದೆಡೆ ದಿನೇಶ್ ಗುಂಡೂರಾವ್ ಅವರು ಪೊಲೀಸರ ಜೊತೆ ಮಾತಿನಚಕಮಕಿ ನಡೆಸಿದ್ದಾರೆ. ಅವರ ಮೇಲೂ ಪೊಲೀಸರು ಬಲ ಪ್ರಯೋಗಕ್ಕೆ ಮುಂದಾಗುತ್ತಿದ್ದನ್ನು ಮನಗಂಡ ಎಚ್.ಕೆ.ಪಾಟೀಲ್, ಸಮಾಧಾನ ಪಡಿಸಿ ದಿನೇಶ್ ಗುಂಡುರಾವ್ ಅವರನ್ನು ಕರೆದುಕೊಂಡು ಪೊಲೀಸ್‍ರು ವ್ಯಾನ್ ಹತ್ತಿದ್ದಾರೆ.
ದೆಹಲಿಯಲ್ಲಿ ನಡೆದ ಘಟನೆಯ ಬಗ್ಗೆ ಈ ಸಂಜೆಯೊಂದಿಗೆ ವಿವರಣೆ ನೀಡಿದ ಎಚ್.ಕೆ.ಪಾಟೀಲ್ ಅವರು, ಕಾರ್ಯಕಾರಿ ಸಮಿತಿ ಸದಸ್ಯರಾದ ತಾವು ಮತ್ತು ದಿನೇಶ್ ಗುಂಡೂರಾವ್ ಪಕ್ಷದ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದವು. ಆದರೆ ನಮ್ಮನ್ನು ಅರ್ಧದಲ್ಲಿಯೇ ತಡೆಯಲಾಯಿತು. ಕಾರಿನಿಂದ ಇಳಿದು ನಾವು ನಡೆದು ಹೋಗುತ್ತಿದ್ದೇವೆ. ಕಚೇರಿ ಸುತ್ತ ಮೂರ್ನಾಲ್ಕು ತಾತ್ಕಾಲಿಕ ಗೇಟ್‍ಗಳನ್ನು ನಿರ್ಮಿಸಲಾಗಿದೆ. ಮೊದಲನೇ ಗೇಟ್‍ನಿಂದ ನಾಲ್ಕನೆ ಗೇಟ್‍ವರೆಗೂ ನಮ್ಮನ್ನು ಒಳಗೆ ಬಿಡದೆ ಅಲ್ಲಿ ಹೋಗಿ… ಇಲ್ಲಿ ಹೋಗಿ… ಎಂದು ಸುತ್ತಾಡಿಸಿದರು ಎಂದು ಹೇಳಿದರು.
ಸಂಸದ ಡಿ.ಕೆ.ಸುರೇಶ್ ಮತ್ತು ತಮಿಳುನಾಡಿನ ಸಂಸದರಾದ ವಿಷ್ಣು ಪ್ರಸಾದ್ ಅವರು ನಮ್ಮ ಜೊತೆಯಾದರು. ಸುರೇಶ್ ಅವರು ತಮ್ಮ ಗುರುತಿನ ಚೀಟಿ ತೋರಿಸಿ ನಾನು ಸಂಸದ, ನನಗೆ ಒಳಗೆ ಹೋಗಲು ಬಿಡಿ ಎಂದು ಕೇಳಿ ಕೊಂಡರು. ಆದರೂ ಪೊಲೀಸರು ಸ್ಪಂದಿಸಲಿಲ್ಲ. ಬದಲಾಗಿ ಒರಟಾಗಿ , ಅಗೌರವಯುತವಾಗಿ ವರ್ತಿಸಿದ್ದಾರೆ.
ನಮ್ಮನ್ನು ಬಲವಂತವಾಗಿ ವ್ಯಾನ್ ಹತ್ತಿಸಿಕೊಳ್ಳಲಾಯಿತು. ಎಲ್ಲಿಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂಬ ಮಾಹಿತಿ ನೀಡಲು ಅಕಾರಿಗಳು ಸಿದ್ಧರಿರಲಿಲ್ಲ. ಕೊನೆಗೆ ನರೇಲಾ ಎಂಬ ಪೊಲೀಸ್ ಠಾಣೆಯಲ್ಲಿ ನಮ್ಮನ್ನು ಕೂಡಿ ಹಾಕಲಾಯಿತು. ಈ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ನಮ್ಮ ಮೂಲ ಭೂತ ಹಕ್ಕುಗಳನ್ನು ದಮನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಂಸದ ಡಿ.ಕೆ.ಸುರೇಶ್ ಪತ್ರಿಕೆಯೊಂದಿಗೆ ಮಾತನಾಡಿ, ಇದು ಗೂಂಡಾ ರಾಜ್ಯಕ್ಕಿಂತಲೂ ಕೆಟ್ಟದಾಗಿದೆ. ಭಯೋತ್ಪಾದಕರ ಮನೋಭಾವವಾಗಿದೆ. ಸಂಸದನಾದ ನನ್ನ ಮೇಲೆಯೇ ಬಲ ಪ್ರಯೋಗ ಮಾಡುತ್ತಾರೆ ಎಂದರೆ ಇನ್ನೂ ಜನಸಾಮಾನ್ಯರ ಸ್ಥಿತಿ ಏನು ಎಂದು ಊಹಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ನಮನ್ನು ತಡೆದು ದೌರ್ಜನ್ಯ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಬಳಿಕ ನರೇಲಾ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಸಂಸದ ಡಿ.ಕೆ.ಸುರೇಶ್ ರಕ್ತದಾನ ಮಾಡುವ ಮೂಲಕ ಗಮನ ಸೆಳೆದರು.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB